Asianet Suvarna News Asianet Suvarna News

Self Care Tips: ದೇಹಕ್ಕಾಗಿ ನೀವು ದುಡಿದರೆ, ನಿಮಗಾಗಿ ದೇಹ ದುಡಿಯುವುದು!

ದೇಹವನ್ನು ಒಪ್ಪಿಕೊಳ್ಳುವುದೆಂದರೆ, ಸೋಮಾರಿಯಾಗಿರಬೇಕು, ತೆಳ್ಳಗಾಗಲು ಯಾವುದೇ ಶ್ರಮ ಪಡಬಾರದು ಎಂದಲ್ಲ. ಆಹಾರದಲ್ಲಿ ಕಟ್ಟುನಿಟ್ಟಾಗಿರುವ ಜತೆಗೆ, ದೇಹದ ಸದೃಢತೆ ಉಳಿಸಿಕೊಳ್ಳಲು ವ್ಯಾಯಾಮ, ಚಟುವಟಿಕೆ ಮಾಡುವುದು ಅಗತ್ಯ. ಆದರೆ, ಅಪಾಯಕಾರಿ ಡಯೆಟ್ ಗಳನ್ನು ಅನುಸರಿಸುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. 
 

Respect Your Body And Body Will Respect You
Author
Bangalore, First Published Dec 22, 2021, 9:41 AM IST

ಬಳುಕುವ ಬಳ್ಳಿಯಂತೆ ಕಾಣಿಸಿಕೊಳ್ಳಬೇಕು, ಚೆನ್ನಾಗಿ ಫಿಗರ್ (Figure) ಮೆಂಟೇನ್ ಮಾಡಿದ್ದೀಯೆಂದು ಸ್ನೇಹಿತರ ಸರ್ಕಲ್ ನಲ್ಲಿ ಹೊಗಳಿಸಿಕೊಳ್ಳಬೇಕೆಂದು ಹುಡುಗಿಯರು ಅದೇನೇನೋ ಕಸರತ್ತು ಮಾಡುತ್ತಾರೆ. ಪ್ರೊಟೀನ್ ಡಯೆಟ್ (Diet), ಜ್ಯೂಸ್ ಡಯೆಟ್, ಹರ್ಬಲ್ ಮಾಲ್ಟ್ ಗಳೆಂದು ದಿನವೂ ಅದನ್ನೇ ಸೇವಿಸುತ್ತಾರೆ. ದೇಹಕ್ಕೆ ಅದರಿಂದಾಗುವ ಹಾನಿಗಳ ಬಗ್ಗೆ ಅರಿಯದೆ ಜಾಹೀರಾತು ಹಾಗೂ ಅದರ ಪರವಾಗಿ ಪ್ರಚಾರ ಮಾಡುವ ಸಮೀಪದ ಜನರ ಮೇಲೆ ಭರವಸೆ ಇಡುತ್ತಾರೆ. ತಿಂಗಳೊಳಗೆ ಮೂರ್ನಾಲ್ಕು ಕೆಜಿ ತೂಕ (Weight) ಕಳೆದುಕೊಂಡು ಸಂಭ್ರಮಿಸುತ್ತಾರೆ. ಆದರೆ, ದೀರ್ಘಕಾಲದಲ್ಲಿ ಇದರಿಂದಾಗುವ ಹಾನಿಯ ಬಗ್ಗೆ ಯೋಚಿಸುವುದಿಲ್ಲ. 

ಕಳೆದ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮದೊಂದು ವಿಶಿಷ್ಟ ಅನುಭವವನ್ನು ಹಂಚಿಕೊಂಡಿದ್ದರು. ಅದು ಡಯೆಟ್ ಕುರಿತಾಗಿತ್ತು. ಕಾರ್ಬೋಹೈಡ್ರೇಟ್ (Carbohydrates) ದೂರವಿಟ್ಟು ಮಾಡುವ ಡಯೆಟ್ ನಿಂದ ದೇಹಕ್ಕೆ ಉಂಟಾದ ಹಾನಿಯ ಬಗ್ಗೆ ಹಾಗೂ ಅದರಿಂದ ತಾವು ಅನುಭವಿಸಿದ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದರು.
ಹೌದು, ನಮ್ಮನಿಮ್ಮಂಥ ಸಾಮಾನ್ಯರಿಗೂ ಬಳುಕುವ ಬಳ್ಳಿಯಂತಾಗುವ ಆಸೆ ಸಹಜವಾಗಿರುತ್ತದೆ. ಹಾಗಿದ್ದ ಮೇಲೆ ನಟಿಯರಿಗೆ ಅದು ಇನ್ನೂ ಸಹಜ. ಅದಕ್ಕಾಗಿ ಅವರು ತೀವ್ರ ಶ್ರಮ ವಹಿಸುತ್ತಾರೆ. ಲೆಕ್ಕಾಚಾರದ ಮೇಲೆ ಆಹಾರ ಸೇವಿಸುತ್ತಾರೆ. ಆದರೂ ಕೆಲವೊಮ್ಮೆ ಜೀನ್ಸ್ ಪ್ರಭಾವದಿಂದಲೋ ಅಥವಾ ದೇಹದ ಗಾತ್ರವೇ ಹಾಗಿರುತ್ತದೆಯೋ ಗೊತ್ತಿಲ್ಲ, ಕೆಲವರ ದೇಹ ಅತಿ ಸಣ್ಣದಾಗಲು ಒಲ್ಲೆ ಎನ್ನುತ್ತದೆ. ಹಾಗಿದ್ದ ಮೇಲೆ ಯಾವ್ಯಾವುದೋ ರೀತಿ ಪ್ರಯತ್ನಿಸಿ ದೇಹಕ್ಕೆ ಹಿಂಸೆ ನೀಡಿ ಅದನ್ನು ದಂಡಿಸುವ ಬದಲು ನಮ್ಮ ದೇಹದ ಗಾತ್ರವನ್ನು ಒಪ್ಪಿಕೊಂಡು ಗೌರವಿಸುವುದು ಒಳ್ಳೆಯದು. 

