ಬಿಗ್‌ಬಾಸ್ ಗೆದ್ದ ನಂತರ ಗಿಲ್ಲಿ ಜನಪ್ರಿಯತೆ ಹೆಚ್ಚಾಗಿದ್ದು, ಅವರು ಹೋಗುವಲೆಲ್ಲಾ ಪೊಲೀಸ್ ಭದ್ರತೆ ಒದಗಿಸಲಾಗ್ತಿದೆ ಕಾರ್ಯಕ್ರಮವೊಂದರಲ್ಲಿ ರಕ್ಷಿಸುವಾಗ ಪೊಲೀಸರು ಗಿಲ್ಲಿಯನ್ನು ಕಳ್ಳನನ್ನು ಕರೆದೊಯ್ಯುವಂತೆ ಕರೆದೊಯ್ದಿದ್ದು, ಈ ವೇಳೆ ಗಿಲ್ಲಿ ನಟ ಮಾಡಿದ ಹಾಸ್ಯ ಪೊಲೀಸರನ್ನೇ ನಗುವಂತೆ ಮಾಡಿದೆ
ಬಿಗ್‌ಬಾಸ್ ಕನ್ನಡ 11ರಲ್ಲಿ ಗೆಲುವು ಸಾಧಿಸಿದ ಬಳಿಕ ಗಿಲ್ಲಿ ನಟನಿಗೆ ಎಲ್ಲಿಲ್ಲದ ಜನಪ್ರಿಯತೆ ಸಿಕ್ಕಿದ್ದು, ಈಗ ಅವರು ಎಲ್ಲಿ ಹೋದರು ಜನರು ಅವರನ್ನು ಮುತ್ತಿಕೊಂಡು ಬಿಡುತ್ತಾರೆ. ಸೆಲ್ಫಿಗಾಗಿ ಬೇಡಿಕೆ ಇಡುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದೇ ದೊಡ್ಡ ಸಾಹಸವಾಗಿದೆ. ಹೀಗಾಗಿ ಈಗ ಗಿಲ್ಲಿ ನಟ ಈಗ ಮೊದಲಿನಂತೆ ತನಗಿಷ್ಟ ಬಂದಂತೆ ಎದ್ದುಕೊಂಡು ಹೋಗುವ ಹಾಗಿಲ್ಲ. ಅವರೆಲ್ಲೇ ಹೋದರೂ ಈಗ ಕನಿಷ್ಠ ಜನರನ್ನು ನಿಯಂತ್ರಿಸುವುದಕ್ಕಾದರು ಅಲ್ಲಿ ಪೊಲೀಸರು ಇರಬೇಕಾಗುತ್ತದೆ. ಅಭಿಮಾನಿಗಳಿಂದ ಅವರನ್ನು ರಕ್ಷಿಸುವುದೇ ಈಗ ದೊಡ್ಡ ಸವಾಲು. ಹೀಗಿರುವಾಗ ಗಿಲ್ಲಿ ನಟ ತನ್ನ ರಕ್ಷಣೆಗೆ ಬಂದ ಪೊಲೀಸರ ಜೊತೆಗೂ ಹಾಸ್ಯ ಮಾಡಿದ್ದು, ಗಿಲ್ಲಿಯ ಹಾಸ್ಯ ಚಟಾಕಿಗೆ ಪೊಲೀಸರು ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.
ಸ್ಥಳದಲ್ಲೇ ಇನ್ಸ್ಟಾಂಟ್ ಹಾಸ್ಯ ಮಾಡುದ್ರಲ್ಲಿ ಗಿಲ್ಲಿ ನಂಬರ್ ವನ್, ಎಂಥಹಾ ಸಂದರ್ಭವನ್ನಾದರೂ ಹಾಸ್ಯಕ್ಕೆ ತಿರುಗಿಸುವ ಗಿಲ್ಲಿ ನಟ ತಮ್ಮ ಅಜ್ಜಿಯ ಸಾವಿನ ಸಮಯದಲ್ಲಿ ಮಾಡಿದ ಕಿತಾಪತಿಯ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಅವರ ಮಾತು ಕೇಳಿ ಜನ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಹಾಗೆಯೇ ಈಗ ಗಿಲ್ಲಿ ನಟ ತಮ್ಮ ಭದ್ರತೆಗೆ ಬಂದ ಪೊಲೀಸರ ಜೊತೆಗೂ ಹಾಸ್ಯ ಮಾಡಿದ್ದಾರೆ. ಜನರಿಂದ ಅವರನ್ನು ರಕ್ಷಿಸಿ ಕರೆದೊಯ್ಯುವುದಕ್ಕಾಗಿ ಗಿಲ್ಲಿ ನಟನನ್ನು ಪೊಲೀಸರು ಕರೆದೊಯ್ಯುತ್ತಿರುವಾಗ ಗಿಲ್ಲಿ ನಟ ಒಳ್ಳೆ ಕಳ್ಳರ ಕರೆದೊಯ್ಯುವ ತರ ಕರೆದೊಯ್ತಿದ್ದಿರಲ್ಲಾ, ನಾನೇನು ಕಳ್ಳ ನಾ ಎಂದು ಕೇಳಿದ್ದು, ಇದು ಪೊಲೀಸರು ನಗುವಂತೆ ಮಾಡಿದೆ.
ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿಯಿಂದ ತಪ್ಪಿಸಿಕೊಳ್ಳಲು ಪಿಜ್ಜಾ ಶಾಪ್‌ನ 2ನೇ ಮಹಡಿಯಿಂದ ಕೆಳಗೆ ಹಾರಿದ ಜೋಡಿ
ಈ ವೀಡಿಯೋ ವೈರಲ್ ಆಗಿದ್ದು, ಗಿಲ್ಲಿ ಬಗ್ಗೆ ಅರಿಯದ ಜನರಿಗೆ ಆ ವಿಡಿಯೋ ನೋಡಿದರೆ ಯಾರೋ ಕಳ್ಳರನ್ನು ಪೊಲೀಸರು ಎಳೆದೊಯ್ಯುತ್ತಿರುವಂತೆಯೇ ಕಾಣುತ್ತಿದೆ. ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಲು ಹೋದಾಗ ಈ ಘಟನೆ ನಡೆದಿದೆ. ಜನರನ್ನು ನಗಿಸುವ ಸಣ್ಣ ಅವಕಾಶವನ್ನು ಕೂಡ ಗಿಲ್ಲಿ ಮಿಸ್ ಮಾಡುಕೊಳ್ಳುವುದಿಲ್ಲ, ಅದು ಸಂದರ್ಭ ಯಾವುದೇ ಇರಲಿ, ಅಲ್ಲಿದ್ದವರ ಮೊಗದಲ್ಲಿ ಏನಾದರು ಮಾಡಿ ನಗು ತರಿಸುತ್ತಾರೆ ಗಿಲ್ಲಿ. ತಮ್ಮ ಸಿಂಪಲ್ ಲೈಫ್‌ಸ್ಟೈಲ್ ಕಾರಣ ಗಿಲ್ಲಿ ಬಹುತೇಕರಿಗೆ ಆತ ನಮ್ಮವರಲ್ಲೇ ಯಾರೋ ಒಬ್ಬ ಅನಿಸುತ್ತದೆ. ಹೀಗಾಗಿ ಗಿಲ್ಲಿ ಹೋದಲ್ಲಿ ಬಂದಲ್ಲಿ ಅವರಿಗೆ ಜನ ಮುಗಿ ಬೀಳುತ್ತಾರೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಗರ್ಭಪಾತದಿಂದ ಕೊನೆಯಾದ ಜೀವದ ಆತ್ಮಕ್ಕೂ ಮೋಕ್ಷಕ್ರಿಯೆ ಮಾಡ್ಬೇಕಾ?
ಗಿಲ್ಲಿ ಕಿರುತೆರೆಯ ಮೂಲಕ ಮಿಂಚ್ತಿರೋದು ಇದೇ ಮೊದಲೇನು ಅಲ್ಲ, ಆದರೂ ಕನ್ನಡ ಬಿಗ್ಬಾಸ್ ಅವರಿಗೆ ಹಿಂದೆಂದೂ ಕಾಣದ ಜನಪ್ರಿಯತೆ ತಂದು ಕೊಟ್ಟಿದ್ದು, ಜನ ನಮ್ಮ ಸುತ್ತ ಮುತ್ತಲೂ ನಡೆಯುವ ಕಾರ್ಯಕ್ರಮಗಳಿಗೆ ಅವರನ್ನು ಕರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಿಲ್ಲಿನಟನಿಗೆ ಊಹೆಗೂ ನಿಲುಕದ ಹೈಪ್ ಜನಪ್ರಿಯತೆ ನೀಡಿದೆ ಬಿಗ್ಬಾಸ್ ಕನ್ನಡ. ಸ್ವತಃ ಗಿಲ್ಲಿ ಕೂಡ ಕಾರ್ಯಕ್ರಮದಿಂದ ಹೊರಗೆ ಬಂದ ಮೇಲೆ ತಮ್ಮ ಫಾಲೋವರ್‌ಗಳ ಸಂಖ್ಯೆ ಹೆಚ್ಚಾಗಿರುವುದನ್ನು ನೋಡಿ ಹಾಗೂ ತನಗೆ ಸಿಕ್ಕ ಜನಪ್ರಿಯತೆ ನೋಡಿ ದಂಗಾಗಿ ಹೋಗಿದ್ದರು. ಇದು ನಿಜನಾ ಕನಸಾ ಎಂದು ನನಗೆ ಗೊತ್ತಾಯ್ತಿಲ್ಲ ಎಂದು ಅವರದೇ ಧಾಟಿಯಲ್ಲಿ ಹೇಳಿಕೊಂಡಿದ್ದರು.


