Asianet Suvarna News Asianet Suvarna News

ಪಾಕ್‌ ಉಗ್ರ ಸಂಘಟನೆ ಎಲ್‌ಇಟಿಗೆ ಹಣಕಾಸು ನೆರವು ನೀಡ್ತಿದ್ದ ಮೂವರ ಹತ್ಯೆ: ಮತ್ತೆ ಸದ್ದು ಮಾಡಿದ ‘ಅಪರಿಚಿತ ವ್ಯಕ್ತಿ’!

ಹಾಜಿ ಉಲ್ಮರ್ ಗುಲ್ ಹತ್ಯೆಯ ನಂತರ ಐಎಸ್‌ಐ ಭಾರಿ ಹಿನ್ನೆಡೆ ಅನುಭವಿಸಿದೆ. ಈತ ಬಡ ಪಾಕಿಸ್ತಾನಿಗಳಿಂದ ಭಾರೀ ತೆರಿಗೆಯನ್ನು ಸಂಗ್ರಹಿಸುತ್ತಿದ್ದ ಎನ್ನಲಾಗಿದ್ದು, ಈ ಹಿನ್ನೆಲೆ ಆತನ ಹತ್ಯೆ ಇತರ ಉಗ್ರರಿಗೆ ದೊಡ್ಡ ನಷ್ಟವಾಗಿದೆ. 

financier of terrorist organization lashkar e taiba murdered in pakistan ash
Author
First Published Dec 22, 2023, 12:27 PM IST

ಕರಾಚಿ (ಡಿಸೆಂಬರ್ 22, 2023): ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರ ಹತ್ಯೆಯಾಗಿರುವ ಬಗ್ಗೆ ಗುರುವಾರ ವರದಿಯಾಗಿದೆ. ಆದರೆ, ಈ ಘಟನೆಗೆ ಸೇಡು ಎಂಬಂತೆ  ಪಾಕಿಸ್ತಾನದ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡ್ತಿದ್ದ ವ್ಯಕ್ತಿ ಸೇರಿ ಮೂವರನ್ನು ಹತ್ಯೆ ಮಾಡಲಾಗಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಹಣಕಾಸುದಾರರಲ್ಲಿ ಒಬ್ಬನಾದ ಹಾಜಿ ಉಲ್ಮರ್ ಗುಲ್‌ನನ್ನ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಆತನನ್ನು ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪಾಕಿಸ್ತಾನದ ಟಂಕ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್ ಸಾವಿನ ವದಂತಿ: ಗುಪ್ತಚರ ಇಲಾಖೆ ಹೇಳಿದ್ದೇನು, ಅಸಲಿಯತ್ತು ಹೀಗಿದೆ..

ಹಾಜಿ ಉಲ್ಮರ್ ಗುಲ್ ಹತ್ಯೆಯ ನಂತರ ಐಎಸ್‌ಐ ಭಾರಿ ಹಿನ್ನೆಡೆ ಅನುಭವಿಸಿದೆ. ಈತ ಬಡ ಪಾಕಿಸ್ತಾನಿಗಳಿಂದ ಭಾರೀ ತೆರಿಗೆಯನ್ನು ಸಂಗ್ರಹಿಸುತ್ತಿದ್ದ ಎನ್ನಲಾಗಿದ್ದು, ಈ ಹಿನ್ನೆಲೆ ಆತನ ಹತ್ಯೆ ಇತರ ಉಗ್ರರಿಗೆ ದೊಡ್ಡ ನಷ್ಟವಾಗಿದೆ. ಇದು ಅವರ ಆರ್ಥಿಕ ಸ್ಥಿತಿಗೆ ನೇರ ಹೊಡೆತವಾಗಿದೆ.

ಇನ್ನೊಂದೆಡೆ, ಅಪರಿಚಿತ ವ್ಯಕ್ತಿ ಈ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆ ಪಾಕಿಸ್ತಾನದ ಭಯೋತ್ಪಾದಕರು ಸಹ ಅಪರಿಚಿತರಿಗೆ ತುಂಬಾ ಹೆದರುತ್ತಿದ್ದಾರೆ. ಪಾಕಿಸ್ತಾನದ ಏಜೆನ್ಸಿಗೆ ಈ ವಿಷಯದ ಬಗ್ಗೆ ಸುಳಿವು ಕೂಡ ಸಿಗುತ್ತಿಲ್ಲ. ಅಲ್ಲದೆ, ಜೈಲಿನೊಳಗೂ ಅವರು ಹತ್ಯೆ ನಡೆಸುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ.

ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಪಾಕ್‌ ಆಸ್ಪತ್ರೆಗೆ ದಾಖಲು!

ಇತ್ತೀಚೆಗೆ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್‌ ಇಬ್ರಾಹಿಂನನ್ನು ಅಪರಿಚಿತ ವ್ಯಕ್ತಿಗಳು ವಿಷ ಪ್ರಾಶನ ಮಾಡಿದ್ದಾರೆ. ದಾವೂದ್ ಇಬ್ರಾಹಿಂ ಪಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗೂ, ಮರಣ ಹೊಂದಿದ್ದ ಎಂದೂ ಸುದ್ದಿಯಾಗಿತ್ತು. ಆದರೆ, ಇದೆಲ್ಲವೂ ಸುಳ್ಳು ಎಂದು ನಂತರ ತಿಳಿದುಬಂದಿತ್ತು. 
 

ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

Follow Us:
Download App:
  • android
  • ios