ನಿರೂಪಕಿ ಸಿಮಿ ಅಗರ್ವಾಲ್ ಹಂಚಿಕೊಂಡು ಈ ಫೋಟೋದಲ್ಲಿರೋರು ಯಾರು? ವೈರಲ್ ಆಗ್ತಿರೋದ್ಯಾಕೆ?
ಬಾಲಿವುಡ್ ನಟಿ ಸಿಮಿ ಗೆರೆವಾಲ್ ಒಂದು ಕಾಲದಲ್ಲಿ ಬಾಲಿವುಡ್ ಆಳಿದ ನಟಿ. ಹಿಟ್ ಚಿತ್ರಗಳನ್ನು ನೀಡಿದ ಅವರು ಈಗ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಬಾಲಿವುಡ್ ನ ಬಹುಮುಖ ಪ್ರತಿಭೆ ಸಿಮಿ ಗೆರೆವಾಲ್ 70 -80ರ ದಶಕದಲ್ಲಿ ಹಿಟ್ ಚಿತ್ರಗಳನ್ನು ನೀಡಿದ ನಟಿ. ಸಿಮಿ ಗೆರೆವಾಲ್ ಪ್ರಸಿದ್ಧ ನಟಿ ಮಾತ್ರವಲ್ಲ ಕಿರುತೆರೆಯಲ್ಲಿ ಫೇಮಸ್ ಹೋಸ್ಟ್ ಕೂಡ ಹೌದು. ಸಿಮಿ ಗೆರೆವಾಲ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ಕೆಲ ದಿನಗಳ ಹಿಂದೆ ಸಿಮಿ ಗೆರೆವಾಲ್ ಹಳೆ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರಿಗೆ ಸವಾಲು ಹಾಕಿದ್ದಾರೆ.
ಸಿಮಿ ಗೆರೆವಾಲ್ (Simi Garewal) ಅವರು ತಮ್ಮ ಹಿಂದೆ ಟ್ವಿಟರ್ ಆಗಿದ್ದ ಎಕ್ಸ್ (X) ಖಾತೆಯಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಹಿರಿಯ ನಟಿ ಜೀನತ್ ಅಮಾನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಪ್ಪು ಬಿಳುಪು ಚಿತ್ರ ಇದಾಗಿದೆ. ಇದ್ರಲ್ಲಿ ನೀವು ಸಿಮಿ ಗೆರೆವಾಲ್, ಇಂಧಿರಾ ಗಾಂಧಿ ಹಾಗೂ ಜೀನತ್ ಅಮಾನ್ ಒಟ್ಟಿಗೆ ಕುಳಿತುಕೊಂಡಿರುವುದನ್ನು ನೋಡಬಹುದು. ಸಿಮಿ ಮತ್ತು ಇಂದಿರಾ ನಡುವೆ ಜೀನತ್ ಕುಳಿತಿದ್ದಾರೆ. ಮೂವರೂ ಪಂದ್ಯದತ್ತ ಗಮನಹರಿಸುತ್ತಿದ್ದಾರೆ. ಮೂವರ ನೋಟವೂ ನೇರವಾಗಿದೆ.
ಎಲಾನ್ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್ ಇನ್ ಪೋಸ್ಟ್ ವೈರಲ್
ಜೀನತ್ ಶಾರ್ಟ್ ಹೇರ್ ಹೊಂದಿದ್ದರೆ, ಇಂದಿರಾ ಗಾಂಧಿ (Indira Gandhi) ಅವರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ ಗ್ಲಾಸ್ ಧರಿಸಿರುವ ಇಂದಿರಾ ಗಾಂಧಿ ಗಂಭೀರವಾಗಿ ಪಂದ್ಯ ವೀಕ್ಷಣೆ ಮಾಡ್ತಿರೋದನ್ನು ಕಾಣಬಹುದು.
ಈ ಪೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಸಿಮಿ ಗೆರೆವಾಲ್, ನಾವು ಏನು ವೀಕ್ಷಣೆ ಮಾಡ್ತಿದ್ದೇವೆ ಮತ್ತು ಎಲ್ಲಿ ಎಂಬುದನ್ನು ಶೀರ್ಷಿಕೆಯಲ್ಲಿ ಹಾಕಿದ್ದಾರೆ. ಆದ್ರೆ ಅಭಿಮಾನಿಗಳಿಗೆ ಎರಡು ಪ್ರಶ್ನೆಯನ್ನೂ ಕೇಳಿದ್ದಾರೆ.
