ದೇಶ ಸುತ್ತೋಕೆ ಲಕ್ಷ ಲಕ್ಷ ಸಂಬಳ ಬರೋ ಲಿಂಕ್ಡ್‌ಇನ್‌ ಕೆಲಸ ತೊರೆದ ಯುವತಿ

ದೇಶ ಸುತ್ತು ಕೋಶ ಓದು ಅಂತಾರೆ..ಹೊಸ ಹೊಸ ಜಾಗಗಳನ್ನು ನೋಡುವುದು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ಹೀಗಾಗಿ ಹೆಚ್ಚಿನವರು ದುಡ್ಡು ಉಳಿಸಿ ಹೊಸ ಹೊಸ ಪ್ಲೇಸ್‌ಗೆ ವಿಸಿಟ್ ಮಾಡ್ತಾರೆ. ಆದ್ರೆ ಇಲ್ಲೊಬ್ಬಾಕೆ ಮಾತ್ರ ವರ್ಲ್ಡ್‌ ಟ್ರಾವೆಲ್ ಮಾಡಲೆಂದೇ ಲಿಂಕ್ಡ್‌ಇನ್‌ ಕೆಲಸವನ್ನೇ ತೊರೆದಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Woman Leaves Her Job At LinkedIn To Travel The World, Post Is Viral Vin

ನವದೆಹಲಿ: ಹೊಸ ಸ್ಥಳ, ಹೊಸ ಜನ, ಹೊಸ ಅನುಭವ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಹೀಗಾಗಿಯೇ ಜನರು ಹೊಸ ಹೊಸ ಜಾಗಗಳಿಗೆ ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಕೆಲವರು ಟ್ರಾವೆಲ್ ಮಾಡುವುದನ್ನೇ ತಮ್ಮ ಜೀವನದ ಗುರಿಯಾಗಿರಿಸಿಕೊಳ್ಳುತ್ತಾರೆ. ಒಬ್ಬಂಟಿಯಾಗಿ ಟ್ರಾವೆಲ್ ಮಾಡುವುದು ಕೆಲವರ ಹಾಬಿಯಾಗಿರುತ್ತದೆ. ಮತ್ತೆ ಕೆಲವರು ಗ್ರೂಪ್‌ನಲ್ಲಿ ಟ್ರಾವೆಲ್ ಮಾಡುತ್ತಾರೆ. ಹೀಗೆ ಟ್ರಾವೆಲ್ ಮಾಡಲೆಂದೇ ಜಾಬ್ ಮಾಡಿ ಹಣ ಸೇವಿಂಗ್ಸ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಟ್ರಾವೆಲ್ ಮಾಡಲೆಂದೇ ಲಿಂಕ್ಡ್‌ಇನ್‌ನ ತನ್ನ ಕೆಲಸಕ್ಕೆ ರಿಸೈನ್ ಮಾಡಿದ್ದಾಳೆ.

ದೆಹಲಿ ಮೂಲದ ಯುವತಿ (Girl) ವರ್ಲ್ಡ್ ಟೂರ್ ಮಾಡಲು 2022ರಲ್ಲಿ ತನ್ನ ಕೆಲಸವನ್ನು ತೊರೆದಳು ಮತ್ತು ಒಂದು ವರ್ಷದ ನಂತರ ತನ್ನ ನಿರ್ಧಾರವನ್ನು ಪ್ರಕಟಿಸಿದಳು. ಇದೀಗ ಕಂಟೆಂಟ್ ಕ್ರಿಯೇಟರ್ ಆಗಿರುವ ಆಕಾಂಕ್ಷಾ ಮೋಂಗಾ ಮೇ 17ರಂದು ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾಳೆ. 'ನಾನು ಕಳೆದ ವರ್ಷ ಇದೇ ದಿನಾಂಕದಂದು ಲಿಂಕ್ಡ್‌ಇನ್‌ನಲ್ಲಿ ನನ್ನ ಕೆಲಸವನ್ನು (work) ತೊರೆದಿದ್ದೇನೆ. .ನಾನು ರಿಸೈನ್ ಮಾಡುವಾಗ ನನ್ನ ಇನ್ನು ಒಂದು ವರ್ಷದಲ್ಲೇ ಪೂರ್ಣ ಸಮಯ ಪ್ರಪಂಚವನ್ನು ಪ್ರಯಾಣಿಸುವುದಾಗಿ (Travel) ನನಗೆ ನಾನೇ ಭರವಸೆ ನೀಡಿದ್ದೆ. ಈಗ ಆ ಭರವಸೆಯನ್ನು ಈಡೇರಿಸಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾಳೆ.

ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇಬೇಕಾದ ವಿಶ್ವದ ಏಳು ಅದ್ಭುತಗಳು

ಆರು ತಿಂಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ ಆಕಾಂಕ್ಷಾ
ಆಕಾಂಕ್ಷಾ ಮೋಂಗಾ ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದಳು ಮತ್ತು Instagram ನಲ್ಲಿ ಸುಮಾರು 2,50,000 ಅನುಯಾಯಿಗಳನ್ನು ಹೊಂದಿದ್ದಾಳೆ. ಆಕಾಂಕ್ಷಾ, ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಆಕೆ ಕ್ರಿಯೇಟರ್ ಮ್ಯಾನೇಜರ್ ಅಸೋಸಿಯೇಟ್ ಆಗಿ ಜನವರಿಯಿಂದ ಜೂನ್ 2022 ರವರೆಗೆ ಆರು ತಿಂಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದರು.

ಮತ್ತೊಂದು ಟ್ವೀಟ್‌ನಲ್ಲಿ, ಮೊಂಗಾ ಒಂದು ವರ್ಷದ ನಂತರ ತನ್ನ ಪ್ರಯಾಣವನ್ನು ಹೋಲಿಸಿದ್ದಾರೆ. '1 ವರ್ಷದ ನಂತರ: 250K TO 700K+ ಫಾಲೋವರ್ಸ್‌, 12 ದೇಶಗಳಲ್ಲಿ ಪ್ರಯಾಣಿಸಿದೆ (ಅವರಲ್ಲಿ 8 ಸೋಲೋ), 6 ಜನರ ತಂಡವನ್ನು ನಿರ್ಮಿಸಿದೆ, TravelAMore ಅನ್ನು ನಿರ್ಮಿಸಿದೆ!, 300+ ವೀಡಿಯೊಗಳನ್ನು ಚಿತ್ರೀಕರಿಸಿದೆ ಮತ್ತು ಪೋಸ್ಟ್ ಮಾಡಿದೆ, 30+ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದೆ' ಎಂದು ಬರೆದುಕೊಂಡಿದ್ದಾಳೆ.

ದಿನಸಿ ಅಂಗಡಿ ನಡೆಸಿ, ಹಣ ಉಳಿಸಿ 11 ದೇಶ ಸುತ್ತಿ ಬಂದ ಕೇರಳದ ಮಹಿಳೆ

ಯುವತಿಯ ಪೋಸ್ಟ್‌ಗೆ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆ
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಾಗಿನಿಂದ, ಅವರ ಪೋಸ್ಟ್ 1.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಸಂಗ್ರಹಿಸಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ನಿಮ್ಮ ಉತ್ಸಾಹವನ್ನು (Encourage) ನಿಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಿ. ಜೀವನ (Life)ದಲ್ಲಿ ಯಶಸ್ವಿಯಾಗುತ್ತೀರಿ' ಎಂದು ಒಬ್ಬ ಬಳಕೆದಾರರು ಹೇಳಿದರು. ಇನ್ನೊಬ್ಬರು 'ನೀವು ಲಕ್ಷಾಂತರ ಜನರನ್ನು ಅವರ ಆಸಕ್ತಿಯನ್ನು ಅನುಸರಿಸಲು ಪ್ರೇರೇಪಿಸಿದ್ದೀರಿ. ನಿಮಗೆ ದೊಡ್ಡ ಗೌರವ ಸಲ್ಲುತ್ತದೆ' ಎಂದರು. ಮತ್ತೊಬ್ಬ ವ್ಯಕ್ತಿ, 'ವರ್ಲ್ಡ್ ಟ್ರಾವೆಲ್ ಮಾಡಲು ಕೆಲಸಕ್ಕೆ ರಿಸೈನ್‌ ಮಾಡಿರುವ ನಿಮ್ಮ ನಿರ್ಧಾರ ಕಠಿಣವಾಗಿದೆ, ನಂಬಲು ಕಷ್ಟವಾಗುತ್ತಿದೆ' ಎಂದು ತಿಳಿಸಿದ್ದಾರೆ.

ಆದರೆ, ಆಕೆಯ ನಿರ್ಧಾರದ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. 'ಉಳ್ಳವರು ಈ ರೀತಿ ಮಾಡಿದರೆ ಸಾಧನೆ ಎನ್ನುತ್ತಾರೆ. ಕಷ್ಟಪಟ್ಟು ದುಡಿಯುವ ಜನರನ್ನು ಸಾಧಕರಲ್ಲದವರಂತೆ ಕಾಣುತ್ತಾರೆ' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬರು 'ನೆಮ್ಮದಿಯಿಂದ ಬದುಕುವುದೇ ಹಲವರ ಕನಸು, ದೇಶ ಸುತ್ತುವುದು ಎಲ್ಲಿಂದ ಬಂತು' ಎಂದು ಪ್ರಶ್ನಿಸಿದ್ದಾರೆ. ಅದೇನೆ ಇರ್ಲಿ, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿರೋದಂತೂ ನಿಜ.

Latest Videos
Follow Us:
Download App:
  • android
  • ios