Asianet Suvarna News Asianet Suvarna News

ಮದುವೆಯಾದ್ರೂ ಮೂವರು ಬಾಯ್ ಫ್ರೆಂಡ್! ಸುಖಿ ಸಂಸಾರದ ಗುಟ್ಟು ಬಿಚ್ಚಿಟ್ಟ ಮಹಿಳೆ

ಮದುವೆ ಆದ್ಮೇಲೆ ಬೇರೆ ಪುರುಷರನ್ನು ನೋಡಿ ನಕ್ಕರೂ ಜನ ನಾನಾ ಮಾತನಾಡ್ತಾರೆ. ಇನ್ನು ಪತಿ ರೌದ್ರಾವತಾರ ತಾಳೋದಿದೆ. ಹಾಗಿರುವಾಗ ಈ ಮಹಿಳೆ ಪತಿ ಜೊತೆಗಿದ್ರೂ ಮೂವರು ಬಾಯ್ ಫ್ರೆಂಡ್ ಸಂಭಾಳಿಸ್ತಿದ್ದಾಳೆ. ಅದ್ರ ಮೇಲೆ ನಮ್ಮದು ಸಂತೋಷದ ಸಂಸಾರ ಎನ್ನುತ್ತಿದ್ದಾಳೆ. 

Woman Reveals Secrets Of Happy Marriage and having three boy friends roo
Author
First Published Dec 15, 2023, 4:34 PM IST

ದಾಂಪತ್ಯ ಜೀವನದಲ್ಲಿ ಸಂತೋಷ ಸಾಧಿಸೋದು ಮಹಾನ್ ಕೆಲಸಗಳಲ್ಲಿ ಒಂದು. ಸಣ್ಣಪುಟ್ಟ ಕಾರಣಕ್ಕೆ ಇಬ್ಬರ ಮಧ್ಯೆ ಮುನಿಸು ಶುರುವಾಗುತ್ತದೆ.  ಸಂಬಂಧ ಚೆನ್ನಾಗಿರಬೇಕೆಂದ್ರೆ ಶಾರೀರಿಕ ಸಂಬಂಧ ಕೂಡ ಒಂದು ಮುಖ್ಯ ಭಾಗವಾಗುತ್ತದೆ. ಇಬ್ಬರ ಮಧ್ಯೆ ಸೆಕ್ಸ್ ಕಡಿಮೆಯಾಗ್ತಾ ಬಂದಂತೆ ಮುನಿಸು, ಜಗಳಗಳು ಹೆಚ್ಚು ಎಂದು ತಜ್ಞರೇ ಹೇಳ್ತಾರೆ. ಸಂಸಾರದಲ್ಲಿ ನೆಮ್ಮದಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ತಮ್ಮ ಸ್ವಭಾವದಲ್ಲಿ ಬದಲಾವಣೆ ತರೋದ್ರಿಂದ ಹಿಡಿದು ಜಗಳಗಳಾದಾಗ ತಾವೇ ಕ್ಷಮೆ ಕೋರಿ ಸುಖ ಸಂಸಾರಕ್ಕೆ ಹೆಗಲು ನೀಡ್ತಾರೆ. ಇಷ್ಟೆಲ್ಲ ಹೊಂದಾಣಿಕೆ ಇದ್ದರೂ ಇಬ್ಬರ ಮಧ್ಯೆ ಯಾವುದೋ ಸಣ್ಣ ಕಿಡಿ ಮನಸ್ಸಿನ ನೆಮ್ಮದಿ ಹಾಳು ಮಾಡಿರುತ್ತದೆ. ಆದ್ರೆ ಈ ದಂಪತಿ ಹಾಗಿಲ್ಲ. ಮದುವೆ ನಂತ್ರ ದಾಂಪತ್ಯ ಸಂತೋಷದಿಂದಿರಲು ಕಾರಣವೇನು ಎಂಬುದನ್ನು ಈ ದಂಪತಿ ಹೇಳಿದ್ದಾರೆ. ಮೂರು ವರ್ಷಗಳಿಂದ ಇವರಿಬ್ಬರ ಮಧ್ಯೆ ಶಾರೀರಿಕ ಸಂಬಂಧ ಕೂಡ ಬೆಳೆದಿಲ್ಲ. ಆದ್ರೂ ಸುಖಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಅವರು ಹೇಳುವ ಕಾರಣ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. 

ಭಾರತ (India) ದಲ್ಲಿ ವಿವಾಹೇತರ ಸಂಬಂಧ ನಿಷಿದ್ಧ. ಮದುವೆ (Marriage) ನಂತ್ರ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಂಡ್ರೆ ಮದುವೆ ಮುರಿದುಬೀಳುತ್ತದೆ. ಆದ್ರೆ ಇವರ ಸಂಸಾರ ಸಂತೋಷ (Happiness) ದಿಂದಿರಲು ವಿವಾಹೇತರ ಸಂಬಂಧವೇ ಕಾರಣವಂತೆ. ಮದುವೆ ನಂತ್ರವೂ ನಾವು ಬೇರೆಯವರ ಜೊತೆ ಡೇಟ್ ಮಾಡ್ತಿದ್ದು, ಖುಷಿಯಾಗಿದ್ದೇವೆ ಎಂದು ದಂಪತಿ ಹೇಳಿದ್ದಾರೆ.

THROWBACK 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!

