ಗಂಡನ ಮನಸು ಗೆಲ್ಲೋದಕ್ಕೆ ಅಡುಗೆಗಿಂತ ಬೆಸ್ಟ್ ದಾರಿ ಇನ್ನೊಂದಿಲ್ಲ ಅಂತಿದ್ದಾಳೆ ಭೂಮಿಕಾ, ನೀವಿದನ್ನ ಒಪ್ತೀರ?

 ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಗಂಡನ ಮನಸು ಗೆಲ್ಲಲು ಅಡುಗೆಯೇ ಬೆಸ್ಟ್ ಅಂತಿದ್ದಾಳೆ. ಇದು ನಿಜನಾ, ನೀವಿದನ್ನು ಒಪ್ತೀರ?

zee kannada heroine bhumika indirectly teaching home making tips to apeksha

ಅಮೃತಧಾರೆ ಸೀರಿಯಲ್‌ನಲ್ಲಿ ಒಳ್ಳೆಯವರು ಮತ್ತಷ್ಟು ಒಳ್ಳೆಯವರಾಗ್ತಿದ್ದಾರೆ. ಅಂದರೆ ಗೌತಮ್ ದಿವಾನ್‌ಗೆ ತಮ್ಮ ಪಾರ್ಥ ಮತ್ತು ಅವನ ಹೆಂಡತಿ ನಡುವೆ ಏನೋ ಸರಿ ಇಲ್ಲ ಅನ್ನೋದು ಗೊತ್ತಾಗುತ್ತೆ. ಅದನ್ನು ಹೇಗಾದರೂ ಸರಿ ಮಾಡ್ಬೇಕು ಅಂತ ಇಬ್ಬರೂ ಯಾವುದೋ ಟ್ರಿಕ್ಸ್ ಪ್ಲೇ ಮಾಡೋದಕ್ಕೆ ಶುರು ಮಾಡಿದ್ದಾರೆ. ಗೌತಮ್ ಪಾರ್ಥನನ್ನು ಆಫೀಸಿಗೆ ಕರೆಸಿ ಆಫೀಸ್ ಕೆಲಸ ಕಲಿಸ್ತಾ ಇದ್ರೆ, ಆ ಕಡೆ ಭೂಮಿಕಾ ಇನ್‌ ಡೈರೆಕ್ಟಾಗಿ ತಂಗಿಯನ್ನು ಉತ್ತಮ ಗೃಹಿಣಿಯಾಗಿ ಮಾಡಲು ಹೊರಟಿದ್ದಾಳೆ. ಆದರೆ ಸದ್ಯ ಈ ಕೆಲಸಕ್ಕೆ ಶಕುಂತಲಾ ಅನ್ನೋ ವಿಲನ್ ಅಡ್ಡಿಯಾಗ್ತಿದ್ದಾಳೆ. ಈಗಾಗಲೇ ಅಪೇಕ್ಷನ ತಲೆ ಹಾಳು ಮಾಡಲು ಶುರು ಮಾಡಿರೋ ಅವಳು ಭೂಮಿಕಾಳ ಒಳ್ಳೆ ಪ್ರಯತ್ನಕ್ಕೆ ಅಡ್ಡಗೋಡೆ ಆಗುವ ಎಲ್ಲ ಲಕ್ಷಣ ಕಾಣ್ತಿದೆ. ಆದರೆ ಭೂಮಿಕಾ ಇಲ್ಲೊಂದು ವಿಚಾರ ಹೇಳಿದ್ದಾಳೆ. ಗಂಡನ ಮನಸು ಗೆಲ್ಲೋದಕ್ಕೆ ಅಡುಗೆಗಿಂತ ಬೆಸ್ಟ್ ದಾರಿ ಇಲ್ಲ ಅಂತ. ಇದು ನಮ್ಮ ಅಜ್ಜಿ, ಮುತ್ತಜ್ಜಿಯರ ಕಾಲದಿಂದ ಕೇಳ್ಕೊಂಡು ಬಂದಿರೋ ಮಾತು. ಆದರೆ ಈ ಮಾತು ನಿಜನಾ, ನಿಜಕ್ಕೂ ಒಳ್ಳೆ ಅಡುಗೆ ಮಾಡಿ ಗಂಡನ ಮನಸ್ಸನ್ನು ಗೆಲ್ಲಬಹುದಾ ಅನ್ನೋದು ಪ್ರಶ್ನೆ. ಇದಕ್ಕೆ ಉತ್ತರವೂ ಇಲ್ಲದಿಲ್ಲ. ಆದರೆ ಈ ಉತ್ತರ ನಿಮ್ಮ ಮನೆಯಲ್ಲೂ ಅಪ್ಲೈ ಆಗುತ್ತಾ, ವರ್ಕೌಟ್ ಆಗುತ್ತಾ ಅನ್ನೋದನ್ನು ನೀವೇ ಟೆಸ್ಟ್ ಮಾಡಬೇಕು.

