ಎಲಾನ್‌ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್‌ ಇನ್‌ ಪೋಸ್ಟ್ ವೈರಲ್‌

ಸುಧಾ ಮೂರ್ತಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ನಂತರ ಮಹಿಳಾ ಉದ್ಯಮಿಯೊಬ್ಬರು ಅವರ ಬಗ್ಗೆ ಬರೆದು ಲಿಂಕ್ಡ್‌ ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲಾನ್‌ ಮಸ್ಕ್‌ರಂತವರು ಇರೋ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ ಎಂದು ಹೊಗಳಿದ್ದಾರೆ.

In a world of Elon Musks, Woman pens LinkedIn note after meeting Sudha Murty at airport Vin

ಸರಳ, ಸಜ್ಜನ ಮತ್ತು ಪರೋಪಕಾರಿ ಗುಣವನ್ನು ಹೊಂದಿರುವ ಸುಧಾಮೂರ್ತಿ ಯಾವಾಗಲೂ ತಮ್ಮ ಸಮಾಜಸೇವೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದರೂ ಸರಳವಾಗಿ ಕಾಣಿಸಿಕೊಂಡು, ತಮ್ಮ ಗುಣ ನಡತೆಯಿಂದ ಜನ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಜೀವನ, ಉದ್ಯೋಗ, ಮದುವೆ, ಸಂಬಂಧಗಳ ಬಗ್ಗೆ ಇವರಾಡುವ ಮಾತುಗಳು ಸ್ಫೂರ್ತಿದಾಯಕವಾಗಿರುತ್ತವೆ. ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರಿಗೆ ಗೌರವ ಕೊಟ್ಟು ನಡೆಸಿಕೊಳ್ಳುವ ಸುಧಾಮೂರ್ತಿಯವರ ಬಗ್ಗೆ ಹಲವು ಗಣ್ಯರು ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಅದೇ ರೀತಿ  ಸುಧಾ ಮೂರ್ತಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ನಂತರ ಮಹಿಳಾ ಉದ್ಯಮಿಯೊಬ್ಬರು ಅವರ ಬಗ್ಗೆ ಬರೆದು ಲಿಂಕ್ಡ್‌ ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಸುಧಾಮೂರ್ತಿ ಸರಳತೆ ಮೆಚ್ಚಿದ ಉದ್ಯಮಿ ಜಯಂತಿ ಭಟ್ಟಾಚಾರ್ಯ
ಇಂಡಿಯಾ ಹೆಂಪ್ ಅಂಡ್ ಕೋ ಸಹ-ಸಂಸ್ಥಾಪಕಿ ಜಯಂತಿ ಭಟ್ಟಾಚಾರ್ಯ ಅವರು ಸುಧಾಮೂರ್ತಿಯವರ ನಮ್ರತೆ ಮತ್ತು ಸರಳತೆಯಿಂದ ಮಾತ್ರವಲ್ಲದೆ ತನ್ನ ಸುತ್ತಲಿನ ಜನರೊಂದಿಗೆ ಸಂವಹನ ನಡೆಸುವ ಸಾಮರ್ಥ್ಯದಿಂದ ಅಚ್ಚರಿಗೊಂಡಿದ್ದಾಗಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸುಧಾಮೂರ್ತಿಯವರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಹ ಶೇರ್ ಮಾಡಿದ್ದಾರೆ.

700 ಕೋಟಿ ಆಸ್ತಿ ಒಡತಿಯಾಗಿದ್ರೂ ಸುಧಾಮೂರ್ತಿ, 24 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ವಂತೆ!

