Asianet Suvarna News Asianet Suvarna News

ತೆಳ್ಳಗೆ, ಬೆಳ್ಳಗೆ ಇರೋ ಬ್ಯೂಟಿ ಮದ್ವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕು ಅಂತಿದ್ದಾಳೆ!

ಹುಡುಗಿಯರು ತಮ್ಮ ಮದುವೆಯ ಬಗ್ಗೆ ತುಂಬಾ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. ತಾವು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕೆಂದು ಕನಸು ಕಾಣುತ್ತಾರೆ. ಹುಡುಗ ಎತ್ತವರಾಗಿ, ನಾರ್ಮಲ್‌ ವೈಟ್ ಇದ್ದು ಸುಂದರವಾಗಿ ಇರಬೇಕು ಅನ್ನೋ ಹುಡುಗಿಯರೇ ಹೆಚ್ಚು. ಆದ್ರೆ ಇಲ್ಲೊಬ್ಬಾಕೆ ಮಾತ್ರ ನಂಗೆ ಮದುವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕು ಅಂತಿದ್ದಾಳೆ. 

Kazakhstans Beautiful Young Girl wants to marry a Fat Man Vin
Author
First Published Jun 11, 2023, 4:04 PM IST | Last Updated Jun 11, 2023, 4:06 PM IST

ಹಿಂದೆಲ್ಲಾ ಮನೆಯವರು ನೋಡಿದವರ ಜೊತೆ ಹುಡುಗ-ಹುಡುಗಿಗೆ ಮದುವೆ ನಡೆದು ಹೋಗುತ್ತಿತ್ತು. ಆದ್ರೆ ಈಗ ಎಲ್ಲಾ ಯುವಕ, ಯುವತಿಯರು ತಮ್ಮ ಸಂಗಾತಿ ಹೀಗೆಯೇ ಇರಬೇಕೆಂಬ ಕನಸನ್ನು ಹೊಂದಿರುತ್ತಾರೆ. ತೆಳ್ಳಗೆ, ಬೆಳ್ಳಗೆ, ಸುಂದರ ಮತ್ತು ಫಿಟ್ ಆಗಿರಬೇಕ ಬಯಕೆ ಹೆಚ್ಚಿನವರಿಗಿರುತ್ತದೆ. ಹುಡುಗಿಯರಾದರೆ ಹುಡುಗನಿಗೆ ಸಿಕ್ಸ್ ಪ್ಯಾಕ್ ಇರಬೇಕು, ಹೈಟ್ ಇರಬೇಕು ಎಂಬ ಡಿಮ್ಯಾಂಡ್ ಮುಂದಿಟ್ಟರೆ, ಕೆಲ ಹುಡುಗರು, ಹುಡುಗಿ ಸ್ಲಿಮ್ ಇರಬೇಕು, ಹೇರ್ಸ್‌ ಚೆನ್ನಾಗಿರಬೇಕು ಎಂದು ಬೇಡಿಕೆಯಿಡುತ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಮಾತ್ರ ಇದೆಲ್ಲಕ್ಕಿಂತ ವಿಭಿನ್ನವಾಗಿ ನಂಗೆ ಮದುವೆಯಾಗೋಕೆ ದಪ್ಪ ಹೊಟ್ಟೆಯ ಹುಡುಗನೇ ಬೇಕು ಅಂತಿದ್ದಾಳೆ. 

ಹೌದು, ಕೇಳೋಕೆ ವಿಚಿತ್ರ ಅನಿಸಿದರೂ ಇದು ನಿಜ. ಬಳಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ. ಕಜಕಿಸ್ತಾನ್‌ ಮೂಲದವಳಾದ ಹಸೀನಾ ಮದೀನಾ ಮಮದಲೀವಾ ಸಂಗಾತಿಯ (Partner) ಹುಡುಕಾಟದಲ್ಲಿದ್ದಾಳೆ. ಈಕೆ ತಾನು ಮದುವೆಯಾಗೋಕೆ ದೊಡ್ಡ ಹೊಟ್ಟೆಯ ಹುಡುಗನನ್ನೇ (Big stomach) ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ.

ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

ಕಜಕಿಸ್ತಾನದ ಈ ಸುಂದರಿಗೆ ದಪ್ಪ ಹೊಟ್ಟೆಯ ಗಂಡನೇ ಬೇಕಂತೆ 
ಕಜಕಿಸ್ತಾನದ ಈ ಸುಂದರಿಗೆ ಸಾಮಾಜಿಕ ಜಾಲತಾಣದಲ್ಲಿ (Social media) ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆ ಒಪ್ಪಿದರೆ ಆಕೆಯನ್ನು ಮದುವೆಯಾಗಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಈ ಚೆಲುವೆ ನಿಜವಾದ ಪ್ರೇಮ ಸಂಗಾತಿಯನ್ನು ಹುಡುಕುತ್ತಿದ್ದಾಳೆ. ಆದರೆ ಅವಳು ಫಿಟ್ ಮತ್ತು ಒರಟಾದ ನೋಟವನ್ನು ಹೊಂದಿರುವ ಮನುಷ್ಯನನ್ನು ಬಯಸುವುದಿಲ್ಲ, ಬದಲಿಗೆ ದಪ್ಪ ಹೊಟ್ಟೆಯ ಗಂಡನನ್ನು ಹುಡುಕುತ್ತಿದ್ದಾಳೆ. ಇದನ್ನು ತಿಳಿದರೆ ನೀವು ಶಾಕ್ ಆಗಬಹುದು ಆದರೆ ಇದು ಸತ್ಯ. ಆದರೆ ಮದುವೆಗೆ (Marriage) ಸಂಬಂಧಿಸಿದಂತೆ ಅವರ ಷರತ್ತನ್ನು ಪೂರೈಸುವುದು ಅಷ್ಟು ಸುಲಭವಲ್ಲ.

ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ವಿಭಿನ್ನ ದೇಹ ಆಕಾರವಿದೆ. ಕೆಲವರು ಸ್ಥೂಲಕಾಯರು ಮತ್ತು ಕೆಲವರು ತೆಳ್ಳಗಿರುತ್ತಾರೆ. ಕೆಲವರು ಕುಳ್ಳಗಿದ್ದರೆ, ಕೆಲವರು ಎತ್ತರವಾಗಿರುತ್ತಾರೆ. ಇತ್ತೀಚೆಗಂತೂ ವರ ಕಪ್ಪಗಿದ್ದಾನೆ, ಕುಳ್ಳಗಿದ್ದಾನೆ ಎಂಬ ಕಾರಣಕ್ಕೆ ಮದುವೆ ನಿಲ್ಲಿಸಿದ ಪ್ರಕರಣಗಳನ್ನು ಕೇಳಿದ್ದೇವೆ. ಹೀಗಿರುವಾಗ ಹುಡುಗಿಯ ವಿಚಿತ್ರ ಡಿಮ್ಯಾಂಡ್ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!

ಐಷಾರಾಮಿ ಜೀವನವನ್ನು ಇಷ್ಟಪಡುವ ಮದೀನಾ
ಡೈಲಿ ಸ್ಟಾರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಜಕಿಸ್ತಾನದ ಮದೀನಾ ಮಮ್ದಾಲೀವಾ ಅವರು ಸುಮಾರು ರೂ. 40 ರಿಂದ 50 ಲಕ್ಷದವರೆಗೆ ಗಳಿಸುತ್ತಿದ್ದಾರೆ. ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಹೀಗಾಗಿಯೇ ಇವರು ಹುಡುಗ ನೋಡಲು ಹೇಗಿದ್ದಾನೆ ಎಂಬ ಬಗ್ಗೆ ಹೆಚ್ಚಿ ತಲೆಕೆಡಿಸಿಕೊಳ್ಳುವುದಿಲ್ಲವೆಂತೆ. ಬದಲಿಗೆ ಅವಳ ಐಷಾರಾಮಿ ಜೀವನವನ್ನು ಉದಾರವಾಗಿ ಬೆಂಬಲಿಸುವ ಗಂಡ ಅವಳಿಗೆ ಬೇಕಂತೆ. ಪತಿ ದಪ್ಪಗಿದ್ದರೂ ಪರವಾಗಿಲ್ಲ, ಸಂಪಾದನೆ ಅಕ್ರಮವಾಗಬಾರದು ಎಂದೂ ಮದೀನಾ ಸ್ಪಷ್ಟಪಡಿಸಿದ್ದಾರೆ. ಅವರು ಜೀವನದ ಈ ಹಂತದಲ್ಲಿ ಲಕ್ಸುರಿಯಸ್ ಜೀವನ ನಡೆಸಲು ಬಯಸುತ್ತಾರೆ. ಹಾಗಾಗಿ ನೋಟಕ್ಕೆ ಪ್ರಾಮುಖ್ಯತೆ ನೀಡದೆ ಹಣದಲ್ಲಿ ಶ್ರೀಮಂತನಾದ ಗಂಡನನ್ನು ಹುಡುಕುತ್ತಿದ್ದಾರೆ. 

ಪತಿ ಶ್ರೀಮಂತ ಮತ್ತು ಸ್ವೇಚ್ಛಾಚಾರದ ಮನಸ್ಥಿತಿಯವನಾಗಿರಬೇಕು. ಆದರೆ ಅವನು Instagram ಖಾತೆಯನ್ನು ಹೊಂದಿರಬಾರದು ಎಂದು ಮದೀನಾ ಷರತ್ತು ವಿಧಿಸುತ್ತಾರೆ. ಅಂದರೆ ಗಂಡನ ಮಾಹಿತಿ ಯಾರಿಗೂ ತಿಳಿಯಬಾರದು. ಅವಳು ಬಯಸಿದಷ್ಟು ಕಾಲ, ತನ್ನ ಗಂಡನ ಬಗ್ಗೆ ಮಾಹಿತಿ ಗೌಪ್ಯವಾಗಿರಬೇಕು. ಇದು ಅವನ ಹೊರತು ಜಗತ್ತಿನಲ್ಲಿ ಯಾರಿಗೂ ತಿಳಿಯಬಾರದು. ನಂತರ ಅವಳು ಅದನ್ನು ಅರಿತುಕೊಂಡಾಗ, ಅವಳು ತನ್ನ ಈ ಸಂಗಾತಿಯ ಬಗ್ಗೆ ಎಲ್ಲರಿಗೂ ಹೇಳುತ್ತಾಳೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅಚ್ಚರಿಯ ಸಂಗತಿಯೆಂದರೆ ಮದೀನಾ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿದ್ದಾರೆ ಮತ್ತು ಈ ಸೈಟ್‌ನಲ್ಲಿ ಮಾತ್ರ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ, ಆದರೆ ಅವರ ಪತಿ ಈ ಸೈಟ್‌ನಿಂದ ದೂರವಿರಬೇಕು ಎಂದು ಸೂಚಿಸಲಾಗಿದೆ..

Latest Videos
Follow Us:
Download App:
  • android
  • ios