- Home
- Entertainment
- TV Talk
- ಚಿನ್ನದ ಸರವನ್ನು ನಂಗೇ ಕೊಟ್ಟಿದ್ದು ಅಂದ್ಕೊಂಡುಬಿಟ್ಟಿದ್ದೆ, ಆದ್ರೆ ಆಗಿದ್ದೇ ಬೇರೆ: ಗಿಲ್ಲಿ ನಟನ ಬೇಸರ ನುಡಿ
ಚಿನ್ನದ ಸರವನ್ನು ನಂಗೇ ಕೊಟ್ಟಿದ್ದು ಅಂದ್ಕೊಂಡುಬಿಟ್ಟಿದ್ದೆ, ಆದ್ರೆ ಆಗಿದ್ದೇ ಬೇರೆ: ಗಿಲ್ಲಿ ನಟನ ಬೇಸರ ನುಡಿ
ಚಿನ್ನದ ಉದ್ಯಮಿ ಶರವಣ ಅವರು ಗಿಲ್ಲಿ ನಟನಿಗೆ ಚಿನ್ನದ ಸರ ಹಾಕಿದ್ದು, ಅವರು ಕೋಟ್ಯಧಿಪತಿಯಾದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಸರ ಕೇವಲ ಜಾಹೀರಾತಿಗಾಗಿ ಹಾಕಿದ್ದು, ಅದನ್ನು ವಾಪಸ್ ಪಡೆಯಲಾಗಿದೆ ಎಂಬ ಸತ್ಯವನ್ನು ಗಿಲ್ಲಿ ನಟರೇ ಇದೀಗ ಬಹಿರಂಗಪಡಿಸಿದ್ದಾರೆ.

ಗಿಲ್ಲಿ ನಟನ ಹವಾ
ಈಗ ಎಲ್ಲೆಲ್ಲೂ ಗಿಲ್ಲಿ ನಟನ ಹವಾ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ, ಮೊನ್ನೆ ಚಿನ್ನದ ಉದ್ಯಮಿ ಶರವಣ ಅವರು, ಗಿಲ್ಲಿ ನಟನಿಗೆ (Bigg Boss Gilli Nata) ಭರ್ಜರಿ ಚಿನ್ನದ ಸರ ಹಾಕಿದ್ದರು. ಇದರಿಂದಾಗಿ ಗಿಲ್ಲಿ ನಟ ಕೋಟ್ಯಧಿಪತಿ ಆಗಿಬಿಟ್ಟರು ಎಂದೇ ಬಹುತೇಕ ಎಲ್ಲರೂ ಅಂದುಕೊಂಡಿದ್ದಾರೆ.
ಚಿನ್ನದ ಸರದ ಉಡುಗೊರೆ
ಅದಕ್ಕೆ ಇಂಬು ನೀಡಲು ಎಂಬಂತೆ, ಶರವಣ ಅವರು, ಈ ಚಿನ್ನದ ಸರವನ್ನು ತಾವು ಗಿಲ್ಲಿ ನಟನಿಗೆ ಉಡುಗೊರೆಯಾಗಿ ಕೊಟ್ಟಂತೆ ಮಾತನಾಡಿದ್ದರು. ಗಿಲ್ಲಿನೇ ಚಿನ್ನ. ಅವರಿಗೆ ಇದನ್ನು ಕೊಟ್ಟಿದ್ದೇನೆ. ಬಿಗ್ಬಾಸ್ನಿಂದ ನನಗೆ ತುಂಬಾ ಲಾಭವಾಗಿದೆ. ಅದಕ್ಕೇ ಕೊಟ್ಟಿದ್ದೇನೆ ಎಂದಿದ್ದರು.
ಸತ್ಯ ನುಡಿದ ಗಿಲ್ಲಿ
ಆದರೆ, ಇದೀಗ ಗಿಲ್ಲಿ ನಟ ಮಾಧ್ಯಮದವರ ಮುಂದೆ ಸತ್ಯವನ್ನು ನುಡಿದಿದ್ದಾರೆ. ಅದೇನೆಂದರೆ, ಶರವಣ ಅವ್ರು ಚಿನ್ನದ ಸರ ಹಾಕಿದಾಗ ಅದನ್ನು ನನಗೇ ಕೊಟ್ಟಿದ್ದು ಎಂದುಕೊಂಡಿದ್ದೆ. ನಾನು ನನಗೆ ಸರ ಹಾಕಿದ ಬಳಿಕ ಅದನ್ನು ಒಳಗೆ ಸೇರಿಸಿ ಷರ್ಟ್ ಬಟನ್ ಹಾಕಿಕೊಂಡು ಭದ್ರಮಾಡಿಕೊಂಡು ಬಿಟ್ಟೆ ಎಂದಿದ್ದಾರೆ.
ಸತ್ಯ ತಿಳಿದು ಶಾಕ್ ಆಯ್ತು
ಆದರೆ, ಕೊನೆಗೆ ನನಗೆ ಸತ್ಯ ತಿಳಿದು ಶಾಕ್ ಆಯ್ತು. ಅದನ್ನು ಸುಮ್ಮನೇ ನನಗೆ ಹಾಕಿದ್ದು, ಅದನ್ನು ಅವರು ವಾಪಸ್ ತೆಗೆದುಕೊಂಡರು. ಅದನ್ನು ಜಾಹೀರಾತಿನ ಉದ್ದೇಶಕ್ಕೆ ಹಾಕಲಾಗಿತ್ತು. ಆದರೆ ಹಲವರು ಅದು ನನಗೇ ಹಾಕಿದ್ದು ಎಂದು ನನ್ನ ಹಾಗೆಯೇ ತಿಳಿದುಕೊಂಡು ಕೋಟ್ಯಧೀಶ್ವರ ಆಗಿಬಿಟ್ಟೆ ಎನ್ನುತ್ತಿದ್ದಾರೆ ಎಂದು ಗಿಲ್ಲಿ ಸ್ವಲ್ಪ ಬೇಸರದಿಂದಲೇ ಮಾತನಾಡಿದರು.
ನನಗೂ ಆ ಕಾಲ ಬರಬಹುದು
ಇರಲಿ ಬಿಡಿ. ನನಗೂ ಆ ಕಾಲ ಬರಬಹುದು. ಅಂಥದ್ದೇ ಚಿನ್ನದ ಸರ ಹಾಕಿಕೊಳ್ಳುವ ಕಾಲವೂ ಬರಬಹುದು ಎಂದು ಹೇಳಿದ್ದಾರೆ.
ರಕ್ಷಿತಾ ಅವರಿಗೆ ಕೊಟ್ಟ ಗಿಫ್ಟ್ ಗುಟ್ಟು
ಅದೇ ರೀತಿ ಶರವಣ ಅವರು ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಅವರಿಗೂ ನೆಕ್ಲೆಸ್ ಗಿಫ್ಟ್ ಕೊಟ್ಟಿರುವುದಾಗಿ ಹಲವರು ಅಂದುಕೊಂಡಿದ್ದಾರೆ. ಅದು ಕೂಡ ಜಾಹೀರಾತಿಗೇ ಹೊರತು ರಕ್ಷಿತಾ ಅವರಿಗೆ ಕೊಟ್ಟಿದ್ದಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