ಮಹಿಳೆ(Women)ಯರ ಆರೋಗ್ಯಕ್ಕೆ ಕಬ್ಬಿಣದ ಅಂಶ ಹೆಚ್ಚಾಗಿ ಬೇಕಾಗುತ್ತದೆ. ಹರೆಯ(Teen)ದ ಹುಡುಗಿಯರು ಅನೀಮಿಕ್ ಸಮಸ್ಯೆಯಿಂದ ಬಳಲುವುದು ಹೆಚ್ಚು. ಆಹಾರದಲ್ಲಿ ಕಬ್ಬಿಣ(Iron)ದ ಅಂಶವನ್ನು ಹೆಚ್ಚಾಗಿ ಸೇವನೆ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ. ಸಿಹಿ ತಿಂದರೆ ದಪ್ಪಗಾಗುತ್ತೇನೆ ಎನ್ನುವ ಭ್ರಮೆಯಲ್ಲಿರುವ ಹುಡುಗಿಯರು ಬೆಲ್ಲದಿಂದ ಮಾಡುವ ಸಿಹಿಯನ್ನೂ ಸೇವಿಸುವುದಿಲ್ಲ. ಬೆಲ್ಲದಲ್ಲಿ ಉತ್ತಮ ಕಬ್ಬಿಣಾಂಶವಿರುತ್ತದೆ. ರಾಸಾಯನಿಕ ಬೆರೆಸದ ಬೆಲ್ಲ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ದೂರವಿಡಬಹುದು. ಇದೊಂದು ಉದಾಹರಣೆ ಮಾತ್ರ. ಇಂತಹ ಬಹಳಷ್ಟು ಅವೈಜ್ಞಾನಿಕ ತಿಳಿವಳಿಕೆಗಳು ಬೇರೂರಿವೆ. 

Get Rid of Back Fat: ಅಪ್ಪರ್ ಬ್ಯಾಕ್ ಕೊಬ್ಬು ಕರಗಿಸಲು ಹೀಗೆ ಮಾಡಬಹುದು

ಅಷ್ಟಕ್ಕೂ ದೇಹವನ್ನು ಗೌರವಿಸುವುದೆಂದರೆ ಏನು ಹಾಗೂ ಹೇಗೆ ಗೊತ್ತಾ? ಅದಕ್ಕಾಗಿ ಮೊದಲು ನಿಮ್ಮ ಮನಸ್ಸನ್ನು ಸರಿಪಡಿಸಿಕೊಳ್ಳಬೇಕು. ದೇಹದ ಗಾತ್ರ, ಆಕಾರ ಹೇಗಿದೆಯೋ ಹಾಗೆ ಮನಃಪೂರ್ವಕವಾಗಿ ಸ್ವೀಕಾರ ಮಾಡಬೇಕು. ದೇಹಕ್ಕೆ ಪೂರಕವಾದ ಡ್ರೆಸ್ (Dress) ಧರಿಸಬೇಕು. ದೇಹವು ಇಂದಿನ ದಿನದಲ್ಲಿ ಎಲ್ಲರೂ ಬಯಸುವಂತೆಯೇ ಇರಬೇಕಾಗಿಲ್ಲ. ಎಲ್ಲರ ದೇಹ ಒಂದೇ ರೀತಿ ರೂಪುಗೊಳ್ಳಲು ಸಾಧ್ಯವೂ ಇಲ್ಲ. ಆನುವಂಶಿಕವಾಗಿ ಬಂದಿರುವ ಹಲವಾರು ಅಂಶಗಳನ್ನು ಬದಲಿಸಲು ಸಾಧ್ಯವಿಲ್ಲ. ಇವತ್ತಿನ ದಿನಗಳಲ್ಲಿ ಹಾರ್ಮೋನ್ ಥೆರಪಿ ಸೇರಿದಂತೆ ಯಾವ್ಯಾವುದೋ ಥೆರಪಿಗಳನ್ನು ಮಾಡಿಸಿಕೊಳ್ಳುವವರಿದ್ದಾರೆ. ಅವುಗಳೆಲ್ಲ ಸುಲಭವಾಗಿ ಜನರ ಕೈಗೆಟುವಂತಿರುವುದಿಲ್ಲ. ಹಾಗೂ ಕಳಪೆ ಗುಣಮಟ್ಟದ ಚಿಕಿತ್ಸೆ ಪಡೆಯಲು ಮುಂದಾಗಬೇಡಿ.

