Google 5 ವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ಕೆಲಸ ಕಳ್ಕೊಂಡ ಭಾರತೀಯ ಮಹಿಳೆ: ಲಿಂಕ್ಡ್ಇನ್ ಪೋಸ್ಟ್ ವೈರಲ್..
ಆಕೃತಿ ವಾಲಿಯಾ ಇತ್ತೀಚೆಗಷ್ಟೇ ಗೂಗಲ್ ಸಂಸ್ಥೆಯಲ್ಲಿ 5 ವರ್ಷಗಳನ್ನು ಪೂರೈಸಿದ್ದರು ಹಾಗೂ ಗೂಗಲ್‌ವರ್ಸರಿಯನ್ನು ಆಚರಿಸಿಕೊಂಡಿದ್ದರು. ಆದರೆ, ಈ ಸಂಭ್ರಮ, ಸಂತಸ ಕೊನೆಗೊಂಡಿದ್ದು, ಮೀಟಿಂಗ್‌ಗೆ ಸಿದ್ಧವಾಗುತ್ತಿದ್ದ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸಂದೇಶದ ಮೂಲಕ ಕೆಲಸದಿಂದ ತೆಗೆಯಲಾಗಿದೆ.
ನವದೆಹಲಿ (ಫೆಬ್ರವರಿ 27, 2023): ಇತ್ತೀಚೆಗೆ ಹಲವು ಜಾಗತಿಕ ಟೆಕ್ ಕಂಪನಿಗಳು ಕೆಲಸ ನೇಮಿಸಿಕೊಳ್ಳುವುದಕ್ಕಿಂತ ಕೆಲಸದಿಂದ ತೆಗೆಯುವುದೇ ಹೆಚ್ಚಾಗುತ್ತಿದೆ. ಈ ಪೈಕಿ ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳಲ್ಲಿ ಒಂದಾದ ಗೂಗಲ್ ಸಹ ಒಂದು. ಗೂಗಲ್ ವಿಶ್ವಾದ್ಯಂತ 12,000 ಉದ್ಯೋಗಿಗಳನ್ನು ವಜಾ ಮಾಡಿದ್ದು, ಇದರಲ್ಲಿ ಭಾರತೀಯರೂ ಸೇರಿದ್ದಾರೆ. ಗುರುಗ್ರಾಮ ಮೂಲದ ಗೂಗಲ್ ಕ್ಲೌಡ್ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಮಹಿಳೆ ಆಕೃತಿ ವಾಲಿಯಾ ಸಹ ಈ ಪೈಕಿ ಒಬ್ಬರು.
ಆಕೃತಿ ವಾಲಿಯಾ ಇತ್ತೀಚೆಗಷ್ಟೇ ಗೂಗಲ್ ಸಂಸ್ಥೆಯಲ್ಲಿ 5 ವರ್ಷಗಳನ್ನು ಪೂರೈಸಿದ್ದರು ಹಾಗೂ ಗೂಗಲ್‌ವರ್ಸರಿಯನ್ನು ಆಚರಿಸಿಕೊಂಡಿದ್ದರು. ಆದರೆ, ಈ ಸಂಭ್ರಮ, ಸಂತಸ ಕೊನೆಗೊಂಡಿದ್ದು, ಮೀಟಿಂಗ್‌ಗೆ ಸಿದ್ಧವಾಗುತ್ತಿದ್ದ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸಂದೇಶದ ಮೂಲಕ ಕೆಲಸದಿಂದ ತೆಗೆಯಲಾಗಿದೆ. ನಂತರ, ಲ್ಯಾಪ್‌ಟಾಪ್‌ನಲ್ಲಿ ಆಕೆಯ ಪ್ರವೇಶ ನಿರ್ಬಂಧ ಮಾಡಲಾಗಿದ್ದು, ಇದರಿಂದ ಭಾರತೀಯ ಮಹಿಳೆ ದಿಗ್ಭ್ರಮೆಗೊಂಡಿದ್ದಾಳೆ.
