ಯೋನಿ ಆರೋಗ್ಯಕ್ಕೆ ಗಮ್ಮಿ ಬಳಸೋದು ಎಷ್ಟು ಸೂಕ್ತ?
ಯೋನಿ ಆರೋಗ್ಯದ ಬಗ್ಗೆ ಪ್ರತಿ ಮಹಿಳೆ ಕಾಳಜಿವಹಿಸುವ ಅಗತ್ಯವಿದೆ. ಅಲ್ಲಿ ಕಾಣಿಸಿಕೊಳ್ಳುವ ಸೋಂಕು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯಿರುತ್ತದೆ. ಯೋನಿ ಆರೋಗ್ಯಕ್ಕೆ ಯಾವುದೇ ಮಾತ್ರೆ, ಔಷಧಿ, ಜೆಲ್ ಬಳಕೆ ವೇಳೆಯೂ ವೈದ್ಯರ ಸಲಹೆ ಪಡೆಯಬೇಕು. ಈಗಿನ ದಿನಗಳಲ್ಲಿ ಹೆಚ್ಚು ಬಳಕೆಯಾಗ್ತಿರುವ ಗಮ್ಮಿ ಬಗ್ಗೆ ಮಾಹಿತಿ ಇಲ್ಲಿದೆ.
ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸ್ಬೇಕು, ಮುಟ್ಟು, ಹಾರ್ಮೋನ್ ಬದಲಾವಣೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಅವರು ನಾನಾ ಸಮಸ್ಯೆ ಎದುರಿಸುತ್ತಾರೆ. ಚರ್ಮ, ಕೂದಲಿನ ಸಮಸ್ಯೆ ಯೋನಿ ಸಮಸ್ಯೆ ಅವರನ್ನು ಕಾಡುತ್ತದೆ. ಯೋನಿ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಮಹಿಳೆಯರು ಪಡೆದಿರಬೇಕು.
ಯೋನಿ (Vagina) ಆರೋಗ್ಯಕ್ಕೆ ಇತ್ತೀಚಿನ ದಿನಗಳಲ್ಲಿ ಗಮ್ಮಿ ಬಳಕೆ ಮಾಡಲಾಗ್ತಿದೆ. ಗಮ್ಮೀಸ್ (Gummies) (ಅಂಟು)ನ್ನು ಚರ್ಮ, ಕೂದಲು ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಯೋನಿಯ ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಜನರು ನಂಬಿದ್ದಾರೆ. ಇದೇ ಕಾರಣಕ್ಕೆ ಅನೇಕರು ಯೋನಿ ಆರೋಗ್ಯ(Health) ಕ್ಕೆ ಗಮ್ಮಿಗಳನ್ನು ಬಳಕೆ ಮಾಡ್ತಿದ್ದಾರೆ. ಯೋನಿಯಲ್ಲಿ ಕಾಡುವ ವಾಸನೆಯನ್ನು ಗಮ್ಮಿ ಕಡಿಮೆ ಮಾಡುತ್ತದೆ, ಯೋನಿಗೆ ಸುಹಾಸನೆ ನೀಡುತ್ತದೆ. ಅಲ್ಲದೆ ಯುಟಿಐ ಸೋಂಕಿನಿಂದ ಯೋನಿಯನ್ನು ರಕ್ಷಣೆ ಮಾಡುತ್ತದೆ ಎಂದು ಅನೇಕರು ಹೇಳ್ತಿದ್ದಾರೆ. ಇದ್ರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಕೈ ರಕ್ಷಣೆಗೆ ಶಿಲ್ಪಾ ಶೆಟ್ಟಿಯಿಂದ ಸುಲಭದ ವ್ಯಾಯಾಮ, ಟ್ರೈ ಮಾಡಿ ಎಂದು ಚಾಲೆಂಜ್ ಹಾಕಿದ ನಟಿ!
ಯೋನಿ ವಾಸನೆಗೆ ಗಮ್ಮಿಯಿಂದ ಮುಕ್ತಿ ಸಿಗುತ್ತಾ? : ಮಹಿಳೆಯರ ಯೋನಿಯಿಂದ ನಾನಾ ಕಾರಣಕ್ಕೆ ವಾಸನೆ ಬರುತ್ತದೆ. ಸಾಮಾನ್ಯ ವಾಸನೆಗೆ ಭಯಪಡುವ ಅಗತ್ಯವಿರೋದಿಲ್ಲ. ಅದೇ ವಾಸನೆ ಅತಿಯಾದಾಗ ಅದು ಅಪಾಯಕಾರಿ. ಗಮ್ಮಿ ಬಳಕೆ ಮಾಡೋದ್ರಿಂದ ಯೋನಿಯ ವಾಸನೆ ಕಡಿಮೆ ಆಗುವುದಲ್ಲದೆ ಪಿಎಚ್ ಮಟ್ಟ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಗಮ್ಮಿ ಬಳಕೆಯಿಂದ ಮೂತ್ರದ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ನಂಬಲಾಗಿದೆ. ಆದ್ರೆ ತಜ್ಞರು ಇದನ್ನು ಒಪ್ಪುವುದಿಲ್ಲ. ಅನಾನಸ್ ಮತ್ತು ಕ್ರ್ಯಾನ್‌ಬೆರಿ ಗಮ್ಮಿನಲ್ಲಿರುವ ಪ್ರೋಬಯಾಟಿಕ್‌ಗಳು ಮತ್ತು ವಿಟಮಿನ್ ಸಿ ಆಮ್ಲೀಯ ಅಂಶಗಳನ್ನು ಹೆಚ್ಚಿಸಬಹುದು. ಇದು ಯೋನಿ ವಾಸನೆ ಹಾಗೂ ಪಿಎಚ್ ಮಟ್ಟವನ್ನು ಬದಲಿಸಬಹುದು. ಆದ್ರೆ ಈ ಬದಲಾವಣೆ ಸೂಕ್ತವಲ್ಲ. ಯೋನಿಯಿಂದ ವಾಸನೆ ಬರುವುದು ಸಹಜ ಕ್ರಿಯೆ. ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ನೀವು ಬಲವಂತವಾಗಿ ಯೋನಿಗೆ ಬೇರೆ ವಾಸನೆ ನೀಡುವ ಪ್ರಯತ್ನ ಮಾಡಬಾರದು. ಯೋನಿ ಹೂ ಮತ್ತು ಹಣ್ಣಿನ ವಾಸನೆ ಹೊಂದಿರಬಾರದು ಎನ್ನುತ್ತಾರೆ ತಜ್ಞರು.
