Asianet Suvarna News Asianet Suvarna News

ಪಾಕಿಸ್ತಾನಿ ಸೇನೆಗೆ ಸವಾಲಾಗಿರೋ ಬಲೂಚಿಸ್ತಾನದ ಯುವ ಕಾರ್ಯಕರ್ತೆ ಮಹರಂಗ್ ಬಲೋಚ್

ಸುಮಾರು 200 ಮಹಿಳಾ ಪ್ರತಿಭಟನಾಕಾರರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಈ ಪೈಕಿ ಪ್ರತಿಭಟನಾಕಾರರ ನಾಯಕಿ ಮಹರಂಗ್ ಬಲೂಚ್ ಕೂಡ ಸೇರಿದ್ದಾರೆ. ಅವರ ಬಗ್ಗೆ ಇಲ್ಲಿದೆ ವಿವರ..

meet mahrong baloch young activist who is challenging pakistani army ash
Author
First Published Dec 26, 2023, 1:20 PM IST

ಇಸ್ಲಾಮಾಬಾದ್‌ (ಡಿಸೆಂಬರ್ 26, 2023): ಪಾಕ್‌ ರಾಜಧಾನಿ ಇಸ್ಲಾಮಾಬಾದ್‌ ಪ್ರವೇಶಿಸಿದ ಸುಮಾರು 200 ಮಹಿಳಾ ಪ್ರತಿಭಟನಾಕಾರರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಈ ಪೈಕಿ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪುರುಷರ ಬಲವಂತದ ನಾಪತ್ತೆಯಾಗ್ತಿರೋ ವಿರುದ್ಧ ಪ್ರತಿಭಟನಾಕಾರರು ವಾರಗಳ ಕಾಲ ದೇಶಾದ್ಯಂತ ಮೆರವಣಿಗೆ ನಡೆಸುತ್ತಿದ್ದರು.

ಬಂಧಿತರಲ್ಲಿ ಪ್ರತಿಭಟನಾಕಾರರ ನಾಯಕಿ ಮಹರಂಗ್ ಬಲೂಚ್ ಕೂಡ ಸೇರಿದ್ದಾರೆ. ಮಹರಂಗ್ ಬಲೂಚ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಟ್ವೀಟ್‌ ಮಾಡಿದ್ದು, 'ಇಸ್ಲಾಮಾಬಾದ್ ಪೊಲೀಸರ ದಾಳಿಗೆ ಒಳಗಾಗಿದ್ದೇನೆ' ಎಂದು ಹೇಳಿದ್ದಾರೆ.

ಇದನ್ನು ಓದಿ: ಪಾಕ್‌ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ: ಮೊದಲ ಹಿಂದೂ ಮಹಿಳಾ ಶಾಸಕಿಯಾಗ್ತಾರಾ ಸವೀರಾ ಪ್ರಕಾಶ್?

ಮಹರಂಗ್ ಬಲೂಚ್ ಯಾರು?
ಮಹರಂಗ್ ಬಲೂಚ್ ಪಾಕಿಸ್ತಾನದ ಬಲೂಚಿಸ್ತಾನದ ಬಲೂಚ್ ಮಾನವ ಹಕ್ಕುಗಳ ಕಾರ್ಯಕರ್ತೆ. ಅವರು ಬಲೂಚಿಸ್ತಾನದಲ್ಲಿ ಕಾನೂನುಬಾಹಿರವಾಗಿ ಜಾರಿಗೊಳಿಸಲಾದ ನಾಪತ್ತೆಗಳು ಮತ್ತು ಅಧಿಕಾರಿಗಳ ಕಾನೂನುಬಾಹಿರ ಹತ್ಯೆಯಂತಹ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿದ್ದಾರೆ.

ಮಹರಂಗ್ ಬಲೂಚ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು ಮತ್ತು 5 ಸಹೋದರಿಯರು ಮತ್ತು ಒಬ್ಬ ಸಹೋದರರನ್ನು ಹೊಂದಿದ್ದಾರೆ. ಆಕೆಯ ಕುಟುಂಬ ಬಲೂಚಿಸ್ತಾನದ ಕಲಾತ್‌ಗೆ ಸೇರಿದೆ. ಮಹರಂಗ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಆಕೆಯ ತಂದೆ ಅಬ್ದುಲ್ ಗಫರ್ ಬಲೋಚ್ ಕಾರ್ಮಿಕ ಮತ್ತು ಎಡಪಂಥೀಯ ರಾಜಕೀಯ ಕಾರ್ಯಕರ್ತೆಯಾಗಿದ್ದಾರೆ.