ಸಿಮಿ ಗೆರೆವಾಲ್, ಥ್ರೋಬ್ಯಾಕ್. ಇಂದಿರಾ ಗಾಂಧಿ ಸಮ್ಮುಖದಲ್ಲಿ ದೆಹಲಿಯಲ್ಲಿ ಸಿನಿಮಾ ಕಲಾವಿದರು ಹಾಗೂ ಸಂಸದರ ನಡುವೆ ನಡೆದ ಕ್ರಿಕೆಟ್ ಪಂದ್ಯ ಎಂದು ಶೀರ್ಷಿಕೆ ಹಾಕಿದ್ದಾರೆ. ಯಾವ ವರ್ಷ ನಡೆದಿದ್ದು, ಯಾರು ಜಯಗಳಿಸಿದ್ರು ಎಂಬ ಬಗ್ಗೆ ಮಾಹಿತಿ ಇಲ್ಲ. ನಿಮಗೆ ಗೊತ್ತಾ ಎಂದು ಸಿಮಿ ಗೆರೆವಾಲ್ ಪ್ರಶ್ನೆ ಕೇಳಿದ್ದಾರೆ.
ಸೋಪ್ ಪ್ಯಾಕ್ ಮೇಲೆ ಮಹಿಳೆ ಫೋಟೋ: ಹೆಣ್ಣು ಮಕ್ಕಳು ಮಾತ್ರ ಸ್ನಾನ ಮಾಡೋದಾ?
ಸಿಮಿ ಗೆರೆವಾಲ್ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ವಾವ್. ಅದ್ಭುತ ನೆನಪುಗಳು ಎಂದು ಬರೆದಿದ್ದಾರೆ. ವಾವ್ ಶೇರ್ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಇನ್ನೊಬ್ಬರು ಹೇಳಿದ್ದಾರೆ. ಇವು ಸುವರ್ಣ ದಿನಗಳು ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ. 1977 ಅಥವಾ 78ನಲ್ಲಿ ನಡೆದ ಪಂದ್ಯ ಇದಿರಬೇಕು ಎಂದು ಇನ್ನೊಬ್ಬರು ಗೆಸ್ ಮಾಡಿದ್ದಾರೆ. ಶ್ರೀಮತಿ ಇಂದಿರಾ ಗಾಂಧಿ ಸೌಂದರ್ಯ ಹಾಗೂ ಸನ್ ಗ್ಲಾಸ್ ಬಗ್ಗೆ ಇಲ್ಲಿ ಸಾಕಷ್ಟು ಕಮೆಂಟ್ ಬಂದಿದೆ. ಯಾವುದೇ ಬಾಲಿವುಡ್ ನಟಿಗಿಂತ ಇಂದಿರಾ ಗಾಂಧಿ ಕಡಿಮೆ ಇರಲಿಲ್ಲವೆಂದು ಅನೇಕರು ಹೇಳಿದ್ದಾರೆ.
ಈ ಫೋಟೋವನ್ನು 1975-76ನಲ್ಲಿ ತೆಗೆದಿರಬೇಕು. ಯಾಕೆಂದ್ರೆ ಜೀನತ್ ಶಾರ್ಟ್ ಹೇರ್ ಹೊಂದಿದ್ದಾರೆ. ಡಾನ್ ಚಿತ್ರಕ್ಕಾಗಿ ಅವರು ಈ ಹೇರ್ ಸ್ಟೈಲ್ ಹೊಂದಿದ್ದರು ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ. ಸಿಮಿ ಗೆರೆವಾಲ್ ಗೆ ಈಗ 75 ವರ್ಷ ವಯಸ್ಸು. ನಟಿ, ನಿರ್ಮಾಪಕಿ, ಟಾಕ್ ಶೋ ಹೋಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಎರಡು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.
ಹಿರಿಯ ನಟಿ ಜೀನತ್ ಅಮಾನ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಬಂದಿದ್ದ ಸುಳ್ಳು ಆರೋಪಗಳು, 50 ವರ್ಷಗಳ ತಮ್ಮ ಸಿನಿಮಾ ವೃತ್ತಿಯಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಜೀನತ್ ಅಮಾನ್ ಬರೆದುಕೊಂಡಿದ್ದರು.