ಈ ಮಹಿಳೆಯರು ಸಂಗಾತಿಗೆ ಬದ್ಧರಾದ್ರೆ ಮುಗೀತು, ಎಂದಿಗೂ ಕಡಿಮೆಯಾಗೋಲ್ಲ
ಸಂಬಂಧಗಳು ಚೆನ್ನಾಗಿದ್ದರೆ ಜೀವನವೂ ನೆಮ್ಮದಿಯಿಂದ ಕೂಡಿರುತ್ತದೆ. ಸಂಬಂಧ ದೀರ್ಘಕಾಲ ಬಾಳಬೇಕಾದರೆ ಸಂಗಾತಿಗಳಿಬ್ಬರ ಬದ್ಧತೆ, ಪರಸ್ಪರ ನಂಬಿಕೆಗಳು ಮುಖ್ಯವಾಗುತ್ತದೆ. ಕೆಲವು ರಾಶಿಯ ಮಹಿಳೆಯರು ತಮ್ಮ ಸಂಗಾತಿಗೆ ಅತೀವ ಬೆಂಬಲ ನೀಡುವಲ್ಲಿ, ಬದ್ಧತೆಯಲ್ಲಿ ಮುಂದಿರುತ್ತಾರೆ.
ಸಂಬಂಧಗಳು ಜೀವನದಲ್ಲಿ ಅತ್ಯಮೂಲ್ಯ ಪಾತ್ರ ವಹಿಸುತ್ತವೆ. ಸಂಬಂಧಗಳು ಚೆನ್ನಾಗಿದ್ದರೆ ನೆಮ್ಮದಿ ಲಭಿಸುತ್ತದೆ. ಎಲ್ಲವೂ ಇದ್ದು, ಸಂಬಂಧಗಳು ಚೆನ್ನಾಗಿಲ್ಲ ಎಂದಾದರೆ ಜೀವನ ಅಪೂರ್ಣ. ಇಂದಿನ ಸಂಬಂಧಗಳು ಜಾಳುಜಾಳು ಎನಿಸುತ್ತವೆ. ವಿವಾಹವಾದ ಕೆಲವೇ ಸಮಯದಲ್ಲಿ ಡಿವೋರ್ಸ್ ಮೊರೆ ಹೋಗುವವರ ಸಂಖ್ಯೆ ಅಧಿಕ. ಸಂಗಾತಿಯನ್ನು ಯಾವ ರೀತಿಯಲ್ಲಿ ಆರಿಸಿಕೊಳ್ಳಬೇಕು ಎನ್ನುವುದು ಇಂದಿನ ಯುವಜನಾಂಗಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸಂಗಾತಿ ಮತ್ತೊಬ್ಬರ ಜತೆ ಬಾಹ್ಯ ಸಂಬಂಧ ಹೊಂದಿರುವುದು, ಮದುವೆಯಾದ ಕೆಲವು ವರ್ಷಗಳ ಬಳಿಕ ಬೇರೊಬ್ಬರಲ್ಲಿ ಆಸಕ್ತರಾಗುವುದು ಇಂದಿನ ದಿನಗಳಲ್ಲಿ ಹೆಚ್ಚು. ಸಂಗಾತಿಯ ಬದ್ಧತೆಯೇ ಇಲ್ಲಿ ಪ್ರಶ್ನಾದಾಯಕವಾಗುತ್ತದೆ. ಸಂಬಂಧವೊಂದು ದೀರ್ಘಕಾಲ ಇರಬೇಕು ಎಂದಾದರೆ ಬದ್ಧತೆ ಇರಬೇಕಾದುದು ಅತಿ ಅಗತ್ಯ. ಆದರೆ, ಇದು ಎಲ್ಲರಲ್ಲೂ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 5 ರಾಶಿಗಳ ಮಹಿಳೆಯರಲ್ಲಿ ಹೆಚ್ಚು ಬದ್ಧತೆ ಕಂಡುಬರುತ್ತದೆ. ಹಾಗೆಂದು ಬದ್ಧತೆ ಇರಬೇಕಾದುದು ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಪುರುಷರಿಗೂ ಅತಿ ಅಗತ್ಯ. ಈ ಐದು ರಾಶಿಗಳ ಮಹಿಳೆಯರು ಸಂಬಂಧಕ್ಕೆ ಹೆಚ್ಚು ಬದ್ಧರಾಗಿರುವುದು ಕಂಡುಬರುತ್ತದೆ.
• ವೃಷಭ (Taurus)
ವೃಷಭ ರಾಶಿಯ ಮಹಿಳೆಯರನ್ನು (Woman) ಸುಲಭವಾಗಿ ನಂಬಬಹುದು. ಇವರ ಬದ್ಧತೆಗೆ (Loyalty) ಯಾವುದೇ ಸಾಕ್ಷ್ಯ ಬೇಕಾಗಿಲ್ಲ. ಶುಕ್ರ ಗ್ರಹಾಧಿಪತಿಯಾಗಿದ್ದು, ಸಂಬಂಧವನ್ನು (Relationship) ಪ್ರತಿನಿಧಿಸುತ್ತದೆ. ವೃಷಭ ರಾಶಿಯ ಜನ ಸ್ಥಿರತೆಯುಳ್ಳವರು, ರಕ್ಷಣಾತ್ಮಕ (Secure) ಸಂಬಂಧ ಹೊಂದಿರಲು ಬಯಸುತ್ತಾರೆ. ತಮ್ಮ ವೈವಾಹಿಕ ಜೀವನ (Married Life) ಚೆನ್ನಾಗಿರಲು ಅತ್ಯಂತ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಯಾವುದೇ ರೀತಿಯ ಕ್ಲಿಷ್ಟಕರ ಸಂದರ್ಭದಲ್ಲಿ ಪತಿಯ ಜತೆಯಾಗಿ ನಿಲ್ಲುತ್ತಾರೆ.
ರಾಹು-ಕೇತುವಿನಿಂದ ಈ ಯೋಗ, ಹೆಜ್ಜೆ ಹೆಜ್ಜೆಗೂ ಕಷ್ಟ
• ಕರ್ಕಾಟಕ (Cancer)
ಭಾವನಾತ್ಮಕ (Emotional) ರಾಶಿ ಎನಿಸಿರುವ ಕರ್ಕಾಟಕ ರಾಶಿಯ ಜನ ಆಳವಾದ ಮೌಲ್ಯಗಳು (Value) ಮತ್ತು ಭಾವನಾತ್ಮಕ ಸಾಂಗತ್ಯವನ್ನು ಬಯಸುತ್ತಾರೆ. ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯ ಜನ ಭಾವನೆಗಳಿಗೆ ಆದ್ಯತೆ ನೀಡುತ್ತಾರೆ. ಯಾರಿಗಾದರೂ ಬದ್ಧರಾದರೆ (Commit) ಅದು ಪ್ರಶ್ನಾತೀತವಾಗಿರುತ್ತದೆ. ಸಂಬಂಧ ಚೆನ್ನಾಗಿರಲು ಪ್ರಯತ್ನಿಸುತ್ತಾರೆ. ಹೃದಯಪೂರ್ವಕವಾಗಿ ಸಂಗಾತಿಗೆ ಬದ್ಧತೆ ಹೊಂದಿರುತ್ತಾರೆ.
