Viral Photo : ಬಿಸಿಲಿನಲ್ಲಿ ರಿಕ್ಷಾವಾಲಾನಿಗೆ ಛತ್ರಿ ಹಿಡಿದು ಮಾನವೀಯತೆ ಮೆರೆದ ಟೀಚರ್

ಈಗಿನ ಸ್ವಾರ್ಥ ಜಗತ್ತಿನಲ್ಲೂ ಮಾನವೀಯತೆ ಮೆರೆಯುವ ಜನರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಇಂಥ ಫೋಟೋಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ಫೋಟೋ ಸುದ್ದಿ ಮಾಡಿದೆ. ಮಹಿಳೆಯ ಮಾನವೀಯತೆ ನೆಟ್ಟಿಗರ ಮನಸ್ಸು ಗೆದ್ದಿದೆ.
 

There Is No Religion Greater Than Humanity

ಬಿಸಿಲ ಧಗೆ ಈಗ ಹೆಚ್ಚಾಗಿದೆ. ಬಿಸಿಲು 40 ಡಿಗ್ರಿ ತಲುಪಿದೆ.  ಬಿಸಿಲೇ ಇರಲಿ.. ಮಳೆಯೇ ಇರಲಿ ಹೊಟ್ಟೆ, ಬಟ್ಟೆಗೆ ಜನರು ಕೆಲಸ ಮಾಡ್ಲೇಬೇಕು. ಉರಿವ ಬಿಸಿಲಿನಲ್ಲಿ ಕೆಲಸ ಮಾಡುವವರ ಸಂಖ್ಯೆ ಸಾಕಷ್ಟಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಆಟೋ,  ಚಾಲಕರಿಗೆ ಬಿಸಿಲಿನಿಂದ ರಕ್ಷಣೆ ನೀಡುತ್ತದೆ. ಆದ್ರೆ ಉತ್ತರ ಭಾರತದಲ್ಲಿ ಸೈಕಲ್ ರಿಕ್ಷಾ ಸಂಖ್ಯೆ ಹೆಚ್ಚಿದೆ. ಕೆಲವರು ಜೀವನ ಸಾಗಿಸಲು ಸೈಕಲ್ ರಿಕ್ಷಾವನ್ನು ಆಶ್ರಯಿಸಿದ್ದಾರೆ. ಈಗಿನ ದಿನಗಳಲ್ಲಿ ಇದನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯಿದೆ. ಆದ್ರೂ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಆಟೋ ರಿಕ್ಷಾ ಓಡೋದನ್ನು ನೀವು ನೋಡ್ಬಹುದು. 

ಒಂದು ಕಡೆ ಸೈಕಲ್ (Cycle) ಪೆಡಲ್ ತುಳಿಯಬೇಕು. ಇನ್ನೊಂದು ಕಡೆ ಬಿಸಿಲಿನ ಝಳವನ್ನು ಸಹಿಸಿಕೊಂಡು, ಪ್ರಯಾಣಿಕರನ್ನು ಅವರ ಗಮ್ಯಸ್ಥಳಕ್ಕೆ ತಲುಪಿಸಬೇಕು. ಇದು ಸುಲಭದ ಕೆಲಸವಲ್ಲ. ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ನೆರಳು ಸಿಕ್ಕಿದ್ರೂ ಹಿತವೆನ್ನಿಸುತ್ತದೆ. ಕೆಲ ದಿನಗಳ ಹಿಂದೆ ಟ್ರಾಫಿಕ್ (Traffic) ಪೊಲೀಸರಿಗೆ ನೀರಿನ ಬಾಟಲ್ ನೀಡಿ ವ್ಯಕ್ತೊಯೊಬ್ಬರು ಸುದ್ದಿಯಾಗಿದ್ದರು. ಈಗ ಬಿಸಿಲಿನಲ್ಲಿ ರಿಕ್ಷಾ (Rickshaw) ಓಡಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಪ್ರಯಾಣಿಕರೊಬ್ಬರು ಛತ್ರಿ ಹಿಡಿದು ಮಾನವೀಯತೆ ಮೆರೆದಿದ್ದಾರೆ. ಜನರಲ್ಲಿ ಈಗ್ಲೂ ಕರುಣೆಯಿದೆ ಎಂಬುದು ಈ ಫೋಟೋದಿಂದ ಸ್ಪಷ್ಟವಾಗ್ತಿದೆ.  ಸಾಮಾಜಿಕ ತಾಣದಲ್ಲಿ ಫೋಟೋ (Photo) ವೈರಲ್ ಆಗಿದೆ. ಸೈಕಲ್ ರಿಕ್ಷಾ ಓಡಿಸುತ್ತಿರುವ ವ್ಯಕ್ತಿಗೆ ಮಹಿಳೆ ಛತ್ರಿ ಹಿಡಿದಿದ್ದು, ನೆಟ್ಟಿಗರಲ್ಲಿ ಸಂತಸ ಮೂಡಿಸಿದೆ. ಮಹಿಳೆ ಮಾನವೀಯತೆಯನ್ನು ಜನರು ಹೊಗಳಿದ್ದಾರೆ.  

