ಕಂಪನಿಯಲ್ಲಿ ಎಂಪ್ಲಾಯ್ಸ್ ಬಾಸ್ ಹೊರಗಿಟ್ಟು ವ್ಯಾಟ್ಸಾಪ್ ಗ್ರೂಪ್ ರಚಿಸಿದ್ದಾರೆ. ಸಕ್ರಿಯವಾಗಿದ್ದ ಈ ಗ್ರೂಪ್ ಕುರಿತು ಬಾಸ್‌ಗೆ ಗೊತ್ತಾಗಿದೆ. ಆತಂಕಗೊಂಡ ಬಾಸ್ ಕೊಟ್ಟ ಪ್ರತಿಕ್ರಿಯೆ ವೈರಲ್ ಆಗಿದೆ. ಅಷ್ಟಕ್ಕೂ ಬಾಸ್ ಹೇಳಿದ್ದೇನು?
ಪುಣೆ (ಸೆ.04) ಕಂಪನಿಗಳಲ್ಲಿ ಹಲವು ವ್ಯಾಟ್ಸಾಪ್ ಗ್ರೂಪ್‌ಗಳಿರುತ್ತದೆ. ಎಲ್ಲರೂ ಇರುವ ಕಾಮನ್ ಗ್ರೂಪ್, ಆಯಾ ಪ್ರಾಜೆಕ್ಟ್ ಗ್ರೂಪ್, ಆಯಾ ಡಿಪಾರ್ಟ್‌ಮೆಂಟ್ ಗ್ರೂಪ್, ಇನ್ನು ಉದ್ಯೋಗಿಗಳಲ್ಲೇ ಹಲವು ಗ್ರೂಪ್‌ಗಳಿರುತ್ತದೆ. ಹೀಗೆ ಪುಣೆಯ ಕಂಪನಿಯೊಂದರಲ್ಲಿ ಉದ್ಯೋಗಿಗಳು ಬಾಸ್ ಹೊರಗಿಟ್ಟು ವ್ಯಾಟ್ಸಾಪ್ ಗ್ರೂಪ್ ರಚಿಸಿದ್ದಾರೆ. ಈ ಗ್ರೂಪ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತು. ದಿಢೀರ್ ಆಗಿ ಬಾಸ್‌ಗೆ ಈ ರೀತಿಯ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಗೊತ್ತಾಗಿದೆ. ತನ್ನ ಹೊರಗಿಟ್ಟು ಗ್ರೂಪ್ ರಚಿಸಿದ್ದಾರೆ ಎಂದು ಗೊತ್ತಾದಾಗ ಬಾಸ್ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.
ಆತಂಕಗೊಂಡ ಬಾಸ್
ಕಂಪನಿಯ ಸಿಇಒ ಸಕ್ಷಮ್ ಗೌರ್ ಕೆಲಸಗಳನ್ನು ಸುಲಭವಾಗಿ ಮಾಡಲು, ಕಂಪನಿಯ ಅಪ್‌ಡೇಟ್‌ಗಾಗಿ ಗ್ರೂಪ್ ರಚಿಸಿದ್ದಾರೆ. ಇದರಲ್ಲಿ ಕಂಪನಿಯ ಎಲ್ಲರೂ ಇದ್ದಾರೆ. ಬಾಸ್ ಸೇರಿದಂತೆ ಎಲ್ಲರೂ ಈ ಗ್ರೂಪ್‌ನಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಉದ್ಯೋಗಿಗಳು ಹೊಸ ವ್ಯಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಬಾಸ್‌ಗೆ ತಿಳಿದಾಗ ಆತಂಕಗೊಂಡಿದ್ದಾರೆ. ತನ್ನ ವಿರುದ್ಧ ಚರ್ಚಿಸಲು, ಕಂಪನಿ ವಿರುದ್ದ ಸೇರಿದಂತೆ ಹಲವು ರೀತಿಯಲ್ಲಿ ಬಾಸ್ ಯೋಚನೆ ಮಾಡಿದ್ದಾರೆ. ಈ ಗ್ರೂಪ್‌ನ ಚಟುವಟಿಕೆ, ಉದ್ದೇಶ ಏನು ಅನ್ನೋ ಆತಂಕ ಬಾಸ್‌ಗೆ ಎದುರಾಗಿತ್ತು.
