ಗಿಲ್ಲಿ ನಟ ಮತ್ತು ಅಶ್ವಿನಿ ಗೌಡರ ಪರವಾಗಿ 'ಕುರುಬ Vs ಗೌಡ' ಎಂಬ ಜಾತಿ ರಾಜಕಾರಣಕ್ಕೆ ತಿರುಗಿದೆ. ಈ ಬೆಳವಣಿಗೆಯನ್ನು 'ಪಿಆರ್ ಮಾಫಿಯಾ' ಎಂದು ಕರೆದಿರುವ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ, ಮನರಂಜನಾ ಕಾರ್ಯಕ್ರಮದಲ್ಲಿ ಜಾತಿ ಬೆರೆಸದಂತೆ ವೀಕ್ಷಕರಿಗೆ ಸಲಹೆ ನೀಡಿದ್ದಾರೆ.

Kuruba Community Vs Gowda Community: ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಯಾರು ಎಂದು ತಿಳಿಯುವ ಸಮಯ ಬಂದಾಗಿದೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಫಿನಾಲೆ ಅಭ್ಯರ್ಥಿಗಳಾಗಿದ್ದಾರೆ. ವೀಕ್ಷಕರು ಮತ್ತು ಅಭಿಮಾನಿಗಳು ವೋಟ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಬೇಕಿದೆ. ಸ್ಪರ್ಧಿಗಳೆಲ್ಲರೂ ದೊಡ್ಮನೆ ಸೇರುವ ಮುನ್ನವೇ ಸಾಮಾಜಿಕ ಜಾಲತಾಣದ ಖಾತೆಗಳನ್ನು ಮೂರನೇ ವ್ಯಕ್ತಿಗೆ ನೀಡಿರುತ್ತಾರೆ. ಇದನ್ನು ಪಿಆರ್ ಅಂತಾ ಕರೆಯಲಾಗುತ್ತದೆ. ಸದ್ಯ ಇಬ್ಬರು ಸ್ಪರ್ಧಿಳಿಗೆ ವೋಟ್ ಮಾಡುವ ವಿಷಯ ಜಾತಿ ರಾಜಕಾರಣಕ್ಕೆ ತಿರುಗಿರೋದಕ್ಕೆ ಬಿಗ್‌ಬಾಸ್ ಮಾಜಿ ಸ್ಪರ್ಧಿಯೊಬ್ಬರು ಕ್ಯಾಕರಿಸಿ ಉಗಿದಿದ್ದಾರೆ.

ಸೀಸನ್ 12ರಲ್ಲಿ ಪಿಆರ್ ಮಾಫಿಯಾ!

ಈ ಬಾರಿಯ ಸೀಸನ್‌ನಲ್ಲಿ ಪಿಆರ್ ಮಾಫಿಯಾ ನಡೆಯುತ್ತಿದೆ. ಈ ಬೆಳವಣಿಗೆ ಯಾವ ಆಯಾಮದಲ್ಲಿಯೂ ಒಳ್ಳೆಯದಲ್ಲ. ಒಂದು ರಿಯಾಲಿಟಿ ಶೋನ ವಿನ್ನರ್ ಯಾರಾಗಬೇಕು ಅನ್ನೋದರ ಬಗ್ಗೆ ರಾಜಕೀಯ ನಡೆಯುತ್ತಿದೆ. ಶಾಸಕರು, ರಾಜಕೀಯ ಮುಖಂಡರು ವಿಡಿಯೋ ಮೂಲಕ ಸ್ಪರ್ಧಿಗಳ ಪರವಾಗಿ ಮತಯಾಚನೆ ಮಾಡತ್ತಿರೋದನ್ನು ಅಚ್ಚರಿಯನ್ನುಂಟು ಮಾಡುತ್ತಿದೆ ಎಂದು ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿ, ಚಂದನವನದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಕುರುಬ Vs ಗೌಡ' ಯಾಕೆ ಈ ಜಾತಿ?

ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ವೋಟಿಂಗ್ ವಿಷಯ ಗೌಡ ವರ್ಸಸ್ ಕುರುಬ ಎಂದು ಬಿಂಬಿತವಾಗಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ. ಈ ಕುರಿತು ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ, ಜಾತಿಗಳನ್ನು ಇಷ್ಟೊಂದು ಅಂಟಿಸಿಕೊಳ್ಳಬಾರದು. ಮನರಂಜನಾ ಕ್ಷೇತ್ರಕ್ಕೆ ಬಂದಿರುವ ವ್ಯಕ್ತಿಗೆ ಜಾತಿಯನ್ನು ಅಂಟಿಸಿದ್ರೆ ರಿಯಾಲಿಟಿ ಶೋಗಳು ಎಲ್ಲಿಗೆ ಹೋಗುತ್ತವೆ. ಶೋಗಳನ್ನು ಮನರಂಜನೆ ಉದ್ದೇಶದಿಂದ ಮಾತ್ರ ನೋಡಬೇಕು ಎಂದು ಸಲಹೆ ನೀಡಿದ್ದಾರೆ.

