BBK 12: ಗಿಲ್ಲಿ ನಟನ ಸಾಲಿಗೆ ಸೇರಿದ ರಕ್ಷಿತಾ ಶೆಟ್ಟಿ: ಆದ್ರೂ ಕಡಿಮೆಯಾಗಿಲ್ಲ ಅಬ್ಬರ!
ಬಿಗ್‌ಬಾಸ್ ಸೀಸನ್ 12ರ 'ಟಿಕೆಟ್ ಟು ಟಾಪ್ 6' ಆಟದಿಂದ ರಕ್ಷಿತಾ ಶೆಟ್ಟಿ ಹೊರಬಿದ್ದಿದ್ದಾರೆ. ಆದರೂ, ರಘು ಮತ್ತು ರಾಶಿಕಾ ಭಾಗವಹಿಸುತ್ತಿರುವ ಹೊಸ ಟಾಸ್ಕ್‌ನಲ್ಲಿ, ಎದುರಾಳಿ ತಂಡದ ಸದಸ್ಯರ ನಡವಳಿಕೆಯನ್ನು ಪ್ರಶ್ನಿಸುವ ಮೂಲಕ ರಕ್ಷಿತಾ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ.

ಅಬ್ಬರ
ಬಿಗ್‌ಬಾಸ್ ಸೀಸನ್ 12ರಲ್ಲಿ ಕೊನೆಯ ಟಾಸ್ಕ್‌ಗಳು ನಡೆಯುತ್ತಿವೆ. ಇದೀಗ ಗಿಲ್ಲಿ ನಟನ ಸಾಲಿಗೆ ರಕ್ಷಿತಾ ಶೆಟ್ಟಿ ಸಹ ಸೇರ್ಪಡೆಯಾಗಿದ್ದಾರೆ. ಟಿಕೆಟ್ ಟು ಟಾಪ್ 6 ಆಟದಿಂದ ರಕ್ಷಿತಾ ಶೆಟ್ಟಿ ಸಹ ಔಟ್ ಆಗಿದ್ದಾರೆ. ಆದ್ರೂ ರಕ್ಷಿತಾ ಶೆಟ್ಟಿ ಮಾತ್ರ ತಮ್ಮ ಅಬ್ಬರವನ್ನು ಕಡಿಮೆ ಮಾಡಿಲ್ಲ.
ಎರಡು ತಂಡಗಳ ರಚನೆ
ಮಂಗಳವಾರ ಎರಡು ತಂಡಗಳು ರಚನೆಯಾಗಿದ್ದು, ಅಶ್ವಿನಿ ಗೌಡ-ಧ್ರುವಂತ್-ಕಾವ್ಯಾ ವಿನ್ ಆಗಿದ್ದರು. ಇತ್ತ ಸೋತ ರಘು ತಂಡದಿಂದ ರಕ್ಷಿತಾ ಆಟದಿಂದ ಹೊರಗೆ ಉಳಿದುಕೊಂಡಿದ್ದಾರೆ. ಹಾಗಾಗಿ ಮುಂದಿನ ಆಟವನ್ನು ರಘು ಮತ್ತು ರಾಶಿಕಾ ಆಡಿದ್ದಾರೆ.
ರಘು ಮತ್ತು ರಾಶಿಕಾ
ರಘು ಮತ್ತು ರಾಶಿಕಾ ತಮ್ಮ ಮುಂದಿರುವ ಕಂಬವನ್ನು ಹಿಡಿದುಕೊಳ್ಳಬೇಕು. ಎದುರಾಳಿ ತಂಡದ ಸದಸ್ಯರು ಹಿಡಿದಿಟ್ಟುಕೊಂಡಿರುವ ಕಂಬವನ್ನು ಬಿಡುವಂತೆ ಮಾಡಬೇಕು. ಈ ಪ್ರಯತ್ನದಲ್ಲಿ ಆಟದಿಂದ ಹೊರಗೆ ಉಳಿದಿದ್ದ ರಕ್ಷಿತಾ ಶೆಟ್ಟಿ ಸುಮ್ಮನೇ ಕುಳಿತುಕೊಳ್ಳದೇ ಅಬ್ಬರಿಸಿದ್ದಾರೆ.
ರಕ್ಷಿತಾ ಶೆಟ್ಟಿ ಪ್ರಶ್ನೆ
ಮೊದಲ ವಾರದಿಂದಲೇ ಟ್ರಬಲ್ ಮಾಡಿಕೊಂಡು ಬಂದವರಿಗೆ ಈ ಟ್ರಬಲ್ ಮಾಡಲಿಕ್ಕೆ ಮನಸ್ಸಿಲ್ಲವಂತೆ. ಈಗ ಒಂದಾಗಲಿಕ್ಕೆ ಟ್ರೈ ಮಾಡ್ತಿದ್ದಾರೆ ಅನ್ನಿಸುತ್ತೆ. ಎರಡು ದಿನದಲ್ಲಿ ಚೇಂಜ್ ಆಗಲಿಕೆ ಸಾಧ್ಯವಾ? ಮುಖವಾಡ ಇಷ್ಟು ಬೇಗ ಚೇಂಜ್ ಆಗುತ್ತಾ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: BBK 12: ಬಿಗ್‌ಬಾಸ್‌ನಲ್ಲಿ ಟಾಸ್ಕ್ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?
ಇಂದಿನ ಸಂಚಿಕೆ
ರಾಶಿಕಾಳನ್ನು ಕಂಬದಿಂದ ಬಿಡಿಸಲು ಅಶ್ವಿನಿ ಗೌಡ ಅವರ ಮೇಲೆ ಸಾಬೂನಿನ ನೀರು ಹಾಕಿದ್ದಾರೆ. ನೀರು ಎಸೆಯುವ ಮುನ್ನ ಕ್ಷಮೆ ಕೇಳಿದ್ದಾರೆ. ಈ ಕ್ಷಮೆ ಕೇಳಿದ್ದಕ್ಕೆ ರಕ್ಷಿತಾ ಶೆಟ್ಟಿ ಈ ಮೇಲಿನ ಮಾತುಗಳನ್ನು ಹೇಳಿದಂತೆ ಕಾಣಿಸುತ್ತಿದೆ. ಮತ್ತೊಂದೆಡೆ ರಘುಗೆ ಎದುರಾಳಿಯಾಗಿ ಧ್ರುವಂತ್ ನಿಂತಿದ್ದಾರೆ. ಈ ಆಟದ ಪರಿಣಾಮ ಏನು ಎಂದು ವೀಕ್ಷಿಸಲು ಇಂದಿನ ಸಂಚಿಕೆ ನೋಡಬೇಕಿದೆ.
ಇದನ್ನೂ ಓದಿ: BBK 12: ಬಿಗ್‌ಬಾಸ್ ಕೊಟ್ಟ ಟ್ವಿಸ್ಟ್‌ಗೆ ಮನೆ ಮಂದಿಯೆಲ್ಲಾ ಕಂಗಾಲು! ಹೋಗಲಾರೆ, ಬಿಡಲಾರೆ ಧರ್ಮ ಸಂಕಷ್ಟದಲ್ಲಿ ಮೂವರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

