Asianet Suvarna News Asianet Suvarna News

ಯಪ್ಪಾ..ಖರ್ಚಿಲ್ಲದೆ ಪ್ರೊಟೀನ್ ಸಿಗಲಿ ಅಂತ ಮಗುವಿಗೆ ಮಿಡತೆ ತಿನ್ನಿಸ್ತಾಳೆ ತಾಯಿ!

ಅಲ್ಲಾ ಹೀಗೂ ಮಾಡ್ತಾರಾ ಅಂತ. ತಾಯಂದಿರು ಮಕ್ಕಳಿಗೆ ರುಚಿಕರವಾದ, ಹೆಲ್ದೀ ಫುಡ್ ಕೊಡೋ ಬಗ್ಗೆ ನಾವು ಕೇಳಿದ್ದೀವಿ. ಆದ್ರೆ ಇಲ್ಲೊಂದೆಡೆ ತಾಯಿ ತನ್ನ ಮಗುವಿಗೆ ಫ್ರೀಯಾಗಿ ಪ್ರೊಟೀನ್ ಸಿಗ್ಲಿ ಅನ್ನೋ ಕಾರಣಕ್ಕೆ ಮಿಡತೆಯನ್ನೇ ಕೊಟ್ಟಿದ್ದಾಳೆ. ಇದನ್ನು ಕೇಳಿದ ಜನ್ರು ಛೀ, ಥೂ ಅಂತಿದ್ದಾರೆ.

Canada woman feeds crickets to toddler to cut down on familys grocery bills Vin
Author
First Published Apr 26, 2023, 10:21 AM IST

ಮಕ್ಕಳ ಆರೋಗ್ಯದ ಬಗ್ಗೆ ಪ್ರತಿಯೊಬ್ಬ ತಾಯಂದಿರೂ ಕಾಳಜಿ ವಹಿಸುತ್ತಾರೆ. ಮಕ್ಕಳು ಹೆಲ್ದೀಯಾಗಿ ಬೆಳೆಯಬೇಕು ಅಂತ ಹೆಚ್ಚು ವಿಟಮಿನ್‌, ಐರನ್‌, ಪ್ರೊಟೀನ್ ಹೆಚ್ಚು ಇರೋ ಆಹಾರಗಳನ್ನು ಕೊಡ್ತಾರೆ. ಆದ್ರೆ ಇದನ್ನೆಲ್ಲಾ ಕೊಡ್ಬೇಕು ಅಂದ್ರೆ ಹೆಚ್ಚು ಖರ್ಚಾಗುತ್ತೆ ಅನ್ನೋದು ಕೂಡಾ ನಿಜ. ಹೀಗಾಗಿ ಕೆನಡಾದ ಮಹಿಳೆಯೊಬ್ಬಳು ತನ್ನ ಮಗುವಿಗೆ ಉಚಿತವಾಗಿ ಪ್ರೊಟೀನ್ ಸಿಗಲಿ ಅನ್ನೋ ಕಾರಣಕ್ಕೆ ಮಿಡತೆ ತಿನ್ನಿಸಿದ್ದಾಳೆ. ಇಂಥ ವಿಚಿತ್ರವನ್ನು ಎಂದಾದರೂ ಕೇಳಿದ್ದೀರಾ..? ದಿನಸಿ ಖರ್ಚು ಹೆಚ್ಚಾಗುತ್ತಿದೆ. ಹಾಗಂತ ಮಗುವಿಗೆ ನೀಡಬೇಕಾದ ಪೋಷಕಾಂಶಗಳ ಮೇಲೆ ರಾಜಿಯಾಗುವುದಕ್ಕಾಗಲ್ಲ ಎಂದು ಟೊರಂಟೋದ ಟಿಫಾನಿ ಲೀ ಎಂಬ ಮಹಿಳೆಯೊಬ್ಬಳು, ತಾನು ಮಿಡತೆಗಳನ್ನು ತಿನ್ನಲು ಹಾಗೂ ತನ್ನ 18 ತಿಂಗಳ ಮಗುವಿಗೆ ಮಿಡತೆಯನ್ನು ತಿನ್ನಿಸಲು ಪ್ರಾರಂಭಿಸಿದ್ದಾಳೆ.

ಪ್ರೊಟೀನ್‌ಗಾಗಿ 18 ತಿಂಗಳ ಮಗುವಿಗೆ ಮಿಡತೆ ತಿನ್ನಿಸುವ ತಾಯಿ!
ಕೇಳೋಕೆ ವಿಚಿತ್ರವೆನಿಸಿದರೂ ಇದು ನಿಜ. ಟೊರಂಟೋದ ಟಿಫಾನಿ ಲೀ ಎಂಬ ಮಹಿಳೆ (Woman)ಯೊಬ್ಬಳು, ತಾನು ಮಿಡತೆ (Crickets)ಗಳನ್ನು ತಿನ್ನಲು ಹಾಗೂ ತನ್ನ 18 ತಿಂಗಳ ಮಗುವಿಗೆ ಮಿಡತೆಯನ್ನು ತಿನ್ನಿಸಲು ಪ್ರಾರಂಭಿಸಿದ್ದಾಳೆ. ಕೀಟಗಳ ಸೇವನೆಯಿಂದ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ ಎಂದು ಹೇಳಿಕೊಂಡಿದ್ದಾಳೆ.   ನನ್ನ ಈ ಆಹಾರಪದ್ಧತಿಯಿಂದ ಹಣವನ್ನು (Money) ಉಳಿಸುವುದರ ಜೊತೆಗೆ, ಮಗುವಿನ ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿದೆ ಕೀಟಗಳನ್ನು ಸೇವಿಸುವುದು ಸಾಮಾನ್ಯವಾದ ವಿಷಯವಾಗಿದೆ ಎಂದು ಮಹಿಳೆ ತಿಳಿಸಿದ್ದಾಳೆ.