ಯಡಯೂರಪ್ಪನವರು ಸಿಎಂ ಆಗಿದ್ದಾಗ, ಅವರ ಆಪ್ತ ಸಹಾಯಕರು ನನಗೆ ಕರೆ ಮಾಡಿ ಬರುವಂತೆ ಹೇಳಿದರು. ಬಿಗ್‌ಬಾಸ್ ಫಿನಾಲೆಯಲ್ಲಿರೋ ಒಬ್ಬ ಸ್ಪರ್ಧಿಯನ್ನು ಗೆಲ್ಲಿಸಲು ಏನು ಮಾಡಬೇಕು ಹೇಳಿ. ಅವರಿಗೆ 50 ಲಕ್ಷ ರೂಪಾಯಿ ಮುಖ್ಯವಲ್ಲ ಎಂದು ಹೇಳಿದ್ದರು. ನಾನು ಅದಕ್ಕೆ ವಾಹಿನಿ ಮತ್ತು ಕಾರ್ಯಕ್ರಮ ಆಯೋಜಕರು ಇರ್ತಾರೆ ಎಂದು ಹೇಳಿದ್ದೆ. ಅಷ್ಟುಮಟ್ಟದವರೆಗೆ ರಿಯಾಲಿಟಿ ಶೋಗಳಲ್ಲಿ ರಾಜಕಾರಣ ಸೇರಿಕೊಂಡಿದೆ ಎಂದು ಚಕ್ರವರ್ತಿ ಚಂದ್ರುಚೂಡ ಹೇಳ್ತಾರೆ.

ಅತಿರೇಕಕ್ಕೆ ಹೋಗುವ ಮುನ್ನ ಯೋಚಿಸಿ

ತುಳು ಭಾಗದವರು ಯಾರಾದ್ರು ಇದ್ರೆ ಸಂಘಟನೆಗಳು ಮುನ್ನಲೆಗೆ ಬರುತ್ತವೆ. ಸಂಘಟನೆಗಳು ಮುಂದೆ ಕುಳಿತುಕೊಂಡು ವೋಟ್ ಮಾಡಿಸುತ್ತಾರೆ. ಜನರು ಅತಿರೇಕಕ್ಕೆ ಒಳಗಾಗುವ ಮುಂಚೆ ಬಿಗ್‌ಬಾಸ್ ಶೋ ವಿನ್ನರ್ ಗಳು ಏನಾದ್ರು? ಏನ್ ಮಾಡ್ತಿದ್ದಾರೆ ಅನ್ನೋದನ್ನು ಯೋಚಿಸಿ. ಕೆಲವರು ಇಲ್ಲಿಂದ ಸಿಕ್ಕ ಜನಪ್ರಿಯತೆಯನ್ನು ಸದುಪಯೋಗ ಮಾಡಿಕೊಂಡು ಸಮಾಜಕ್ಕೂ ಮಾದರಿಯಾಗಿದ್ದಾರೆ. ಹಾಗಂತ ಹೀಗೆಯೇ ಇರಬೇಕು ಅಂತ ನಾನು ಹೇಳಲ್ಲ. ಅದು ಅವರ ವೈಯಕ್ತಿಕ ಜೀವನ ಅಂತ ಹೇಳಿದರು.

ಇದನ್ನೂ ಓದಿ: ಹೆಲೋ, Bigg Boss.. ರಕ್ಷಿತಾ ಟ್ರೋಫಿ ಗೆಲ್ತಾಳೆ ಅಂತ ಆ ವಿಷಯ ತೋರಿಸಿಲ್ಲ, Live ನೋಡಿದ್ವಿ: ವೀಕ್ಷಕರ ಆಗ್ರಹ

ನನ್ನನ್ನು ಸೇರಿಸಿಕೊಂಡು ಬಿಗ್‌ಬಾಸ್‌ಗೆ ಹೋದವರೆಲ್ಲಾ ಸೈನಿಕರು ಅಲ್ಲ ಮತ್ತು ದೇಶಕ್ಕೆ ಅನ್ನ ನೀಡುವ ರೈತರು ಅಲ್ಲ. ಮನರಂಜನಾ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಿಂದ ಬಂದಿರುತ್ತಾರೆ. ಅವರೆಲ್ಲರ ಉದ್ದೇಶ ನೋಡುಗರಿಗೆ ಮನರಂಜನೆಯನ್ನು ನೀಡುವದಾಗಿರುತ್ತದೆ. ಕಾರ್ಯಕ್ರಮವನ್ನು ನೋಡಿ ನಿಮ್ಮ ಪ್ರೀತಿಯನ್ನು ಕೊಡಿ. ನಿಮ್ಮ ಅಭಿಮಾನ ಮತ್ತು ಪ್ರೀತಿ ತುಂಬಾ ವಿಶೇಷ. ಆದ್ರೆ ಅತಿರೇಕವಾಗಿ ಜಾತಿ ಅಂತಾ ಹೋಗುವ ಮೊದಲು ಅದರಿಂದ ನಿಮಗೇನು ಲಾಭ ಎಂದು ಯೋಚಿಸಿ. ಗಿಲ್ಲಿ ಅಥವಾ ಅಶ್ವಿನಿ ಗೆದ್ದರೆ ಅವರ ಸಮುದಾಯಕ್ಕೆ ಏನು ಪ್ರಯೋಜನ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಚಕ್ರವರ್ತಿ ಚಂದ್ರಚೂಡ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada: ಹೊಸ ಮಾಡೆಲ್ ಸಿಕ್ಕಾಯ್ತು, ರಕ್ಷಿತಾ ಡ್ರೆಸ್ ಧರಿಸಿ ಡಾನ್ಸ್ ಮಾಡಿದ ಮಲ್ಲಮ್ಮ

YouTube video player