Asianet Suvarna News Asianet Suvarna News

Get Rid of Back Fat: ಅಪ್ಪರ್ ಬ್ಯಾಕ್ ಕೊಬ್ಬು ಕರಗಿಸಲು ಹೀಗೆ ಮಾಡಬಹುದು

ಮೊದಲ್ಲೆಲ್ಲಾ ಸಣ್ಣಗಾಗಿ ಝೀರೋ ಸೈಜ್‌ನಲ್ಲಿರಲು ಹೆಣ್ಣು ಮಕ್ಕಳು ಇಷ್ಟಪಡುತ್ತಿದ್ದರು. ಆದ್ರೆ, ಈಗಂತೂ ಸಣ್ಣಗಿದ್ರೂ, ದಪ್ಪಗಿದ್ರೂ ಪರ್ವಾಗಿಲ್ಲ. ಬೆಲ್ಲಿ (Belly), ಬ್ಯಾಕ್ ಫ್ಯಾಟ್ (Fat) ಅಂತೂ ಬೇಡಪ್ಪಾ ಅನ್ನೋದು ಎಲ್ಲರ ಗೋಳು. ಬೆಲ್ಲಿ ಫ್ಯಾಟ್ ಕರಗಿಸೋಕೆ ಎಲ್ಲರೂ ಎಕ್ಸರ್ಸೈಜ್ (Exercise) ಮಾಡಿರೋದು ನೋಡಿರಬಹುದು. ಅಪ್ಪರ್ ಬ್ಯಾಕ್ ಕೊಬ್ಬು ಕರಗಿಸೋಕೆ ಏನು ಮಾಡ್ಬೋದು..?

How to Get Rid of Back Fat with Exercise and Diet
Author
Bengaluru, First Published Dec 21, 2021, 9:52 PM IST

ಎಲ್ಲರೂ ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಲು ಪ್ರಯತ್ನಿಸುವುದನ್ನು ನೀವು ನೋಡಿರಬಹುದು. ಆದರೆ ನೀವು ಪರ್ಫೆಕ್ಟ್ ಆಗಿ ಕಾಣಲು ಬಯಸುವವರಾದರೆ ಹೊಟ್ಟೆಯ ಕೊಬ್ಬು ಮಾತ್ರವಲ್ಲ ಅಪ್ಪರ್ ಬ್ಯಾಕ್  ಕೊಬ್ಬನ್ನು ಸಹ ಕರಗಿಸಿಕೊಳ್ಳುವುದು ಮುಖ್ಯವಾಗಿದೆ. ಯಾಕೆಂದರೆ ಹಿಂಬದಿಯಲ್ಲಿರುವ ಈ ರೀತಿಯ ಕೊಬ್ಬು ನೀವು ಯಾವುದೇ ಬಟ್ಟೆ ಧರಿಸಿದಾಗ ಚರ್ಮ ಬಿಗಿಯಾಗಿ ಜೋತು ಬಿದ್ದಂತೆ ಮಾಡುತ್ತದೆ. ಇದು ನಿಮ್ಮ ಒಟ್ಟಾರೆ ಅಂದವನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ನೀವು ಹೊಟ್ಟೆಯ ಫ್ಯಾಟ್‌ನ್ನು ಇಳಿಸಿಕೊಳ್ಳುವ ಹಾಗೆಯೇ ಅಪ್ಪರ್ ಬ್ಯಾಕ್ ಕೊಬ್ಬನ್ನು ಇಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಹಾಗಿದ್ರೆ ಅಪ್ಪರ್ ಬ್ಯಾಕ್ ಕೊಬ್ಬನ್ನು ಕರಗಿಸುವುದು ಹೇಗೆ. ಇದಕ್ಕಾಗಿ ನೀವೇನು ಮಾಡಬಹುದು ?

ವಿವಿಧ ರೀತಿಯ ಯೋಗ, ವ್ಯಾಯಾಮಗಳು ನಿಮ್ಮ ದೇಹದಲ್ಲಿ ಬೇಡವಾಗಿರುವ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಆದರೆ ಅಪ್ಪರ್ ಬ್ಯಾಕ್  ಕೊಬ್ಬನ್ನು ಕರಗಿಸಲು ನೀವು ಕೆಲವೊಂದು ವಿಶೇಷವಾದ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಅವು ಯಾವುವೆಂದು ತಿಳಿಯೋಣ.