ಇನ್ನು ಭೂಮಿಕಾ ಗಂಡ ಗೌತಮ್ ದಿವಾನ್ ಮಹಾ ತಿಂಡಿಪೋತ. ನಾನ್‌ವೆಜ್, ಸ್ವೀಟ್ ಅಂದರೆ ಗೌತಮ್‌ಗೆ ಫೇವರಿಟ್. ಪಕ್ಕಾ ಸಸ್ಯಾಹಾರಿ ಫ್ಯಾಮಿಲಿಯಿಂದ ಬಂದಿರೋ ಭೂಮಿಕಾಗೆ ಮೊದಲ ಚಾಲೆಂಜೇ ನಾನ್‌ವೆಚ್ ಅಡುಗೆ ಮಾಡೋದು. ಹೇಳಿ ಕೇಳಿ ಬಿಲಿಯನೇರ್ ಫ್ಯಾಮಿಲಿ. ಮನೆಯಲ್ಲೇ ಒಳ್ಳೊಳ್ಳೆ ಕುಕ್‌ಗಳಿದ್ದಾರೆ. ಆದರೆ ಭೂಮಿಕಾ ಬಂದ ಮೇಲೆ ಅವರಿಗೆಲ್ಲ ರೆಸ್ಟ್ ಸಿಕ್ಕಿದೆ. ಭೂಮಿಕಾನೇ ಎಲ್ಲ ಬಗೆಯ ಅಡುಗೆಯನ್ನು ತನ್ನ ಗಂಡನಿಗೂ ಮನೆಯವರಿಗೂ ಮಾಡಿ ಬಡಿಸ್ತಾಳೆ, ಮಧ್ಯಮ ವರ್ಗದಿಂದ ಬಂದಿರೋ ಈ ಹುಡುಗಿಗೆ ಅದ್ಭುತವಾಗಿ ಅಡುಗೆ ಮಾಡೋದು ಗೊತ್ತು. ಸೋ ಇವಳ ಗಂಡ ಗೌತಮ್ ಇವಳ ಒಳ್ಳೆತನಕ್ಕೆ, ಅಡುಗೆ ರುಚಿಗೆ, ಅದನ್ನೂ ಮೀರಿದ ಪ್ರೀತಿಗೆ ಮನ ಸೋತಿದ್ದಾನೆ.

