Asianet Suvarna News Asianet Suvarna News

ಆಸ್ಪತ್ರೆ ಮೆಟ್ಟಿಲ ಬಳಿಯೇ ಮಗುವಿನ ಜನ್ಮ ನೀಡಿದ್ರು ಸಹಾಯಕ್ಕೆ ಬಾರದ ಆರೋಗ್ಯ ಸಿಬ್ಬಂದಿ

ಆಸ್ಪತ್ರೆ (Hospital) ಮೆಟ್ಟಿಲ ಬಳಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಕಣ್ಣೆದುರೇ ಘಟನೆ ನಡೆದರು ಆಸ್ಪತ್ರೆಯ ವೈದ್ಯರಾಗಲಿ ಸಿಬ್ಬಂದಿಯಾಗಲಿ ಅತ್ತ ಸುಳಿಯದೇ ನಿರ್ಲಕ್ಷ್ಯ ತೋರಿದ ನಾಚಿಕೆಗೇಡಿನ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ (Shivpuri) ನಡೆದಿದೆ.  

Madhya Pradesh woman delivered a baby near the hospital stairs the health staff who did not come to help to care new born akb
Author
First Published May 7, 2023, 4:49 PM IST

ಭೋಪಾಲ್‌: ಸರ್ಕಾರ ಬಡವರು ಸೇರಿದಂತೆ ಸಮಾಜದ ದುರ್ಬಲ ವರ್ಗದವರ ಕಾಳಜಿಗಾಗಿ ಅನೇಕ ಸವಲತ್ತುಗಳನ್ನು ಜಾರಿಗೆ ತರುತ್ತಲೇ ಇದೆ. ಆದರೆ ಸುಶಿಕ್ಷಿತರು ವಿದ್ಯಾವಂತರೆನಿಸಿದವರ ನಿರ್ಲಕ್ಷ್ಯದ ಕಾರಣದಿಂದಾಗಿ  ಆ ಸವಲತ್ತುಗಳು ತಲುಪಬೇಕಾದವರನ್ನು ತಲುಪದೆ ಅವರು ಇರುವಲ್ಲಿಯೇ ಇದ್ದು ನರಳುವಂತಾಗಿದೆ. ಇದಕ್ಕೆ ಮತ್ತೊಂದು ನಿದರ್ಶನವಿದು. 

ಆಸ್ಪತ್ರೆ (Hospital) ಮೆಟ್ಟಿಲ ಬಳಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಕಣ್ಣೆದುರೇ ಘಟನೆ ನಡೆದರು ಆಸ್ಪತ್ರೆಯ ವೈದ್ಯರಾಗಲಿ ಸಿಬ್ಬಂದಿಯಾಗಲಿ ಅತ್ತ ಸುಳಿಯದೇ ನಿರ್ಲಕ್ಷ್ಯ ತೋರಿದ ನಾಚಿಕೆಗೇಡಿನ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ (Shivpuri) ನಡೆದಿದೆ.  ಅಲ್ಲೇ ವೈದ್ಯರು ಹಾಗೂ ನರ್ಸ್‌ಗಳು ಓಡಾಡುತ್ತಿದ್ದರು ಸಹಾಯಕ್ಕೆ ಬಂದಿಲ್ಲ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. 

ಬೆಡ್ ಇಲ್ಲ ಎಂದ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಕ್ವಾರಂಟೈನ್‌ ಆಗಿದ್ದ ಉದ್ಯಮಿ ಬಲಿ

ಅರುಣ್ ಪರಿಹಾರ್ (Arun Parihar) ಎಂಬುವವರ ಪತ್ನಿ ವಲಬೈ ಅವರಿಗೆ ಮುಂಜಾನೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರ ಕುಟುಂಬದವರು ಸಹಾಯಕ್ಕಾಗಿ ಜನನಿ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆದರೆ ಅವರು ಬರಲು ವಿಳಂಬ ಮಾಡಿದ್ದಾರೆ. ಇತ್ತ ಕುಟುಂಬದವರೇ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದಿದ್ದು, ಅಲ್ಲೂ ಕೂಡ ಆರೋಗ್ಯ ಸಿಬ್ಬಂದಿ ಕಾಳಜಿ ತೋರದೇ ನಿರ್ಲಕ್ಷ್ಯ ವಹಿಸಿದ್ದಾರೆ.  ಅಲ್ಲಿ ಗರ್ಭಿಣಿಯನ್ನು ಕರೆದೊಯ್ಯಲು ಸ್ಟ್ರೆಚರ್ ಆಗಲಿ ವಾರ್ಡ್‌ಬಾಯ್ ಆಗಲಿ ಬಂದಿಲ್ಲ. ಪರಿಣಾಮ ಆಸ್ಪತ್ರೆ ಮೆಟ್ಟಿಲ ಸಮೀಪವೇ ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಗಿ ಮಹಿಳೆ ಪತಿ ಅರುಣ್ ಪರಿಹಾರ್ ದೂರಿದ್ದಾರೆ

ನಾನು ಜನನಿ ಎಕ್ಸ್‌ಪ್ರೆಸ್‌ಗೆ (Janani Express) ಕರೆ ಮಾಡಿದೆ. ಅದೂ ಬರುವುದು ವಿಳಂಬವಾಯ್ತು,  ಇತ್ತ ಆಸ್ಪತ್ರೆಯವರೂ ಕೂಡ ಗರ್ಭಿಣಿಯನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ. ಸ್ಟ್ರೆಚರ್ ಆಗಲಿ, ನರ್ಸ್ ವೈದ್ಯರಾಗಲಿ ಸ್ಥಳಕ್ಕೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಮಗುವಿನ ಜನನದ ನಂತರ ಅಲ್ಲಿ ಜನ ಸೇರಿದ್ದು, ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ ನಂತರ ಆಸ್ಪತ್ರೆ ಸಿಬ್ಬಂದಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ. ಪ್ರಸ್ತುತ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನರಳಿ ನರಳಿ ಪ್ರಾಣ ಬಿಟ್ಟ ವ್ಯಕ್ತಿ..! 

 

Follow Us:
Download App:
  • android
  • ios