- Home
- Technology
- What's New
- Google Pixel Fold: ಭಾರತಕ್ಕೆ ಕಾಲಿಟ್ಟ ಗೂಗಲ್ ಫೋಲ್ಡಬಲ್ ಫೋನ್! ಹೊಸ ಫೀಚರ್ಸ್ ಏನು? ಬೆಲೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್
Google Pixel Fold: ಭಾರತಕ್ಕೆ ಕಾಲಿಟ್ಟ ಗೂಗಲ್ ಫೋಲ್ಡಬಲ್ ಫೋನ್! ಹೊಸ ಫೀಚರ್ಸ್ ಏನು? ಬೆಲೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್
ಗೂಗಲ್ ತನ್ನ ಹೊಸ ಪಿಕ್ಸೆಲ್ 11 ಸೀರಿಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಪಿಕ್ಸೆಲ್ 11 ಪ್ರೊ ಫೋಲ್ಡ್. ಇದರ ಬೆಲೆ 1,86,999 ರೂ. ಆಗಿದ್ದು, ಟೆನ್ಸರ್ G6 ಚಿಪ್ ಮತ್ತು ಜೆಮಿನಿ AI ತಂತ್ರಜ್ಞಾನವನ್ನು ಹೊಂದಿದೆ. ಈಗಾಗಲೇ ಪ್ರೀ-ಆರ್ಡರ್ ಕೂಡ ಶುರುವಾಗಿದೆ.

Google Pixel 11 Pro Fold Arrives in India
ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್(Google Pixel Fold) ಸೀರಿಸ್‌ನ ಹೊಸ ಫೋನ್‌ಗಳು ಕೊನೆಗೂ ಮಾರುಕಟ್ಟೆ ಲಗ್ಗೆ ಇಟ್ಟಿವೆ. ಗೂಗಲ್ ತನ್ನ ಪಿಕ್ಸೆಲ್ ಸೀರಿಸ್ ಅನ್ನು ಭಾರತದಲ್ಲಿ ವಿಸ್ತರಿಸಿದ್ದು ಹೊಸ ಪಿಕ್ಸೆಲ್ 11 ಸೀರಿಸ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದರಲ್ಲಿ ಪಿಕ್ಸೆಲ್ 11, ಪಿಕ್ಸೆಲ್ 11 ಪ್ರೊ, ಪಿಕ್ಸೆಲ್ 11 ಪ್ರೊ XL, ಮತ್ತು ಪಿಕ್ಸೆಲ್ 11 ಪ್ರೊ ಫೋಲ್ಡ್ ಜೊತೆಗೆ ಪಿಕ್ಸೆಲ್ ವಾಚ್ 5 ಕೂಡ ಲಾಂಚ್ ಆಗಿದೆ. ಗೂಗಲ್‌ನ ಈ ಹೊಸ ಫೋಲ್ಡಬಲ್ ಫೋನ್ ಬೆಲೆ 1,86,999 ರೂ. ಆಗಿದ್ದರೆ, ಪಿಕ್ಸೆಲ್ 11 ಆರಂಭಿಕ ಬೆಲೆ 89,999 ರೂ. ಇದೆ. ಈ ಫೋನ್, ಆಪಲ್‌ನ ಮುಂಬರುವ ಫೋಲ್ಡಬಲ್ ಐಫೋನ್ ಮತ್ತು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫೋಲ್ಡ್ 8 ಅಲ್ಟ್ರಾಗೆ ನೇರ ಸ್ಪರ್ಧೆ ನೀಡಲಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
Google Pixel 11 Pro Fold: ಭಾರತದಲ್ಲಿ ಬೆಲೆ ಎಷ್ಟು?
ಭಾರತದಲ್ಲಿ ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್(Google Pixel 11 Pro Fold) ಬೆಲೆ 1,86,999 ರೂ. ಇದೆ. ಇದರ ಜೊತೆಗೆ, ಕಂಪನಿಯು ತಿಂಗಳಿಗೆ 7,374.96 ರೂ.ಗಳಿಂದ ಶುರುವಾಗುವ EMI ಆಯ್ಕೆಯನ್ನೂ ನೀಡುತ್ತಿದೆ. ಗೂಗಲ್ ಸ್ಟೋರ್ ಪೇಜ್ ಪ್ರಕಾರ, ಈ ಫೋನ್ ಖರೀದಿಸುವಾಗ ಗ್ರಾಹಕರು 45,376 ರೂ. ತನಕ ರಿಯಾಯಿತಿ ಪಡೆಯಬಹುದು. ಇದರಲ್ಲಿ 9,000 ರೂ. ಎಕ್ಸ್‌ಚೇಂಜ್ ಬೋನಸ್, 10,000 ರೂ. ತನಕ ತಕ್ಷಣದ ರಿಯಾಯಿತಿ, ಮತ್ತು EMI ಮೇಲೆ 26,376 ರೂ. ತನಕ ಉಳಿತಾಯ ಸೇರಿದೆ. ಈ ಆಫರ್‌ಗಳಿಗೆ ನಿಬಂಧನೆಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್: ಪ್ರೀ-ಆರ್ಡರ್ ಮಾಡಿ!
