ಪಾಕ್ ಚುನಾವಣೆ; ಎಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿದೆ ಮುಂಬೈ ದಾಳಿಕೋರ ಹಫೀಜ್ ಪಕ್ಷ!
ಪಾಕಿಸ್ತಾನದ ಚುನಾವಣೆ ಕಸರತ್ತು ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ಜಾಗತಿಕ ಉಗ್ರ, ಮುಂಬೈ ದಾಳಿಕೋರ 26/11 ಹಫೀಜ್ ಸಯೀದ್ PMML ಪಕ್ಷ ಪಾಕಿಸ್ತಾನದ ಎಲ್ಲಾ ಸ್ಥಾನಕ್ಕೆ ಸ್ಪರ್ಧಿಸುತ್ತಿದೆ. ಪಾಕಿಸ್ತಾನದಲ್ಲಿ ಅಧಿಕಾರ ಹಿಡಿಯಲು ಲಷ್ಕರ್ ಇ ತೋಯ್ಬಾ ಸಂಸ್ಥಾಪಕ ಹಫೀಜ್ ಮಾಸ್ಟರ್ ಪ್ಲಾನ್ ಮಾಡಿದ್ದಾನೆ.
ಲಾಹೋರ್(ಡಿ.25) ಪಾಕಿಸ್ತಾನ ಮರ್ಕಾಝಿ ಮುಸ್ಲಿಮ್ ಪಕ್ಷ(PMML) ಪಾಕಿಸ್ತಾನ ಚುನಾವಣೆಗೆ ಅಖಾಡಕ್ಕಿಳಿಯುತ್ತಿದೆ. ಈ ಬಾರಿ ಎಲ್ಲಾ ಸ್ಥಾನಗಳಲ್ಲಿ PMML ಪಕ್ಷ ಸ್ಪರ್ಧಿಸುತ್ತಿದೆ. ಪಾಕಿಸ್ತಾನ ಚುನಾವಣೆಗೆ ಅಲ್ಲಿನ ಪಕ್ಷವೊಂದು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದರಿಂದ ಭಾರತಕ್ಕೆ ನಷ್ಟ ಲಾಭಗಳಿಲ್ಲ. ಆದರೆ PMML ಪಕ್ಷ ಸ್ಪರ್ಧೆ ಭಾರತವನ್ನು ಮತ್ತಷ್ಟು ಅಲರ್ಟ್ ಮಾಡಿದೆ. ಕಾರಣ ಇದು ಜಾಗತಿಕ ಉಗ್ರ, ಮುಂಬೈ ದಾಳಿ ನಡೆಸಿದ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸ್ಥಾಪಿಸಿದ ಪಕ್ಷ. ಇದಕ್ಕೆ ಉಗ್ರ ಹಫೀಝ್ ಅಧ್ಯಕ್ಷ. ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಹುಟ್ಟು ಹಾಕಿ ಭಾರತ ಸೇರಿದಂತೆ ಹಲವೆಡೆ ಭಯೋತ್ಪಾದಕ ದಾಳಿ ನಡೆಸಿದ ಇದೇ ಉಗ್ರ ಸಂಘಟನೆಯ ರಾಜಕೀಯ ಪಕ್ಷ ಇದೀಗ ಪಾಕಿಸ್ತಾನ ಚುನಾವಣೆಗೆ ಸ್ಪರ್ಧಿಸುತ್ತಿದೆ.
ಫೆಬ್ರವರಿ 8, 2024ರಲ್ಲಿ ಪಾಕಿಸ್ತಾನದ ಜನರಲ್ ಎಲೆಕ್ಷನ್ ನಡೆಯಲಿದೆ. ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ಕೂಡ ಸ್ಪರ್ಧಿಸುತ್ತಿದ್ದಾನೆ. ಮೂಲಗಳ ಪ್ರಕಾರ ಈತ ಪಾಕಿಸ್ತಾನ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾನೆ. ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಕ್ಲರಿಕ್ ಆಗಿರುವ ತಲ್ಹಾ ಸಹೀದ್, ಚುನಾವಣೆ ಅಖಾಡಕ್ಕೆ ಧುಮುಕಿದ್ದಾನೆ.
