ರಾತ್ರಿ ಮಲಗಿದವಳು ಬೆಳಿಗ್ಗೆ ಇರ್ಲಿಲ್ಲ, ಪ್ರಶ್ನೆಯಾಗೇ ಉಳಿದ ಗರ್ಭಿಣಿ ನಾಪತ್ತೆ ಕೇಸ್!
ನಮ್ಮವರನ್ನು ಕಳೆದುಕೊಂಡಾಗ ಹೆಚ್ಚು ನೋವಾಗೋದು ಸಹಜ. ಕುಟುಂಬಸ್ಥ ನಾಪತ್ತೆಯಾಗಿದ್ದು, ಮತ್ತೆ ಸಿಕ್ಕರೆ ಖುಷಿ. ಆತನ ಶವ ಸಿಕ್ಕರೆ ಸತ್ತಿದ್ದಾನೆ ಎನ್ನುವ ನೋವಿದ್ರೂ ಶವ ಸಿಕ್ಕ ನೆಮ್ಮದಿ. ಅದೇ ನಾಪತ್ತೆಯಾಗಿ ಶವವೂ ಸಿಗದೆ ಹೋದ್ರೆ….?
ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮ ಬದುಕನ್ನು ಬದಲಿಸಿರುತ್ತವೆ. ಮತ್ತೆ ಕೆಲವು ಘಟನೆಗಳು ಯಾಕೆ ಆದ್ವು ಎನ್ನುವ ಪ್ರಶ್ನೆಗೆ ಉತ್ತರವಿರೋದಿಲ್ಲ. ಕುಟುಂಬಸ್ಥರು ಅಥವಾ ನೆರೆಯವರು ಇದ್ದಕ್ಕಿದ್ದಂತೆ ಕಾಣೆ ಆಗಿರ್ತಾರೆ. ಅವರು ಎಲ್ಲಿಗೆ ಹೋದ್ರು ಎನ್ನುವ ಪ್ರಶ್ನೆ, ಪ್ರಶ್ನೆಯಾಗೇ ಇರುತ್ತೆ ವಿನಃ ಅವರು ಮತ್ತೆ ಸಿಗೋದೇ ಇಲ್ಲ. ಅವರ ಬಗ್ಗೆ ಸ್ವಲ್ಪವೂ ಮಾಹಿತಿ ನಮಗೆ ಇರೋದಿಲ್ಲ. ಈ ಮಹಿಳೆ ಜೀವನ ಕೂಡ ರಹಸ್ಯದಿಂದ ಕೂಡಿದೆ. ಆ ರಾತ್ರಿ ಏನಾಯ್ತು ಎಂಬ ಪ್ರಶ್ನೆಗೆ ಉತ್ತರ ನೀಡಲು ಆಕೆ ಇನ್ನೂ ಸಿಕ್ಕಿಲ್ಲ. ಹಾಗಾಗಿ ಆಕೆ ಪ್ರಕರಣಕ್ಕೆ ಅಂತ್ಯವೇ ಸಿಕ್ಕಿಲ್ಲ. ಅಷ್ಟಕ್ಕೂ ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ.
ಅದು ಡಿಸೆಂಬರ್ 15, 1996. ಅಮೆರಿಕಾದ ನ್ಯೂಜೆರ್ಸಿ (New Jersey). ಅಲ್ಲಿ ನೆಲೆಸಿದ ಹುಡುಗಿ ಹೆಸರು ಸೆಲಿನಾ ಜಾನೆಟ್ ಮೇಸ್. ಆಕೆಗೆ 12 ವರ್ಷ ವಯಸ್ಸು. ತುಂಬಾ ಕೂಲ್ ಆಗಿದ್ದ ವಾತಾವರಣದಲ್ಲಿ ಎಲ್ಲರೂ ಉತ್ಸಾಹದಿಂದ ದಿನಕಳೆಯುವ ಪ್ಲಾನ್ ಮಾಡಿದ್ದರು. ಎಂದಿನಂತೆ ಎಚ್ಚರಗೊಂಡ ಸೆಲಿನಾ ಜಾನೆಟ್ ಮೇಸ್, ಬೆಳಗ್ಗೆ ತನ್ನ ಕುಟುಂಬದವರ ಜೊತೆ ಚರ್ಚ್ (Church) ಗೆ ಹೋಗಿ ಬಂದಳು. ಸೆಲಿನಾ ಜಾನೆಟ್ ಮೇಸ್ ಆ ದಿನ ಸ್ವಲ್ಪ ನಿರುತ್ಸಾಹದಲ್ಲಿದ್ದರೂ ಅದನ್ನು ಯಾರಿಗೂ ತೋರಿಸಿಕೊಂಡಿರಲ್ಲಿ. 12 ವರ್ಷದ ಸೆಲಿನಾ ಗರ್ಭ ಧರಿಸಿದ್ದಳು. ಆಕೆಗೆ 9 ತಿಂಗಳು ತುಂಬಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಗರ್ಭವತಿಯಾದ ಸೆಲಿನಾ ಜಾನೆಟ್ ಮೇಸ್, ಮಗುವಿನ ತಂದೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಆ ವಿಷ್ಯವನ್ನು ಗೌಪ್ಯವಾಗಿಟ್ಟಿದ್ದ ಸೆಲಿನಾ ಜಾನೆಟ್ ಮೇಸ್, ಮಗುವಿಗೆ ಜನ್ಮ ನೀಡುವ ದೃಢ ನಿರ್ಧಾರ ಮಾಡಿದ್ದಳು. ಆಕೆಯನ್ನು ಕುಟುಂಬಸ್ಥರು ಬೆಂಬಲಿಸಿದ್ದರು.