ಈ ಮಹಿಳೆಯರು ಸಂಗಾತಿಗೆ ಬದ್ಧರಾದ್ರೆ ಮುಗೀತು, ಎಂದಿಗೂ ಕಡಿಮೆಯಾಗೋಲ್ಲ
ಮೂತ್ರಕೋಶದ ಸೋಂಕು ನಿಯಂತ್ರಣ : ಗಮ್ಮಿಯಿಂದ ಮೂತ್ರಕೋಶದ ಸೋಂಕು ನಿವಾರಣೆಯಾಗುತ್ತದೆ ಎಂಬುದನ್ನು ಕೂಡ ಅವರು ಒಪ್ಪುವುದಿಲ್ಲ. ಯೋನಿಯಲ್ಲಿ ಉರಿಕಾಣಿಸಿಕೊಂಡಾಗ ಅದನ್ನು ಯೋನಿ ಸೋಂಕು ಎಂದು ಭಾವಿಸಲಾಗುತ್ತದೆ. ಬ್ಯಾಕ್ಟೀರಿಯಾ ಹೆಚ್ಚಾದಾಗ ಅದನ್ನು ನಿಯಂತ್ರಿಸುವಷ್ಟು ಆಮ್ಲೀಯತೆ ಯೋನಿಯಲ್ಲಿರುವುದಿಲ್ಲ. ಆದ್ರೆ ಅದಕ್ಕೆ ಗಮ್ಮಿ ಪರಿಹಾರ ನೀಡುವುದಿಲ್ಲ. ಕೆಲವರು ಗಮ್ಮಿಯನ್ನು ಸೇವನೆ ಮಾಡ್ತಾರೆ. ಈ ಗಮ್ಮಿ ನಿಮ್ಮ ಯೋನಿ ಸಮಸ್ಯೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಗಮ್ಮಿ ಸೇವನೆ ಮಾಡುವ ಮೊದಲು, ಬಳಸುವ ಮೊದಲು ವೈದ್ಯರನ್ನು ಭೇಟಿಯಾಗಿ ಎನ್ನುತ್ತಾರೆ ತಜ್ಞರು.
ಗಮ್ಮಿಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ : ಗಮ್ಮಿ ವಿಟಮಿನ್ ನಲ್ಲಿ ಜೆಲೋಟಿನ್ ಅಥವಾ ಅಗರ್ ಅಗರ್ (Agar Agar) ಇರುತ್ತದೆ. ಇದು ಜಿಗುಟಾದ ವಿನ್ಯಾಸವನ್ನು ಹೊಂದಿರುತ್ತದೆ. ಗುಮ್ಮಿಯನ್ನು ತಯಾರಿಸಲು ಪ್ರಾಣಿಗಳ ಗೊರಸುಗಳು ಮತ್ತು ಮೂಳೆಗಳನ್ನು ಸಹ ಬಳಸಲಾಗುತ್ತದೆ. ಅಗರ್-ಅಗರ್ ಅನ್ನು ಅನೇಕ ಪ್ರದೇಶಗಳಲ್ಲಿ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಸಂಶೋಧನೆಗಳು ಅದರ ಆರೋಗ್ಯಕ್ಕೆ ಅಪಾಯಕಾರಿ ಎಂದಿದ್ದಾರೆ. ಅಗರ್ ಅಗರ್ ಪಾಚಿಯಿಂದ ಪಡೆದ ಉತ್ಪನ್ನವಾಗಿದೆ. ಇದನ್ನು ಮುಖ್ಯವಾಗಿ ಗ್ರ್ಯಾಸಿಲೇರಿಯಾ, ಗೆಲಿಡಿಯಮ್ ಮತ್ತು ಯುಚೆಮಾ ಪಾಚಿಗಳಿಂದ ತಯಾರಿಸಲಾಗುತ್ತದೆ. ಕೆಲವು ಸಂಶೋಧನೆಗಳಲ್ಲಿ ಇದು ಕರುಳಿನ ಕ್ಯಾನ್ಸರ್‌ನಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗಿದ್ದರೆ ಮತ್ತೆ ಕೆಲ ಸಂಶೋಧನೆಯಲ್ಲಿ ಇದು ಕೊಲೊನ್ ಟ್ಯೂಮರ್ಗೆ ಕಾರಣವಾಗುತ್ತದೆ ಎನ್ನಲಾಗಿದೆ.