ಭಾರತದೊಳಗೆ ಉಗ್ರರ ನುಸುಳಿಸಲು ತನ್ನದೇ ಪೋಸ್ಟ್‌ಗೆ ಬೆಂಕಿ ಹಚ್ಚಿ ನಾಟಕವಾಡಿದ ಪಾಕ್!
2019ರಿಂದ ಹಫೀಜ್ ಸಯೀದ್ ಜೈಲಿನಲ್ಲಿದ್ದಾನೆ. ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣ ಒಂದರಲ್ಲಿ ಜೈಲು ಸೇರಿದ್ದಾನೆ. ಆದರೆ ಈತ ಜೈಲಿನಲ್ಲದ್ದರೂ ಪಾಕಿಸ್ತಾನ ಸೀಕ್ರೆಟ್ ಎಜೆಂಟ್ ಐಎಸ್ಐ, ಪಾಕಿಸ್ತಾನ ಸೇನೆ, ಪಾಕಿಸ್ತಾನ ಪೊಲೀಸ್ ಈತನ ಅಣತಿಯಂತೆ ನಡೆಯುತ್ತಿದೆ. ಪಕ್ಷದ ಚುನಾವಣೆ ಚಿಹ್ನೆ ಕುರ್ಚಿ ಎಂದು ಪಕ್ಷದ ಚುನಾವಣೆ ವಕ್ತಾರ ತಬೀಶ್ ಖಾಯುಮ್ ಹೇಳಿದ್ದಾರೆ.
ಪಾಕಿಸ್ತಾನದ ಎಲ್ಲಾ ಸ್ಥಾನಕ್ಕೆ ಹಫೀಜ್ ಪಕ್ಷ ಸ್ಪರ್ಧಿಸುತ್ತಿದೆ ಅನ್ನೋ ಮಾಹಿತಿ ಬರುತ್ತಿದ್ದಂತೆ ಗಡಿಯಲ್ಲಿ ಸೇನೆ ಮತ್ತಷ್ಟು ಅಲರ್ಟ್ ಆಗಿದೆ. ಕಾರಣ ಡ್ರಗ್ಸ್, ಕಳ್ಳ ಸಾಗಣೆ, ಖೋಟಾ ನೋಟುಗಳನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿ ಚುನಾವಣೆಗೆ ಹಣ ಕ್ರೋಢಿಕರಿಸುವ ಸಾಧ್ಯತೆ ಇದೆ. ಇತ್ತ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ಪಟ್ಟಕ್ಕೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಪಾಕ್ ಉಗ್ರ ಸಂಘಟನೆ ಎಲ್‌ಇಟಿಗೆ ಹಣಕಾಸು ನೆರವು ನೀಡ್ತಿದ್ದ ಮೂವರ ಹತ್ಯೆ: ಮತ್ತೆ ಸದ್ದು ಮಾಡಿದ ‘ಅಪರಿಚಿತ ವ್ಯಕ್ತಿ’!
ಪಾಕಿಸ್ತಾನದ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಗೋಹರ್ ಅಲಿ ಖಾನ್ ಅವರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಈ ಆಯ್ಕೆ ಮಾಡಲಾಗಿದೆ. 1996ರಲ್ಲಿ ಇಮ್ರಾನ್ ಖಾನ್ ಪಿಟಿಐ ಪಕ್ಷವನ್ನು ಸ್ಥಾಪಿಸಿದಾಗಿನಿಂದ ಇದೇ ಮೊದಲ ಬಾರಿಗೆ ಪಕ್ಷಕ್ಕೆ ಇಮ್ರಾನ್ ಹೊರತು ಬೇರೊಬ್ಬ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇಮ್ರಾನ್, ತೋಶಖಾನಾ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ ಬಳಿಕ ಅ.5 ರಂದು ಅವರನ್ನು ಬಂಧಿಸಲಾಗಿತ್ತು.