Asianet Suvarna News Asianet Suvarna News

ದೊಡ್ಡ ಗಾತ್ರದ ಸ್ತನಗಳಿಂದ ಸುಸ್ತಾಗಿದ್ರೆ, ಇಲ್ಲಿದೆ ಬೆಸ್ಟ್ ಪರಿಹಾರ!

ಈಗೆಲ್ಲ ಹಲವು ಜನ ಸ್ತನಗಳ ಗಾತ್ರ ಹೆಚ್ಚಿಸಲು ಅಥವಾ ಕಡಿಮೆಗೊಳಿಸಲು ಸರ್ಜರಿ ಮೊರೆ ಹೋಗುತ್ತಾರೆ. ಆದರೆ, ಸ್ತನಗಳ ಗಾತ್ರ ಕಡಿಮೆ ಮಾಡಿಕೊಳ್ಳಲು ಸಹಜ ವಿಧಾನಗಳೇ ಹೆಚ್ಚು ಬೆಸ್ಟ್.‌
 

How to reduce breast size from natural ways sum
Author
First Published Dec 15, 2023, 6:03 PM IST

“ಸ್ತನಗಳು ಚಿಕ್ಕದಾಗಿದ್ದಿದ್ದರೆ ಎಲ್ಲರಂತೆ ಹೊಸ ಹೊಸ ನಮೂನೆಯ ಡ್ರೆಸ್‌ ಧರಿಸಬಹುದಿತ್ತು, ದೇಹದ ಗಾತ್ರಕ್ಕೆ ಹೋಲಿಸಿದರೆ ಸ್ತನಗಳ ಗಾತ್ರ ದೊಡ್ಡದಾಗಿದ್ದರೆ ಅದೇನೋ ಹಿಂಜರಿಕೆ, ಮುಜುಗರʼ ಎನ್ನುವುದು ಬಹಳಷ್ಟು ಮಹಿಳೆಯರ ಅನಿಸಿಕೆ. ದೊಡ್ಡ ಸ್ತನಗಳನ್ನು ಬಯಸುವ ಮಹಿಳೆಯರಿರುವಂತೆಯೇ, ದೇಹದ ವಿನ್ಯಾಸಕ್ಕಿಂತ ದೊಡ್ಡ ಗಾತ್ರದ ಸ್ತನಗಳಿದ್ದರೆ ಮುಜುಗರ ಪಟ್ಟುಕೊಳ್ಳುವವರೂ ಇದ್ದಾರೆ. ಅವರಿಗೆ ಹೊಸ ಮಾದರಿಯ ಡ್ರೆಸ್‌ ಗಳಲ್ಲಿ ಕಡಿಮೆ ಆಯ್ಕೆಗಳು ಸಿಗುತ್ತವೆ. ಹೀಗಾಗಿ, ಸ್ತನಗಳ ಗಾತ್ರ ಕಡಿಮೆ ಮಾಡಿಕೊಳ್ಳುವಂತಿದ್ದರೆ ಚೆನ್ನಾಗಿತ್ತು ಎಂದು ಸಾಕಷ್ಟು ಮಹಿಳೆಯರು ಅಂದುಕೊಳ್ಳುತ್ತಾರೆ. ನೈಸರ್ಗಿಕ ವಿಧಾನದಲ್ಲೇ ಟ್ರೈ ಮಾಡಿದರೆ ಅದೂ ಸಾಧ್ಯವಿದೆ. ತೀರ ಗಮನಾರ್ಹ ಪ್ರಮಾಣದ ಇಳಿಕೆ ಸಾಧ್ಯವಾಗಲಿಕ್ಕಿಲ್ಲ, ಆದರೆ, ಮುಜುಗರ ಕಡಿಮೆಯಾಗುವಷ್ಟು ಕಡಿಮೆ ಮಾಡಿಕೊಳ್ಳಲು ಖಂಡಿತ ಸಾಧ್ಯ ಎನ್ನುತ್ತಾರೆ ತಜ್ಞರು. ಸ್ತನಗಳ ಗಾತ್ರದಲ್ಲಿ ವಂಶವಾಹಿಗಳ ಪಾತ್ರ ಹೆಚ್ಚು. ಆದರೆ, ಜೀವನಶೈಲಿಯ ಬದಲಾವಣೆ ಸೇರಿದಂತೆ ಹಲವು ವಿಧಾನಗಳಿಂದ ಸ್ತನಗಳ ಗಾತ್ರವನ್ನು ಕಡಿಮೆ ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. 

