- Home
- Entertainment
- TV Talk
- Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್
Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್
ಬಿಗ್ಬಾಸ್ ಸೀಸನ್ 12 ಗೆದ್ದು ಐತಿಹಾಸಿಕ ದಾಖಲೆ ಬರೆದ ಗಿಲ್ಲಿ ನಟನಿಗೆ ರಾಜಕೀಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿತ್ತು, ಇದು ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ಇದರ ಬಗ್ಗೆ ಮಾಧ್ಯಮದವರು ಕೇಳಿರೋ ಪ್ರಶ್ನೆಗೆ ಗಿಲ್ಲಿ ನಟ ಹೇಳಿದ್ದೇನು?

ರಾಜಕೀಯದವರೂ ಅಖಾಡಕ್ಕೆ
ಬಿಗ್ಬಾಸ್ ಸೀಸನ್ 12 (Bigg Boss Season 12) ಐತಿಹಾಸಿಕ ದಾಖಲೆ ಬರೆದಿದೆ. ವಿನ್ ಆಗಿರೋ ಗಿಲ್ಲಿ ನಟನಿಗೆ ಅಷ್ಟೇ ಅಲ್ಲದೇ, ಹಲವು ಸ್ಪರ್ಧಿಗಳ ಪರವಾಗಿ ರಾಜಕೀಯ ಪಕ್ಷದವರೂ ಅಖಾಡಕ್ಕೆ ಇಳಿದಿದ್ದು ಬಹುಶಃ ಯಾವ ಭಾಷೆಗಳ ಬಿಗ್ಬಾಸ್ನಲ್ಲಿಯೂ ಇರಲಿಕ್ಕಿಲ್ಲ.
45 ಕೋಟಿಗೂ ಅಧಿಕ ವೋಟ್
ಕೆಲವೊಂದು ಜಾತಿ ಲೆಕ್ಕಾಚಾರ, ಪಕ್ಷದ ಲೆಕ್ಕಾಚಾರ ಎಲ್ಲವನ್ನೂ ಮೀರಿ ಗಿಲ್ಲಿ ನಟನಿಗೆ 45 ಕೋಟಿಗೂ ಅಧಿಕ ವೋಟ್ ಬಂದಿದ್ದು ನೋಡಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.
ರಾಜಕೀಯಕ್ಕೆ ಎಂಟ್ರಿ?
ಇದೀಗ ಇದರ ಬೆನ್ನಲ್ಲೇ ಗಿಲ್ಲಿನಟನ ಯಶಸ್ಸು, ಅವರಿಗೆ ಇರುವ ಬೆಂಬಲ ಕಂಡು ಯಾರಾದರೂ ರಾಜಕೀಯಕ್ಕೆ ಕರೆಯುತ್ತಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದೇ ಪ್ರಶ್ನೆಯೊಂದು ಮಾಧ್ಯಮಗಳು ಗಿಲ್ಲಿನಟನಿಗೆ ಕೇಳಲಾಗಿದೆ.
ಸಿಎಂ-ಡಿಸಿಎಂ ಅಭಿನಂದನೆ
ಅದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಿಲ್ಲಿನಟನನ್ನು ಅಭಿನಂದಿಸಿದ ಪರಿ ನೋಡಿ ಗಿಲ್ಲಿನಟ ಕಾಂಗ್ರೆಸ್ಗೆ ಸಪೋರ್ಟ್ ಮಾಡ್ತಾರೆ, ಕಾಂಗ್ರೆಸ್ ಸೇರುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಈಗ ಗಿಲ್ಲಿಯವರಿಗೆ ಪ್ರಶ್ನೆ ಎದುರಾಗಿದೆ.
ಗಿಲ್ಲಿ ನಟ ಹೇಳಿದ್ದೇನು?
ಅದಕ್ಕೆ ಗಿಲ್ಲಿನಟ, ಇಲ್ಲಪ್ಪಾ, ಹಾಗೇನೂ ಇಲ್ಲ. ಸದ್ಯ ಅಂಥ ಯೋಚನೆಗಳೂ ಇಲ್ಲ. ನನಗೆ ಕಾಂಗ್ರೆಸ್ನವರು ಮಾತ್ರವಲ್ಲದೇ, ಎಲ್ಲಾ ಪಕ್ಷದವರೂ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆ ನೋಡಿದ್ರೆ ಮೊದಲು ವಿಷ್ ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ ಅವರು. ಅಷ್ಟೇ ಅಲ್ಲದೇ, ಬಿಜೆಪಿಯ ಹಲವು ರಾಜಕಾರಣಿಗಳೂ ವಿಷ್ ಮಾಡಿದ್ದಾರೆ, ಕಾಂಗ್ರೆಸ್ಸಿನವರೂ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲರೂ ಜಾತಿ, ಪಕ್ಷ ಬೇಧ ಮರೆತು ನನಗೆ ಸಪೋರ್ಟ್ ಮಾಡಿದ್ದಾರೆ. ಯಾವುದೋ ಒಂದು ಪಕ್ಷಕ್ಕೆ ಸಪೋರ್ಟ್, ರಾಜಕಾರಣ... ಇವೆಲ್ಲಾ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಫ್ಯಾನ್ಸ್ ಹೇಳ್ತಿರೋದೇನು?
ಅದಕ್ಕೆ ಅವರ ಹಲವು ಅಭಿಮಾನಿಗಳು ದಯವಿಟ್ಟು ರಾಜಕಾರಣಕ್ಕೆ ಬರಬೇಡಿ ಅಣ್ಣಾ, ನೀವು ತುಂಬಾ ಒಳ್ಳೆಯ ಕಲಾವಿದರು. ಕಲಾವಿದರಾಗಿಯೇ ಮುಂದುವರೆಯಿರಿ. ಎಲ್ಲರಿಗೂ ಹಾಸ್ಯದ ಹೊನಲನ್ನು ಉಣಬಡಿಸಿರಿ. ದಯವಿಟ್ಟು ರಾಜಕೀಯ ಪಕ್ಷ ಸೇರಬೇಡಿ ಎಂದು ಮನವಿ ಮಾಡಿಕೊಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