ಪಾಕ್ ಚುನಾವಣೆ; ಎಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿದೆ ಮುಂಬೈ ದಾಳಿಕೋರ ಹಫೀಜ್ ಪಕ್ಷ!

ಮಹರಂಗ್ ಬಲೂಚ್ ತಂದೆಯನ್ನು 2009ರಲ್ಲಿ ಕರಾಚಿಯ ಆಸ್ಪತ್ರೆಗೆ ಹೋಗುತ್ತಿದ್ದಾಗ ಪಾಕಿಸ್ತಾನದ ಅಧಿಕಾರಿಗಳು ಬಲವಂತವಾಗಿ ಅಪಹರಿಸಿದ್ದರು. ಆ ಸಮಯದಲ್ಲಿ ಮಹರಂಗ್ ಕೇವಲ 16 ವರ್ಷ ವಯಸ್ಸಿನವನಾಗಿದ್ದಳು. ಆಗಲೇ ಪ್ರತಿಭಟನೆಯನ್ನು ಪ್ರಾರಂಭಿಸಿದ ಈಕೆ ವಿದ್ಯಾರ್ಥಿ ಪ್ರತಿರೋಧ ಚಳವಳಿಯಲ್ಲಿ ಜನಪ್ರಿಯಳಾದಳು.

ಮಹರಂಗ್ ಬಲೂಚ್ ತಂದೆ 2011 ರಲ್ಲಿ ಚಿತ್ರಹಿಂಸೆಯ ಚಿಹ್ನೆಗಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ಹಾಗೂ, ಮಹರಂಗ್ ಸಹೋದರನನ್ನು 2017 ರಲ್ಲಿ ಅಪಹರಿಸಲಾಯಿತು ಮತ್ತು ಮೂರು ತಿಂಗಳ ಕಾಲ ಬಂಧನದಲ್ಲಿರಿಸಲಾಗಿತ್ತು. ಅಂದಿನಿಂದ ಈಕೆ ಬಲೂಚ್ ಪ್ರತಿರೋಧ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾಳೆ ಎಂದು ತಿಳಿದುಬಂದಿದೆ. 

ಪಾಕ್‌ ಉಗ್ರ ಸಂಘಟನೆ ಎಲ್‌ಇಟಿಗೆ ಹಣಕಾಸು ನೆರವು ನೀಡ್ತಿದ್ದ ಮೂವರ ಹತ್ಯೆ: ಮತ್ತೆ ಸದ್ದು ಮಾಡಿದ ‘ಅಪರಿಚಿತ ವ್ಯಕ್ತಿ’!

ಇನ್ನೊಂದೆಡೆ, ಸವೀರಾ ಪ್ರಕಾಶ್ ಎಂಬ ಹಿಂದೂ ಮಹಿಳೆ ಬುನೇರ್ ಜಿಲ್ಲೆಯ PK-25 ರ ಸಾಮಾನ್ಯ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಸದಸ್ಯೆ, ಶ್ರೀಮತಿ ಸವೀರಾ ಪ್ರಕಾಶ್ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಶಾವಾದವನ್ನು ಹೊಂದಿದ್ದಾರೆ. ಕಳೆದ 35 ವರ್ಷಗಳಿಂದ ಪಿಪಿಪಿಯ ಸಮರ್ಪಿತ ಸದಸ್ಯರಾಗಿರುವ ತಂದೆ ಹಾಗೂ ನಿವೃತ್ತ ವೈದ್ಯ ಓಂ ಪ್ರಕಾಶ್‌ ಅವರ ಹೆಜ್ಜೆಗಳನ್ನು ಅನುಸರಿಸಲು ಮಗಳು ಮುಂದಾಗಿದ್ದಾಳೆ.

ಭಾರತದೊಳಗೆ ಉಗ್ರರ ನುಸುಳಿಸಲು ತನ್ನದೇ ಪೋಸ್ಟ್‌ಗೆ ಬೆಂಕಿ ಹಚ್ಚಿ ನಾಟಕವಾಡಿದ ಪಾಕ್!

Follow Us:
Download App:
  • android
  • ios