ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಅವರ ದಾಖಲೆಯ ಬೆಳವಣಿಗೆಯನ್ನು ಚಂದನವನದ ನಟ ದರ್ಶನ್ ಅವರೊಂದಿಗೆ ಹೋಲಿಸುತ್ತಿರುವುದು ದರ್ಶನ್ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ ಸ್ಪರ್ಧಿ ಅಂದ್ರೆ ಅದು ಹಾಸ್ಯ ಕಲಾವಿದ ಗಿಲ್ಲಿ ನಟ. ಕಳೆದ 111 ದಿನಗಳಿಂದ ಗಿಲ್ಲಿ ನಟ ಆಟಕ್ಕೆ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಾಮಾಜಿಕ ಜಾಲತಾಣ ಓಪನ್ ಮಾಡಿದ್ರೆ ಸಾಕು ಗಿಲ್ಲಿ ನಟ ಅವರ ಅಭಿಮಾನಿಗಳ ಪ್ರೀತಿ ತುಂಬಿದ ಅಭಿಮಾನದ ಪೋಸ್ಟ್‌ಗಳು ಕಾಣಿಸುತ್ತಿವೆ. ಇದೀಗ ಚಂದನವನದ ನಟ ದರ್ಶನ್ ಜೊತೆಯಲ್ಲಿ ಗಿಲ್ಲಿ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಹೋಲಿಕೆ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಯಾವುದನ್ನು ಇನ್ಯಾವೋದಕ್ಕೆ ಹೋಲಿಕೆ ಮಾಡೋದು ತಪ್ಪೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಗಿಲ್ಲಿ ನಟ ಅವರ ಅಭಿಮಾನಿಗಳು ಉಚಿತ ಟೀ, ಕಾಫಿ, ಆಟೋ ಸೇವೆ ಸೇರಿದಂತೆ ಹಲವು ಫ್ರೀ ಸರ್ವಿಸ್ ನೀಡಲು ಆರಂಭಿಸಿದ್ದಾರೆ. ಈ ಉಚಿತ ಆಫರ್ ನಿಮ್ಮದಾಗಿಸಿಕೊಳ್ಳಲು ಜನರು ಗಿಲ್ಲಿ ನಟ ಅವರಿಗೆ 99 ಮತ ಹಾಕಿರೋದನ್ನು ತೋರಿಸಬೇಕಾಗುತ್ತದೆ. ಇದೆಲ್ಲದರ ಜೊತೆ ಗಿಲ್ಲಿ ನಟ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಳವಾಗುತ್ತಿದೆ.
ಸ್ಟಾರ್ ಕಲಾವಿದರ ಜೊತೆ ಹೋಲಿಕೆ
ಈ ಸುದ್ದಿ ಬರೆಯುವರೆಗಿನ ವೇಳೆ ಗಿಲ್ಲಿ ನಟ ಇನ್‌ಸ್ಟಾಗ್ರಾಂನಲ್ಲಿ 1.6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಫಾಲೋವರ್ಸ್ ಸಂಖ್ಯೆ ಸುನಾಮಿಯಂತೆ ಏರಿಕೆಯಾಗುತ್ತಿದೆ. ಇದಕ್ಕೆಲ್ಲಾ ಗಿಲ್ಲಿ ನಟ ಅವರ ಮೂರು ತಿಂಗಳ ಪರಿಶ್ರಮ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಗಿಲ್ಲಿ ನಟನ ಅಭಿಮಾನಿಗಳು ಫಾಲೋವರ್ಸ್ ಸಂಖ್ಯೆಯನ್ನು ಸ್ಟಾರ್ ಕಲಾವಿದರ ಜೊತೆ ಹೋಲಿಕೆ ಮಾಡುತ್ತಿದ್ದಾರೆ.
ದರ್ಶನ್ ಜೊತೆ ಗಿಲ್ಲಿ ಹೋಲಿಕೆ
ಸಂಕೇತ್ ಎಂಬವರು ದರ್ಶನ್ ಅವರ ಜೊತೆ ಗಿಲ್ಲಿ ನಟ ಅವರ ಅಭಿಮಾನಿಗಳನ್ನು ಹೋಲಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ದರ್ಶನ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು 2.5 ಮಿಲಿಯನ್ ಜನರು ಫಾಲೋ ಮಾಡ್ತಾರೆ. ಇಷ್ಟು ಸಂಖ್ಯೆ ಫಾಲೋವರ್ಸ್ ಪಡೆಯಲು ದರ್ಶನ್‌ಗೆ 25 ವರ್ಷಗಳು ಬೇಕಾದವು. ಆದ್ರೆ ಗಿಲ್ಲಿ ನಟ ಕೇವಲ ಮೂರು ತಿಂಗಳಲ್ಲಿ 1.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಎಂದು ಸಂಕೇತ್ ಎಂಬವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ದರ್ಶನ್ ನಟನೆಯ ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ನಟ ಸಹ ಅಭಿನಯಿಸಿದ್ದರು. ಡೆವಿಲ್ ಸಿನಿಮಾದ ಟ್ರೈಲರ್ ಬಿಗ್‌ಬಾಸ್ ಶೋನಲ್ಲಿ ಪ್ರದರ್ಶಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಆದ್ರೆ ಕಾರಣಾಂತರಗಳಿಂದ ಡೆವಿಲ್ ಚಿತ್ರದ ಪ್ರಚಾರ ಬಿಗ್‌ಬಾಸ್ ಶೋ ಮೂಲಕ ನಡೆದಿರಲಿಲ್ಲ. ಇದೀಗ ಗಿಲ್ಲಿ ನಟ ಅಭಿಮಾನಿಗಳ ಹೋಲಿಕೆ ದರ್ಶನ್ ಫ್ಯಾನ್ಸ್‌ಗೆ ಬೇಸರವನ್ನುಂಟು ಮಾಡಿದೆ.
ಚಂದನವನದ ನಟರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಹೀಗಿದೆ
ಯಶ್: 14.1 ಮಿಲಿಯನ್
ಕಿಚ್ಚ ಸುದೀಪ್: 2.6 ಮಿಲಿಯನ್
ದರ್ಶನ್: 2.5 ಮಿಲಿಯನ್
ಪುನೀತ್ ರಾಜ್‌ಕುಮಾರ್: 2.2 ಮಿಲಿಯನ್
ರಿಷಬ್ ಶೆಟ್ಟಿ: 1.7 ಮಿಲಿಯನ್
ರಕ್ಷಿತ್ ಶೆಟ್ಟಿ: 1.4 ಮಿಲಿಯನ್
ಡಾಲಿ ಧನಂಜಯ್: 1.3 ಮಿಲಿಯನ್
ಗಣೇಶ್: 1 ಮಿಲಿಯನ್
ಇದನ್ನೂ ಓದಿ: BBK 12 Finale: ಯಾರು ವಿನ್ ಆಗಬೇಕು ಎಂದು ಹೇಳಿದ ಮಂಜು ಭಾಷಿಣಿ: ವೋಟ್ ಹಾಕಿದ್ಯಾರಿಗೆ?
ಇದನ್ನೂ ಓದಿ: BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ


