MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಬೇಸಿಗೆಯಲ್ಲಿ ಬಳ್ಳಿ ತುಂಬಾ ಮಲ್ಲಿಗೆ ಹೂ ಅರಳಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಬೇಸಿಗೆಯಲ್ಲಿ ಬಳ್ಳಿ ತುಂಬಾ ಮಲ್ಲಿಗೆ ಹೂ ಅರಳಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

garden tips : ಮನೆಯ ಬಾಲ್ಕನಿಯಲ್ಲಿ ಮಲ್ಲಿಗೆ ಹೂ ಅರಳಿದ್ರೆ ಅದ್ರ ಘಮ ಮನೆ ತುಂಬ ತುಂಬಿರುತ್ತೆ. ಇಡೀ ಮನೆಯನ್ನು ಫ್ರೆಶ್ ಮಾಡಬಲ್ಲ ಈ ಮಲ್ಲಿಗೆ ಬೇಸಿಗೆಯಲ್ಲಿ ಬಳ್ಳಿ ತುಂಬ ಅರಳಬೇಕು ಅಂದ್ರೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕು. 

2 Min read
Author : Roopa Hegde
Published : Feb 27 2026, 11:06 PM IST
Share this Photo Gallery
  • FB
  • TW
  • Linkdin
  • Whatsapp
18
ಸರಿಯಾದ ಗಿಡದ ಆಯ್ಕೆ
Image Credit : Asianet News

ಸರಿಯಾದ ಗಿಡದ ಆಯ್ಕೆ

ನೀವು ಬಾಲ್ಕನಿಯಲ್ಲಿ ಮಲ್ಲಿಗೆ ಗಿಡ ಬೆಳೆಸಲು ಯಾವ ಗಿಡ ಆಯ್ಕೆ ಮಾಡ್ಕೊಳ್ತೀರಿ ಎಂಬುದು ಬಹಳ ಮುಖ್ಯ. ಅರೇಬಿಯನ್ ಮಲ್ಲಿಗೆ (ಜಾಸ್ಮಿನಮ್ ಸಾಂಬಾಕ್) ಮತ್ತು ಜಾಸ್ಮಿನಮ್ ಪಾಲಿಯಾಂಥಮ್ನಂತಹ ಕೆಲವು ಪ್ರಭೇದಗಳು ಹೆಚ್ಚು ಪರಿಮಳಯುಕ್ತವಾಗಿರೋದಲ್ದೆ ಪಾಟ್ ನಲ್ಲಿ ಸುಲಭವಾಗಿ ಬೆಳೆಯುತ್ವೆ.

28
ಸೂಕ್ತವಾದ ಪಾಟ್,ಮಣ್ಣು
Image Credit : Asianet News

ಸೂಕ್ತವಾದ ಪಾಟ್,ಮಣ್ಣು

ಕನಿಷ್ಠ 10-14 ಇಂಚು ಆಳದ, ನೀರು ಸರಿಯಾಗಿ ಹೊರಗೆ ಹೋಗುವ ಪಾಟ್ ಗಳಲ್ಲಿ ಮಲ್ಲಿಗೆ ಗಿಡ ಚೆನ್ನಾಗಿ ಬೆಳೆಯುತ್ತದೆ. ತೋಟದ ಮಣ್ಣನ್ನು ಕಾಂಪೋಸ್ಟ್, ಕೊಕೊಪೀಟ್, ಪರ್ಲೈಟ್ ಅಥವಾ ಮರಳಿನೊಂದಿಗೆ ಬೆರೆಸಿ. ನೀರನ್ನು ಸರಿಯಾಗಿ ಹೀರಿಕೊಳ್ಳಬಲ್ಲ ಪೋಷಕಾಂಶ ಭರಿತ ಮಣ್ಣನ್ನು ಬಳಸಿ. ಈ ಮಿಶ್ರಣ ಬೇರುಗಳು ನೀರಿನಲ್ಲಿ ನಿಲ್ಲದಂತೆ ಮತ್ತು ಸಾಕಷ್ಟು ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪಡೆಯಲು ನೆರವಾಗುತ್ತವೆ.

