- Home
- Entertainment
- TV Talk
- Rani Serialನಲ್ಲಿ ಕಾಣದ ರಾಣಿಯ ಅಪ್ಪ ಇವರೇ: ಪ್ರೊಮೋದಲ್ಲಿ ಮಿಸ್ ಆಗಿರೋ ವಿಲನ್ ಬರೋದು ಯಾವಾಗ?
Rani Serialನಲ್ಲಿ ಕಾಣದ ರಾಣಿಯ ಅಪ್ಪ ಇವರೇ: ಪ್ರೊಮೋದಲ್ಲಿ ಮಿಸ್ ಆಗಿರೋ ವಿಲನ್ ಬರೋದು ಯಾವಾಗ?
ಜೀ ಕನ್ನಡದಲ್ಲಿ ಆರಂಭವಾಗಿರುವ 'ರಾಣಿ' ಸೀರಿಯಲ್, ಜೈಲಿನಲ್ಲಿರುವ ಅಮ್ಮ ಮತ್ತು ಮಗಳ ಭಾವನಾತ್ಮಕ ಕಥೆಯನ್ನು ಹೊಂದಿದೆ. ಈ ಕಥೆಯಲ್ಲಿ ರಾಣಿಯ ಅಪ್ಪನ ಪಾತ್ರ ನಿಗೂಢವಾಗಿದ್ದು, ಈ ಪಾತ್ರವನ್ನು ನಟ ಆರವ್ ಸೂರ್ಯ ನಿರ್ವಹಿಸುತ್ತಿದ್ದು, ಇದೊಂದು ನೆಗೆಟಿವ್ ಶೇಡ್ ಪಾತ್ರವೆಂದು ಅವರೇ ತಿಳಿಸಿದ್ದಾರೆ.

ರಾಣಿ ಸೀರಿಯಲ್
ಜೀ ಕನ್ನಡದಲ್ಲಿ ರಾಣಿ ಸೀರಿಯಲ್ ಇಂದಿನಿಂದ ಆರಂಭವಾಗಿದೆ. ಇದಾಗಲೇ ಈ ಸೀರಿಯಲ್ ಪ್ರೊಮೋ ವೀಕ್ಷಕರ ಕಣ್ಣಲ್ಲಿ ನೀರು ತರಿಸಿದೆ. ರಾಣಿಯ ಅಮ್ಮ ಯಾವುದೋ ಕಾರಣಕ್ಕೆ ಜೈಲು ಸೇರಿದ್ದಾಳೆ. ಜೈಲಿನ ನಿಯಮದ ಪ್ರಕಾರ ಒಂದಷ್ಟು ವರ್ಷ ಅಮ್ಮನ ಜೊತೆ ಇದ್ದ ಮಗಳು ರಾಣಿ, ಇದೀಗ ಹೊರಕ್ಕೆ ಬರಲೇಬೇಕಿದೆ. ಅಮ್ಮನಿಗಾಗಿ ಮಗಳು, ಮಗಳಿಗಾಗಿ ಅಮ್ಮ ಹಂಬಲಿಸುವ ರೀತಿ ಎಂಥವರ ಕಣ್ಣಲ್ಲೂ ನೀರು ತರಿಸುತ್ತಿದೆ.
ಅಪ್ಪನ ಸುಳಿವಿಲ್ಲ
ಹಾಗಿದ್ದರೆ, ರಾಣಿಗೆ ಅಪ್ಪ ಇಲ್ವಾ? ಇದ್ದರೆ ಅವನ್ಯಾರು, ಅಪ್ಪನೇ ವಿಲನ್ನಾ? ಏನಿದು ಕಥೆ ಎಂದೆಲ್ಲಾ ಯೋಚನೆಗಳು ವೀಕ್ಷಕರಲ್ಲಿ ಕಾಡುವುದು ಸಹಜ. ಇಲ್ಲಿಯವರೆಗೆ ವಾಹಿನಿ ಕಡೆಯಿಂದ ಬಿಟ್ಟಿರುವ ಪ್ರೊಮೋಗಳಲ್ಲಿ ಕೂಡ ಅಪ್ಪನ ಸುಳಿವಿಲ್ಲ. ಅಮ್ಮ ಮತ್ತು ಮಗಳನ್ನು ಮಾತ್ರ ಕಾಣಬಹುದಾಗಿದೆ. ಹಾಗಿದ್ದರೆ ಯಾರೀ ಅಪ್ಪ?
