ಸೋಪ್ ಪ್ಯಾಕ್ ಮೇಲೆ ಮಹಿಳೆ ಫೋಟೋ: ಹೆಣ್ಣು ಮಕ್ಕಳು ಮಾತ್ರ ಸ್ನಾನ ಮಾಡೋದಾ?
ನಾವು ಸೋಪಿನ ಯಾವುದೇ ಜಾಹೀರಾತು ನೋಡಲಿ ಅಥವಾ ಸೋಪ್ ಪ್ಯಾಕೆಟ್ ನೋಡಲಿ ಅದರಲ್ಲಿ ಮಹಿಳೆಯರದ್ದೆ ಫೋಟೋ ಕಾಣಿಸುತ್ತೆ, ಪುರುಷರ ಫೋಟೋ ಕಾಣಿಸೋದು ಅಪರೂಪದಲ್ಲಿ ಅಪರೂಪ. ಯಾಕೆ ಹೀಗೆ ತಿಳಿಯೋಣ.
ಸೌಂದರ್ಯ ಹೆಚ್ಚಿಸುವಲ್ಲಿ ಜೊತೆಗೆ ದೇಹದ ಮೇಲಿರುವ ಕಲ್ಮಶಗಳನ್ನು ದೂರ ಮಾಡಲು ಸೋಪ್ (soap) ಬಳಸಲಾಗುತ್ತೆ. ಸಾಫ್ಟ್ ತ್ವಚೆಗಾಗಿ ಸೋಪ್, ಡ್ರೈ ಸ್ಕಿನ್ ಗಾಗಿ ಸೋಪ್, ಎಣ್ಣೆ ತ್ವಚೆಗಾಗಿ ಸೋಪ್, ಹೊಳೆಯುವ ತ್ವಚೆಗಾಗಿ ಸೋಪ್ ಹೀಗೆ ಬೇರೆ ಬೇರೆ ವಿಧದ ಸೋಪ್ ಲಭ್ಯವಿವೆ. ಸೋಪ್ ಮಹಿಳೆಯರು ಮತ್ತು ಪುರುಷರು ಇಬ್ಬರೂ ಸಹ ಉಪಯೋಗಿಸ್ತಾರೆ. ಆದರೆ ಅದರಲ್ಲಿ ಮಹಿಳೆಯರ ಫೋಟೋ ಮಾತ್ರ ಯಾಕಿರುತ್ತೆ?
ಮಾರ್ಕೆಟಲ್ಲಿ ಹಲವಾರು ರೀತಿಯ ಸೋಪ್ಸ್ ಲಭ್ಯವಿದೆ. ನಿಮ್ಮ ಮನೆಯಲ್ಲೂ ಒಬ್ಬೊಬ್ಬರು ಒಂದೊಂದು ಸೋಪ್ ಬಳಸುತ್ತಿರಬಹುದು ಅಲ್ವಾ? ಸಂತೂರ್, ಲಕ್ಸ್, ಪಿಯರ್ಸ್… ಹೀಗೆ ಯಾವುದೇ ಸೋಪ್ ತೆಗೆದುಕೊಂಡರು ಎಲ್ಲಾದರಲ್ಲೂ ಇರುವ ಒಂದು ಕಾಮನ್ ಅಂಶವನ್ನು ನೀವು ಗಮನಿಸಬಹುದು. ಅದೇನೆಂದರೆ ಸೋಪ್ ಪ್ಯಾಕೆಟ್.
ನೀವು ಬೇರೆ ಬೇರೆ ಸೋಪ್ ಬಳಸುತ್ತಿದ್ದರೂ ಸೋಪ್ ಪ್ಯಾಕೆಟ್ ನಲ್ಲಿರುವ ಒಂದು ಕಾಮನ್ ಅಂಶ ಅಂದ್ರೆ ಅದು ಪ್ಯಾಕೆಟ್ ಮೇಲಿರುವ ಹುಡುಗಿಯರ ಫೋಟೋ. ಎಲ್ಲಾ ಕಂಪನಿಯ ಸೋಪ್ ಕವರ್ ಮೇಲೆ, ಜೊತೆಗೆ ಸೋಪ್ ಜಾಹೀರಾತಿನಲ್ಲಿ (advertisement) ಹೆಣ್ಣುಮಕ್ಕಳನ್ನೆ ಹೆಚ್ಚಾಗಿ ಕಾಣಬಹುದು.
ಯಾಕೆ ಸೋಪ್ ಕವರ್ (soap cover) ಮೇಲೆ ಮತ್ತು ಜಾಹೀರಾತಿನಲ್ಲಿ ಹೆಣ್ಣು ಮಕ್ಕಳದ್ದೇ ಫೋಟೋ ಇರುತ್ತೆ? ಯಾಕೆ ಪುರುಷರು ಸ್ನಾನ ಮಾಡೋದೆ ಇಲ್ವಾ? ಹೆಣ್ಣು ಮಕ್ಕಳು ಮಾತ್ರಾನ ಸ್ನಾನ ಮಾಡೋದು ಅಂತಾ ನೀವು ಕೇಳಬಹುದು. ಅದಕ್ಕೆ ಉತ್ತರವೂ ಇದೆ ಏನು ಗೊತ್ತಾ?
ಗೂಗಲ್ ನಲ್ಲಿ ಈ ರೀತಿಯ ಪ್ರಶ್ನೆ ಕೇಳಿದ್ರೆ ಅದಕ್ಕೆ ಗೂಗಲ್ ಫನ್ನಿಯಾಗಿಯೇ ಉತ್ತರಿಸುತ್ತೆ. ಅದೇನೆಂದರೆ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರು ಪ್ರತಿದಿನವೂ ಸ್ನಾನ ಮಾಡ್ತಾರಂತೆ. ಪ್ರತಿದಿನ ಸ್ನಾನ ಮಾಡುವ ಪುರುಷರ ಸಂಖ್ಯೆ ತುಂಬಾ ಕಡಿಮೆ ಹಾಗಾಗಿ ಸೋಪ್ ಕವರ್ ನಲ್ಲಿ ಹೆಚ್ಚಾಗಿ ಮಹಿಳೆಯರದ್ದೇ ಫೋಟೋ ಇರುತ್ತೆ ಎನ್ನಲಾಗುತ್ತದೆ.
ಆದ್ರೆ ನಿಜಾ ಹೇಳಬೇಕು ಅಂದ್ರೆ ಸೋಪ್ ಪ್ಯಾಕೆಟ್ ಮೇಲೆ ಮಹಿಳೆಯರ ಫೋಟೋ ಇರಲು ಮತ್ತು ಸೋಪ್ ಜಾಹೀರಾತಿನಲ್ಲಿ ಮಹಿಳೆಯರೇ ಇರಲು ಮುಖ್ಯ ಕಾರಣ ಮಾರ್ಕೆಟಿಂಗ್. ಮಹಿಳೆಯರ ಫೋಟೋ ಇದ್ದರೆ ಜಾಹೀರಾತು ಆಕರ್ಷಕವಾಗಿರುತ್ತೆ. ಈ ಹಿನ್ನೆಲೆಯಲ್ಲಿ ಸೋಪ್ ಜಾಹೀರಾತಿನಲ್ಲಿ ಮಹಿಳೆಯರೇ ಇರುತ್ತಾರೆ.