ಕೀಟಗಳ ಮೊಟ್ಟೆ ತಿನ್ತಾರೆ ಮೆಕ್ಸಿಕೋದ ಜನ, ಇದು ದೇವರ ಆಹಾರವಂತೆ !

ಚೇಳು, ಜೇಡ ಮೊದಲಾದ ಕೀಟವನ್ನೂ ತಿಂದಿದ್ದಳಂತೆ
ಕೀಟಗಳ ಸೇವನೆಯಿಂದ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ. ಇತರ ಪೌಷ್ಟಿಕ ಆಹಾರ ಪದಾರ್ಥಗಳಿಗಾದರೆ ಹೆಚ್ಚು ವೆಚ್ಚವಾಗುತ್ತದೆ ಎಂದು ಮಹಿಳೆ ಈ ಪ್ಲ್ಯಾನ್‌ ಮಾಡಿದ್ದಾಳಂತೆ. ಆ ಮಗು ದೊಡ್ಡದಾದ ಬಳಿಕ ಇವನ್ನು ತಿನ್ನುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಏನೆಲ್ಲ ತಿನ್ಸಿ ಬೆಳೆಸಿದಿಯೆಮ್ಮಾ ಅಂತ ಖಂಡಿತ ಶಾಕ್‌ ಆಗುತ್ತೆ.

ಫುಡ್ ಬ್ಲಾಗರ್ ಆಗಿರುವ ಟಿಫಾನಿ ಲೇಘ್ ತನ್ನ 18 ತಿಂಗಳ ಮಗಳಿಗೆ ತಿನ್ನಲು ಮಿಡತೆಗಳನ್ನು ನೀಡುತ್ತಿದ್ದಾಳೆ. ಕೀಟಶಾಸ್ತ್ರದ ತಿಳುವಳಿಕೆಯು ತನ್ನ ಆಯ್ಕೆಗೆ ಮಾರ್ಗದರ್ಶನ ನೀಡಿತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ತಾನು ಈ ಹಿಂದೆ ಚೇಳು, ಜೇಡ ಸೇರಿದಂತೆ ನಾನಾ ಬಗೆಯ ಕೀಟಗಳನ್ನು ಸೇವಿಸಿದ್ದೆ ಎಂದು ಮಹಿಳೆ ತಿಳಿಸಿದ್ದಾಳೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ಇರುವೆಗಳು (Ant) ಮತ್ತು ಮಿಡತೆಗಳನ್ನು ಸಹ ಸೇವಿಸಿದ್ದೆ ಎಂದು ಟಿಫಾನಿ ಹೇಳಿಕೊಂಡಿದ್ದಾಳೆ. 

ಛೀ..ಕಂಬಳಿ ಹುಳದಲ್ಲೂ ಚಾಕೊಲೇಟ್‌ ಮಾಡ್ತಾರಂತೆ !

ಟಿಫಾನಿ ಪ್ರಕಾರ, ಗೋಮಾಂಸ, ಕೋಳಿ ಅಥವಾ ಹಂದಿಮಾಂಸಕ್ಕಿಂತ ಪ್ರೋಟೀನ್ ಮೂಲವಾಗಿ ಮಿಡತೆಗಳನ್ನು ಬಳಸುವುದರಿಂದ ಸಾಕಷ್ಟು ಹಣವನ್ನು ಉಳಿಸಲು ಸಾಧ್ಯವಾಗಿದೆ ಎಂದು ಟಿಫಾನಿ ತಿಳಿಸಿದ್ದಾಳೆ. ತನ್ನ ಮಗಳು ಹೊಸ ಆಹಾರವನ್ನು (Food) ಸ್ವೀಕರಿಸುವಾಗ ಯಾವುದೇ ಅಸಮಾಧಾನ ಅಥವಾ ಆತಂಕವನ್ನು ವ್ಯಕ್ತಪಡಿಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ, ಕೆಲವು ಬಳಕೆದಾರರು ಟಿಫಾನಿ ಅವರ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ. ಚಿಕ್ಕ ಮಗುವಿನ (Baby) ಮೇಲೆ ಇಂತಹ ಪರೀಕ್ಷೆಗಳು ಅಗತ್ಯವಿದೆಯೇ? ಎಂದು ಹೀಯಾಳಿಸುತ್ತಿದ್ದಾರೆ. ಇನ್ನೊಂದೆಡೆ ಆಹಾರತಜ್ಞರು, 'ಆರು ತಿಂಗಳ ವಯಸ್ಸಿನ ನಂತರ ಹುಳುಗಳು ಮತ್ತು ಕೀಟಗಳನ್ನು ಆಹಾರವಾಗಿ ತಿನ್ನುವ ಬಗ್ಗೆ ಮಕ್ಕಳು ಸಕಾರಾತ್ಮಕ ಮನೋಭಾವವನ್ನು (Positive mind) ಹೊಂದಿರುತ್ತಾರೆ' ಎಂದು ಮಕ್ಕಳ ಆಹಾರ ತಜ್ಞ ವೀನಸ್ ಕಲಾಮಿ ಹೇಳುತ್ತಾರೆ.

ಬೇಳೆಕಾಳುಗಳಲ್ಲಿ ಹುಳುಗಳಾಗದಂತೆ ದೀರ್ಘಕಾಲದ ವರೆಗೆ ಸಂರಕ್ಷಿಸಿಡುವುದು ಹೇಗೆ ?

Follow Us:
Download App:
  • android
  • ios