ಎಲಾನ್‌ ಮಸ್ಕ್‌ನ ಜಗತ್ತಿನಲ್ಲಿ ಸುಧಾಮೂರ್ತಿ ನಮ್ಮ ಹೆಮ್ಮೆ ಎಂದ ಉದ್ಯಮಿ
ಪೋಸ್ಟ್‌ನಲ್ಲಿ ಜಯಂತಿ ಭಟ್ಟಾಚಾರ್ಯ ಅವರು, 'ನಾನು ಅವರ ಸರಳತೆ, ವಿನಮ್ರತೆ, ಬುದ್ಧಿವಂತಿಕೆ ಮತ್ತು ಸೃಜನಶೀಲತೆಯ ಬಗ್ಗೆ ಸಾಕಷ್ಟು ಸಾರಿ ಕೇಳಿದ್ದೆ. ಆದರೆ ವಾಸ್ತವದಲ್ಲಿ ಅವರಿಗಿರುವ ತಾಳ್ಮೆ, ವಿನಯತೆ ಮತ್ತು ಅವರ ಸರಳತೆ ನನ್ನನ್ನು ನಿಜಕ್ಕೂ ಬೆಚ್ಚಿಬೀಳಿಸಿತು. ಪದ್ಮಭೂಷಣ ಪುರಸ್ಕೃತರಾದ ಸುಧಾಮೂರ್ತಿಯವರು (ಯುಕೆ ಪ್ರಧಾನ ಮಂತ್ರಿಯ ಅತ್ತೆ) ವಿಮಾನ ನಿಲ್ದಾಣದಲ್ಲಿ ಜನಸಾಮಾನ್ಯರೊಂದಿಗೆ ಮಾತನಾಡುತ್ತಾ ಸರಳವಾಗಿದ್ದರು. ಎಲಾನ್‌ ಮಸ್ಕ್‌ನಂತಹಾ ಉದ್ಯಮಿಗಳ ಮಧ್ಯೆ ನಾವು ನಮ್ಮವರೇ ಆದ ಸುಧಾಮೂರ್ತಿಯವರನ್ನು ಹೊಂದಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಅನ್ನು ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ನಂತರ, ಇದು 1,600ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಜನರು ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಸುಧಾ ಮೂರ್ತಿಯವರ ಛಲ, ಬುದ್ಧಿವಂತಿಕೆ ಮತ್ತು ಸೃಜನಶೀಲತೆ ಅನೇಕರ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಅವರ ಅಚಲವಾದ ತಾಳ್ಮೆ, ನಮ್ರತೆ ಮತ್ತು ಸರಳತೆ ನಿಜವಾಗಿಯೂ ಅವರನ್ನು ಉಳಿದವರಿಗಿಂತ ಭಿನ್ನವಾಗಿರುವಂತೆ ಮಾಡಿದೆ. ತಮ್ಮ ಗಮನಾರ್ಹ ಸಾಧನೆಗಳ ಮಧ್ಯೆ ದಿನನಿತ್ಯದ ಜನರೊಂದಿಗೆ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯವು ಸರಳತೆಯ ಸ್ವಭಾವಕ್ಕೆ ಸಾಕ್ಷಿಯಾಗಿದೆ' ಎಂದು ಬರೆದಿದ್ದಾರೆ.

ಸುಧಾಮೂರ್ತಿ ಮಗಳ ಸಿಂಪ್ಲಿಸಿಟಿ; ಬ್ರಿಟನ್ ಪ್ರಧಾನಿ ಪತ್ನಿ ಧರಿಸಿರೋ ಕುರ್ತಾ ಬೆಲೆ ಇಷ್ಟ್ ಕಡಿಮೆನಾ?

ಇನ್ನೊಬ್ಬರು, 'ಎಲ್ಲಾ ಹಂತದ ಜನರೊಂದಿಗೆ ಸಂಪರ್ಕ ಸಾಧಿಸುವ ಕೌಶಲ್ಯ ಹೊಂದಿರುವ ಅಪರೂಪದ ಮಹಿಳೆ ಸುಧಾಮೂರ್ತಿ. ಅವರ ಸರಳತೆ, ನಮ್ರತೆ ಎಂಥವರ ಮನಸ್ಸನ್ನೂ ಗೆಲ್ಲುತ್ತದೆ' ಎಂದಿದ್ದಾರೆ. ಮೂರನೆಯ ಬಳಕೆದಾರರು, 'ಉನ್ನತ ಸಾಧನೆಗಳ ಜಗತ್ತಿನಲ್ಲಿ, ಸುಧಾ ಮೂರ್ತಿಯವರ ವಿನಮ್ರತೆ ಯಾವಾಗಲೂ ನಮಗೆ ಪ್ರೇರಣೆಯಾಗಿದೆ' ಎಂದಿದ್ದಾರೆ.

Latest Videos
Follow Us:
Download App:
  • android
  • ios