ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ ಸೌಂದರ್ಯದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಹೊಳೆಯುವ ತ್ವಚೆಯ ಹಿಂದಿನ ರಹಸ್ಯವೇನು? ಸಾರಾ ತೆಂಡೂಲ್ಕರ್ ಅವರ ಸ್ಕಿನ್ ಕೇರ್ ರೂಟಿನ್ ಇಲ್ಲಿದೆ.
ಸಾರಾ ತೆಂಡೂಲ್ಕರ್ 10-15 ಹಂತಗಳ ರೂಟಿನ್ ಬದಲು, ಸಿಂಪಲ್ ಮತ್ತು ಕಾನ್ಶಿಯಸ್ ಸ್ಕಿನ್‌ಕೇರ್‌ನಲ್ಲಿ ನಂಬಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸ್ಕಿನ್ ಕೇರ್ ರೂಟಿನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ನ್ಯೂಟ್ರಿಷನಿಸ್ಟ್ & ಬಯೋಮೆಡಿಕಲ್ ಸೈಂಟಿಸ್ಟ್ ಆಗಿರುವ ಸಾರಾ, ತಮ್ಮ ಮೊಡವೆ ಪೀಡಿತ ತ್ವಚೆ (acne-prone skin) ಮತ್ತು ಪಿಸಿಓಎಸ್ (PCOS) ಸಂಬಂಧಿತ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ನನ್ನದು ಸೂಕ್ಷ್ಮ ಮತ್ತು ಮೊಡವೆ ಪೀಡಿತ ತ್ವಚೆ. ಹಾಗಾಗಿ ನಾನು ಬಹಳ ಯೋಚಿಸಿ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ತ್ವಚೆಯ ಸಮತೋಲನ ಕಾಪಾಡಲು ಜೆಂಟಲ್ ಕ್ಲೆನ್ಸರ್, ಹಗುರವಾದ ಮಾಯಿಶ್ಚರೈಸರ್ ಬಳಸುತ್ತೇನೆ"
ತುಂಬಾ ಪ್ರಾಡಕ್ಟ್‌ಗಳನ್ನು ಬಳಸುವುದಕ್ಕಿಂತ, ಬೇಸಿಕ್ ಆರೈಕೆಯನ್ನು ಸರಿಯಾಗಿ ಮತ್ತು ನಿರಂತರವಾಗಿ ಮಾಡುವುದು ಉತ್ತಮ. ತಾವು ಸನ್ ಪ್ರೊಟೆಕ್ಷನ್‌ಗೆ ವಿಶೇಷ ಗಮನ ಕೊಡುವುದಾಗಿ ಹೇಳಿದ್ದಾರೆ.
ಬೆಳಗ್ಗೆ ಸಾರಾ ತ್ವಚೆಯ ಮೇಲೆ ಹಗುರವಾಗಿರುವ ಮತ್ತು ಬಿಸಿಲು, ಮಾಲಿನ್ಯದಿಂದ ರಕ್ಷಣೆ ನೀಡುವ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ರಾತ್ರಿ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತಾರೆ.
"ಮೊದಮೊದಲು ಹೆಚ್ಚು ಪ್ರಾಡಕ್ಟ್ ಬಳಸಿದರೆ ಬೇಗ ರಿಸಲ್ಟ್ ಸಿಗುತ್ತೆ ಅಂದುಕೊಂಡಿದ್ದೆ. ಆದರೆ, ನನ್ನ ಸ್ಕಿನ್ ಬ್ಯಾರಿಯರ್ ಅನ್ನು ಅರ್ಥಮಾಡಿಕೊಂಡು ಅದಕ್ಕೆ ಗೌರವ ಕೊಟ್ಟಾಗ, ನಿಜವಾದ ಬದಲಾವಣೆ ಕಂಡಿತು" ಎಂದಿರುವ ಸಾರಾ.
PCOS ನಿಂದಾಗಿ ತನಗೆ ಎಣ್ಣೆಯುಕ್ತ ತ್ವಚೆ ಮತ್ತು ಬ್ರೇಕ್‌ಔಟ್‌ಗಳ (ಮೊಡವೆ) ಸಮಸ್ಯೆ ಎದುರಿಸಬೇಕಾಯಿತು ಎಂದು ಸಾರಾ ಹೇಳಿದ್ದಾರೆ. ಪಿಸಿಓಎಸ್‌ನ ಪ್ರಮುಖ ಲಕ್ಷಣಗಳಲ್ಲಿ ಮೊಡವೆಯೂ ಒಂದು ಎನ್ನುತ್ತಾರೆ ಅವರು.
ಉತ್ತಮ ತ್ವಚೆಗೆ ಸಾಕಷ್ಟು ನೀರು ಕುಡಿಯುವುದು, ಚೆನ್ನಾಗಿ ನಿದ್ದೆ ಮಾಡುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಬಹಳ ಮುಖ್ಯ. ಅವರು ಸಂಸ್ಕರಿಸಿದ, ಹೆಚ್ಚು ಕರಿದ ಮತ್ತು ಸಕ್ಕರೆಭರಿತ ಆಹಾರಗಳಿಂದ ದೂರವಿರುತ್ತಾರೆ.
ಸಾರಾ ತೆಂಡೂಲ್ಕರ್ ಅವರ ಸ್ಕಿನ್‌ಕೇರ್ ಫಿಲಾಸಫಿ ಸ್ಪಷ್ಟವಾಗಿದೆ: ಕಡಿಮೆ ಪ್ರಾಡಕ್ಟ್‌ಗಳು, ಹೆಚ್ಚು ತಿಳುವಳಿಕೆ ಮತ್ತು ಕಂಟ್ಯೂನಿಟಿ. ಇದೇ ಅವರ ನ್ಯಾಚುರಲ್ ಗ್ಲೋ ಹಿಂದಿರುವ ನಿಜವಾದ ರಹಸ್ಯ.