Belly Fat: ಹೊಟ್ಟೆ ದಪ್ಪ ಇದೆ, ಆದ್ರೂ ಫಿಟ್ ಆಗಿರೋದು ಹೇಗೆ?

ಪುಶ್ ಅಪ್ ಕೂಡ ಬ್ಯಾಕ್ ಎಕ್ಸರ್ಸೈಜ್ ಆಗಿದೆ

ಲಾಹೋರ್‌ನ ರಾಷ್ಟ್ರೀಯ ಆಸ್ಪತ್ರೆಯ ತಜ್ಞರು ಹೇಳುವಂತೆ ಪುಶ್-ಅಪ್ (Push up) ಎದೆಯ ವ್ಯಾಯಾಮ (Exercise) ಮಾತ್ರ ಎಂಬುದು ತಪ್ಪು ಕಲ್ಪನೆಯಾಗಿದೆ. ಪುಶ್ ಅಪ್ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಅದರಲ್ಲೂ ಮುಖ್ಯವಾಗಿ ಬೆನ್ನುಮೂಳೆಗೆ ಬೆಂಬಲವನ್ನು ನೀಡುವ ಬೆನ್ನಿನ ಸ್ನಾಯುಗಳನ್ನು ಈ ಎಕ್ಸರ್ಸೈಜ್ ಬಲಪಡಿಸುತ್ತದೆ. ಈ ಎಕ್ಸರ್ಸೈಜ್ ಮಾಡಲು ನೀವು ಮಲಗಿದ ಸ್ಥಿತಿಯಲ್ಲಿದ್ದು, ನೆಲದಲ್ಲಿ ನಿಮ್ಮ ಕೈಗಳನ್ನು ಊರಿದ ಸ್ಥಿತಿಯಲ್ಲಿ, ಪಾದಗಳನ್ನು ಹಿಂದೆ ಅಗಲದಲ್ಲಿ ಇರಿಸಿಕೊಳ್ಳಬೇಕು. ನಂತರ ಇದೇ ಸ್ಥಿತಿಯಲ್ಲಿ ನಿಮ್ಮ ಕೈಗಳನ್ನು ನೆಲದಿಂದ ಮೇಲಕ್ಕೆತ್ತದೇ ದೇಹವನ್ನು ಮೇಲೆ ಕೆಳಗೆ ಬಾಗಿಸಿಕೊಳ್ಳಬೇಕು.

ಒತ್ತಡದ ಸಮಸ್ಯೆಗಳನ್ನು ನಿಭಾಯಿಸಲು ಯೋಗ ಮಾಡಿ

ಒತ್ತಡದಲ್ಲಿರುವ ಮಂದಿ ಅನಾರೋಗ್ಯಕರ ಜೀವನವನ್ನು ನಡೆಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಯಾವಾಗಲೂ ಒತ್ತಡದಲ್ಲಿರುವುದು ವ್ಯಕ್ತಿ ದಪ್ಪಗಾಗಲು ಕಾರಣವಾಗುತ್ತದೆ. ಯೋಗ (Yoga) ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗಿ ಹಗುರವಾದ ಅನುಭವವಾಗುತ್ತದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ (Health) ಉತ್ತಮವಾಗುತ್ತದೆ. ಹೀಗಾಗಿ ದೇಹದಲ್ಲಿ ಯಾವುದೇ ರೀತಿಯ ಅಗತ್ಯವಿಲ್ಲದ ಕೊಬ್ಬು (Fat) ಶೇಖರಣೆಯಾಗುವುದಿಲ್ಲ. ಯೋಗದಲ್ಲಿ ನೀವು ಉಸಿರನ್ನು ಹಿಡಿದಿಟ್ಟುಕೊಳ್ಳುವುದು, ಉಸಿರನ್ನು ಬಿಡುವುದು ಮೊದಲಾದ ಚಟುವಟಿಕೆಗಳು ಬೆನ್ನು ಮತ್ತು ಕೋರ್ ಸ್ನಾಯುಗಳನ್ನು ಬಲಪಡಿಸಲು ಕಾರಣವಾಗುತ್ತದೆ.