ಪಿಕ್ಸೆಲ್ 11 ಪ್ರೊ ಫೋಲ್ಡ್ ಫೋನ್‌ಗಾಗಿ ಭಾರತದ ಗೂಗಲ್ ಸ್ಟೋರ್‌ನಲ್ಲಿ ಪ್ರೀ-ಆರ್ಡರ್‌ಗಳು ಶುರುವಾಗಿವೆ. ಗ್ರಾಹಕರು ಅಧಿಕೃತ ಗೂಗಲ್ ಸ್ಟೋರ್‌ಗೆ ಭೇಟಿ ನೀಡಿ, ಪಿಕ್ಸೆಲ್ 11 ಪ್ರೊ ಫೋಲ್ಡ್ ಆಯ್ಕೆ ಮಾಡಬಹುದು. ವಿವಿಧ ಪೇಮೆಂಟ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಮೂಲಕ ಬುಕ್ ಮಾಡಬಹುದುದಾಗಿದೆ. ಪಿಕ್ಸೆಲ್ 11, ಪಿಕ್ಸೆಲ್ 11 ಪ್ರೊ, ಮತ್ತು ಪಿಕ್ಸೆಲ್ 11 ಪ್ರೊ XL ಫೋನ್‌ಗಳು ಆಗಸ್ಟ್ 20 ರಂದು ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಆದರೆ, ಪ್ರೊ ಫೋಲ್ಡ್ ಬಿಡುಗಡೆ ದಿನಾಂಕ ಬೇರೆಯಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್: ಫೀಚರ್ಸ್, ಸ್ಪೆಸಿಫಿಕೇಷನ್ಸ್ ಏನು?
ಪಿಕ್ಸೆಲ್ 11 ಪ್ರೊ ಫೋಲ್ಡ್, ಗೂಗಲ್‌ನ ಹೊಸ ಟೆನ್ಸರ್ G6 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು ಮತ್ತು ಜೆಮಿನಿ AI ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮ ಗುಣಮಟ್ಟ ಬಳಸಿಕೊಳ್ಳಲಾಗಿದೆ. ಈ ಹೊಸ ಫೋನ್‌ಗಳು ದಿನನಿತ್ಯದ ಬಳಕೆಯಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚು ಸ್ಮಾರ್ಟ್ ಆದ AI ಪವರ್ಡ್ ಎಂದು ಗೂಗಲ್ ಹೇಳಿದೆ.
ಈ ಡಿವೈಸ್ 6.5-ಇಂಚಿನ OLED ಕವರ್ ಡಿಸ್‌ಪ್ಲೇ ಮತ್ತು 8-ಇಂಚಿನ OLED ಫೋಲ್ಡಿಂಗ್ ಡಿಸ್‌ಪ್ಲೇ ಹೊಂದಿದೆ. ಎರಡೂ ಸ್ಕ್ರೀನ್‌ಗಳು 1Hz ನಿಂದ 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತವೆ ಮತ್ತು 3,600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿವೆ. ಹೊರಗಿನ ಸ್ಕ್ರೀನ್ 1080 x 2342 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದರೆ, ಒಳಗಿನ ಡಿಸ್‌ಪ್ಲೇ 2076 x 2152 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.
Google Pixel 11 Pro Fold
ಪಿಕ್ಸೆಲ್ 11 ಪ್ರೊ ಫೋಲ್ಡ್, ಗೂಗಲ್‌ನ ಹೊಸ ಟೆನ್ಸರ್ G6 ಪ್ರೊಸೆಸರ್ ಮತ್ತು ಟೈಟಾನ್ M3 ಸೆಕ್ಯುರಿಟಿ ಚಿಪ್‌ನೊಂದಿಗೆ ಬರುತ್ತದೆ. ಈ ಫೋಲ್ಡಬಲ್ ಫೋನ್ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
