ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ಯಮುನಾ ಶ್ರೀನಿಧಿ, ತಮ್ಮ ಸಹನಟ ದೀಪಕ್ (ಜಯಂತ್) ಬಗ್ಗೆ ಫೇಸ್‌ಬುಕ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ತೆರೆಯ ಮೇಲೆ ದೀಪಕ್ ಅವರ ನಟನೆ ಎಷ್ಟು ಅದ್ಭುತವೋ, ತೆರೆಮರೆಯಲ್ಲಿ ಅವರ ವ್ಯಕ್ತಿತ್ವವೂ ಅಷ್ಟೇ ಶ್ರೇಷ್ಠ ಎಂದು ಬಣ್ಣಿಸಿದ್ದಾರೆ.

Lakshmi Nivasa: ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿ ಅದ್ಭುತ ಕಲಾವಿದರನ್ನು ಒಳಗೊಂಡಿರುವ ತಂಡ. ನಟಿ ಯಮುನಾ ಶ್ರೀನಿಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ಜಯಂತ್ ಖ್ಯಾತಿಯ ದೀಪಕ್ ಸುಬ್ರಮಣ್ಯ ಬಗ್ಗೆ ಮೆಚ್ಚುಗೆ ಸೂಚಿಸಿ ಸುಂದರ ಸಾಲುಗಳನ್ನು ಬರೆದುಕೊಂಡಿದ್ದಾರೆ. ತಾವು ದೀಪಕ್ ಅವರ ಅಭಿಮಾನಿ ಮತ್ತು ಮುಂದಿನ ದಿನಗಳಲ್ಲಿ ಅದ್ಭುತ ನಟನೊಂದಿಗೆ ಅವಕಾಶಗಳು ಸಿಗಲಿ ಎಂದು ಹೇಳಿಕೊಂಡಿದ್ದಾರೆ.

ದೀಪಕ್ ಸುಬ್ರಮಣ್ಯ ವ್ಯಕ್ತಿತ್ವ

ಜಗತ್ತಿನ ದೃಷ್ಟಿಯಲ್ಲಿ ನಾನು ಕೊನೆಗೂ ಜಯಂತ್‌ನ ಬಂಧನದಿಂದ ಮುಕ್ತಳಾಗಿರಬಹುದು. ಆದರೆ ನಿಜ ಹೇಳಬೇಕೆಂದರೆ ನನಗೆ ಸ್ವಲ್ಪ ಸ್ಟಾಕ್‌ಹೋಮ್ ಸಿಂಡ್ರೋಮ್ ಆಗಿದೆಯೇನೋ ಅನ್ನಿಸುತ್ತಿದೆ. ತೆರೆಯ ಮೇಲೆ ಜಯಂತ್‌ನ ನಟನೆ ಎಷ್ಟು ಅದ್ಭುತವಾಗಿದೆಯೋ, ತೆರೆ ಹಿಂದೆ ದೀಪಕ್ ಅವರ ವ್ಯಕ್ತಿತ್ವವೂ ಅಷ್ಟೇ ಅದ್ಭುತ. ಅವರ ಜೊತೆ ಪ್ರತಿಯೊಂದು ದೃಶ್ಯದಲ್ಲೂ ಅಭಿನಯಿಸುವುದು ನನಗೆ ಕಲಿಯುವ ಅವಕಾಶವಾಗಿತ್ತು. ಅವರ ಅಭಿನಯವನ್ನು ಹತ್ತಿರದಿಂದ ನೋಡುವುದು ನಿಜಕ್ಕೂ ಒಂದು ಅನುಭವ.

