Asianet Suvarna News Asianet Suvarna News

ಕೈ ರಕ್ಷಣೆಗೆ ಶಿಲ್ಪಾ ಶೆಟ್ಟಿಯಿಂದ ಸುಲಭದ ವ್ಯಾಯಾಮ, ಟ್ರೈ ಮಾಡಿ ಎಂದು ಚಾಲೆಂಜ್ ಹಾಕಿದ ನಟಿ!

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕೈಯನ್ನು ಬಲಪಡಿಸುವ ಅತಿ ಸುಲಭದ ವ್ಯಾಯಾಮ ಹೇಳಿಕೊಟ್ಟಿದ್ದಾರೆ. ಆದರೆ ಇದನ್ನು ಮಾಡಿ ನೋಡಿ ಎಂದು ಚಾಲೆಂಜ್​  ಕೂಡ ಮಾಡಿದ್ದಾರೆ. 
 

Shilpa Shetty has taught very easy exercises to strengthen hands suc
Author
First Published Oct 9, 2023, 6:24 PM IST | Last Updated Oct 9, 2023, 6:24 PM IST

ಬಾಲಿವುಡ್​ನ ಕ್ಯೂಟ್​ ನಟಿಯರಲ್ಲಿ ಒಬ್ಬರು ಕನ್ನಡದ ಬೆಡಗಿ ಶಿಲ್ಪಾ ಶೆಟ್ಟಿ. ವಯಸ್ಸು 48 ಆದರೂ 20ರ ಯುವತಿಯರಂತೆ  ಮೆಂಟೇನ್​ ಮಾಡಿದ್ದಾರೆ ನಟಿ. ಯೋಗ, ಧ್ಯಾನದ ಮೂಲಕ ಶರೀರವನ್ನು ಫಿಟ್​ ಆಗಿಟ್ಟುಕೊಂಡಿದ್ದಾರೆ. ಬಾಲಿವುಡ್ ತಾರೆಯರು (Bollywood Stars) ಆಗಾಗ ತಮ್ಮ ಸೌಂದರ್ಯ (Beauty) ಹಾಗೂ ಫಿಟ್ ನೆಸ್(Fitness) ನ ಗುಟ್ಟುಗಳನ್ನು ಬಿಟ್ಟುಕೊಡುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ, ಓಡುತ್ತಿರುವ, ಬೆವರು ಹರಿಸುತ್ತಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅದರಲ್ಲೂ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) ಇದರಲ್ಲಿ ಒಂದು ಹೆಜ್ಜೆ ಮುಂದೆ.ದೈಹಿಕ ಸದೃಢತೆ (Fitness) ಹಾಗೂ ಮಾನಸಿಕ ಆರೋಗ್ಯ (Mental Health) ಕಾಯ್ದುಕೊಳ್ಳಲು ಶಿಲ್ಪಾ ಶೆಟ್ಟಿ ಅನೇಕ ವರ್ಷಗಳಿಂದಲೂ ಯೋಗದ (Yoga) ಮೊರೆ ಹೋಗಿರುವುದು ಎಲ್ಲರಿಗೂ ತಿಳಿದಿದೆ. ಇದನ್ನು ಅವರು ಎಂದಿನಿಂದಲೂ ಬಹಿರಂಗವಾಗಿ ಹೇಳುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ತಾವೇ ಸ್ವತಃ ಸಾರ್ವಜನಿಕ ವೇದಿಕೆಗಳಲ್ಲಿ ಯೋಗ ಮಾಡಿ ಪ್ರಚಾರವನ್ನೂ ಕೈಗೊಳ್ಳುತ್ತಾರೆ.  