•    ನಿರ್ದಿಷ್ಟ ವ್ಯಾಯಾಮ (Exercise) 
ನಿಯಮಿತವಾದ ವ್ಯಾಯಾಮದಿಂದ ದೇಹದ ಕೊಬ್ಬು (Fat) ಕಡಿಮೆಯಾಗುತ್ತದೆ. ಆಗ ಸ್ತನಗಳ ಕೋಶಗಳಲ್ಲಿ ಸೇರ್ಪಡೆಯಾಗಿರುವ ಕೊಬ್ಬೂ ಇಳಿಯುತ್ತದೆ. ಕೆಲವು ಕಾರ್ಡಿಯೋವಾಸ್ಕ್ಯುಲಾರ್‌ ವ್ಯಾಯಾಮಗಳು ಅಂದರೆ, ಓಡುವುದು (Running), ಈಜುವುದು, ಸೈಕ್ಲಿಂಗ್‌ ಕ್ರಿಯೆಗಳು ಕೊಬ್ಬು ಕಡಿಮೆ ಮಾಡಲು ಸಹಾಯಕ. ಜತೆಗೇ, ಎದೆಯ (Chest) ಭಾಗಕ್ಕೆ ಸ್ವಲ್ಪ ಒತ್ತಡ ಹಾಕುವಂತಹ ಪುಶ್‌ ಅಪ್‌, ಡಂಬೆಲ್‌ ಫ್ಲೈಗಳಿಂದ ಸ್ತನಗಳ (Breasts) ಕೆಳಭಾಗದಲ್ಲಿರುವ ಮಾಂಸಖಂಡಗಳಿಗೆ ಬಲ ತುಂಬಬಹುದು. ಆಗ, ಸ್ತನಗಳು ಜೋತುಬೀಳುವುದಿಲ್ಲ. 

ರಾತ್ರಿ ಮಲಗಿದವಳು ಬೆಳಿಗ್ಗೆ ಇರ್ಲಿಲ್ಲ, ಪ್ರಶ್ನೆಯಾಗೇ ಉಳಿದ ಗರ್ಭಿಣಿ ನಾಪತ್ತೆ ಕೇಸ್!

•    ಆರೋಗ್ಯಕರ ಆಹಾರ (Healthy Diet)
ಆರೋಗ್ಯಕರ ಆಹಾರ ಸೇವನೆ ಎಲ್ಲ ರೀತಿಯಿಂದಲೂ ಅನುಕೂಲಕರ. ಹೆಚ್ಚು ಕೊಬ್ಬುಭರಿತ ಆಹಾರ ಸೇವನೆಯಿಂದ ಸ್ತನಗಳ ಕೋಶಗಳಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ಆರೋಗ್ಯಕರ ಕೊಬ್ಬಿನ ಸೇವನೆ, ಸಂಸ್ಕರಿತ ಆಹಾರದಿಂದ ದೂರವಿರುವುದು ಮುಖ್ಯ.