THROWBACK 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!
ಮನೆಯವರ ಬೆಂಬಲದಿಂದಾಗಿ ಮಗುವಿಗೆ ಜನ್ಮ ನೀಡಲು ಮಾನಸಿಕವಾಗಿ ಸಿದ್ಧವಾಗಿದ್ದ ಸೆಲಿನಾ ಜಾನೆಟ್ ಮೇಸ್, ಅಂದು ಮನೆಯವರ ಜೊತೆ ಕುಳಿತು ಐಸ್ ಕ್ರೀಂ ತಿಂದಿದ್ದಳು. ರಾತ್ರಿ ಎಲ್ಲರ ಜೊತೆ ಕುಳಿತು ಊಟ ಮಾಡಿದ್ದಲ್ಲದೆ ಸಿಂಕ್ ಗೆ ಪಾತ್ರೆ ಹಾಕಿ ಮಲಗಲು ಹೋಗಿದ್ದಳು. ಮಲಗುವ ಮುನ್ನ ಕುಟುಂಬಸ್ಥರಿಗೆ ಗುಡ್ ನೈಟ್ ಹೇಳಿ ಹಾಸಿಗೆ ಮೇಲೆ ಮಲಗಿದ್ದಳು. ಇದು ಮಾತ್ರ ಕುಟುಂಬಸ್ಥರಿಗೆ ಗೊತ್ತು. ಮುಂದೇನಾಯ್ತು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.
ಮರುದಿನ ಎಂದಿನಂತೆ ಬೆಳಗಾಗಿದ್ದರೂ ಸೆಲಿನಾ ಜಾನೆಟ್ ಮೇಸ್ ಮನೆಯ ಪರಿಸ್ಥಿತಿ ಎಂದಿನಂತೆ ಇರಲಿಲ್ಲ. ರಾತ್ರಿ ಹಾಸಿಗೆ ಮೇಲೆ ಮಲಗಿದ್ದ ಸೆಲಿನಾ ಜಾನೆಟ್ ಮೇಸ್, ಬೆಳಿಗ್ಗೆ ಹಾಸಿಗೆ ಮೇಲೆ ಇರಲಿಲ್ಲ. ಆಕೆ ಎಲ್ಲಿಗೆ ಹೋದ್ಲು, ಏನಾದ್ಲು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಮನೆಯಿಂದ ಓಡಿ ಹೋಗಿದ್ರೆ ಆಕೆ ಒಮ್ಮೆಯಾದ್ರೂ ಕುಟುಂಬವನ್ನು ಸಂಪರ್ಕಿಸುತ್ತಿದ್ದಳು ಅದು ನಡೆಯಲಿಲ್ಲ. ಕೊಲೆ ಅಥವಾ ಆತ್ಮಹತ್ಯೆಯಾಗಿದ್ದರೆ ಆಕೆ ಶವ ಸಿಗ್ಬೇಕಿತ್ತು. ಅದೂ ಆಗಿಲ್ಲ. ಘಟನೆ ನಡೆದು 27 ವರ್ಷಗಳು ಕಳೆದಿವೆ. ಸೆಲಿನಾ ಜಾನೆಟ್ ಮೇಸ್ ಏನಾದ್ಲು ಎನ್ನುವುದು ಈಗ್ಲೂ ರಹಸ್ಯವಾಗೇ ಉಳಿದಿದೆ.
ದೇಹದಲ್ಲಿ ಈ ವಿಟಮಿನ್ ಕೊರತೆಯಾದ್ರೆ ಸೆಕ್ಷುಯಲ್ ಲೈಫಿಗೇ ಕುತ್ತು!
ಅಮೆರಿಕ ಮಾತ್ರವಲ್ಲ ಭಾರತದಲ್ಲೂ ಇಂಥ ಪ್ರಕರಣಗಳು ಸಾಕಷ್ಟು ನಡೆಯುತ್ತವೆ. ಸೆಪ್ಟೆಂಬರ್ 2012 ರ ರಾತ್ರಿ, ಬಿಹಾರದ ಮುಜಾಫರ್‌ಪುರದಲ್ಲಿ 14 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಆಕೆ ಏನಾದ್ಲು ಎನ್ನುವುದು ಕೂಡ ಈಗ್ಲೂ ಪತ್ತೆಯಾಗಿಲ್ಲ. ಭೂ ಮಾಫಿಯಾಕ್ಕೆ ಆಕೆ ಬಲಿಯಾಗಿದ್ದಾಳೆ. ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಸಿಬಿಐ ವರದಿ ನೀಡಿದ್ರೂ ಯಾವುದೇ ಸಾಕ್ಷ್ಯವನ್ನು ಒದಗಿಸಲು ಸಾಧ್ಯವಾಗ್ಲಿಲ್ಲ. ದೂರದವರಿಗೆ ಘಟನೆ ವಿಶೇಷ ಎನ್ನಿಸದೆ ಇದ್ರೂ ಕುಟುಂಬಕ್ಕೆ ಜೀವನ ಪರ್ಯಂತ ಕಾಡುವ ನೋವು ಇದು. ನಿರೀಕ್ಷೆ, ಆತಂಕದಲ್ಲೇ ಅವರು ಬದುಕು ಸಾಗಿಸಬೇಕು.