ಬೆಂಗಳೂರು(ಜು.11): ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೆ ತುಮಕೂರು ಮೂಲದ ಉದ್ಯಮಿಯೊಬ್ಬರು ಜೀವ ಬಿಟ್ಟದಾರುಣ ಘಟನೆ ಯಶವಂತಪುರ ಬಳಿಯ ಬ್ರಿಗೇಡ್‌ ಗೇಟ್‌ವೇ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ನಡೆದಿದೆ.

ಪಕ್ಕದ ಫ್ಲಾಟ್‌ನಲ್ಲಿದ್ದವರಿಗೆ ಕೊರೋನಾ ದೃಢಪಟ್ಟಬಳಿಕ ಇವರಿಗೂ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೆಯವರನ್ನು ಬೇರೆಡೆ ಕಳುಹಿಸಿ, ವೈದ್ಯರ ಸಲಹೆ ಮೇರೆಗೆ ತಮ್ಮ ಫ್ಲ್ಯಾಟ್‌ನಲ್ಲೇ ಸ್ವಯಂ ಕ್ವಾರಂಟೈನ್‌ ಆಗಿದ್ದರು.

ಕಜಕಿಸ್ತಾನದಲ್ಲಿ ಕೊರೋನಾಗಿಂತ ಗಂಭೀರ ಸೋಂಕು ಪತ್ತೆ: ಚೀನಾ

ಗುರುವಾರ ರಾತ್ರಿ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡು ತಕ್ಷಣ ಅಪಾರ್ಟ್‌ಮೆಂಟ್‌ ಪಕ್ಕದಲ್ಲಿದ್ದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಬೆಡ್‌ ಇಲ್ಲವೆಂದು ಆಸ್ಪತ್ರೆಯವರು, ಆರೋಗ್ಯಕ್ಕೆ ಏನೂ ತೊಂದರೆಯಿಲ್ಲ ಎಂದು ಮನೆಗೆ ವಾಪಸ್‌ ಕಳುಹಿಸಿದ್ದಾರೆ.

ಆದರೆ, ಮತ್ತೆ ಉಸಿರಾಟದ ಸಮಸ್ಯೆ ಎದುರಾಗಿದ್ದು, ಈ ವೇಳೆ ಮನೆಯಿಂದ ಹೊರಬರಲು ಪ್ರಯತ್ನಿಸಿದಾಗ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆ. ಈ ವೇಳೆ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಬೆಂಗ್ಳೂರಲ್ಲಿ ಒಂದೇ ದಿನ 23 ಪೊಲೀಸರಿಗೆ ಕೊರೋನಾ ಸೋಂಕು..!

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಕೊರೋನಾ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಸೋಂಕಿತನಿಗೆ ಬೆಡ್‌ ನೀಡಲು ಆಸ್ಪತ್ರೆ ಸಿಬ್ಬಂದಿ ಹಿಂದೇಟು

ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವೆನ್ಯೂ ರಸ್ತೆಯ ನಿವಾಸಿಯೊಬ್ಬರು ಆ್ಯಂಬುಲೆನ್ಸ್‌ ಬಾರದ ಹಿನ್ನೆಲೆಯಲ್ಲಿ ತಮ್ಮ ವಾಹನದಲ್ಲಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಅವರನ್ನು ದಾಖಲು ಮಾಡಿಕೊಳ್ಳದೆ ಪರದಾಡಿಸಿದ ಘಟನೆ ಶುಕ್ರವಾರ ಜರುಗಿದೆ. ವಾರದ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಮಾತ್ರೆ ಸೇವಿಸಿದ್ದಾರೆ. ಜ್ವರ ವಾಸಿಯಾದ ಪರಿಣಾಮ ನಾಲ್ಕು ದಿನದ ಹಿಂದೆಯಷ್ಟೇ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದರು. ಗುರುವಾರ ತಡರಾತ್ರಿ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ ಸೋಂಕು ಇರುವ ಬಗ್ಗೆ ದೃಢಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದ ವರೆಗೂ ಕಾಯ್ದುರು ಪಾಲಿಕೆಯ ಆ್ಯಂಬುಲೆನ್ಸ್‌ ಬಂದಿಲ್ಲ. ಹೀಗಾಗಿ ಸ್ವಂತ ವಾಹನದಲ್ಲಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ಬಂದಿರುವ ಈ ಸೋಂಕಿತನಿಗೆ ಅಲ್ಲಿನ ಸಿಬ್ಬಂದಿ ಹಾಸಿಗೆ ೕಡಲು ಹಿಂದೇಟು ಹಾಕಿದ್ದಾರೆ.