Related Articles

Related image1
ಮನೆಮುಂದೆ ಕಾಡಿನಂತೆ 'ತುಳಸಿ ಗಿಡ' ಬೆಳೆಸಲು ಉಪ್ಪು ಹಾಕಿ ತಪ್ಪು ಮಾಡಬೇಡಿ!
Related image2
Kitchen Tips: ಮನೆಯಲ್ಲಿ ಹಲ್ಲಿಗಳ ಕಾಟವೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು, ಹಲ್ಲಿ ಹತ್ತಿರ ಬರುವುದೇ ಇಲ್ಲ!
38
ಸೂರ್ಯನ ಬೆಳಕು ಅಗತ್ಯ
Image Credit : Asianet News

ಸೂರ್ಯನ ಬೆಳಕು ಅಗತ್ಯ

ಮಲ್ಲಿಗೆ ಹೂವುಗಳಿಗೆ ಸೂರ್ಯನ ಬೆಳಕು ಬಹಳ ಮುಖ್ಯ. ಪ್ರತಿದಿನ 4-6 ಗಂಟೆ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಗಿಡ ಇರ್ಬೇಕು. ಬೆಳಗಿನ ಸೂರ್ಯನ ಬೆಳಕು ಸೂಕ್ತ.ಮಧ್ಯಾಹ್ನದ ಬಿಸಿಲು ಗಿಡಕ್ಕೆ ಒತ್ತಡ ಹೇರ್ಬಹುದು.

48
ಸರಿಯಾದ ಪ್ರಮಾಣದಲ್ಲಿ ನೀರು
Image Credit : Asianet News

ಸರಿಯಾದ ಪ್ರಮಾಣದಲ್ಲಿ ನೀರು

ನೀವು ಮಲ್ಲಿಗೆ ಗಿಡಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಹಾಕ್ತೀರಿ ಎಂಬುದು ಕೂಡ ಗಿಡದ ಬೆಳವಣಿಗೆ, ಹೂ ಬಿಡಲು ಮುಖ್ಯವಾಗುತ್ತದೆ. ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಮಲ್ಲಿಗೆ ಗಿಡಕ್ಕೆ ನೀರು ಹಾಕಿ. ಆದ್ರೆ ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದು ಬೇರು ಕೊಳೆಯಲು ಕಾರಣವಾಗ್ಬಹುದು. ಆದ್ರೆ ಮಣ್ಣು ಸಂಪೂರ್ಣ ಒಣಗಲು ಬಿಡಬೇಡಿ. ಬೇಸಿಗೆಯಲ್ಲಿ ಆಗಾಗ ನೀರಿನ ಅಗತ್ಯವಿರುತ್ತದೆ.

58
ಸಪೋರ್ಟ್
Image Credit : Asianet News

ಸಪೋರ್ಟ್

ಮಲ್ಲಿಗೆ ಬಳ್ಳಿಯಾಗಿದ್ದರೆ ಟ್ರೆಲ್ಲಿಸ್, ರೇಲಿಂಗ್ ಅಥವಾ ಬಿದಿರಿನ ಕೋಲುಗಳಂತಹ ಬೆಂಬಲವನ್ನು ಅದಕ್ಕೆ ನೀಡ್ಬೇಕು. ಹೊಸ ಚಿಗುರುಗಳು ಬೆಳೆದಂತೆ, ಅವುಗಳನ್ನು ನಿಧಾನವಾಗಿ ಕೋಲುಗಳಿಗೆ ಕಟ್ಟಬೇಕು. ಇದ್ರಿಂದ ಬಳ್ಳಿ ಸುಲಭವಾಗಿ ಮೇಲೆ ಹೋಗುತ್ತದೆ. ಹೂವು ಹೆಚ್ಚಾಗಿ ಅರಳಲು ಸಹಾಯವಾಗುತ್ತದೆ.

68
ಗೊಬ್ಬರ ಹಾಕಿದಷ್ಟು ಹೂ ಹೆಚ್ಚು
Image Credit : Asianet News

ಗೊಬ್ಬರ ಹಾಕಿದಷ್ಟು ಹೂ ಹೆಚ್ಚು

ಬೇಸಿಗೆಯಲ್ಲಿ ಮಲ್ಲಿಗೆ ಗಿಡ ಹೆಚ್ಚೆಚ್ಚು ಹೂ ಬಿಡಬೇಕು ಅಂದ್ರೆ ಗೊಬ್ಬರದ ಅಗತ್ಯವಿದೆ. ನೀವು ಮನೆಯಲ್ಲಿಯೇ ತರಕಾರಿ ಸಿಪ್ಪೆಗಳನ್ನು ಬಳಸಿ ಗೊಬ್ಬರ ತಯಾರಿಸಿ ಹಾಕಬಹುದು. ಗೊಬ್ಬರದಲ್ಲಿ ರಂಜಕ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ, ಸಮತೋಲನದ ಗೊಬ್ಬರ ಬಳಸಿ. ಕಾಂಪೋಸ್ಟ್ ಟೀ ಅಥವಾ ಬಾಳೆಹಣ್ಣಿನ ಸಿಪ್ಪೆ ನೀರನ್ನು ಕೂಡ ನೀವು ಬಳಸಬಹುದು.