RELATIONSHIP TIPS: ನೀವು ಕೆಟ್ಟ ಅಮ್ಮನಾ, ಒಳ್ಳೆಯ ಅಮ್ಮನಾ? ಚೆಕ್‌ ಮಾಡ್ಕೊಳಿ

ಎಲ್ಲಿಂದ ಬಂದಿದೆ ಈ ಫೋಟೋ ? : ಈ ಫೋಟೋ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಕಾಲಾ ಆಮ್ ಚೌರಾಹಾ ಎಂದು ಹೇಳಲಾಗುತ್ತಿದೆ. ಫೋಟೋದಲ್ಲಿ, ಮಹಿಳೆಯೊಬ್ಬರು ರಿಕ್ಷಾದಲ್ಲಿ ಕುಳಿತಿದ್ದಾರೆ. ಚಾಲಕ ರಿಕ್ಷಾ ಓಡಿಸುತ್ತಿದ್ದಾನೆ. ಬಿಸಿಲಿನ ಝಳದಿಂದಾಗಿ ಮಹಿಳೆಯೂ ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡಿದ್ದಾರೆ. ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿಯನ್ನು ತೆರೆದಿಟ್ಟಿದ್ದಾಳೆ.  ಖುಷಿಯ ವಿಷ್ಯವೆಂದ್ರೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ತನಗೆ ಛತ್ರಿ ಹಿಡಿಯದೆ ಆಕೆ ರಿಕ್ಷಾ ಚಾಲಕನಿಗೆ ಛತ್ರಿ ಹಿಡಿದಿದ್ದಾಳೆ.  ಸೈಕಲ್ ರಿಕ್ಷಾ ಚಾಲಕನಿಗೆ ಮಹಿಳೆ ಛತ್ರಿ ಹಿಡಿದಿರುವ ಫೋಟೋವನ್ನು  ಫೋಟೋ ಜರ್ನಲಿಸ್ಟ್ ಹಿತೇಶ್ ಗುಪ್ತಾ ಸೆರೆ ಹಿಡಿದಿದ್ದಾರೆ. ಅದನ್ನು ಫೇಸ್ಬುಕ್ ನ ಗೀತಾ ಶಾಕ್ಯ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬುಲಂದ್‌ಶಹರ್‌ ಮಾನವೀಯತೆಯ ಝಲಕ್. ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದಿಲ್ಲ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ.

ಹೆಣ್ಮಕ್ಕಳೇ ಕೇಳಿ… ತಪ್ಪಿಯೂ ಈ 3 ವಿಷ್ಯಗಳನ್ನು ಬಾಯ್ ಫ್ರೆಂಡ್ ಜೊತೆ ಶೇರ್ ಮಾಡ್ಬೇಡಿ

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ :  ಫೇಸ್ಬುಕ್ ನ ಈ ಫೋಟೋವನ್ನು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 67ಕ್ಕಿಂತ ಹೆಚ್ಚು ಬಾರಿ ಫೋಟೋವನ್ನು ಶೇರ್ ಮಾಡಲಾಗಿದೆ. ಇದು ಮಾನವೀಯತೆಗೆ ಹಿಡಿದ ಕೈಗನ್ನಡಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಒಳ್ಳೆಯ ಕೆಲಸವೆಂದು ಶ್ಲಾಘಿಸಿದ್ದಾರೆ. ಮಹಿಳೆ ನಮ್ಮೆಲ್ಲರ ಹೃದಯ ಗೆದ್ದಿದ್ದಾರೆ ಎಂದು ಕೆಲವರು ಬರೆದಿದ್ದಾರೆ. ಮಹಿಳೆ ಕೆಲಸಕ್ಕೆ ಅನೇಕರು ಧನ್ಯವಾದ ಹೇಳಿ ವಂದಿಸಿದ್ದಾರೆ. 

ಸೈಕಲ್ ರಿಕ್ಷಾ ಚಾಲಕನಿಗೆ ಛತ್ರಿ (Umbrella) ಹಿಡಿದವರು ಯಾರು? :  ಫೋಟೋದಲ್ಲಿ ಛತ್ರಿ ಹಿಡಿದ ಮಹಿಳೆ ಹುಮಾ ಎನ್ನಲಾಗಿದೆ. ಆಕೆ ವೃತ್ತಿಯಲ್ಲಿ ಶಿಕ್ಷಕಿ ಎನ್ನಲಾಗಿದೆ. ಶಾಲೆ ಮುಗಿದ ಮೇಲೆ ಅವರು ಶಾಲೆಯಿಂದ ಮನೆಗೆ ಹೋಗ್ತಿದ್ದರು ಎನ್ನಲಾಗಿದೆ. ಸೈಕಲ್ ರಿಕ್ಷಾ ಏರಿದ ಮೇಲೆ, ರಿಕ್ಷಾ ಚಾಲಕನನ್ನು ಬಿಸಿಲಿನಿಂದ ರಕ್ಷಿಸಲು ಛತ್ರಿ ಹಿಡಿದಿದ್ದಾರೆ. ಅವರಿಗೆ ತಿಳಿಯದೆ ಈ ಫೋಟೋವನ್ನು ಛಾಯಾಗ್ರಾಹಕ ಸೆರೆ ಹಿಡಿದಿದ್ದಾರೆ.

Latest Videos
Follow Us:
Download App:
  • android
  • ios