ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾಕೆ ಎಲ್ಲಾ ಬಿಟ್ಟು ಬೆಡ್‌ನ್ನೇ ಮದ್ವೆಯಾಗಲು ಪ್ಲಾನ್ ಮಾಡ್ತಿದ್ದಾಳೆ. ಅರೆ ಇದೆಂಥಾ ವಿಚಿತ್ರ ಅನ್ಬೇಡಿ. ಫುಲ್ ಸ್ಟೋರಿ ಓದಿ. 

Woman getting married to her Bed, dress code is pyjamas and slippers Vin

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. 

ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ), ಡಾಲ್‌ನ್ನು ಮದುವೆಯಾದವರೂ ಇದ್ದಾರೆ. ಆದರೆ ಇಲ್ಲೊಬ್ಬಾಕೆ ಇದೆಲ್ಲಕ್ಕಿಂತ ವಿಚಿತ್ರವಾಗಿ ತನ್ನ ಹೊದಿಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಮದುವೆಗೆ ಹಾಸಿಗೆಗೆ ಸಂಬಂಧಿಸಿದ ಡ್ರೆಸ್‌ಕೋಡ್‌ನ್ನು ಸಹ ಇಡಲಾಗಿದೆ. ಜನರು ಪೈಜಾಮ, ಸ್ಲಿಪ್ಪರ್, ನೈಟ್‌ ಗೌನ್ ಹಾಕಿಕೊಂಡು ಬರುವಂತೆ ಸೂಚಿಸಲಾಗಿದೆ. 

ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!

ನಂಬಿಕೆಯ ಸಂಗಾತಿಯೆಂದು ಹಾಸಿಗೆಯನ್ನೇ ವರಿಸಿದ ಮಹಿಳೆ
ಚಳಿ, ಮಳೆಯ ಸಂದರ್ಭದಲ್ಲಿ ಬೆಚ್ಚಗಿರಲು ಪ್ರತಿಯೊಬ್ಬರಿಗೂ ಹಾಸಿಗೆ (Bed)ಯಂತೂ ಬೇಕೇ ಬೇಕು. ದುಃಖದಲ್ಲಿದ್ದಾಗ, ಖಿನ್ನತೆಯ ಸಮಸ್ಯೆ ಕಾಡಿದಾಗ ಮುದುರಿ ಮಲಗಲು ಬೆಚ್ಚಗಿರುವ ಬೆಡ್‌ ನೆರವಾಗುತ್ತದೆ. ಒತ್ತಡದ (Pressure) ದಿನದ ಕೊನೆಯಲ್ಲಿ ಬೆಚ್ಚಗಿನ ನಿದ್ದೆ ನೀಡುತ್ತದೆ. ಹೀಗಾಗಿ ಹಾಸಿಗೆ ಹಲವರಿಗೆ ಆಪ್ತವಾಗಿದೆ. ಮಲಗುವ ಬೆಡ್‌ ಬದಲಾದರೂ ಕೆಲವರಿಗೆ ಸರಿಯಾಗಿ ನಿದ್ದೆ (Sleep) ಬರುವುದಿಲ್ಲ, ಇಷ್ಟವಾಗುವುದಿಲ್ಲ. ತಮ್ಮ ಬೆಡ್‌ ಮತ್ತೊಬ್ಬರಿಗೆ ಕೊಡಲು ಇಷ್ಟ ಸಹ ಆಗುವುದಿಲ್ಲ. ಹೀಗೆ ಬೆಡ್ ಜೊತೆ ಆಪ್ತತೆ ಹೊಂದಿರುವ ಮಹಿಳೆ (Woman)ಯೊಬ್ಬರು ಅದನ್ನೇ ಮದುವೆಯಾಗಿದ್ದಾರೆ.

49 ವರ್ಷದ ಪಾಸ್ಕಲ್ ಸೆಲ್ಲಿಕ್ ತನ್ನ ಹಾಸಿಗೆಯನ್ನು ಮದುವೆಯಾಗಲು ಅದ್ಧೂರಿ ಸಮಾರಂಭವನ್ನು ಆಯೋಜಿಸಿದ್ದರು. ಮದುವೆಯನ್ನು ಆಚರಿಸಲು ಅವಳು ಮದುವೆಯ ಯೋಜಕನನ್ನು ಸಹ ನೇಮಿಸಿಕೊಂಡಿದ್ದರು. ಬಂಧುಬಳಗ, ಸ್ನೇಹಿತರಿಗೂ ಆಹ್ವಾನ ನೀಡಿದ್ದಳು. ತನ್ನ ನಿರ್ಧಾರದ ಬಗ್ಗೆ ಮಾತನಾಡಿರುವ ಪಾಸ್ಕಲ್​, ನನಗೆ ಬೇರೆ ಯಾರ ಮೇಲೂ ನಂಬಿಕೆ (Trust) ಇಲ್ಲ. ಅನೇಕ ವರ್ಷಗಳಿಂದ ನನ್ನ ನಿಕಟವಾಗಿ ಇದ್ದುದು ಹಾಗೂ ಅತ್ಯಂತ ವಿಶ್ವಾಸಾರ್ಹ ಸಂಬಂಧವಾಗಿರುವುದು ಈ ಹಾಸಿಗೆ ಮಾತ್ರ. ಹೀಗಾಗಿ ನಾನು ಅದನ್ನೇ ಮದುವೆಯಾಗಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !

'ನಾನು ನನ್ನ ಹಾಸಿಗೆಯನ್ನು ತುಂಬಾ ಪ್ರೀತಿಸುತ್ತೇನೆ. ಹೀಗಾಗಿ ನನ್ನ ಜೀವನದಲ್ಲಿ ಅತ್ಯಂತ ನಿರಂತರವಾಗಿ ನನ್ನ ಜೊತೆಗಿರುವ ಹಾಸಿಗೆಯನ್ನು ಮದುವೆಯಾಗಲು ಬಯಸಿದೆ. ಈ ಡಿಫರೆಂಟ್ ಮದುವೆಗೆ ಎಲ್ಲರೂ ಸಾಕ್ಷಿಯಾಗಬೇಕು ಎಂಬುದು ಸಹ ನನ್ನ ಆಸೆಯಾಗಿತ್ತು' ಎಂದು ಹೇಳಿದರು. ಮದುವೆಗೆ ಜನರೂ ಬಂದಿದ್ದರು. ಸಾಮಾನ್ಯ ಮದುವೆಯಂತೆ ಸಂಗೀತ ಮತ್ತು ಸಮಾರಂಭ, ನಗು ಮತ್ತು ಮನರಂಜನೆ ಇತ್ತು. 2019ರಲ್ಲಿ ನಡೆದ ಈ ಮದುವೆಯ ಬಗ್ಗೆ ಈಗ ಮತ್ತೆ ಸುದ್ದಿ ವೈರಲ್​ ಆಗುತ್ತಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

Latest Videos
Follow Us:
Download App:
  • android
  • ios