ತುಂಬಾ ಬೆಳ್ಳಗಿದ್ದೀಯಮ್ಮಾ, ಕೆಲ್ಸ ಕೊಡೋಕಾಗಲ್ಲ, ಟೀಮ್‌ನಲ್ಲಿ ತೊಂದ್ರೆಯಾಗುತ್ತೆ ಎಂದ ಕಂಪೆನಿ!
ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ಅದೆಷ್ಟೋ ಮಂದಿ ನಮ್ಮ ನಡುವೆಯಿದ್ದಾರೆ. ವಿದ್ಯಾರ್ಹತೆ, ಅನುಭವದ ಕೊರತೆ ಮೊದಲಾದ ಕಾರಣದಿಂದ ಕೆಲ್ಸ ಸಿಗದೆ ಕಷ್ಟಪಡುತ್ತಾರೆ. ಆದರೆ ಬೆಳ್ಳಗಿರೋ ಕಾರಣಕ್ಕೆ ಕೆಲ್ಸ ಸಿಗದಿರೋ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ? ಕೇಳೋಕೆ ವಿಚಿತ್ರವೆನಿಸಿದರೂ ಇಂಥಹದ್ದೊಂದು ಘಟನೆ ನಡೆದಿದೆ.
ಯಾವುದೇ ಕಾರಣವಿರಲಿ ಉದ್ಯೋಗ ನಿರಾಕರಣೆಯನ್ನು ಎದುರಿಸುವುದು ನಿರಾಶಾದಾಯಕ ಅನುಭವವಾಗಿದೆ. ಅತ್ಯಂತ ಸಾಮಾನ್ಯ ಮತ್ತು ನಿರಾಶಾದಾಯಕ ಅಂಶವೆಂದರೆ ಕಂಪನಿಯ ಪ್ರತಿಕ್ರಿಯೆಗಾಗಿ ಕಾಯುವಿಕೆ, ಇದು ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜಾಬ್ ಕೊಡದಿರಲು ಅವರು ನೀಡುವ ಕಾರಣಗಳು ಮತ್ತಷ್ಟು ಬೇಸರಕ್ಕೆ ಕಾರಣವಾಗುತ್ತದೆ. ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ಅದೆಷ್ಟೋ ಮಂದಿ ನಮ್ಮ ನಡುವೆಯಿದ್ದಾರೆ. ವಿದ್ಯಾರ್ಹತೆ, ಅನುಭವದ ಕೊರತೆ ಮೊದಲಾದ ಕಾರಣದಿಂದ ಕೆಲ್ಸ ಸಿಗದೆ ಕಷ್ಟಪಡುತ್ತಾರೆ. ಆದರೆ ಬೆಳ್ಳಗಿರೋ ಕಾರಣಕ್ಕೆ ಕೆಲ್ಸ ಸಿಗದಿರೋ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ? ಕೇಳೋಕೆ ವಿಚಿತ್ರವೆನಿಸಿದರೂ ಇಂಥಹದ್ದೊಂದು ಘಟನೆ ನಡೆದಿದೆ.
ಸಾಮಾನ್ಯವಾಗಿ ವಿದ್ಯಾರ್ಹತೆ (Education), ಅನುಭವದ ಕೊರತೆ, ಸ್ಕಿಲ್ ಕಡಿಮೆಯಿದೆ, ಭಾಷೆ ಸರಿಯಾಗಿ ಗೊತ್ತಿಲ್ಲ ಅನ್ನೋ ಕಾರಣಕ್ಕೆ ಕೆಲವು ಕಂಪೆನಿಗಳು ಕೆಲಸ ಕೊಡುವುದಿಲ್ಲ. ಆದರೆ ಇಲ್ಲೊಂದು ಕಂಪೆನಿ ಹುಡುಗಿ ಸಿಕ್ಕಾಪಟ್ಟೆ ಬೆಳ್ಳಗಿದ್ದಾಳೆ (Too Fair) ಅನ್ನೋ ಕಾರಣಕ್ಕೆ ಆಕೆಗೆ ಕೆಲಸ ಕೊಟ್ಟಿಲ್ಲ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ದೇಶ ಸುತ್ತೋಕೆ ಲಕ್ಷ ಲಕ್ಷ ಸಂಬಳ ಬರೋ ಲಿಂಕ್ಡ್‌ಇನ್ ಕೆಲಸ ತೊರೆದ ಯುವತಿ
ಬೆಳ್ಳಗಿನ ಮೈಬಣ್ಣದ ಕಾರಣದಿಂದ ಜಾಬ್ ನೀಡಲು ನಿರಾಕರಿಸಿದ ಕಂಪನಿ
ಯುವತಿಯೊಬ್ಬಳು ತನ್ನ ಬೆಳ್ಳಗಿನ ಮೈಬಣ್ಣದ ಕಾರಣದಿಂದ ಕಂಪನಿ ಜಾಬ್ ನೀಡುವುದಕ್ಕೆ ತಿರಸ್ಕರಿಸಿದೆ ಎಂದು ಹೇಳಿಕೊಂಡಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಬೆಂಗಳೂರು ಮೂಲದ ಯುವತಿ (Girl) ಪ್ರತೀಕ್ಷಾ ಜಿಚ್ಕರ್ ಅವರು ತಮಗೆ ಇತ್ತೀಚಿಗೆ ಕಂಪೆನಿಯೊಂದು ಜಾಬ್ ನೀಡಲು ನಿರಾಕರಿಸಿದ ಹಿಂದಿನ ಕಾರಣ ಹಂಚಿಕೊಂಡಿದ್ದಾರೆ. 'ನನ್ನ ಚರ್ಮದ ಟೋನ್ ಹೆಚ್ಚು ಬೆಳ್ಳಗೆ ಇರುವ ಕಾರಣ ಅಂತಿಮ ಸುತ್ತಿನ ಸಂದರ್ಶನದಲ್ಲಿ (Interview) ನನ್ನನ್ನು ತಿರಸ್ಕರಿಸಲಾಯಿತು' ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ. ಕಂಪನಿಯಿಂದ ಸ್ವೀಕರಿಸಿದ ನಿರಾಕರಣೆ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ.