ತೂಕ, ಬೆಲ್ಲಿ ಫ್ಯಾಟ್ ನಿವಾರಣೆ ಮಾಡಲು ಪ್ರತಿದಿನ ಸೇವಿಸಿ ಈ ನಟ್ಸ್

ಹಲಗೆಗಳನ್ನು ಇರಿಸಿ ವ್ಯಾಯಾಮ ಮಾಡಿ

ಅಪ್ಪರ್ ಬ್ಯಾಕ್  ಕೊಬ್ಬನ್ನು ತ್ವರಿತವಾಗಿ ತೊಡೆದುಹಾಕಲು ಹಲಗೆಗಳನ್ನು ಇರಿಸಿ ವ್ಯಾಯಾಮ ಮಾಡುವ ಅಭ್ಯಾಸ ನಿಮಗೆ ಸಹಾಯ ಮಾಡುತ್ತದೆ. ಎರಡು ದಪ್ಪದ ಹಲಗೆಗಳನ್ನು ನೆಲದ ಮೇಲೆ ಇರಿಸಿ. ನಿಮ್ಮ ಸ್ಥಾನವನ್ನು ಪುಶ್ ಅಪ್‌ನಂತೆ ತೆಗೆದುಕೊಳ್ಳಿ ಡಂಬಲ್ಸ್ ಮೇಲೆ ನಿಮ್ಮ ಕೈಗಳನ್ನು ಇರಿಸಿ ದೇಹವನ್ನು ನೇರವಾಗಿ ಇರಿಸಿಕೊಳ್ಳಿ. ಕನಿಷ್ಟ 30 ಸೆಕೆಂಡುಗಳ ಕಾಲ ಇದೇ ಪೊಸಿಶನ್‌ನಲ್ಲಿರಬೇಕು. ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಲು ನೀವು ಪುಶ್ ಅಪ್‌ ಸಹ ಮಾಡಬಹುದು. 

ಕೊಬ್ಬನ್ನು ಕರಗಿಸಲು ಯಾವ ಆಹಾರ ಸೇವನೆ ಉತ್ತಮ ?

ಕೊಬ್ಬನ್ನು ಕರಗಿಸಲು ಯಾವಾಗಲೂ ಆರೋಗ್ಯಕರ ಆಹಾರ (Food)ವನ್ನು ಸೇವಿಸುವುದು ಮುಖ್ಯವಾಗಿದೆ. ಎಷ್ಟು ಹೊತ್ತಿಗೆ ಆಹಾರ ಸೇವಿಸುತ್ತೀರಿ ಮತ್ತು ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸುತ್ತೀರಿ ಎಂಬುದನ್ನೂ ಗಮನಿಸಿಕೊಳ್ಳಬೇಕು. ಕೊಬ್ಬನ್ನು ಕರಗಿಸಲು ಇಷ್ಟಪಡುವವರು  ಸಿಹಿ ಆಲೂಗೆಡ್ಡೆಗಳನ್ನು ಸೇವಿಸಿ ಏಕೆಂದರೆ ಅವುಗಳು ನಿಮ್ಮ ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ಕಾಪಾಡುವ ಫೈಬರ್ ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಒಳಗೊಂಡಿರುತ್ತವೆ. ಅಂತಹ ಆಹಾರವು ದೀರ್ಘಕಾಲದವರೆಗೆ ಶಕ್ತಿಯುತವಾಗಿರಲು ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಾರಿನಂಶವಿರುವ ಆಹಾರವನ್ನು ಹೆಚ್ಚೆಚ್ಚು ಸೇವಿಸಿ. ಇದು ಹೆಚ್ಚು ಸಮಯ ಹಸಿವಾಗದಂತೆ ತಡೆಯುತ್ತದೆ. ಬಾರ್ಲಿ, ಓಟ್ ಮೀಲ್ ಮೊದಲಾದ ಆಹಾರಗಳ ಸೇವನೆ ಉತ್ತಮ.  ಜಂಕ್ ಫುಡ್ ಸೆವಿಸುವುದನ್ನು ನಿಲ್ಲಿಸಿ. ಇವಿಷ್ಟೇ ಅಲ್ಲದೆ ಯಾವಾಗಲೂ ಗುಣಮಟ್ಟದ ನಿದ್ರೆಯನ್ನು ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

Follow Us:
Download App:
  • android
  • ios