Asianet Suvarna News Asianet Suvarna News

Food Delivery stats ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿ ಆರ್ಡರ್ to 6,000 ರೂ ಟಿಪ್ಸ್, 2021ರ ಸ್ವಿಗ್ಗಿಯ ಅಚ್ಚರಿ ಸುದ್ದಿ!

  • ಈ ವರ್ಷ ನಡೆದ ಕುತೂಹಲ ಹಾಗೂ ರೋಚಕ ಸ್ವಿಗ್ಗಿ ಮಾಹಿತಿ
  • ಬಿರಿಯಾನಿಗೆ ಮಾರು ಹೋದ ಭಾರತೀಯರು
  • ಅತೀ ಹೆಚ್ಚು ಆರ್ಡರ್ ಆದ ಸ್ವೀಟ್ ಗುಲಾಬ್ ಜಾಮೂನು
  • 2021ರಲ್ಲಿ ನ್ಯೂಜಿಲೆಂಡ್ ಜನಸಂಖ್ಯೆಯಷ್ಟು ಸಮೋಸಾ ಆರ್ಡರ್
     
Year End Indians ordered 115 plates of biryani per minute to Rs 6000 tip 2021 Swiggy food Delivery stats ckm
Author
Bengaluru, First Published Dec 22, 2021, 5:22 AM IST

ಬೆಂಗಳೂರು(ಡಿ.22): ಚಿಕನ್ ಬಿರಿಯಾನಿ, ಗುಲಾಬ್ ಜಾಮೂನು, ಸಮೋಸಾ, ರಸಮಲಾಯಿ.... ಇದು ಈ ವರ್ಷ ಭಾರತೀಯರು ಅತೀ ಹೆಚ್ಚು ಆರ್ಡರ್(Food order) ಮಾಡಿದ ಆಹಾರ ತಿನಿಸುಗಳು. ಹೌದು. 2021ಕ್ಕೆ ಗುಡ್‌ಬೈ ಹೇಳಿ 2022ರ ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ಫುಡ್ ಡೆಲಿವರಿ ಆ್ಯಪ್ ಸ್ಪಿಗ್ಗಿ(Swiggy) ಈ ವರ್ಷದ ಅಂಕಿ ಅಂಶ ಬಹಿರಂಗ ಪಡಿಸಿದೆ. ಈ ಅಂಕಿ ಅಂಶದಲ್ಲಿ ಅತ್ಯಂತ ರೋಚಕ ಹಾಗೂ ಕುತೂಹಲಕರ ಮಾಹಿತಿಗಳು ಅಡಗಿದೆ.

2021ರಲ್ಲಿ ಸ್ವಿಗ್ಗಿಯಲ್ಲಿ(Food Delivery App) ಘಟಿಸಿದ ಸುಗ್ಗಿಮಾಹಿತಿ ಇಲ್ಲಿದೆ. ಇದರಲ್ಲಿ ಕೇವಲ ಫುಡ್ ಆರ್ಡರ್ ಮಾತ್ರವಲ್ಲ, ಡೆವರಿ ಮಾಡಿದಾತನಿಗೆ 6,000 ರೂಪಾಯಿ ಟಿಪ್ಸ್,   55 ಕಿಲೋಮೀಟರ್ ದೂರಕ್ಕೆ ಫುಡ್ ಡೆಲಿವರಿ ಸೇರಿದಂತೆ ಹಲವು ಇಂಟ್ರೆಸ್ಟಿಂಗ್ ಮಾಹಿತಿಗಳು ಇವೆ. 

Swiggyಯಿಂದ ಮಹಿಳೆಯರಿಗೆ ತಿಂಗಳಲ್ಲಿ 2 ದಿನ ಮುಟ್ಟಿನ ರಜೆ, ಹಲವು ಸೌಲಭ್ಯ!

