Asianet Suvarna News Asianet Suvarna News

ಛೀ..ಕಂಬಳಿ ಹುಳದಲ್ಲೂ ಚಾಕೊಲೇಟ್‌ ಮಾಡ್ತಾರಂತೆ !

ಚಾಕೊಲೇಟ್ (Chocolate) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ವಿವಿಧ ಹಣ್ಣುಗಳು (Fruits0, ಫ್ಲೇವರ್ ಸೇರಿಸಿ ಚಾಕೊಲೇಟ್ ತಯಾರಿಸಲಾಗುತ್ತೆ. ಆದ್ರೆ ಇಲ್ಲೊಂದು ಸ್ಪೆಷಲ್ ಚಾಕೋಲೇಟ್ ಇದೆ. ಇದಕ್ಕೆ ಸೇರಿಸಿರೋದು ಏನೂಂತ ಗೊತ್ತಾದ್ರೆ ನೀವು ಛೀ, ಥೂ ಅನ್ನೋದು ಖಂಡಿತ. 

South African Chemical Engineer Turning Insects Into Snacks Vin
Author
Bengaluru, First Published Jul 10, 2022, 2:33 PM IST | Last Updated Jul 10, 2022, 2:33 PM IST

ಚಾಕೋಲೇಟ್ (Chocolate) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಚಾಕೋಲೆಟ್ ಅಂದ್ರೆ ಇಷ್ಟದ ಸಿಹಿ ತಿನಿಸು. ಕೆಲವೊಂದು ಬಗೆಯ ಹಣ್ಣುಗಳು, ಫ್ಲೇವರ್‌, ಒಣ ಹಣ್ಣುಗಳನ್ನು (Dry fruits) ಸೇರಿಸಿ ರುಚಿಕರವಾದ ಚಾಕೋಲೆಟ್ ತಯಾರಿಸುತ್ತಾರೆ. ಎಲ್ಲರೂ ತಮಗಿಷ್ಟವಾದ ಬಗೆಯ ಚಾಕೊಲೇಟ್‌ ಖರೀದಿಸಿ ತಿನ್ನುತ್ತಾರೆ. ಆದ್ರೆ ಚಾಕೊಲೇಟ್ ಹೇಗೆ ತಯಾರಿಸ್ತಾರೆ, ಅದಕ್ಕೆ ಏನೆಲ್ಲಾ ಸೇರಿಸುತ್ತಾರೆ ಎಂಬುದರ ಬಗ್ಗೆ ನಿಮಗೆಷ್ಟು ಗೊತ್ತಿದೆ. 

ಕೋಕೋ ಬೀನ್ಸ್ ಆರಂಭದಲ್ಲಿ ಕಹಿ ರುಚಿಯನ್ನು ಹೊಂದಿದ್ದು, ಮರದಿಂದ ತೆಗೆದ ನಂತರ ಅದನ್ನು ಹುರಿಯುವುದು, ಶೆಲ್ ತೆಗೆಯುವುದು ಮತ್ತು ಬಿಸಿಮಾಡುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ಹಾದು ಹೋಗಿ ಅದು ಅಂತಿಮವಾಗಿ  ಚಾಕೊಲೇಟ್‌ ಆಗುತ್ತದೆ. ರುಬ್ಬುವ ಮೂಲಕ ಬೀನ್ಸ್​ನ್ನು ಕೋಕೋ ಸಾರವಾಗಿ ಪರಿವರ್ತಿಸಲಾಗುತ್ತದೆ. ಮದ್ಯವನ್ನು ನಂತರ ಸಕ್ಕರೆ ಮತ್ತು ಕೋಕೋ ಬೆಣ್ಣೆಯೊಂದಿಗೆ ಬೆರೆಸಿ ಅಂತಿಮ ಉತ್ಪನ್ನವಾಗಿ ಚಾಕೊಲೇಟ್ ಹೊರ ಬರುತ್ತದೆ. ಇದಕ್ಕೆ ಆಯಾ ಚಾಕೊಲೇಟ್ ಪ್ರಕಾರಕ್ಕೆ ಅನುಗುಣವಾಗಿ ಹಣ್ಣುಗಳನ್ನು, ಫ್ಲೇವರ್‌ನ್ನು ಸೇರಿಸಲಾಗುತ್ತದೆ. ಆದ್ರೆ ಇಲ್ಲೊಂದೆಡೆ ಕೀಟಗಳನ್ನು, ಜೀವಿಗಳನ್ನು ಬಳಸಿ ಚಾಕೋಲೇಟ್ ತಯಾರಿಸ್ತಾರೆ. ಹೌದು. ಮರಿ ಕಂಬಳಿ ಹುಳುಗಳಿಂದ ಈ ಚಾಕೊಲೇಟ್ ತಯಾರಿಸಲಾಗುತ್ತಿದೆ. 