ಕೈ ಮಣಿಕಟ್ಟಿನ ಬಲವೃದ್ಧಿಗೆ ಇದೀಗ ನಟಿ ಶಿಲ್ಪಾ ಅತ್ಯಂತ ಸರಳ ವ್ಯಾಯಾಮ ಹೇಳಿಕೊಟ್ಟಿದ್ದಾರೆ. ನೀವು ತುಂಬಾ ಕಷ್ಟದ ವ್ಯಾಯಾಮ ಹೇಳುತ್ತೀರಿ, ದಿನವೂ ಮಾಡಬಹುದಾದ ಅತ್ಯಂತ ಸುಲಭದ ವ್ಯಾಯಾಮ ಹೇಳುವಂತೆ ತಮ್ಮ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಆದ್ದರಿಂದ ಈ ಸುಲಭದ ವ್ಯಾಯಾಮ ಹೇಳಿರುವುದಾಗಿ ನುಡಿದ ನಟಿ ಶಿಲ್ಪಾ ಶೆಟ್ಟಿ, ವ್ಯಾಯಾಮ ಹೇಳಿಕೊಟ್ಟಿದ್ದಾರೆ. ಈ ಕೆಳಗಿರುವ ವಿಡಿಯೋದಲ್ಲಿ ತೋರಿಸಿರುವಂತೆ ಎರಡೂ ಕೈಗಳನ್ನು ತಿರುಗಿಸಿ ಬೆರಳುಗಳನ್ನು ಜೋಡಿಸಿ ಪುನಃ ಅದನ್ನು ಸ್ಟ್ರೆಚ್​ ಮಾಡುವ ವ್ಯಾಯಾಮ ಇದು. ಒಮ್ಮೆ ನೋಡಿದರೆ ಇಷ್ಟೆನಾ, ಇಷ್ಟು ಸುಲಭನಾ ಯಾರು ಬೇಕಾದರೂ ಮಾಡಬಹುದು ಅನ್ನಿಸದೇ ಇರಲಾರದು. ಆದರೆ ಅಸಲಿಗೆ ಇದು ಇಷ್ಟು ಸುಲಭವಲ್ಲ.

ಹಾಟ್​ ವಿಡಿಯೋ ಶೇರ್​ ಮಾಡಿ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಡ್ತಿದ್ದಾರೆ ಮಾಜಿ ಮಿಸ್ ಇಂಡಿಯಾ!

ಇದೇ ಕಾರಣಕ್ಕೆ ನಟಿ ಶಿಲ್ಪಾ ಶೆಟ್ಟಿ ಇದು ನೋಡಲು ಸುಲಭ ಎನ್ನಿಸುತ್ತದೆ ಅಲ್ಲವೆ, ಟ್ರೈ ಮಾಡಿನೋಡಿ. ಸಾಧ್ಯವಾದರೆ ಕಮೆಂಟ್​ ಹಾಕಿ ಎಂದಿದ್ದಾರೆ. ನೀವೂ ಈ ವ್ಯಾಯಾಮವನ್ನು ಮಾಡಿನೋಡಿ. ಆರಂಭದಲ್ಲಿಕಷ್ಟವಾದರೂ ಪ್ರತಿದಿನ ಇದನ್ನು ಮಾಡುತ್ತಾ ಬಂದರೆ ವಯಸ್ಸಾದಂತೆ ಕೈಗಳು ಜೋಲುವುದನ್ನು ತಪ್ಪಿಸಬಹುದು. ಭುಜದ ಭಾಗವು ಸ್ವಲ್ಪ ವಯಸ್ಸಾದಂತೆ ನೋವು ಶುರುವಾಗುತ್ತದೆ, ಇನ್ನು ಹಲವರಿಗೆ ಚರ್ಮವು ಜೋಲುವಂತೆಕಾಣಿಸುತ್ತದೆ. ಇವೆಲ್ಲವುಗಳಿಗೂ ಈ ಸರಳ ವ್ಯಾಯಾಮ ಅತ್ಯಂತ ಪರಿಣಾಮಕಾರಿಯಾಗಿದೆ. ಇದನ್ನು ಟ್ರೈ ಮಾಡಿ ನೋಡಿ ಎಂದಿದ್ದಾರೆ ನಟಿ ಶಿಲ್ಪಾ ಶೆಟ್ಟಿ. 