2021ರ ಸ್ವಿಗ್ಗಿ ಅಂಕಿ ಅಂಶದ ಪ್ರಕಾರ ದೇಶದ ಜನ ಬಿರಿಯಾನಿಗೆ(Biriyani) ಮಾರುಹೋಗಿದ್ದಾರೆ. ಈ ವರ್ಷ ಸರಾಸರಿಯಾಗಿ ಪ್ರತಿ ನಿಮಿಷಕ್ಕೆ 115 ಬಿರಿಯಾನಿ ಆರ್ಡರ್ ಮಾಡಲಾಗುತ್ತಿದೆ.  ಇಷ್ಟೇ ಅಲ್ಲ ಈ ವರ್ಷ 4.25 ಲಕ್ಷ ಮಂದಿ ಹೊಸದಾಗಿ ಸ್ವಿಗ್ಗಿ ಆ್ಯಪ್‌ ಡೌನ್ಲೋಡ್ ಮಾಡಿ ಮೊದಲು ಬಿರಿಯಾನಿ ಆರ್ಡರ್ ಮಾಡಿದ್ದಾರೆ.  2020ರಲ್ಲಿ ಪ್ರತಿ ನಿಮಿಷಕ್ಕೆ ಸರಿಸುಮಾರು 90 ಬಿರಿಯಾನಿ ಆರ್ಡರ್ ಆಗುತ್ತಿತ್ತು. ಇದೀಗ ಈ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ ಅತೀ ಹೆಚ್ಚು ಆರ್ಡರ್ ಆದ ಸ್ನಾಕ್ಸ್ ಸಮೋಸಾ(Samosa).  2021ರಲ್ಲಿ ಇದುವರೆಗೆ ದೇಶದಲ್ಲಿ 50 ಲಕ್ಷ ಸಮೋಸಾ ಆರ್ಡರ್ ಮಾಡಲಾಗಿದೆ. ಇದು ಸರಿಸುಮಾರು ನ್ಯೂಜಿಲೆಂಡ್ ಜನಸಂಖ್ಯೆಗೆ ಸಮವಾಗಿದೆ. 2020ರ ಜನಗಣತಿ ಪ್ರಕಾರ ನ್ಯೂಜಿಲೆಂಡ್‌ ದೇಶದ ಜನಸಂಖ್ಯೆ 50.8 ಲಕ್ಷ. 2021ರ ಅಂತ್ಯಕ್ಕೆ ಇನ್ನು 9 ದಿನಗಳು ಬಾಕಿ ಇದೆ. ಹೀಗಾಗಿ ಸಮೋಸಾ ಆರ್ಡರ್‌ನಲ್ಲಿ ನ್ಯೂಜಿಲೆಂಡ್ ಜನಸಂಖ್ಯೆಯನ್ನೂ ಭಾರತ ಮೀರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಕಿಯಲ್ಲಿ ನರಳುತ್ತಿದ್ದವರ ಪಾಲಿಗೆ ದೇವರಾದ ಡೆಲಿವರಿ ಬಾಯ್!

ಅತೀ ಹೆಚ್ಚು ಆರ್ಡರ್ ಆದ ಸ್ನಾಕ್ಸ್‌ನಲ್ಲಿ ಪಾವ್ ಬಾಜಿ ಎರಡನೇ ಸ್ಥಾನದಲ್ಲಿದೆ. ಈ ವರ್ಷ 21 ಲಕ್ಷ ಪಾವ್ ಬಾಜಿ ಆರ್ಡರ್ ಆಗಿದೆ.  ಇನ್ನು ಸ್ವೀಟ್ಸ್‌ನಲ್ಲಿ ಗುಲಾಬ್ ಜಾಮೂನು(Gulab Jam) ಮೊದಲ ಸ್ಥಾನದಲ್ಲಿದೆ. ಇದು 21 ಲಕ್ಷ ಆರ್ಡರ್ ಆಗಿದೆ. ಇನ್ನು 10 ಲಕ್ಷ ರಸಮಲಾಯಿ ಆರ್ಡರ್ ಆಗಿದೆ. ಕೊರೋನಾ ವಕ್ಕರಿಸಿದ ಬಳಿಕ ಜನರು ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಜಂಕ್ ಫುಡ್‌ಗಳಿಂತ ಆರೋಗ್ಯಕರ ಆಹಾರ ಆರ್ಡರ್‌ನಲ್ಲಿ ಶೇಕಡಾ 200 ರಷ್ಟು ಏರಿಕೆ ಕಂಡಿದೆ. ದೇಶದಲ್ಲಿ ಬೆಂಗಳೂರು ಅತ್ಯಂತ ಆರೋಗ್ಯ ಪ್ರಜ್ಞೆ ಹಾಗೂ ಕಾಳಜಿ ಹೊಂದಿದ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಹೈದರಾಬಾದ್ ಹಾಗೂ ಮುಂಬೈ ನಂತ್ರದ ಸ್ಥಾನದಲ್ಲಿದೆ.

