Asianet Suvarna News Asianet Suvarna News

ಕೀಟಗಳ ಮೊಟ್ಟೆ ತಿನ್ತಾರೆ ಮೆಕ್ಸಿಕೋದ ಜನ, ಇದು ದೇವರ ಆಹಾರವಂತೆ !

ಹಿಂದಿನ ಕಾಲದಲ್ಲಿ ತಿನ್ನೋಕೆ ಏನೂ ಇಲ್ಲದಿದ್ದ ಸಮಯದಲ್ಲಿ ಜನರು ಕೀಟ, ಹುಳ ಹುಪ್ಪಟೆಗಳನ್ನು ಬೇಯಿಸಿ ತಿನ್ತಿದ್ರು ಅನ್ನೋದನ್ನು ನೀವು ಕೇಳಿರಬಹುದು. ಅದಿನ್ನೂ ನಾಗರೀಕತೆ ಬೆಳೆದಿರದ ಕಾಲ. ಇವತ್ತಿನ ಕಾಲದಲ್ಲೂ ಯಾರಾದ್ರೂ ಹಾಗೆಲ್ಲಾ ತಿನ್ತಾರೆ ಅಂದ್ರೆ ನೀವು ನಂಬ್ತೀರಾ ? ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಮೆಕ್ಸಿಕೋದಲ್ಲಿ  ಕೀಟಗಳ ಮೊಟ್ಟೆಗಳನ್ನು ದೇವರ ಆಹಾರ ಎಂದು ಭಾವಿಸಿ ಜನರು ತಿನ್ನುತ್ತಾರೆ. ಅರೆ, ಇದೇನು ವಿಚಿತ್ರ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ. 

People Here Consume The Eggs Of Insects As Gods Food Vin
Author
First Published Oct 18, 2022, 10:35 AM IST

ಫುಡ್‌ ಚಾಯ್ಸ್ ಅವರವರ ಇಷ್ಟಕ್ಕೆ ಬಿಟ್ಟದ್ದು. ಕೆಲವೊಬ್ಬರು ಸಸ್ಯಾಹಾರಿಗಳಾಗಿದ್ದರೆ, ಕೆಲವೊಬ್ಬರು ಮಾಂಸಾಹಾರಿಗಳು, ಇನ್ನು ಕೆಲವೊಬ್ಬರು ಮಿಶ್ರಾಹಾರಿಗಳು. ಒಟ್ನಲ್ಲಿ ತಮಗೆ ಇಷ್ಟವಾದುದನ್ನು ಎಲ್ಲರೂ ತಿನ್ನುತ್ತಾರೆ. ಒಬ್ಬರ ಆಹಾರ  ಶೈಲಿ ಇನ್ನೊಬ್ಬರಿಗೆ ಇಷ್ಟವಾಗಬೇಕೆಂದಿಲ್ಲ. ಆದರೂ ಮತ್ತೊಬ್ಬರ ಆಹಾರ ಆಯ್ಕೆಯನ್ನು ಗೌರವಿಸಲೇಬೇಕು. ಆದ್ರೆ ಏನೇನೋ ತಿನ್ತಾರೆ ಅಂದ್ರೆ ಕೇಳೋಕೆ ಸ್ಪಲ್ಪ ವಿಚಿತ್ರ ಅನ್ಸುತ್ತೆ ಅಲ್ವಾ ? ಸಾಮಾನ್ಯವಾಗಿ ಜನರು ತರಕಾರಿ, ಮಾಂಸ, ಸೊಪ್ಪು ಮೊದಲಾದವುಗಳನ್ನು ತಿನ್ತಾರೆ. ಆದ್ರೆ ಅದೆಲ್ಲವನ್ನೂ ಬಿಟ್ಟು ಕೀಟಗಳ ಮೊಟ್ಟೆ ತಿನ್ನೋದು ಅಂದ್ರೆ. ಕೇಳೋಕೆ ಸ್ಪಲ್ಪ ವಿಚಿತ್ರ ಅನ್ಸುತ್ತೆ ಅಲ್ವಾ ? ಆದ್ರೆ ಮೆಕ್ಸಿಕೋದಲ್ಲಿ ಜನರು ಕೀಟಗಳ ಮೊಟ್ಟೆಗಳನ್ನು ದೇವರ ಆಹಾರ ಎಂದು ಭಾವಿಸಿ ತಿನ್ನುತ್ತಾರೆ.

ಕೀಟಗಳ ಮೊಟ್ಟೆ ದೇವರ ಆಹಾರವೆಂದು ತಿನ್ತಾರೆ ಜನ
ಪ್ರಪಂಚದಲ್ಲಿ ವಿವಿಧ ರೀತಿಯ ಆಹಾರ ಪದ್ಧತಿಗಳು (Food style) ಇವೆ. ಆಯಾಯ ಪ್ರದೇಶಗಳು, ಸಂಸ್ಕೃತಿಗೆ ಅನುಗುಣವಾಗಿ ಆಹಾರ ಪದ್ಧತಿ ಮುಂದುವರಿಸುತ್ತಾ ಬರಲಾಗಿದೆ. ಇವುಗಳಲ್ಲಿ ಸಾಮಾನ್ಯ ಆಹಾರ ಪದ್ಧತಿಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಮೂಗು ಮುರಿಯುವಂತಹ ವಿಚಿತ್ರ ಆಹಾರ ಪದ್ಧತಿಗಳೂ ಇವೆ. ಈ ಪೈಕಿ ನೀವು ಎಂದಿಗೂ ಕೇಳಿರದ, ನೋಡಿರದ ಆಹಾರ ಪದ್ಧತಿ ಮೆಕ್ಸಿಕೋದಲ್ಲಿ ಜಾಲ್ತಿಯಲ್ಲಿದೆ. ಕೀಟಗಳ ಮೊಟ್ಟೆ (Insects egg)ಗಳನ್ನು ದೇವರುಗಳ ಆಹಾರ ಎಂದು ಭಾವಿಸಿ ಇಲ್ಲಿನ ಜನರು ಅದನ್ನು ಸೇವನೆ ಮಾಡುತ್ತಾರೆ. ಈ ಕೀಟಗಳ ಮೊಟ್ಟೆ ಸೇವನೆಯ ಹಿಂದೆ ಗಾಢವಾದ ನಂಬಿಕೆಯೂ ಇದೆ. 

ದೇಗುಲದ ವಿಶೇಷ ಪ್ರಸಾದ..ದೇವಲೋಕದ ದೈವೀ ಅನುಬಂಧ..

ಊರಿನ ಹಿರಿಯರು ಹೇಳಿರುವ ಪ್ರಕಾರ,  ಮೆಕ್ಸಿಕೋ ನಗರದಿಂದ ದೂರದಲ್ಲಿರುವ ಕೊಳದ ಟೆಕ್ಸ್ಕೊಕೊ ಸರೋವರದಲ್ಲಿ ಸೊಳ್ಳೆ ಕಂಡುಬರುತ್ತದೆ. ಈ ನೊಣದ ಮೊಟ್ಟೆಗಳನ್ನು ಅಹುಟ್ಲೆ ಎಂದು ಕರೆಯಲಾಗುತ್ತದೆ. ಅಹುಟ್ಲೆ ಎಂದರೆ ಸಂತೋಷದ ಬೀಜ. ಇದು ಗಾತ್ರದಲ್ಲಿ ಬಟಾಣಿಗಿಂತ ಚಿಕ್ಕದಾಗಿದೆ. ಇದನ್ನು ಮೆಕ್ಸಿಕೋ ನಗರದ ಜನರು ಸೇವಿಸುತ್ತಾರೆ. 14-15 ನೇ ಶತಮಾನದಲ್ಲಿ ಮೆಕ್ಸಿಕೋದ ಅಜ್ಟೆಕ್ ಸಾಮ್ರಾಜ್ಯದ ನಂತರ ಜನರು ಇದನ್ನು ಸೇವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೊಟ್ಟೆಗಳನ್ನು ಸಂಗ್ರಹಿಸುವುದು ಹೇಗೆ ?
ಸೊಳ್ಳೆಗಳು ನೀರಿನಲ್ಲಿ ಇಡುವ ಮೊಟ್ಟೆಗಳನ್ನು ಮೀನುಗಾರರು ಸಂಗ್ರಹಿಸುತ್ತಾರೆ. ಆದರೆ, ಮೊದಲು ನೀರಿನ ಮೇಲ್ಮೈ ಕೆಳಗೆ ದೊಡ್ಡ ಬಲೆ ಕಟ್ಟಲಾಗುತ್ತದೆ. ಸೊಳ್ಳೆಗಳು ಅಥವಾ ನೊಣಗಳು ಅದರ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಇದನ್ನು ಮೀನುಗಾರರು (Fisherman) ಅಥವಾ ರೈತರು (Farmers) ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸುತ್ತಾರೆ.