ಇದನ್ನು ಓದಿ: ಮನುಷ್ಯರು ಮಾತ್ರವಲ್ಲ, ರೋಬೋಟ್‌ಗಳನ್ನೂ ಕೆಲಸದಿಂದ ಕಿತ್ತು ಹಾಕಿದ ಗೂಗಲ್..!
ಈ ಬಗ್ಗೆ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಆಕೃತಿ ವಾಲಿಯಾ ಪೋಸ್ಟ್ ಮಾಡಿರುವುದು ಹೀಗೆ.. "ಕೆಲವೇ ದಿನಗಳ ಹಿಂದೆ ನಾನು ನನ್ನ 5-ವರ್ಷದ ಗೂಗಲ್‌ವರ್ಸರಿಯನ್ನು ಆಚರಿಸಿದಾಗ, ಇದು ನನ್ನ ಕೊನೆಯದು ಎಂದು ನನಗೆ ತಿಳಿದಿರಲಿಲ್ಲ. ‘’"ನಾನು ಕೇವಲ 10 ನಿಮಿಷಗಳ ಅಂತರದಲ್ಲಿ ನನ್ನ ಸಭೆಗೆ ತಯಾರಾಗುತ್ತಿರುವಾಗ, ನನ್ನ ಸಿಸ್ಟಂನಲ್ಲಿ "ಪ್ರವೇಶ ನಿರಾಕರಿಸಲಾಗಿದೆ" ಎಂಬ ಸೂಚನೆಯು ನನ್ನನ್ನು ನಿಶ್ಚೇಷ್ಟಿತಗೊಳಿಸಿತು. ನನ್ನ ಆರಂಭಿಕ ಪ್ರತಿಕ್ರಿಯೆಯು ನಿರಾಕರಣೆಯಾಗಿದ್ದು, ನಂತರ "ನಾನೇಕೆ" ಎಂದುಕೊಂಡೆ ಎಂಬುದನ್ನೂ ಅವರು ಬರೆದುಕೊಂಡಿದ್ದಾರೆ.
ತಮ್ಮ ಸುದೀರ್ಘವಾದ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಅವರು ‘’ಗೂಗಲ್‌ನಲ್ಲಿ ಲಸ ಮಾಡುವುದು ಯಾವಾಗಲೂ ನನ್ನ ಕನಸು ನನಸಾದ ಕ್ಷಣವಾಗಿತ್ತು ಮತ್ತು ಇಲ್ಲಿ ಕಳೆದ ಪ್ರತಿ ದಿನ ನಾನು ಊಹಿಸಿದ್ದಕ್ಕಿಂತ ಉತ್ತಮವಾಗಿದೆ. ನಾನು ನನ್ನ ಲಿಂಕ್ಡ್‌ಇನ್ ಪ್ರೊಫೈಲ್ ಮತ್ತು ರೆಸ್ಯೂಮ್ ಅನ್ನು ನವೀಕರಿಸಿದಾಗ, ಈ ಸಂಸ್ಥೆಯು ನನ್ನ ಜೀವನಕ್ಕೆ ಎಷ್ಟು ಕೊಡುಗೆ ನೀಡಿದೆ ಎಂದು ನಾನು ಅರಿತುಕೊಂಡೆ. ವೈಯಕ್ತಿಕವಾಗಿ ಮಾತ್ರವಲ್ಲದೆ ವೃತ್ತಿಪರವಾಗಿಯೂ ಸಹ.