ಮೆಚ್ಚುಗೆಯನ್ನು ವ್ಯಕ್ತಪಡಿಸದೇ ಇರಲಾಗಲಿಲ್ಲ

ತೆರೆ ಹಿಂದೆ ಅವರು ಒಬ್ಬ ನಿಜವಾದ ಜಂಟಲ್‌ಮನ್. ಯಾವಾಗಲೂ ನನ್ನ ಬಗ್ಗೆ ಕಾಳಜಿ ವಹಿಸಿ, ತುಂಬಾ ಆತ್ಮೀಯವಾಗಿ ನಡೆದುಕೊಂಡರು. ನಾನು ಈ ರೀತಿ ಹೇಳುವುದು ಕಥೆಗೆ ಸ್ವಲ್ಪ ವಿರುದ್ಧವಾಗಬಹುದು, ಇದನ್ನು ಸಾರ್ವಜನಿಕವಾಗಿ ಹೇಳಬಾರದೇನೋ, ಆದರೆ ಅವರ ಬಗ್ಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸದೇ ಇರಲಾಗಲಿಲ್ಲ. ಮತ್ತೊಮ್ಮೆ ನಿಮ್ಮೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ, ದೀಪಕ್ ಅವರೇ ಎಂದು ನಟಿ ಯಮುನಾ ಬರೆದುಕೊಂಡಿದ್ದಾರೆ.

ನಾನು ದೀಪಕ್ ಅವರ ಅಭಿಮಾನಿ!

ಈ ಹಿಂದೆ ಲಕ್ಷ್ಮೀ ನಿವಾಸ ಸೀರಿಯಲ್ ತಂಡ ಸೇರಿಕೊಂಡ ಸಂದರ್ಭದಲ್ಲಿಯೂ ದೀಪಕ್ ಬಗ್ಗೆ ಯಮುನಾ ಬರೆದುಕೊಂಡಿದ್ದರು. ಜೀ ಕನ್ನಡದ ಲಕ್ಷ್ಮಿನಿವಾಸ ಧಾರಾವಾಹಿಯ ನಾಯಕ ನಟರ ಜೊತೆ ಕೆಲಸ ಮಾಡುವ ಅನುಭವ ನನಗೆ ನಿಜವಾಗಿಯೂ ಒಂದು ದೊಡ್ಡ ಕಲಿಕೆಯಾಗಿದೆ. ಹಿಂದೆ ನಾನು ಅವರ ಅದ್ಭುತ ಅಭಿನಯದ ಅಭಿಮಾನಿಯಾಗಿದ್ದೆ. ಆದರೆ ಅವರ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರ ಕೆಲಸದ ನೈತಿಕತೆ, ಪ್ರತಿಯೊಂದು ದೃಶ್ಯ ಮತ್ತು ಸಂಭಾಷಣೆಗೆ ಅವರು ನೀಡುವ ಮೌಲ್ಯ. ಇವೆಲ್ಲವೂ ಅವರನ್ನು ಇನ್ನಷ್ಟು ಗೌರವದಿಂದ ಮೆಚ್ಚುವಂತೆ ಮಾಡಿವೆ.

ಇದನ್ನೂ ಓದಿ: ಕಲಿಯುಗ ಸಿನಿಮಾವೇ ಆಯ್ತು ಲಕ್ಷ್ಮೀನಿವಾಸ; ಶ್ರೀನಿವಾಸನ ಕೈ ಕಟ್, ಜಾನುಗೆ 2ನೇ ಮದುವೆ

ಪ್ರತಿ ದೃಶ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಅವರ ತೊಡಗಿಸಿಕೊಳ್ಳುವಿಕೆ, ಈ ಯೋಜನೆಗೆ ಅವರ ಕೊಡುಗೆ, ಸಹನಟರಿಗೆ ನೀಡುವ ಬೆಂಬಲ ಮತ್ತು ಗೌರವ—ಇವೆಲ್ಲವೂ ನಿಜವಾಗಿಯೂ ಪ್ರೇರಣಾದಾಯಕವಾಗಿವೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಕರುನಾಡು ಮೆಚ್ಚಿದ Lakshmi Nivasa ಸೀರಿಯಲ್​ ದಂಪತಿ ಬಾಳಲ್ಲಿ ಬಿರುಗಾಳಿ: ಮುರಿದು ಬೀಳತ್ತಾ ಏಳು ಜನ್ಮಗಳ ಬಂಧ