• ಕನ್ಯಾ (Virgo)
ಕನ್ಯಾ ರಾಶಿ ಬುಧ ಗ್ರಹದ ಆಳ್ವಿಕೆಗೆ ಒಳಪಟ್ಟಿದೆ. ಇದು ಪ್ರಾಯೋಗಿಕ ಹಾಗೂ ಸಂವಹನಕ್ಕೆ ಆದ್ಯತೆ ನೀಡುವ ರಾಶಿಯಾಗಿದ್ದು, ಈ ರಾಶಿಯ ಮಹಿಳೆಯರು ವಿಶ್ವಾಸ, ನಂಬಿಕೆ (Trust) ಮತ್ತು ಸಂಬಂಧಕ್ಕೆ ಬೆಲೆ ನೀಡುತ್ತಾರೆ. ತಮ್ಮ ಪ್ರೀತಿಪಾತ್ರರಿಗಾಗಿ (Loved) ಸಾಕಷ್ಟು ಶ್ರಮ ವಹಿಸುತ್ತಾರೆ. ಅವರನ್ನು ಖುಷಿಯಾಗಿರಲು ಪ್ರಯತ್ನಿಸುತ್ತಾರೆ. ಏನು ಬೇಕಿದ್ದರೂ ಮಾಡುತ್ತಾರೆ. ನಿಮ್ಮ ಎಲ್ಲ ಭಾವನೆಗಳನ್ನು ಇವರಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು. ಸಣ್ಣ ವಿಚಾರಕ್ಕೂ ಆದ್ಯತೆ ನೀಡುವ ಇವರು, ನಿಮ್ಮ ಕಷ್ಟಕಾಲದಲ್ಲಿ ಜತೆಯಾಗಿ ನಿಲ್ಲುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮಿಂದ ದೂರ ಸರಿಯುವುದಿಲ್ಲ.
ನಾಯಿ ಅಳೋದು ಅಶುಭದ ಸಂಕೇತ ಯಾಕೆ ಗೊತ್ತಾ?
• ವೃಶ್ಚಿಕ (Scorpio)
ಪ್ಲೂಟೋ (Pluto) ಗ್ರಹಾಧಿಪತಿಯಾಗಿರುವ ವೃಶ್ಚಿಕ ರಾಶಿಯ ಜನ ನಂಬಿಕೆಗೆ ಅರ್ಹರು. ಪ್ಲೂಟೋ ಪರಿವರ್ತನೆ ಮತ್ತು ತೀವ್ರತೆ (Intense) ಸೂಚಿಸುವ ಗ್ರಹವಾಗಿದ್ದು, ಈ ರಾಶಿಯ ಮಹಿಳೆಯರು ಪ್ರಯತ್ನಕ್ಕೆ ಬೆಲೆ ನೀಡುತ್ತಾರೆ. ಆರೋಗ್ಯಕರ (Healthy) ಸಂಬಂಧಕ್ಕೆ ನೆರವಾಗುವ ಚಿಕ್ಕಪುಟ್ಟ ಅಂಶವನ್ನೂ ಬಿಡುವುದಿಲ್ಲ. ಎಂದಿಗೂ ತುಂಡಾಗದ ಬದ್ಧತೆ ಇವರಲ್ಲಿ ಸಹಜವಾಗಿರುತ್ತದೆ. ಸಂಗಾತಿಗೆ ಬೆಂಬಲ (Support) ನೀಡುವುದರಲ್ಲಿ ಸದಾ ಮುಂದಿರುತ್ತಾರೆ.
• ಮಕರ (Capricorn)
ಶನಿ ಗ್ರಹಾಧಿಪತಿಯಾಗಿರುವ ಮಕರ ರಾಶಿಯ ಮಹಿಳೆಯರು ಬದ್ಧತೆ, ಸ್ಥಿರತೆ (Stability) ಮತ್ತು ಶ್ರದ್ಧೆಗೆ ಹೆಸರು. ಶನಿ ಗ್ರಹ ಜವಾಬ್ದಾರಿ ಮತ್ತು ರಚನೆಯನ್ನು (Structure) ಪ್ರತಿನಿಧಿಸುವ ಗ್ರಹವಾಗಿದೆ. ಮಕರ ರಾಶಿಯ ಮಹಿಳೆಯರು ಅವಲಂಬಿತರಾಗಿದ್ದು, ನಂಬಿಕೆಗೆ ಅರ್ಹರಾಗಿರುತ್ತಾರೆ. ಸಂಬಂಧದಲ್ಲಿ ಬದ್ಧರಾದರೆ ಅದನ್ನು ಉತ್ತಮ ಪಡಿಸಿಕೊಳ್ಳಲು ಶ್ರಮಿಸುತ್ತಾರೆ.