ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡ್ತಿದ್ದ ಗರ್ಭಿಣಿಯೊಬ್ಬರನ್ನು ಮಹಿಳೆಯೊಬ್ಬರು ಮನೆಗೆ ಕರೆದು ಮಡಿಲು ತುಂಬಿ ಪ್ರೀತಿಯಿಂದ ಸತ್ಕರಿಸಿದ್ದಾರೆ. ನಿರೀಕ್ಷಿಸದೇ ಸಿಕ್ಕ ಈ ಪ್ರೀತ್ಯಾದರಗಳನ್ನು ಕಂಡು ಗರ್ಭಿಣಿ ಭಾವುಕರಾಗಿದ್ದಾರೆ. ಅಂಬುಜಾ ಗೌಡ ಎಂಬುವವರು ಇದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡ್ತಿದ್ದ ಗರ್ಭಿಣಿಯೊಬ್ಬರನ್ನು ಮಹಿಳೆಯೊಬ್ಬರು ಮನೆಗೆ ಕರೆದು ಮಡಿಲು ತುಂಬಿ ಪ್ರೀತಿಯಿಂದ ಸತ್ಕರಿಸಿದ್ದಾರೆ. ನಿರೀಕ್ಷಿಸದೇ ಸಿಕ್ಕ ಈ ಪ್ರೀತ್ಯಾದರಗಳನ್ನು ಕಂಡು ಗರ್ಭಿಣಿ ಭಾವುಕರಾಗಿದ್ದಾರೆ. ಅಂಬುಜಾ ಗೌಡ ಎಂಬುವವರು ಇದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಇಂದಿನ ನನ್ನ ರಾಯರ ಸೇವೆ ಇದು, ನಮ್ಮ ಮನೆ ಹತ್ತಿರ ಒಬ್ಬರು ಏಳು ತಿಂಗಳ ಗರ್ಭಿಣಿ, ಹೊಟ್ಟೆಪಾಡಿಗಾಗಿ ಗೋಮಾತೆ ಹಿಡಿದುಕೊಂಡು ಬಂದರು. ರಾಘಪ್ಪ ಅವರಿಗೆ ಅನುಗ್ರಹ ಮಾಡಿ ಈ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರು. ಕಟುಕರ ಸಂತೆ ತಾಯಿ, ನಾನು ನಿನ್ನ ನೋವನ್ನು ಅನುಭವಿಸಿರುವೆ, ಅನ್ನಕ್ಕಾಗಿ ಜೀವನಕ್ಕಾಗಿ, ನಿನ್ನ ನೋವು ನನಗೆ ಕರುಳು ಚುರುಕ್ಕೆನಿಸಿತು. ಹಣೆಬರ ಸರಿ ಇಲ್ಲ ಅಂದಮೇಲೆ ಭೂಮಿ ಮೇಲೆ ಕಳಿಸಬೇಡಿ ಹೆಣ್ಣು ಮಕ್ಕಳನ್ನು ರಾಘಪ್ಪ ಕಾಪಾಡಿ ತಬ್ಬಲಿಗಳನ್ನು ಎಂದು ಬರೆದು ಅಂಬುಜಾ (Ambhuja) ಅವರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾವುದೇ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಮಾಡಿಲ್ಲ, ಜನರಲ್ಲಿ ಮಾನವೀಯ ಗುಣ ಉತ್ತೇಜಿಸಲು ಈ ಕಾರ್ಯವನ್ನು ವಿಡಿಯೋ ಮಾಡಿದ್ದಾಗಿ ಅವರು ಬರೆದುಕೊಂಡಿದ್ದಾರೆ. ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
Viral Photo : ಬಿಸಿಲಿನಲ್ಲಿ ರಿಕ್ಷಾವಾಲಾನಿಗೆ ಛತ್ರಿ ಹಿಡಿದು ಮಾನವೀಯತೆ ಮೆರೆದ ಟೀಚರ್
ಅನೇಕರು ಮಹಿಳೆಯ ಈ ಮಾನವೀಯ (Humanity) ಕಾರ್ಯವನ್ನು ಕೊಂಡಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಬಹಳ ಸಂತೋಷವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಗರ್ಭಿಣಿ (pragnent)ಮಹಿಳೆಯೊಬ್ಬರು ಕೋಲೆ ಬಸವನ ಕರೆದುಕೊಂಡು ಬಂದು ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಆಕೆಯನ್ನು ಮನೆಗೆ ಕರೆದು ಪ್ರಿತ್ಯಾದರಗಳಿಂದ ಸತ್ಕರಿಸಿದ್ದಾರೆ. ಹೆಗಲಿಗೊಂದು ಬ್ಯಾಗ್ ಜೊತೆ ಕೊಲೆ ಬಸವನನ್ನು ಕರೆದುಕೊಂಡು ಆಕೆ ರಸ್ತೆಯಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆಕೆಯನ್ನು ಮನೆಗೆ ಕರೆದ ಅಂಬುಜಾ ಅವರು ಆಕೆಯನ್ನು ಚೇರೊಂದರ ಮೇಲೆ ಕುಳ್ಳಿರಿಸಿ ಆಕೆಯ ಕೆನ್ನೆಗೆ ಅರಿಶಿಣ ಕುಂಕಮ (Arashina kumkuma) ಹಚ್ಚಿ ಹಣೆಗೆ ಕುಂಕುಮವಿಟ್ಟು ತಲೆಗೆ ಮಲ್ಲಿಗೆ ಹೂ ಮೂಡಿಸಿ ಸತ್ಕರಿಸುತ್ತಾರೆ. ಬಳಿಕ ಕೈಗೆ ಬಳೆಗಳನ್ನು ತುಂಬಿ ಹಣ್ಣು ಹಂಪಲುಗಳಿರುವ ಬಾಗಿನವನ್ನು ಆಕೆಯ ಮಡಿಲಿಗೆ ಹಾಕಿ ಮಡಿಲು ತುಂಬಿ ಆಕೆಯನ್ನು ಆಶೀರ್ವದಿಸಿ ಕಳುಹಿಸಿ ಕೊಡುತ್ತಾರೆ. ನಿರೀಕ್ಷಿಸದೇ ಸಿಕ್ಕ ಈ ಪ್ರೀತಿ ಗೌರವವನ್ನು ಕಂಡು ಆ ಬಡ ಮಹಿಳೆ ಭಾವುಕಳಾಗಿದ್ದಾಳೆ.
ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಮಹಿಳೆಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮಾನವೀಯ ಗುಣ ವಿಶಾಲ ಹೃದಯ ಎಲ್ಲರಿಗೂ ಇರುವುದಿಲ್ಲ. ತಾವು ಮಾಡಿದ ಕಾರ್ಯ ಮನಸ್ಸಿಗೆ ತುಂಬಾ ಸಂತೋಷವಾಯಿತು.ಕಣ್ಣು ತುಂಬಿ ಬಂದವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಗುರುರಾಯರು ನಿಮ್ಮ ಕೈಯಲ್ಲಿ ಈ ಕಾರ್ಯ ಮಾಡಿಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಸಹಾಯಕರ ಮೇಲೆ ನಿಮ್ಮ ಕರುಣೆ ಸದಾ ಇರಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಸ್ತೆಬದಿ ಇದ್ದ ನಿಶ್ಯಕ್ತ ವೃದ್ಧನಿಗೆ ನೀರು ಕುಡಿಸಿದ ಪುಟಾಣಿ: ವಿಡಿಯೋ ವೈರಲ್
ಬದುಕಿನಲ್ಲಿ ಎಲ್ಲರ ಹಣೆಬರಹ ಒಂದೇ ರೀತಿ ಇರುವುದಿಲ್ಲ, ಒಬ್ಬರು ತುತ್ತು ಅನ್ನಕ್ಕೆ ಕಷ್ಟಪಡುವವರಾದರೆ ಮತ್ತೆ ಕೆಲವರು ಒಂದು ಹೊತ್ತಿನ ಊಟಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾ ಬಿಂದಾಸ್ ಜೀವನ ನಡೆಸುವವರಾಗಿರುತ್ತಾರೆ. ಆದರೆ ಹಂಚಿ ತಿನ್ನುವುದರಲ್ಲಿ ಸುಖವಿದೆ ಎಂಬ ಮಾತಿನಂತೆ ಬಡವ ಅಸಹಾಯಕರನ್ನು ನಿಕೃಷ್ಟವಾಗಿ ಕಾಣದೇ ಅವರನ್ನು ಮನುಷ್ಯರಂತೆ ಕಂಡು ಮನುಷ್ಯತ್ವ ತೋರಿದರೆ ಅದಕ್ಕಿಂತ ದೊಡ್ಡ ಮಾನವೀಯತೆ ಬೇರೆ ಇಲ್ಲ ಅಲ್ಲವೇ.