ಗೂಗಲ್ ಜೆಮಿನಿ ಪ್ಲಸ್ ಎಐ ಟೂಲ್ ಒಂದು ವರ್ಷ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಒಂದು ವರ್ಷ ಕಾಲ ಯಾವುದೇ ರೀತಿಯ ಚಾರ್ಜಸ್ ಇರುವುದಿಲ್ಲ. ಒಂದು ಕಂಡೀಷನ್ ಮೂಲಕ ಈ ಉಚಿತ ಸೇವೆ ನೀಡಲಾಗುತ್ತಿದೆ.
ನವದೆಹಲಿ (ಆ.20) ಗೂಗಲ್‌ನ ಜೆಮಿನಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೂಲ್ ಎಲ್ಲರಿಗೂ ಉಚಿತವಿದೆ. ಆದರೆ ಇದರಲ್ಲಿ ಹಲವು ಫೀಚರ್‌ಗಳು ಜೆಮಿನಿ ಪ್ಲಸ್ ಸಬ್‌ಸ್ಕ್ರಿಪ್ಶನ್ ಮಾಡಿಕೊಳ್ಳಲು ಪಾವತಿ ಮಾಡಬೇಕು. ಇದೀಗ ಗೂಗಲ್ ಹೊಸ ಘೋಷಣೆ ಮಾಡಿದೆ ಜೆಮಿನಿ ಪ್ಲಸ್ ಎಐ ಟೂಲ್ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ಒಂದು ವರ್ಷಗಳ ಕಾಲ ಉಚಿತ ಜೆಮಿನಿ ಪ್ಲಸ್ ಟೂಲ್ ಬಳಕೆ ಮಾಡಬಹುದು. ಇದಕ್ಕೆ ಒಂದು ಕಂಡೀಷನ್ ಹಾಕಲಾಗಿದೆ. ಈ ಸಂಪೂರ್ಣ ಉಚಿತ ಜೆಮಿನಿ ಪ್ಲಸ್ ಟೂಲ್ ಪಡೆಯಲು ವಿದ್ಯಾರ್ಥಿಯಾಗಿರಬೇಕು. ಹೌದು, ವಿದ್ಯಾರ್ಥಿಗಳಿಗೆ ಗೂಗಲ್ ಜೆಮಿನಿ ಪ್ಲಸ್ ಉಚಿತವಾಗಿ ನೀಡಲಾಗುತ್ತಿದೆ.
ಜೆಮಿನಿ ಎಐನ ಎರಡು ಟೂಲ್ ಸಂಪೂರ್ಣ ಉಚಿತ
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕಲಿಕೆಗೆ ನೆರವಾಗಲು ಗೂಗಲ್ ಮಹತ್ವದ ಘೋಷಣೆ ಮಾಡಿದೆ. ಗೂಗಲ್ ಜೆಮಿನಿ ಪ್ಲಸ್, ಜೆಮಿನಿ ಸ್ಟಡಿ ಟೂಲ್ಸ್ ಸಂಪೂರ್ಣವಾಗಿ ಒಂದು ವರ್ಷ ಕಾಲ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹೈಟೆಕ್ ಎಐ ತಂತ್ರಜ್ಞಾನವನ್ನು ಉಚಿತವಾಗಿ ಬಳಸಿಕೊಳ್ಳಲು ಸಾಧ್ಯವಿದೆ.
ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಕೋಡಿಂಗ್ ಸೇರಿದಂತೆ ಶೈಕ್ಷಣಿಕ ಜಟಿಲ ಪಾಠಗಳನ್ನು ಸುಲಭವಾಗಿ ಕಲಿತುಕೊಳ್ಳಲು ಸಾಧ್ಯವಿದೆ. ಪರೀಕ್ಷೆ ಬೇಕಾಗ ಸಿದ್ಧತೆ ಮಾಡಿಕೊಳ್ಳಲು, ಪ್ರಾಜೆಕ್ಟ್, ಸಂಶೋಧನೆ, ಟ್ಯೂಶನ್ ಸೇರಿದಂತೆ ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳಿಗೆ ನರೆವಾಗಲಿದೆ. ಸಬ್‌ಸ್ಕ್ರಿಪ್ಶನ್ ಪಡೆಯಲು ಪಾವತಿ ಮಾಡಬೇಕಿದ್ದ ಈ ಪ್ರಮುಖ ಎರಡು ಟೂಲ್ ಇದೀಗ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗಲಿದೆ. ಇಡೀ ಪಠ್ಯ ಪುಸ್ತಕವನ್ನು ಸರಳವಾಗಿ ಸಾರಂಶ ನೀಡುವ ಸಾಮರ್ಥ್ಯ ಈ ಎಐ ಟೂಲ್‌ಗಳಿಗಿದೆ. ಪರೀಕ್ಷೆ ತಯಾರಿ ವೇಳೆ ಪ್ರಶ್ನೋತ್ತರ, ಉತ್ತರ ಸೇರಿದಂತ ಎಲ್ಲಾ ಮಾಹಿತಿಗಳನ್ನು ವಿಷಯಗಳಿಗೆ ತಕ್ಕಂತೆ ನೀಡಲಿದೆ.
ವಿದ್ಯಾರ್ಥಿಗಳು ಈ ಸೌಲಭ್ಯ ಪಡಯುವುದು ಹೇಗೆ?
ವಿದ್ಯಾರ್ಥಿಗಳು ಈ ಉಚಿತ ಗೂಗಲ್ ಟೂಲ್ ಪಡೆಯುವುದು ಸುಲಭ. ವಿದ್ಯಾರ್ಥಿಗಳು ತಮ್ಮ ಅಧಿಕೃತ ಶಾಲಾ ಅಥವಾ ಕಾಲೇಜಿನ ಇಮೇಲ್ ಐಡಿ ಮೂಲಕ ಲಾಗಿನ ಆಗಬೇಕು. ಬಳಿಕ ವಿದ್ಯಾರ್ಥಿ ಕೋಟಾದಡಿ ಗೂಗಲ್ ಎಐ ಪ್ಲಸ್ ಟೂಲ್ ಸಕ್ರೀಯಗೊಳಿಸಬಹುದು. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನ ಸಂಪೂರ್ಣ ಬಳಕೆ ಮಾಡಲು ಸಾಧ್ಯವಾಗಲಿದೆ.