ಕಂಪನಿಯ ಹೆಸರನ್ನು ಬಹಿರಂಗಪಡಿಸದ ಈ ಸ್ಕ್ರೀನ್‌ಶಾಟ್‌ನಲ್ಲಿ, 'ಹಾಯ್ ಪ್ರತೀಕ್ಷಾ, ನಮ್ಮೊಂದಿಗೆ ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು. ದುರದೃಷ್ಟವಶಾತ್, ನೀವು ಈ ಉದ್ಯೋಗಕ್ಕೆ (Job) ಆಯ್ಕೆಯಾಗಿಲ್ಲ. ನಿಮ್ಮ ಪ್ರೊಫೈಲ್ ಉತ್ತಮವಾಗಿ ಮತ್ತು ಆಕರ್ಷಕವಾಗಿದೆ. ಆದರೆ ನಾವು ಎಲ್ಲರಿಗೂ ಸಮಾನ ಅವಕಾಶವನ್ನು ನಂಬುತ್ತೇವೆ. ನಿಮ್ಮ ಸ್ಕಿನ್ ಟೋನ್ ಪ್ರಸ್ತುತ ತಂಡಕ್ಕೆ ಸ್ವಲ್ಪ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ನಾವು ನಮ್ಮ ಆಂತರಿಕ ತಂಡದಲ್ಲಿ ಭಿನ್ನಾಭಿಪ್ರಾಯಗಳನ್ನು ಬಯಸುವುದಿಲ್ಲ. ಮತ್ತು ನಿಮಗೆ ಕೆಲಸ ನೀಡದಿರಲು ನಾವು ನಿರ್ಧರಿಸಿದ್ದೇವೆ' ಎಂದು ಮೇಲ್ ಮಾಡಲಾಗಿದೆ. ಸದ್ಯ ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
Google 5 ವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ಕೆಲಸ ಕಳ್ಕೊಂಡ ಭಾರತೀಯ ಮಹಿಳೆ: ಲಿಂಕ್ಡ್ಇನ್ ಪೋಸ್ಟ್ ವೈರಲ್..
ಸೋಷಿಯಲ್ ಮೀಡಿಯಾದಲ್ಲಿ ಈ ಲಿಂಕ್ಡ್ ಇನ್ ಪೋಸ್ಟ್ ಹಲವರ ಗಮನ ಸೆಳೆಯಿತು. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಸ್ಕಿನ್ ಟೋನ್ ಯಾಕೆ ಮ್ಯಾಟರ್ ಆಗುತ್ತದೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ನಾವಿನ್ನೂ ಎಂಥಾ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಸ್ಕಿನ್ ಬಣ್ಣದಿಂದ ಜನರನ್ನು ಅಳೆಯುವುದನ್ನು ಬಿಟ್ಟುಬಿಡಿ' ಎಂದಿದ್ದಾರೆ. ಮತ್ತೆ ಕೆಲವರು, 'ಈ ಭೂಮಿಯಲ್ಲಿ ಇಂಥಾ ಕೆಟ್ಟ ಮನಸ್ಥಿತಿಯವರೂ ವಾಸಿಸುತ್ತಾರೆಯೇ' ಎಂದು ಪ್ರಶ್ನಿಸಿದ್ದಾರೆ. ಇನ್ನಷ್ಟು ಮಂದಿ ಪೋಸ್ಟ್ ಪ್ರಚಾರದ ಸ್ಟಂಟ್ ಆಗಿರಬಹುದು ಎಂದು ಹೇಳುತ್ತಿದ್ದಾರೆ.
'ಉತ್ತಮ ಜೀವನಕ್ಕೆ ಶ್ರೇಷ್ಠ ಉದಾಹರಣೆ...' ದಿನಸಿ ಅಂಗಡಿ ಇಟ್ಟುಕೊಂಡ ಮಾವನ ಬಗ್ಗೆ ಕೋಟ್ಯಧೀಶ ಅಳಿಯನ ಮಾತು!