Kannada

ಹೋಟೆಲ್​ ಸ್ಟೈಲ್ ಪೂರಿಗೆ

ಮನೆಯಲ್ಲಿ ಎಷ್ಟೇ ಟ್ರೈ ಮಾಡಿದ್ರೂ ಹೋಟೆಲ್​ ರೀತಿಯಲ್​ ಪೂರಿ ಉಬ್ಬುತ್ತಾ, ಸಾಫ್ಟ್​ ಆಗುವುದೇ ಇಲ್ಲ. ಅದಕ್ಕೆ ಟ್ರಿಕ್ಸ್​ ಇಲ್ಲಿದೆ.

Kannada

ಹಿಟ್ಟು ಕಲಸುವಾಗ ನೆನಪಿಡಿ...

ಗೋಧಿ ಹಿಟ್ಟಿಗೆ ಒಂದೆರಡು ಚಮಚ ರವೆ , ಅರ್ಧ ಚಮಚ ಬಿಸಿ ಎಣ್ಣೆ ಅಥವಾ ತುಪ್ಪ, ಮತ್ತು ಚಿಟಿಕೆಯಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ರವೆ ಹೆಚ್ಚಾಗಬಾರದು.

Image credits: Social Media
Kannada

ಚಪಾತಿಗಿಂತ ಹಿಟ್ಟು ಗಟ್ಟಿಯಾಗಿರಲಿ

ಪೂರಿ ಮಾಡುವಾಗ ಹೆಚ್ಚು ಎಣ್ಣೆ ಹೀರಿಕೊಂಡು ಉಬ್ಬದ ಕಾರಣ, ಅದರ ಹಿಟ್ಟು ರೊಟ್ಟಿ ಅಥವಾ ಚಪಾತಿಗಿಂತ ಗಟ್ಟಿಯಾಗಿರಲಿ.

Image credits: stockphoto
Kannada

15-20 ನಿಮಿಷ ಮುಚ್ಚಿಡಿ

ಪೂರಿ ಹಿಟ್ಟನ್ನು ನಾದಿದ ಬಳಿಕ ಕನಿಷ್ಠ 15-20 ನಿಮಿಷ ಮುಚ್ಚಿಡಿ. ಕೂಡಲೇ ಪೂರಿ ಲಟ್ಟಿಸಲು ಹೋಗಬೇಡಿ

Image credits: Social Media
Kannada

ಹಿಟ್ಟು ಸಮ ಪ್ರಮಾಣದಲ್ಲಿ ಇರಲಿ

ಪೂರಿ ಲಟ್ಟಿಸುವಾಗ ಹಿಟ್ಟಿನ ಬಳಕೆ ಹೆಚ್ಚು ಬೇಡ. ಇಲ್ಲದಿದ್ದರೆ ಅದು ಎಣ್ಣೆಯನ್ನು ಕೊಳಕು ಮಾಡುತ್ತದೆ. ತುಂಬಾ ತೆಳು ಹಾಗೂ ದಪ್ಪವೂ ಬೇಡ, ಹದವಾಗಿರಲಿ.

Image credits: Social Media
Kannada

ಎಣ್ಣೆ ಸರಿಯಾಗಿ ಕಾದಿರಲಿ

ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಬಿಸಿಯಾದ ಬಳಿಕ ಪೂರಿ ಹಾಕಬೇಕು. ಸ್ವಲ್ಪ ಹಿಟ್ಟು ಹಾಕಿ ನೋಡಿ. ಹಾಕಿದ ತಕ್ಷಣ ಉಬ್ಬಿ ಬಂದರೆ ಎಣ್ಣೆ ಸರಿಯಾಗಿದೆ ಎಂದು.

Image credits: facebook
Kannada

ನಿಧಾನವಾಗಿ ಸೌಟಿನಿಂದ ಒತ್ತಿ

ಪೂರಿಯನ್ನು ಎಣ್ಣೆಯಲ್ಲಿ ಹಾಕಿದಾಗ ಅದು ಉಬ್ಬಬೇಕು ಎಂದರೆ ಅದನ್ನು ಸೌಟಿನಿಂದ ನಿಧಾನವಾಗಿ ಒತ್ತಿರಿ. ಒಂದು ಬದಿ ಉಬ್ಬಿಕೊಂಡ ನಂತರ, ಅದನ್ನು ತಿರುಗಿಸಿ ಮತ್ತೆ ಒತ್ತಿ. ​

Image credits: stockphoto

ಮೆದುಳಿನ ಆರೋಗ್ಯಕ್ಕೆ ಬೇಕು ಫೈಬರ್, ಈ 6 ಆಹಾರಗಳನ್ನು ತಪ್ಪದೇ ಸೇವಿಸಿ

2 ಸ್ಟೆಪ್‌ನಲ್ಲಿ ಉತ್ತರ ಕರ್ನಾಟಕ ಸ್ಟೈಲ್‌ ಚಟ್ನಿಪುಡಿ ರೆಡಿ; ರುಚಿಯೋ ರುಚಿ!

Weight Loss: ತೂಕ ಇಳಿಸಲು ಸಹಾಯ ಮಾಡುವ 7 ಫೈಬರ್‌ಯುಕ್ತ ಆಹಾರಗಳು

ಸಾಂಭಾರ್‌ಗಿಂತ ರುಚಿಯಾಗೋ ಆಲೂಗಡ್ಡೆ ಜಂಪು; ಒಂದೇ ಒಂದು ತರಕಾರಿ ಸಾಕು! ಬೇಗ ಕೆಡಲ್ಲ