ಇವಿಷ್ಟು ಆರ್ಡರ್ ವಿಚಾರವಾದರೆ, ಬೆಂಗಳೂರು ಅತೀ ಹೆಚ್ಚು ದೋಸೆ ಆರ್ಡರ್ ಮಾಡಿದ ನಗರವಾಗಿದ್ದರೆ, ಚೆನ್ನೈನಲ್ಲಿ ಒಂದು ಡೆಲಿವರಿ ಮಾಡಿದಾತನಿಗೆ ಬರೋಬ್ಬರಿ 6,000 ರೂಪಾಯಿ ಟಿಪ್ಸ್ ನೀಡಿದ ಘಟನೆಯೂ ಈ ವರ್ಷ ವರದಿಯಾಗಿದೆ. ಗರಿಷ್ಠ ದೂರದ ಡೆಲಿವರಿ ಬೆಂಗಳೂರಿನಲ್ಲಿ ಮಾಡಲಾಗಿದೆ. ಒಂದು ಫುಡ್ ಡೆಲಿವರಿಗಾಗಿ ಸ್ವಿಗ್ಗಿ ಬರೋಬ್ಬರಿ 55 ಕಿಲೋಮೀಟರ್ ದೂರ ಪ್ರಯಾಣಿಸಿದೆ. ಇನ್ನು ಕೇವಲ 200 ಮೀಟರ್ ದೂರದಲ್ಲಿರುವ ಶಾಪ್‌ನಿಂದ ವಸ್ತು ತರಲು ಸ್ವಿಗ್ಗಿ ಬಳಸಿದಿ ಘಟನೆಯೂ ಇದೇ ವರ್ಷ ನಡೆದಿದೆ.

ಮನೆಬಾಗಿಲಿಗೆ ಮದ್ಯ ಪೂರೈಕೆ; ಸ್ವಿಗ್ಗಿಯಿಂದ ಭರ್ಜರಿ ಆಫರ್!

ಮತ್ತೊಂದು ವಿಶೇಷ ಅಂದರೆ ಶೇಕಡಾ 80 ರಷ್ಟು ಮಂದಿ ಆನ್‌ಲೈನ್ ಮೂಲಕವೇ ಹಣ ಪಾವತಿ ವಿಧಾನ ಆಯ್ಕೆ ಮಾಡಿದ್ದಾರೆ. ಭಾರತೀಯ ಆಹಾರ, ಏಷ್ಯಾ ಹಾಗೂ ಚೈನೀಸ್ ಆಹಾರ ಅತೀ ಹೆಚ್ಚು ಆರ್ಡರ್ ಲಿಸ್ಟ್‌ನಲ್ಲಿದೆ.  ಸ್ವಿಗ್ಗಿ ಇ ಗ್ರೋಸರಿಯಲ್ಲಿ 2.8 ಕೋಟಿ ಹಣ್ಣು ಹಾಗೂ ತರಕಾರಿ ಪ್ಯಾಕೆಟ್ ಡೆಲವರಿ ಮಾಡಲಾಗಿದೆ. ಇದರಲ್ಲಿ ಟೋಮ್ಯಾಟೋ, ಬಾಳೆ ಹಣ್ಣು, ಈರುಳ್ಳಿ, ಆಲೂಗೆಡ್ಡೆ ಹಾಗೂ ಹಸಿಮೆಣಸಿನಕಾಯಿ ಅಗ್ರಸ್ಥಾನದಲ್ಲಿದೆ. 

Follow Us:
Download App:
  • android
  • ios