ಆಹಾರ ನೋಡಿದ್ರೇನೆ ಭಯ..! ಅರೆ ಇದೆಂಥಾ ವಿಚಿತ್ರ ಫೋಬಿಯಾ ?

ಕಂಬಳಿ ಹುಳು ಸೇರಿಸಿ ತಯಾರಿಸಿದ ಚಾಕೊಲೇಟ್‌
ಕೆಮಿಕಲ್ ಇಂಜಿನಿಯರ್‌ ಒಬ್ಬರು ಈ ಹೊಸ ಚಾಕೊಲೇಟ್ ಅನ್ನು ಕಂಡುಹಿಡಿದಿದ್ದಾರೆ. ಅನೇಕ ಜನರು ಈಗಾಗಲೇ ಈ ಚಾಕೊಲೇಟ್ ಅನ್ನು ಸೇವಿಸಿದ್ದು, ರುಚಿಯನ್ನು ಇಷ್ಟಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾದ ಕೆಮಿಕಲ್ ಇಂಜಿನಿಯರ್ ತಯಾರಿಸಿದ ಈ ಕ್ಯಾಟರ್ಪಿಲ್ಲರ್ ಅನ್ನು ಚಾಕೊಲೇಟ್‌ನೊಂದಿಗೆ ಬಳಸಲಾಗುತ್ತಿದೆ. ಜನಸಾಮಾನ್ಯರು ಆ ಚಾಕೊಲೇಟ್ ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಮರಿಹುಳುಗಳಿಂದ ಚಾಕೊಲೇಟ್‌ ಹಿಟ್ಟು ತಯಾರಿಸಲಾಗುತ್ತಿದೆ. ಮತ್ತು ವಿವಿಧ ರೀತಿಯ ಚಾಕೊಲೇಟ್‌ಗಳು, ಬಿಸ್ಕತ್ತುಗಳು, ಕೇಕ್‌ಗಳು ಮತ್ತು ಇನ್ನೂ ಅನೇಕ ತಿನಿಸು ಅದರಿಂದ ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದ ಆ ಇಂಜಿನಿಯರ್ ಹೆಸರು ವೆಲ್ಡಿ ವೆಸೆಲಾ. ಸದ್ಯ ಇವರು ತಯಾರಿಸಿರುವ ವಿಶೇಷ ಚಾಕೋಲೇಟ್‌ಗೆ ವಿದೇಶದಿಂದಲೂ ಆರ್ಡರ್‌ಗಳು ಬರುತ್ತಿವೆ. ಈ ರೀತಿಯ ಕ್ಯಾಟರ್ಪಿಲ್ಲರ್ ಆಹಾರದ ಗುಣಮಟ್ಟವಾಗಿ ಅದರ ದೇಹದಲ್ಲಿ ಪ್ರೋಟೀನ್ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ವಾಸ್ತವವಾಗಿ, ಮೊಪೆನ್ ವರ್ಮ್ ಎಂದು ಕರೆಯಲ್ಪಡುವ ಈ ವಿಶೇಷ ಕ್ಯಾಟರ್‌ ದೇಹದಲ್ಲಿರುವ ಪ್ರೋಟೀನ್‌ಗಳನ್ನು ಬಳಸಿಕೊಂಡು ಚಾಕೊಲೇಟ್ ಅನ್ನು ತಯಾರಿಸಲಾಗುತ್ತಿದೆ. ಇದು ಈಗಾಗಲೇ ಅನೇಕರ ಗಮನವನ್ನು ಸೆಳೆದಿದೆ.