ಅಬ್ಬಬ್ಬಾ..12 ಕೆಜಿ ಲಡ್ಡು ಹರಾಜಿನಲ್ಲಿ 61 ಲಕ್ಷಕ್ಕೆ ಸೇಲ್..!

ಮೊಟ್ಟೆ ಸೇವನೆ ಕಡಿಮೆ ಮಾಡಿರುವ ಯುವಜನತೆ
14 ನೇ ಶತಮಾನದಿಂದಲೂ ಜನರು ಕೀಟಗಳ ಮೊಟ್ಟೆಗಳನ್ನು ಸೇವಿಸುತ್ತಿದ್ದಾರೆ. ಆದರೆ ಇಂದಿನ ಯುವ ಜಗತ್ತಿನಲ್ಲಿ ಇದರ ಬಳಕೆ ಕಡಿಮೆಯಾಗುತ್ತಿದೆ. ಹೀಗಾಗಿ ಮೆಕ್ಸಿಕೋ ಸಿಟಿಯ ಅನೇಕ ರೆಸ್ಟೊರೆಂಟ್‌ಗಳು ಈ ಖಾದ್ಯವನ್ನು ನೀಡುವುದಿಲ್ಲ. ಹಾಗಂತ ಈ ಭಕ್ಷ್ಯವೇನೂ ಅಗ್ಗವಾಗಿಲ್ಲ, ಬೆಲೆ ಸಿಕ್ಕಾಪಟ್ಟೆ ದುಬಾರಿ (Costly)ಯಾಗಿದೆ. 2019 ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಒಂದು ಸಣ್ಣ ಜಾರ್ ಮೊಟ್ಟೆಯ ಬೆಲೆ 1600 ರೂ. ಆಗಿದೆ. 

ಒಟ್ನಲ್ಲಿ ನಂಬಿಕೆ ಹೆಸರಲ್ಲಿ ಜನರು ಮೌಢ್ಯಾಚರಣೆಗೂ ಸಿದ್ಧ ಎಂಬುದು ಇಂಥಾ ಘಟನೆಗಳಿಂದ ಸಾಬೀತಾಗುತ್ತದೆ. ಆಹಾರವೇ ವಿಷವಾಗಿ (Food poison) ಜನರು ಸಾವನ್ನಪ್ಪುತ್ತಿರುವ ಈ ದಿನಗಳಲ್ಲಿ ಸಾಮಾನ್ಯ ಆಹಾರಗಳನ್ನೇ ತಿನ್ನುವುದು ಕಷ್ಟ. ಹೀಗಿರುವಾಗ ಜನರು ಕೀಟಗಳ ಮೊಟ್ಟೆಯನ್ನೆಲ್ಲಾ ತಿನ್ನಲು ಧೈರ್ಯ ತೋರಿರುವುದು ವಿಚಿತ್ರಾನೇ ಸರಿ. 

Follow Us:
Download App:
  • android
  • ios