MMH X SAKSHAM ಗ್ರೂಪ್ ಉದ್ದೇಶ
ಆದರೆ ಈ ಗ್ರೂಪ್ ಆರಂಭಿಸಿದ್ದು ಬಾಸ್ ವಿರುದ್ಧ ಅಲ್ಲ, ಕೆಲಸಗಳು, ಪ್ರಾಜೆಕ್ಟ್‌ಗಳು ಅಪ್‌ಡೇಟ್, ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು, ಕೆಲಸದ ಕುರಿತು ಚರ್ಚಿಸಲು ಈ ಗ್ರೂಪ್ ಮಾಡಿದ್ದಾರೆ. ಈ ಗ್ರೂಪ್‌ನಲ್ಲಿ ಚರ್ಚಿಸಿ ಬಾಸ್‌ಗೆ ಹೇಳುತ್ತಾರೆ. ಇದು ಉತ್ತಮ ಗ್ರೂಪ್ ಎಂದು ಬಾಸ್ ಪ್ರತಿಕ್ರಿಯಿಸಿದ್ದಾರೆ. ಇದು ನಾಯಕತ್ವದ ಗುಣ. ಈ ರೀತಿ ಕೆಲಸ, ಜವಾಬ್ದಾರಿಗಳ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ವೇಳೆ ನಾನಿನಲ್ಲದ ಕಾರಣ ಕಾಲೆಳೆಯುವ ಪ್ರಯತ್ನಗಳು ನಡೆಯುವ ಸಾಧ್ಯತೆ ಇದೆ. ಅವೆಲ್ಲವೂ ಕಂಪನಿ, ಕೆಲಸದ ಭಾಗ ಎಂದು ಬಾಸ್ ಪ್ರತಿಕ್ರಿಯಿಸಿದ್ದಾರೆ.
ಮೋಸ ಹೋಗಿದ್ದೇನೆ ಎಂದು ಬೇಸರಗೊಂಡಿದ್ದೆ
ಕಂಪನಿಯ ಅಧಿಕೃತ ಒಂದು ಗ್ರೂಪ್‌ನಲ್ಲಿ ಕಂಪನಿಯ ಸಂಸ್ಥಾಪಕನಾಗಿ, ಸಿಇಒ ಆಗಿ ನಾನೇ ಇಲ್ಲ ಎಂದಾಗ ನಾನು ಮೋಸ ಹೋಗಿದ್ದೇನೆ. ನನ್ನ ಬಿಟ್ಟು ಗ್ರೂಪ್ ಮಾಡಿದಾಗ ಉದ್ಯೋಗಿಗಳು ನನ್ನ ವಿರುದ್ಧ ಇದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಇಂತಹ ಸಣ್ಣ ಸಣ್ಣ ಗ್ರೂಪ್ ಅನಿವಾರ್ಯ ಎಂದು ಬಾಸ್ ಹೇಳಿದ್ದಾರೆ. ಇದೇ ವೇಳೆ ಹಲವು ಕಾರ್ಪೋರೇಟ್ ಕಂಪನಿಗಳಿಗೂ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಕಂಪನಿಯಲ್ಲಿ ಕೆಲಸ, ಪ್ರಾಜೆಕ್ಟ್, ಜವಾಬ್ದಾರಿ ಕುರಿತು ರಚಿಸಿದ ಗ್ರೂಪ್‌ನಲ್ಲಿ ಬಾಸ್ ಇರಲೇಬೇಕು ಎಂದಲ್ಲ. ಬಾಸ್ ಇಲ್ಲದೇ ಗ್ರೂಪ್ ರಚಿಸಿದರೆ ತಂಡ ನಿರೀಕ್ಷಿತ ಕೆಲಸ ಮಾಡುತ್ತಿದೆ ಎಂಬ ಸಂಕೇತ ಎಂದಿದ್ದಾರೆ.