ಪ್ರತಿದಿನ ದೈಹಿಕ ಚಟುವಟಿಕೆ(Physical Activity)ಯಲ್ಲಿ ಸ್ವಲ್ಪ ಕಾಲ ತೊಡಗಿಕೊಳ್ಳಿ. ಹೊಟ್ಟೆ (Stomach) ಮತ್ತು ಸೊಂಟ ಕರಗಿಸುವ ವ್ಯಾಯಾಮಗಳಿಗೆ ಆದ್ಯತೆ ನೀಡಿ. ನಿತ್ಯವೂ ಅರ್ಧಗಂಟೆ ನಡಿಗೆ (Walking) ಮಾಡಿ. ಧ್ಯಾನ (Meditation), ಪ್ರಾಣಾಯಾಮ (Pranayama) ಮಾಡುವುದು ಅತ್ಯಂತ ಅಗತ್ಯ. ಧ್ಯಾನ ಮಾಡಿದಾಗ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನಿನಿಂದ ದೇಹದ ಕೊಬ್ಬು ಕರಗುತ್ತದೆ. 

Food Delivery stats ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿ ಆರ್ಡರ್ to 6,000 ರೂ ಟಿಪ್ಸ್, 2021ರ ಸ್ವಿಗ್ಗಿಯ ಅಚ್ಚರಿ ಸುದ್ದಿ!

ಮನೆಯ ಆಹಾರವನ್ನೇ ಸೇವನೆ ಮಾಡಿ. ಹೊರಗಿನ ತಿನಿಸನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಎಂಟು ಗಂಟೆಯೊಳಗೆ ರಾತ್ರಿಯೂಟ ಮುಗಿಸಿ, ಊಟ ಹಾಗೂ ಮಲಗುವ ಸಮಯಕ್ಕೆ ಕನಿಷ್ಠ ಎರಡು ಗಂಟೆ ಅಂತರವಿರಲಿ. ಪಾಲಿಷ್ ಮಾಡದ ಅಕ್ಕಿ ಹಾಗೂ ಗೋಧಿಯನ್ನು ಆಹಾರದಲ್ಲಿ ಬಳಕೆ ಮಾಡಬೇಕು. ರಾಗಿ ಬಳಕೆ ತುಂಬ ಒಳ್ಳೆಯದು. ದಿನವೂ ರಾಗಿ ಸೇವನೆ ಮಾಡಿದರೆ ಅಧಿಕ ಕೊಬ್ಬು ಶೇಖರಣೆಯಾಗುವುದಿಲ್ಲ. ತುಪ್ಪ ತಿಂದರೆ ದಪ್ಪಗಾಗುತ್ತೇವೆನ್ನುವ ಭಯ ಬೇಡ. ಹಸುವಿನ ತುಪ್ಪ ಮಹಿಳೆಯರ ಆರೋಗ್ಯಕ್ಕೆ ಅತ್ಯಗತ್ಯ. 

ಉತ್ತಮ ದಿನಚರಿ ಹಾಗೂ ಅತ್ಯುತ್ತಮ ಆಹಾರ ಪದ್ಧತಿ ಅನುಸರಿಸುವ ಜತೆಗೇ ಮಾನಸಿಕವಾಗಿ ನೆಮ್ಮದಿ ಕಾಪಾಡಿಕೊಳ್ಳುವುದು ಅಗತ್ಯ. ಎಲ್ಲಕ್ಕಿಂತ ಮಿಗಿಲಾಗಿ, ಆತ್ಮವಿಶ್ವಾಸ(Confidence)ದೊಂದಿಗೆ ಹೆಜ್ಜೆ ಇರಿಸಿದರೆ ದೇಹದ ಆಕಾರ ನಗಣ್ಯವಾಗುತ್ತದೆ. 

Follow Us:
Download App:
  • android
  • ios