•    ಹರ್ಬಲ್‌ (Herbal) ಪದಾರ್ಥಗಳು
ಕೆಲವು ಔಷಧೀಯ ನೈಸರ್ಗಿಕ ಪದಾರ್ಥಗಳು ಈಸ್ಟ್ರೋಜೆನ್‌ ಅಂಶವನ್ನು ತಗ್ಗಿಸಲು ನೆರವಾಗುತ್ತವೆ. ಇದರಿಂದ ಸ್ತನಗಳ ಗಾತ್ರ ಕಡಿಮೆ ಮಾಡಲು ಅನುಕೂಲ. ಗ್ರೀನ್‌ ಟೀ, ಅಗಸೆ ಬೀಜ, ಶುಂಠಿ, ಕಾಡು ಸೇವಂತಿಗೆ ಬೇರುಗಳು ಸೇರಿದಂತೆ ಹಲವು ವಸ್ತುಗಳನ್ನು ನಿಯಮಿತವಾಗಿ ಬಳಕೆ ಮಾಡಬಹುದು. 

•    ಮಸಾಜ್‌ (Massage)
ಸ್ತನಗಳ ಮಸಾಜ್‌ ಮಾಡುವ ಮೂಲಕ ಲಿಂಫಟಿಕ್‌ ಡ್ರೈನೇಜ್‌ ತಂತ್ರವನ್ನು ಅನುಸರಿಸುವುದರಿಂದ ಸ್ತನಗಳ ಗಾತ್ರ (Size) ಕಡಿಮೆಯಾಗುತ್ತದೆ. ವೃತ್ತಾಕಾರವಾಗಿ ಸ್ತನಗಳನ್ನು ಮಸಾಜ್‌ ಮಾಡುವುದರಿಂದ ಕೋಶಗಳಲ್ಲಿ ಸೇರಿಕೊಂಡಿರುವ ಹೆಚ್ಚುವರಿ ದ್ರವ, ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಧ್ಯ.

•    ಸರಿಯಾದ ಭಂಗಿ (Posture)
ಸ್ತನಗಳು ದೊಡ್ಡದಾಗಿದ್ದರೂ (Big) ಮುಜುಗರವಾಗದಂತೆ ನೋಡಿಕೊಳ್ಳಲು ಸರಿಯಾದ ಭಂಗಿ ಅನುಸರಿಸುವುದು ಮುಖ್ಯ. ಭುಜಗಳನ್ನು ಕುಗ್ಗಿಸಿ ನಡೆಯುವುದರಿಂದ ಸ್ತನಗಳು ಜೋತುಬೀಳುತ್ತವೆ. ಭುಜಗಳನ್ನು ನೇರವಾಗಿಸಿ, ಎದೆಯನ್ನು ಸೆಟೆಸಿ, ಬೆನ್ನನ್ನು ನೇರವಾಗಿಟ್ಟುಕೊಳ್ಳುವುದರಿಂದ ಗಾತ್ರ ಕಡಿಮೆ ಇರುವಂತೆ ಗೋಚರಿಸುತ್ತದೆ.

•    ಬಟ್ಟೆಗಳ ಆಯ್ಕೆ 
ಕಂಪ್ರೆಷನ್‌ ಬಟ್ಟೆ (Cloth), ಉತ್ತಮ ಬ್ರಾಗಳನ್ನು ಧರಿಸುವುದು ಮುಖ್ಯ. ಇವು ಸ್ತನಗಳಿಗೆ ಸಪೋರ್ಟ್‌ ನೀಡುತ್ತವೆ ಹಾಗೂ ಅವುಗಳ ಗಾತ್ರವನ್ನು ಕಡಿಮೆಗೊಳಿಸುತ್ತವೆ. ವ್ಯಾಯಾಮ ಮಾಡುವ ಸಮಯದಲ್ಲೂ ಇಂಥವುಗಳನ್ನು ಧರಿಸುವುದು ಅಗತ್ಯ. ವಿ ನೆಕ್‌ ಇರುವಂತಹ ಡ್ರೆಸ್‌ ಗಳಿಂದ ಎದೆಯ ಭಾಗ ಹೆಚ್ಚು ಫೋಕಸ್‌ ಆಗುತ್ತದೆ. ಅಂಥವುಗಳನ್ನು ಧರಿಸದಿರುವುದು ಉತ್ತಮ. 