ಇನ್ನೊಂದು ಕಡೆ ಅತ್ತೆ ಶಕುಂತಳಾ ಇವಳ ತಂಗಿ ಅಪೇಕ್ಷಾಳನ್ನು ಮನೆಯವರಿಗೆ ಯಾರಿಗೂ ಇಷ್ಟವಿಲ್ಲದಿದ್ದರೂ ತನ್ನ ಕೆಟ್ಟ ಉದ್ದೇಶ ಈಡೇರಿಸಿಕೊಳ್ಳೋದಕ್ಕೆ ಮದುವೆ ಮಾಡಿಸಿದ್ದಾಳೆ. ಮದುವೆ ಆದಮೇಲೆ ಸೊಸೆ ಅಪೇಕ್ಷಾಳನ್ನು ತನ್ನ ಕೈಗೊಂಬೆ ಮಾಡಿಕೊಳ್ಳಲು ಎಲ್ಲ ಬಗೆಯ ಸಂಚನ್ನೂ ನಡೆಸ್ತಿದ್ದಾಳೆ. ಅಪೇಕ್ಷಾ, ನಂಗೆ ಮನೆಯಲ್ಲಿ ಒಬ್ಬಳೇ ಬೋರ್‌ ಆಗುತ್ತದೆ ಎನ್ನುತ್ತಾಳೆ. 'ನನಗೂ ಮೊದಲು ಬೋರ್‌ ಆಗುತ್ತಿತ್ತು. ನನ್ನದೇ ಫ್ರೆಂಡ್‌ ಸರ್ಕಲ್‌ ಕ್ರಿಯೆಟ್‌ ಮಾಡಿದ್ದೇನೆ. ಕ್ಲಬ್‌ಗೆ ಹೋಗ್ತೀನಿ. ನೀನೂ ನನ್ನ ಜತೆ ಯಾಕೆ ಕ್ಲಬ್‌ಗೆ ಬರಬಾರದು' ಎಂದು ಶಕುಂತಲಾದೇವಿ ಹೇಳುತ್ತಾರೆ. 'ನೀನೀಗ ಮೊದಲಿನ ಅಪೇಕ್ಷಾ ಅಲ್ಲ. ನಿನಗೂ ಸ್ವಲ್ಪ ಚೇಂಜ್‌ ದೊರಕುತ್ತದೆ' ಎನ್ನುತ್ತಾರೆ. ಅದಕ್ಕೆ ಅಪೇಕ್ಷಾ 'ನನಗೆ ಅದೆಲ್ಲ ಅಭ್ಯಾಸ ಇಲ್ಲ ಅತ್ತೆ' ಎಂದರೂ ಕೇಳದೇ ಅಪೇಕ್ಷಾಳನ್ನು ಒತ್ತಾಯ ಮಾಡಿ ಕರೆದುಕೊಂಡು ಕ್ಲಬ್‌ಗೆ ಹೋಗುತ್ತಾಳೆ. ಅಲ್ಲಿ ಅಪೇಕ್ಷಾ ಹತ್ತು ಲಕ್ಷ ಕಳೆದುಕೊಳ್ಳೋ ಜೊತೆಗೆ ಆ ಬಗ್ಗೆ ಪಾಪಪ್ರಜ್ಞೆಯನ್ನೂ ಬೆಳೆಸಿಕೊಳ್ತಾಳೆ. ಅವಳ ಈ ಮೂವ್ ಗಂಡ ಪಾರ್ಥನಿಗೆ ಇಷ್ಟ ಆಗಿಲ್ಲ.

ಸದ್ಯ ಅಕ್ಕ ಭೂಮಿಕಾ ಅಡುಗೆಯಿಂದ ಗಂಡನ ಮನಸ್ಸು ಗೆಲ್ಲಬಹುದು ಅನ್ನೋ ಟಿಪ್ಸ್ ಕೊಟ್ಟಿದ್ದಾಳೆ. ಅದು ವರ್ಕೌಟ್ ಆಗೋ ಎಲ್ಲ ಸಾಧ್ಯತೆ ಕಾಣ್ತಿದೆ. ಮುಂದೆ ಅತ್ತಿಗೆ ತಂಗಿ ಅಪ್ಪಿ ಮತ್ತೆ ಒಳ್ಳೆಯವಳಾದ್ರೂ ಆಶ್ಚರ್ಯ ಇಲ್ಲ.

 

 

Latest Videos
Follow Us:
Download App:
  • android
  • ios