60 ವರ್ಷದ ಲಿಸಾ ವ್ಯಾನ್ ಸ್ಯಾಂಡ್ ಮತ್ತು 63 ವರ್ಷದ ಎವೆರೆಟ್ ಹಾರ್ಲೋ ಮದುವೆಯಾಗಿ 36 ವರ್ಷಗಳಾಗಿವೆ. ಇಬ್ಬರೂ ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದಾರೆ. ಲಿಸಾ ಈ ವಿವಾಹೇತರ ಸಂಬಂಧ ಹೆಗೆ ಶುರುವಾಯ್ತು ಎಂಬುದನ್ನು ಹೇಳಿದ್ದಾಳೆ. ಲಿಸಾ ಹಾಗೂ ಎವೆರೆಟ್ ಮಧ್ಯೆ ಸಂಬಂಧ ಚೆನ್ನಾಗೆ ಇತ್ತು. 2010ರಲ್ಲಿ ಎವೆರೆಟ್, ಲಿಸಾ ಬಳಿ ಬಂದು ತಾನು ಒಬ್ಬ ಮಹಿಳೆ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದ. ಇದನ್ನು ಕೇಳಿ ಕೋಪ ಮಾಡಿಕೊಳ್ಳುವ ಬದಲು ಲಿಸಾ, ಸಂತೋಷಗೊಂಡಿದ್ದಳು. ನಂತ್ರ ಬೇರೆಯವರ ಜೊತೆ ಡೇಟ್ ಮಾಡುವ ಐಡಿಯಾ ಬಂತು. ಈವರೆಗೆ ಎವೆರೆಟ್ ಐದು ಮಹಿಳೆಯರ ಜೊತೆ ಸಂಬಂಧ ಬೆಳೆಸಿದ್ದ. ಅದೇ ಲಿಸಾಗೆ ಈಗ್ಲೂ ಮೂವರು  ಬಾಯ್ ಫ್ರೆಂಡ್ಸ್ ಇದ್ದಾರೆ. ಅವರು ಬೇರೆ ಬೇರೆ ಊರಿನಲ್ಲಿದ್ದು, ಅವರಿಬ್ಬರು ಆಗಾಗ ಭೇಟಿಯಾಗ್ತಿರುತ್ತಾರೆ. ಅವರ ಜೊತೆ ಅನೇಕ ವರ್ಷಗಳಿಂದ ಸಂಬಂಧವಿದೆ ಎಂದು ಲಿಸಾ ಹೇಳಿದ್ದಾಳೆ. 

ನಾವಿಬ್ಬರು ಬೇರೆಯವರ ಜೊತೆ ಡೇಟ್ ಮಾಡಲು ಶುರು ಮಾಡಿದ ಮೇಲೆ ನಮ್ಮಿಬ್ಬರ ಮಧ್ಯೆ ಇದ್ದ ಜಗಳ ಕಡಿಮೆಯಾಗಿದೆ. ಇಬ್ಬರು ತುಂಬಾ ಖುಷಿಯಾಗಿದ್ದೇವೆ ಎಂದು ಲಿಸಾ ಹೇಳಿದ್ದಾಳೆ. 
ನಮ್ಮ ಸಂಬಂಧ ಎಲ್ಲರಂತೆ ಇಲ್ಲ. ನಮ್ಮಂತೆ ಎಲ್ಲರಿಗೆ ಇರಲು ಸಾಧ್ಯವಿಲ್ಲ. ಎಲ್ಲರ ದಾಂಪತ್ಯದಲ್ಲಿ ಇದು ವರ್ಕ್ ಔಟ್ ಆಗಲು ಸಾಧ್ಯವಿಲ್ಲ. ನಾವಿಬ್ಬರು ತುಂಬಾ ಪ್ರೀತಿಸುತ್ತೇವೆ. ಹಾಗೆ ಬೇರೆಯವರ ಜೊತೆ ಡೇಟ್ ಮಾಡ್ತೇವೆ ಎಂದು ಲಿಸಾ ಹೇಳಿದ್ದಾಳೆ. 

2024ರ ವೈವಾಹಿಕ ಜೀವನ, ಲವ್ ಲೈಫ್: ಈ ರಾಶಿಯವರು ಲೈಂಗಿಕ ಯೋಚನೆಗಳಿಂದ ದೂರ ಇರಬಾರದು!

ಎವೆರೆಟ್ ರೋಮ್ಯಾಂಟಿಕ್ ಇಲ್ಲ. ಆದ್ರೆ ನನಗೆ ರೋಮ್ಯಾಂಟಿಕ್ ಜನ ಇಷ್ಟ. ಅದೇ ಎವೆರೆಟ್ ಗೆ ದೈಹಿಕವಾಗಿ ಕನೆಕ್ಟ್ ಆಗೋರು ಇಷ್ಟ ಎಂದು ಲಿಸಾ ಹೇಳಿದ್ದಾಳೆ.  ಲಿಸಾ, 1986 ರಲ್ಲಿ ಎವೆರೆಟ್ ನನ್ನು ಭೇಟಿಯಾಗಿದ್ದಳು. ಎರಡು ತಿಂಗಳ ನಂತರ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. 1987 ರಲ್ಲಿ ಮದುವೆಯಾದ್ರು. ಮದುವೆಯಾಗಿ 23 ವರ್ಷ ಆದ್ಮೇಲೆ ಎವೆರೆಟ್ ಮಹಿಳೆಯೊಬ್ಬಳ ಜೊತೆ ಡೇಟ್ ಮಾಡಿದ್ದ. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಲಿಸಾ ಬೇರೆ ವ್ಯಕ್ತಿ ಜೊತೆ ಡೇಟ್ ಮಾಡಿದ್ದಳು. 
 

Follow Us:
Download App:
  • android
  • ios