ಅಪ್ಪ ಯಾರು?
ರಾಣಿಯಾಗಿ ಬಾಲಕಿ ಧನ್ವಿ, ಅಮ್ಮನಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಇನ್ನು ಅಪ್ಪ ಅರ್ಜುನ್ ಆಗಿ ನಟಿಸುತ್ತಿರುವವರು ಆರವ್ ಸೂರ್ಯ. ಸದ್ಯ ಜೈಲಿನಿಂದ ಸ್ಟೋರಿ ಶುರುವಾಗುವ ಕಾರಣ, ಅಪ್ಪನ ರೋಲ್ ಬರಲು ಒಂದಷ್ಟು ದಿನ ಬೇಕಾಗುತ್ತದೆ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಇದಾಗಲೇ ನಟ ಆರವ್ ಮಾತನಾಡಿದ್ದು, ತಮ್ಮ ರೋಲ್ ಬಗ್ಗೆ ತಿಳಿಸಿದ್ದಾರೆ.
ತೆಲುಗು ರೀಮೇಕ್
ಅಷ್ಟಕ್ಕೂ, ರಾಣಿ ಸೀರಿಯಲ್ ತೆಲುಗುವಿನ ಚಿನ್ನಿ ಸ್ಟೋರಿ ರೀಮೇಕ್ ಆಗಿದೆ. ಇದರಲ್ಲಿ ಅಪ್ಪನೇ ವಿಲನ್. ಆ ಪಾತ್ರ ಮಾಡುತ್ತಿರುವವರು ನಟ ಆರವ್ ಸೂರ್ಯ (Arav Surya). ಸ್ಟಾರ್ ಸುವರ್ಣ ವಾಹಿನಿಯ ಜೇನುಗೂಡು’ ಸೀರಿಯಲ್ನಲ್ಲಿ ನಾಯಕನಾಗಿ ನಟಿಸಿದ್ದ ಇವರು ಇದೀಗ ಇದರಲ್ಲಿ ರಾಣಿಯ ಅಪ್ಪ ಆಗಿ ಕಾಣಿಸಿಕೊಂಡಿದ್ದಾರೆ.
ಸೀರಿಯಲ್ ನೋಡಬೇಕು
ತೆಲುಗುವಿನ ರೀಮೇಕ್ ಈ ಸೀರಿಯಲ್ ಆಗಿದ್ದರೂ ಕನ್ನಡಕ್ಕೆ ಒಂದಿಷ್ಟು ಬದಲಾಯಿಸಿಕೊಳ್ಳಲಾಗಿದೆ ಎಂದಿರುವ ಆರವ್, ರಾಣಿಯ ಅಮ್ಮ ಜೈಲಿಗೆ ಯಾಕೆ ಹೋಗ್ತಾಳೆ, ನನ್ನದು ಏನು ರೋಲ್ ಎನ್ನುವುದು ಸೀರಿಯಲ್ ನೋಡಿಯೇ ತಿಳಿದುಕೊಳ್ಳಬೇಕು. ಸದ್ಯ ನನ್ನದು ನೆಗೆಟಿವ್ ಶೇಡ್ ಪಾತ್ರವಾಗಿದೆ. ಇದಾಗಲೇ 25 ಸಂಚಿಕೆಗಳ ಶೂಟಿಂಗ್ ಮುಗಿದಿದೆ ಎಂದಿದ್ದಾರೆ ಆರವ್ ಸೂರ್ಯ.
ಪತ್ನಿ-ಮಗ
ಇನ್ನು ನಟ ಆರವ್ ಅವರಿಗೆ ಮದುವೆಯಾಗಿದ್ದು, ಪತ್ನಿಯ ಹೆಸರು ವೈಷ್ಣವಿ. ಮಗನ ಹೆಸರು ಯ್ಯಾಂಶ್ ಅರಸು. ಈಗಷ್ಟೇ ಶಾಲೆಗೆ ಹೋಗಲು ಸಜ್ಜಾಗಿದ್ದಾನೆ ಮಗ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