ಇದನ್ನೂ ಓದಿ: ಪುಣೆ ಗೂಗಲ್ ಕಚೇರಿಗೆ ಬೆದರಿಕೆ ಕರೆ: ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ವಶಕ್ಕೆ
ನಾನು ಗೂಗಲ್‌ನಲ್ಲಿ ಕಳೆದ 5 ವರ್ಷಗಳಲ್ಲಿ ನನ್ನ ವೃತ್ತಿಜೀವನದ ಅತ್ಯಮೂಲ್ಯ ಭಾಗವನ್ನು ದಾಟಿದ್ದು, ವೈವಿಧ್ಯಮಯ ಪಾತ್ರಗಳಲ್ಲಿ ಕೌಶಲ್ಯ ಮತ್ತು ಅನುಭವವನ್ನು ನಿರ್ಮಿಸುವುದು, ಕೆಲವು ಅದ್ಭುತವಾದ ಗೂಗ್ಲರ್‌ಗಳೊಂದಿಗೆ ಕೆಲಸ ಮಾಡಿದೆ ಎಂದೂ ಟೆಕ್ ದೈತ್ಯ ಸಂಸ್ಥೆಯಲ್ಲಿ ಕೆಲಸ ಮಾಡಿದ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ,
ತಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳನ್ನು ಹೊಗಳಿದರು.
ಇನ್ನು, ಮಾಜಿ ಗೂಗಲ್ ಉದ್ಯೋಗಿ ತನ್ನ ಲಿಂಕ್ಡ್‌ಇನ್ ನೆಟ್‌ವರ್ಕ್‌ನೊಂದಿಗೆ ತನಗೆ ಸೂಕ್ತವಾದ ಉದ್ಯೋಗ ನೀಡಲು ಸಹ ವಿನಂತಿಸಿಕೊಂಡಿದ್ದಾಳೆ.
ಇದನ್ನೂ ಓದಿ: ಚಾಟ್ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ
ರೋಬೋಟ್‌ಗಳನ್ನೂ ವಜಾ ಮಾಡಿದ ಗೂಗಲ್..!
ಗೂಗಲ್ ಮನುಷ್ಯರನ್ನು ಮಾತ್ರವಲ್ಲ ರೋಬೋಟ್‌ಗಳನ್ನು ಸಹ ಸಂಸ್ಥೆಯಿಂದ ಕಿತ್ತು ಹಾಕಿರುವುದು ವರದಿಯಾಗಿದೆ. ಈ ಲೇಆಫ್ ಮನುಷ್ಯರ ಮೇಲೆ ಮಾತ್ರವಲ್ಲ ರೋಬೋಟ್‌ಗಳ ಮೇಲೂ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಆಲ್ಫಬೆಟ್‌ನ ಹೊಸ ಅಂಗಸಂಸ್ಥೆಯಾದ ಎವರಿಡೇ ರೋಬೋಟ್ಸ್, ಕೆಫೆಟೇರಿಯಾ ಟೇಬಲ್‌ಗಳು, ಪ್ರತ್ಯೇಕ ಕಸ ಮತ್ತು ತೆರೆದ ಬಾಗಿಲುಗಳನ್ನು ಸ್ವಚ್ಛಗೊಳಿಸಲು ನೂರಕ್ಕೂ ಹೆಚ್ಚು ಚಕ್ರಗಳುಳ್ಳ, ಒಂದು-ಸಶಸ್ತ್ರ ರೋಬೋಟ್‌ಗಳಿಗೆ ತರಬೇತಿ ನೀಡಿದ ತಂಡವಾಗಿದೆ. ಪೋಷಕ ಕಂಪನಿಯನ್ನು ಆವರಿಸುವ ಬಜೆಟ್ ಕಡಿತದ ಭಾಗವಾಗಿ ಗೂಗಲ್ ಈ ತಂಡವನ್ನು ಮುಚ್ಚಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಹಿಳಾ ಬಾಸ್ ನನ್ನನ್ನು ತಬ್ಬಿಕೊಂಡಿದ್ದನ್ನು ವಿರೋಧಿಸಿದ್ದಕ್ಕೆ ವಜಾ: ಗೂಗಲ್ ಮಾಜಿ ಉದ್ಯೋಗಿಯಿಂದ ಕೇಸ್