ಮದುವೆಯಾದ್ರೂ ಮೂವರು ಬಾಯ್ ಫ್ರೆಂಡ್! ಸುಖಿ ಸಂಸಾರದ ಗುಟ್ಟು ಬಿಚ್ಚಿಟ್ಟ ಮಹಿಳೆ

•    ಐಸ್‌ ಪ್ಯಾಕ್‌ (Ice Pack)
ಐಸ್‌ ಪ್ಯಾಕ್‌ ಗಳನ್ನು ಇರಿಸುವುದರಿಂದ ಊದಿಕೊಳ್ಳುವ ಪ್ರಕ್ರಿಯೆ ಕಡಿಮೆಯಾಗುತ್ತದೆ. ಚರ್ಮದ ನೇರ ಸಂಪರ್ಕಕ್ಕೆ ಬಾರದಂತೆ ಐಸ್‌ ಪ್ಯಾಕ್‌ ಮಾಡಿಕೊಳ್ಳಬಹುದು. ಇದು ಕಿರು ಅವಧಿಯ ಪರಿಹಾರವಷ್ಟೇ ಆಗಿದೆ.

•    ಯೋಗ (Yoga)
ಯೋಗವನ್ನು ಅಭ್ಯಾಸ ಮಾಡುವುದರಿಂದ ಎದೆಯ ಭಾಗದ ಮಾಂಸಖಂಡಗಳು (Muscles) ಬಿಗಿಯಾಗುತ್ತವೆ. ದೊಡ್ಡ ಸ್ತನಗಳನ್ನು ಇಳಿಸಿಕೊಳ್ಳಲು ಇವು ಪರಿಹಾರ. ಭುಜಂಗಾಸನ ಸೇರಿದಂತೆ ದೇಹದ ಮೇಲ್ಭಾಗಕ್ಕೆ ಹೆಚ್ಚಿನ ಸಾಮರ್ಥ್ಯ ನೀಡುವ ಆಸನಗಳನ್ನು ಮಾಡಬೇಕು.

•    ಒತ್ತಡ ನಿವಾರಣೆ, ಆತ್ಮವಿಶ್ವಾಸ
ನಿರಂತರವಾದ ಒತ್ತಡದಿಂದ (Stress) ದೇಹದಲ್ಲಿ ಹಾರ್ಮೋನ್‌ ವ್ಯತ್ಯಾಸವಾಗಿ ಸ್ತನಗಳು ದೊಡ್ಡದಾಗುತ್ತವೆ. ಹೀಗಾಗಿ, ಒತ್ತಡ ನಿವಾರಿಸುವ ಧ್ಯಾನ, ಉಸಿರಾಟದ ವ್ಯಾಯಾಮ ಮಾಡಬೇಕು. ಜತೆಗೆ, ದೇಹ ಹೇಗೆಯೇ ಇದ್ದರೂ ಅದರ ಬಗ್ಗೆ ಮುಜುಗರ ಪಟ್ಟುಕೊಳ್ಳದೇ ಆತ್ಮವಿಶ್ವಾಸದಿಂದ ಇರಬೇಕು. ದೇಹಕ್ಕೆ ಅನುಕೂಲವಾಗುವಂತಹ ಡ್ರೆಸ್‌ ಧರಿಸಿ ವಿಶ್ವಾಸ ಮೂಡಿಸಿಕೊಳ್ಳಬೇಕು. ಫ್ಯಾಷನೇಬಲ್‌ ಡ್ರೆಸ್‌ ಧರಿಸದೇ ಇದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಒಂದೊಮ್ಮೆ ನಿಮಗೆ ಕಂಫರ್ಟ್‌ ಎನಿಸಿದರೆ ಯಾವುದೇ ಡ್ರೆಸ್‌ ಧರಿಸುವುದರಲ್ಲಿ ತಪ್ಪಿಲ್ಲ. 


 

Follow Us:
Download App:
  • android
  • ios