 ದೇಹ ಫಿಟ್​ ಇಟ್ಟುಕೊಳ್ಳಬೇಕು ಎಂದರೆ ಆಹಾರ ಕ್ರಮದ ಬಗ್ಗೆ ಕೂಡ ಹೆಚ್ಚಿನ ಕಾಳಜಿ ವಹಿಸಬೇಕಲ್ಲ. ಶಿಲ್ಪಾ ಕೂಡ ಇದಕ್ಕೆ ಹೊರತಾಗಿಲ್ಲ.  ಹೆಚ್ಚಾಗಿ ನಟಿಯರು ಸಿನಿಮಾದಲ್ಲಿ ಬೇಡಿಕೆ ಕಡಿಮೆ ಆದ ಬಳಿಕ ಫಿಟ್ನೆಸ್ ಕಡೆಗೆ ಗಮನಹರಿಸಲ್ಲ. ಆದರೆ ಶಿಲ್ಪಾ ಶೆಟ್ಟಿ ಮಾತ್ರ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುವರು. ರಾಜ್ ಕುಂದ್ರಾರನ್ನು ಮದುವೆಯಾಗಿ ವಿವಾನ್ ಎನ್ನುವ ಮಗನನ್ನು ಹೊಂದಿರುವ ಶಿಲ್ಪಾ ಅವರು ``ದ ಗ್ರೇಟ್ ಇಂಡಿಯನ್ ಡಯೆಟ್’’ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರು, ನನ್ನ ಆಹಾರ ಕ್ರಮ ತುಂಬಾ  ಸರಳವಾಗಿದೆ ಎಂದಿದ್ದ ಶಿಲ್ಪಾ ಅವರು  ಆಹಾರ ಕ್ರಮವನ್ನು ತುಂಬಾ ಶುಚಿ, ನೈಸರ್ಗಿಕವಾಗಿ ಇಟ್ಟುಕೊಂಡಿರುವರು ಮತ್ತು ಕೃತಕ ಸಕ್ಕರೆ ಹಾಗೂ ಆಹಾರದಿಂದ ದೂರವಿರುತ್ತೇನೆ ಎಂದಿದ್ದರು.  ಆಕೆ ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ,  ಮುಖ್ಯವಾದ ಎಷ್ಟೇ ಕೆಲಸವಿದ್ದರೂ ಉಪಾಹಾರ ಸೇವನೆ ಮಾಡದೆ ಹೋಗಲ್ಲ ಎಂದೆಲ್ಲಾ  ಹೇಳಿದ್ದರು. ಉಪಾಹಾರ ಮಾಡದೆ ಹೋದರೆ ಅದು ದೇಹಕ್ಕೆ ಮತ್ತು ಮೆದುಳಿಗೆ ಒಳ್ಳೆಯದಲ್ಲ ಎಂದು ಸಲಹೆ ಕೊಡುತ್ತಾರೆ ಶಿಲ್ಪಾ.  ಉಪಾಹಾರಕ್ಕೆ ಹೆಚ್ಚಿನ ಬ್ರೆಡ್ ಇತ್ಯಾದಿಗಳನ್ನು ಸೇವಿಸಲ್ಲ. ದೇಹಕ್ಕೆ ಬೇಕಾಗಿರುವಂತಹ ನಾರಿನಾಂಶವನ್ನು ಹಣ್ಣುಗಳನ್ನು ತಿನ್ನುತ್ತೇನೆ ಎಂದಿದ್ದರು.

ಹೆಂಡ್ತಿಯನ್ನ 'ಇವ್ಳೇ' ಅಂತ್ಲೂ, ಗಂಡನನ್ನ 'ರೀ' ಅಂತ್ಲೂ ಕರೆಯೋದ್ಯಾಕೆ? ಲಕ್ಷ್ಮಿ ಬಾರಮ್ಮ ಗಂಗಾ-ಕೃಷ್ಣ ಹೇಳ್ತಾರೆ ಕೇಳಿ

Latest Videos
Follow Us:
Download App:
  • android
  • ios