78
ಸರಿಯಾದ ಸಮಯಕ್ಕೆ ಟ್ರಿಮ್ ಮಾಡಿ
Image Credit : Asianet News

ಸರಿಯಾದ ಸಮಯಕ್ಕೆ ಟ್ರಿಮ್ ಮಾಡಿ

ಮಲ್ಲಿಗೆ ಗಿಡವನ್ನು ಕತ್ತರಿಸಿ ಟ್ರಿಮ್ ಮಾಡುವ ಅಗತ್ಯವಿದೆ. ನೀವು ವಸಂತಕಾಲದ ಆರಂಭದಲ್ಲಿ ಅಥವಾ ಹೂ ಒಣಗಿದ ನಂತ್ರ, ಗಿಡ ದುರ್ಬಲವಾಗಿದ್ದರೆ, ಸಾಯ್ತಿದ್ದರೆ ಆ ಭಾಗವನ್ನು ಕತ್ತರಿಸಿ. ಇದು ಹೊಸ ಚಿಗುರು ಹಾಗೂ ಮೊಗ್ಗನ್ನು ಉತ್ತೇಜಿಸುತ್ತದೆ.

88
ಹುಳು ಕಾಟ
Image Credit : Asianet News

ಹುಳು ಕಾಟ

ಬೇಸಿಗೆಯಲ್ಲಿ ಹುಳಗಳು, ಬಿಳಿ ನೊಣಗಳಂತಹ ಕೀಟಗಳ ಕಾಟ ಹೆಚ್ಚಿರುತ್ತದೆ. ಇದ್ರ ಬಗ್ಗೆ ಜಾಗರೂಕರಾಗಿರಬೇಕು. ಅಗತ್ಯವಿದ್ದರೆ ಬೇವಿನ ಎಣ್ಣೆಯಂತಹ ಸಾವಯವ ದ್ರಾವಣ ಬಳಸಬಹುದು. ಅತಿಯಾದ ಬೇಸಿಗೆಯಲ್ಲಿ ಗಿಡವನ್ನು ಸ್ವಲ್ಪ ಸಮಯ ನೆರಳಿನಲ್ಲಿಡಿ. ಮಣ್ಣು, ಬೆಳಕು, ಗೊಬ್ಬರ, ನೀರು ಸರಿಯಾಗಿದ್ದಲ್ಲಿ ಬೇಸಿಗೆಯಲ್ಲಿ ಮಲ್ಲಿಗೆ ಗಿಡ ಹೂವಿನಿಂದ ತುಂಬಿರುತ್ತದೆ. ಈ ಸಮಯದಲ್ಲಿ ಗಿಡಕ್ಕೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಉದ್ಯಾನ
ಜೀವನಶೈಲಿ

Latest Videos
Recommended Stories
Recommended image1
ಮನೆಮುಂದೆ ಕಾಡಿನಂತೆ 'ತುಳಸಿ ಗಿಡ' ಬೆಳೆಸಲು ಉಪ್ಪು ಹಾಕಿ ತಪ್ಪು ಮಾಡಬೇಡಿ!
Recommended image2
ತಾಳಿಕಟ್ಟಿದ ಶುಭವೇಳೆ, ರಶ್ಮಿಕಾ ಕಣ್ಣಲ್ಲಿ ಕಂಬನಿಧಾರೆ; ಎಂಥ ನಟಿಯಾದ್ರೂ ತವರು ತೊರೆಯೋದು ವೇದನೆಯೇ ಸರಿ ಎಂದ ನೆಟ್ಟಿಗರು!
Recommended image3
ಇಸ್ರೇಲ್‌ನಲ್ಲಿ ಪ್ರಧಾನಿ ಮೋದಿಗೆ ಬಗೆ ಬಗೆ ಭಕ್ಷ್ಯ ಮಾಡಿ ಬಡಿಸಿದ ಭಾರತೀಯ ಮೂಲದ ಇಸ್ರೇಲಿ ಕುಕ್ ಯಾರು
Related Stories
Recommended image1
ಮನೆಮುಂದೆ ಕಾಡಿನಂತೆ 'ತುಳಸಿ ಗಿಡ' ಬೆಳೆಸಲು ಉಪ್ಪು ಹಾಕಿ ತಪ್ಪು ಮಾಡಬೇಡಿ!
Recommended image2
Kitchen Tips: ಮನೆಯಲ್ಲಿ ಹಲ್ಲಿಗಳ ಕಾಟವೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು, ಹಲ್ಲಿ ಹತ್ತಿರ ಬರುವುದೇ ಇಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved