ಇಷ್ಟು ದಿನ ಕಂಪನಿಗಳು ಎಐ ಕಾರಣದಿಂದ ಉದ್ಯೋಗಿಗಳನ್ನು ವಜಾ ಮಾಡುತ್ತಿತ್ತು. ಇದೀಗ ಕಂಪನಿಯ ಎಐ ಟೆಕ್ ಬಾಸ್ ಮಾನವ ಉದ್ಯೋಗಿಯನ್ನೇ ಕೆಲಸದಿಂದ ತೆಗೆದುಹಾಕಿದ ವಿಚಿತ್ರ ಘಟನೆ ನಡೆದಿದೆ. ಕಾರಣ 23 ದಿನದಲ್ಲಿ 17 ಬಾರಿ ಲೇಟ್.
ಸ್ಯಾನ್ ಫ್ರಾನ್ಸಿಸ್ಕೋ (ಆ.16) ಹಲವು ಕಂಪನಿಗಳು ಎಐ ತಂತ್ರಜ್ಞಾವನ್ನು ಅಳವಡಿಸಿಕೊಳ್ಳುತ್ತಿದೆ. ಎಲ್ಲೆಡೆ ಎಐ ಟೆಕ್ ಆವರಿಸಿಕೊಳ್ಳುತ್ತಿರುವ ಕಾರಣ ಉದ್ಯೋಗ ಕಡಿತಗಳು ನಡೆಯುತ್ತಿದೆ. ಹಲವರ ಕೆಲಸಗಳನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸುಲಭವಾಗಿ ಮಾಡುತ್ತಿದೆ. ಇದೀಗ ಅಚ್ಚರಿ ಘಟನೆಯೊಂದು ನಡೆದಿದೆ. ಹೀಗೆ ಇಡೀ ವ್ಯವಹಾರ ನೋಡಿಕೊಳ್ಳಲು ಎಐ ಬಾಸ್ ಇನ್‌ಸ್ಟಾಲ್ ಮಾಡಲಾಗಿತ್ತು. ಓರ್ವ ಮಾನವ ಉದ್ಯೋಗಿ 17 ಬಾರಿ ತಡವಾಗಿ ಕೆಲಸಕ್ಕೆ ಹಾಜರಾದ ಕಾರಣ ಕೆಲದಿಂದ ಕಿತ್ತು ಹಾಕಿದ ಘಟನೆ ಅಮೆರಿಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.
ಸೂಪರ್ ಮಾರ್ಕೆಟ್‌ನಲ್ಲಿ ಎಐ ಟೆಕ್, ಅಚ್ಚರಿ ಫಲಿತಾಂಶ
ಸ್ಯಾನ್ ಫ್ರಾನ್ಸಿಸ್ಕೋದ ಆ್ಯಂಡನ್ ಲ್ಯಾಬ್ಸ್ ಸ್ಥಾಪಿಸಿದ ಆ್ಯಂಡನ್ ಸೂಪರ್ ಮಾರ್ಕೆಟ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಕಾರಣ ಇಲ್ಲಿ ಜನರು ತಮಗೆ ಬೇಕಾದ ವಸ್ತುಗಳನ್ನು ಕಾರ್ಟ್ ಮೂಲಕ ತಂದು ಬಿಲ್ಲಿಂಗ್ ಕೌಂಟರ್ ಬಾಕ್ಸ್‌ನಲ್ಲಿ ಇಟ್ಟರೆ ಸಾಕು. ಎಐ ತಂತ್ರಜ್ಞಾನ ಎಲ್ಲಾ ವಸ್ತುಗಳ ಸ್ಕ್ಯಾನ್ ಮಾಡಿ ಬಿಲ್ ನೀಡಲಿದೆ. ನೀವು ಪಾವತಿಸಿದ ಬೆನ್ನಲ್ಲೇ ಕೆಲವೇ ಕ್ಷಣದಲ್ಲಿ ವಸ್ತುಗಳು ಪ್ಯಾಕ್ ಆಗಿ ಕೈಸೇರಲಿದೆ. ಸೂಪರ್ ಮಾರ್ಕೆಟ್ ಆಡಳಿತ, ಉತ್ಪನ್ನಗಳು, ಸ್ಟಾಕ್ಸ್, ಬೆಲೆ, ಸಿಬ್ಬಂದಿಗಳ ನೇಮಕಾತಿ, ವೇತನ, ಕಂಪನಿ ಲಾಭ ಸೇರಿದಂತೆ ಎಲ್ಲಾ ಲೆಕ್ಕಾಚಾರವನ್ನು ಲೂನಾ ಅನ್ನೋ ಎಐ ಎಜೆಂಟ್ ಮ್ಯಾನೇಜರ್‌ಗೆ ನೀಡಲಾಗಿತ್ತು. ಈ ಸೂಪರ್ ಮಾರ್ಕೆಟ್‌ಗಾಗಿ ಲೂನಾ ಎಐ ಎಜೆಂಟ್ ಕೋಡಿಂಗ್ ಮೂಲಕ ಅಭಿವೃದ್ಧಿಪಡಿಸಲಾಗಿತ್ತು. ಆ್ಯಂಥ್ರೋಪಿಕ್‌ನ ಕ್ಲಾಡ್ ಎಐ ಮಾದರಿ ಮೂಲಕ ಲೂನಾ ಎಐ ಅಭಿವೃದ್ಧಿಪಡಿಸಲಾಗಿತ್ತು.
ಎಐ ಮ್ಯಾನೇಜರ್‌ನಿಂದ ಕ್ರಮ
ಆ್ಯಂಡನ್ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾನವ ಉದ್ಯೋಗಿ ತನ್ನ ಶಿಫ್ಟ್‌ಗೆ ಹಲವು ಬಾರಿ ಲೇಟ್ ಆಗಿ ಆಗಮಿಸಿದ್ದಾನೆ. ಇದನ್ನು ಎಐ ಮ್ಯಾನೇಜರ್ ಲೂನಾಾ ಗಮನಿಸಿ ಇಮೇಲ್ ಮೂಲಕ ಸಂದೇಶ ನೀಡಿದೆ. 23 ದಿನಗಳ ಶಿಫ್ಟ್‌ನಲ್ಲಿ 17 ದಿನ ಲೇಟ್ ಆಗಿ ಆಗಮಿಸಿದ್ದಾನೆ. ಒಂದು ತಿಂಗಳು ನೋಡಿದ ಎಐ ಮ್ಯಾನೇಜರ್ ನೇರವಾಗಿ ಉದ್ಯೋಗಿಯನ್ನು ವಜಾ ಮಾಡಿದೆ. ಹಾಜರಾತಿ ಕುರಿತು ಮಾನವ ಆಡಳಿತ ಮೇಲ್ವಿಚಾರಕರು ಗಮನಹರಿಸುವಂತೆ ಲೂನಾ ಎಐ ಮ್ಯಾನೇಜರ್‌ಗೆ ಪ್ರಾಂಪ್ಟ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಸುದೀರ್ಘ ವರದಿ ನೀಡಿ ಉದ್ಯೋಗಿಯನ್ನು ಎಐ ಲೂನಾ ಬಾಸ್ ವಜಾ ಮಾಡಿದೆ.
ಉದ್ಯೋಗಿಯ ಪಂಚಿಂಗ್ ಸೇರಿದಂತೆ ಎಲ್ಲಾ ಇತರ ಸೌಲಭ್ಯಗಳನ್ನು ಲೂನಾ ಎಐ ಮ್ಯಾನೇಜರ್ ನಿರ್ಬಂಧಿಸಿದೆ. ಇದೇ ಮೊದಲ ಬಾರಿಗೆ ಎಐ ಒಂದು ಮಾನವನ್ನೇ ಉದ್ಯೋಗಿಂದ ವಜಾ ಮಾಡಿದೆ. ಹೀಗೇ ಹೋದರೆ ಕಂಪನಿ ಸಂಸ್ಥಾಪಕನನ್ನೇ ಹೊರಗೆ ಹಾಕಬಹುದು ಎಂದು ಹಲವರು ಟ್ರೋಲ್ ಮಾಡಿದ್ದಾರೆ.