ಚಾಕೋಲೇಟ್‌ ಪ್ರಿಯರಾ ? ಹರಡ್ತಿದೆ ಸಾಲ್ಮೊನೆಲ್ಲಾ ಸೋಂಕು, ಎಚ್ಚರವಿರಲಿ

ಚಾಕೊಲೇಟ್ ಮೂಲಕ ಹರಡ್ತಿದೆ ಸಾಲ್ಮೊನೆಲ್ಲಾ ಸೋಂಕು
ಬೆಲ್ಜಿಯಂನ ವೈಜ್ ಪಟ್ಟಣದಲ್ಲಿ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಚಾಕೊಲೇಟ್ ಸ್ಥಾವರದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮಿಠಾಯಿ ತಯಾರಿಸುವ 73 ಗ್ರಾಹಕರಿಗೆ ಸಗಟು ಬ್ಯಾಚ್‌ಗಳಲ್ಲಿ ದ್ರವ ಚಾಕೊಲೇಟ್ ಅನ್ನು ಉತ್ಪಾದಿಸುವ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು  ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಬ್ಯಾಕ್ಟಿರೀಯಾ ಪತ್ತೆಯಾದ ನಂತರ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ ಎಂದು ಸಂಸ್ಥೆಯ ವಕ್ತಾರ ಕಾರ್ನೀಲ್ ವಾರ್ಲೋಪ್ ಹೇಳಿದ್ದಾರೆ. ಬ್ಯಾರಿ ಕ್ಯಾಲೆಬಾಟ್ ಪ್ರಸ್ತುತ ಕಲುಷಿತ ಉತ್ಪನ್ನಗಳನ್ನು ಪಡೆದಿರುವ ಎಲ್ಲ ಗ್ರಾಹಕರನ್ನು ಸಂಪರ್ಕಿಸುತ್ತಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ವೈಜ್‌ನಲ್ಲಿ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಬೆಲ್ಜಿಯಂ (Belgium) ದೇಶದಲ್ಲಿ ಉತ್ಪಾದನೆಯಾದ ಚಾಕೋಲೇಟ್‌ ಇಡೀ ವಿಶ್ವಕ್ಕೆ ಸಂಕಷ್ಟ ತಂದೊಡ್ಡಿದೆ. ಕನಿಷ್ಠ 113 ದೇಶಗಳಿಗೆ ರವಾನೆಯಾಗಿರುವ ಚಾಕೋಲೇಟ್‌ ಗಳಲ್ಲಿ ಸಾಲ್ಮೊನೆಲ್ಲಾ ಟೈಫಿಮುರಿಯಮ್‌ ಎನ್ನುವ ಸೋಂಕು ಕಂಡುಬಂದಿದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ದೇಹ ಪ್ರವೇಶಿಸುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕರುಳನ್ನು ಪ್ರವೇಶಿಸಿ ಗ್ಯಾಸ್ಟ್ರೊಇಂಟೆಸ್ಟೈನಲ್‌ (Gastrointestinal) ರೋಗವಾಗಿ ಆರೋಗ್ಯವನ್ನು ಕಂಗೆಡಿಸುವ ಸಾಧ್ಯತೆ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ (World Health Organisation) ಹೇಳಿದೆ. ಚಾಕೋಲೇಟ್ ಮೂಲಕ ಈ ಸೋಂಕು ವಿಶ್ವವ್ಯಾಪಿಯಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. 

Latest Videos
Follow Us:
Download App:
  • android
  • ios