ಸಂತೋಷ್ ಹಣೆಗೆ ಗನ್ ಹಿಡಿದ ಜಯಂತ್…. ಇದು ‘ಲಕ್ಷ್ಮೀ ನಿವಾಸ’ ಮುಕ್ತಾಯದ ಸೂಚನೆಯೆ?
Lakshmi Nivasaದ: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇಲ್ಲಿವರೆಗೂ ಪ್ರತಿಯೊಬ್ಬರು ಕಾಯುತ್ತಿದ್ದ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಜಯಂತ್ ಕೈಯಿಂದ ಆದ ಕೊಲೆಯನ್ನು ಎಲ್ಲರೆದುರು ಸಾಕ್ಷಿ ಸಮೇತ ಸಂತೋಷ್ ತೆರೆದಿಟ್ಟರೆ, ಆತನ ಹಣೆ ಮೇಲೆ ಗನ್ ಇಟ್ಟಿದ್ದಾನೆ ಜಯಂತ್. ಅಂದ್ರೆ ಸೀರಿಯಲ್ ಮುಗಿಯುತ್ತಾ?

ಲಕ್ಷ್ಮೀ ನಿವಾಸ
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ನಿವಾಸ’ ಹಾಗೂ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿಗಳ ಮಹಾಸಂಗಮ ನಡೆಯುತ್ತಿದೆ. ಜೊತೆಗೆ ಲಕ್ಷ್ಮೀ ನಿವಾಸ ಧಾರಾವಾಹಿಯ ಬಿಗ್ ಟ್ವಿಸ್ಟ್ ಇದೀಗ ತೆರೆದುಕೊಂಡಿದ್ದು, ಜಯಂತ್ ಕರಾಳ ಮುಖದ ಅನಾವರಣವಾಗುವ ಸಮಯ ಬಂದಿದೆ.

ಏನಾಗ್ತಿದೆ ಲಕ್ಷ್ಮೀ ನಿವಾಸದಲ್ಲಿ
ಲಕ್ಷ್ಮೀ ನಿವಾಸ ಹಾಗೂ ಆದಿ ಲಕ್ಷ್ಮೀ ಪುರಾಣದ ಎರಡೂ ಕುಟುಂಬಗಳು ಜೊತೆ ಸೇರಿದೆ. ಮೊದಲಿಗೆ ಧರ್ಮರಾಜ್ ಮನೆಯಲ್ಲಿ ಜೋರಾಗಿಯೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆದಿದ್ದಾಯಿತು. ಇದೀಗ ಜಯಂತ್ ಮನೆಯಲ್ಲಿ ದೊಡ್ಡದಾಗಿ ಪಾರ್ಟಿ ಕೂಡ ನಡೆಯುತ್ತಿದೆ. ಈ ಪಾರ್ಟಿ ನಡುವೆ ಜಯಂತ್ ಸತ್ಯವನ್ನು ಸಂತೋಷ್ ಎಲ್ಲರೆದುರು ಬಯಲು ಮಾಡಿದ್ದಾನೆ.
ಜಯಂತ್ ವಿಡಿಯೋ ಶೇರ್ ಮಾಡಿದ ಸಂತೋಷ್
ವಿಶ್ವನ ಮನೆಯಲ್ಲಿ ಜಾನೂವನ್ನು ನೋಡಲು ತಡರಾತ್ರಿ ಬಂದಿದ್ದ ಜಯಂತ್ ಗೆ ಎದುರಾಗಿ ಲಲಿತಾ ನಿಂತಿದ್ದರು. ಅವರನ್ನು ಜಯಂತ್ ತಳ್ಳುವಾಗ, ಬಿದ್ದು ಸಾವನ್ನಪ್ಪಿರುತ್ತಾರೆ. ಹೆಂಡತಿಯನ್ನು ಕಳೆದುಕೊಂಡು ಲಲಿತಾ ಗಂಡ ತಂದೆ, ಮಕ್ಕಳು ಗೋಳಾಡಿದರೆ, ಇತ್ತ ಅತ್ತಿಗೆಯನ್ನು ಕಳೆದುಕೊಂಡ ಲಕ್ಷ್ಮೀಯೂ ನೊಂದಿದ್ದರು. ಇದೀಗ ಆ ವಿಡಿಯೋವನ್ನು ಸಂತೋಷ್ ಮನೆಮಂದಿ ಮುಂದೆ ಬಯಲು ಮಾಡಿದ್ದಾನೆ.
ಸಿಟ್ಟಿಗೆದ್ದ ಜಯಂತ್
ಜಯಂತ್ ವಿಡೀಯೋ ನೋಡಿದ ಮೇಲೆ ಮನೆ ಮಂದಿ ಸಿಟ್ಟಿಗೆದ್ದು, ಜಯಂತ್ ನನ್ನು ಈ ಕೂಡಲೇ ಪೊಲೀಸರಿಗೆ ಒಪ್ಪಿಸಲು ಹೇಳಿದಾಗ, ಕೈಗೆ ಗನ್ ತೆಗೆದುಕೊಳ್ಳುವ ಜಯಂತ್, ಕೊಲೆಗಾರನಿಗೆ ಒಂದು ಕೊಲೆ ಮಾಡಿದ್ರು ಅಷ್ಟೇ ಶಿಕ್ಷೆ, ಎರಡು ಕೊಲೆ ಮಾಡಿದ್ರು ಅಷ್ಟೇ ಶಿಕ್ಷೆ ಎನ್ನುತ್ತಾ ಗನ್ ಸಂತೋಷ್ ಹಣೆ ಮೇಲೆ ಇಡುತ್ತಾನೆ.
ಇದು ನಿಜಾನ? ಅಥವಾ ಸಂತೋಷ್ ಕನಸಾ?
ಪ್ರೊಮೋ ನೋಡಿದ ವೀಕ್ಷಕರು ಇದು ಸಂತೋಷ್ ಕನಸು. ಇದು ನಡೆಯೋದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಪಾರ್ಟಿಯಲ್ಲಿ ಕುಡಿದು ಅಮಲೇರಿಸಿಕೊಂಡಿರುವ ಸಂತೋಷ್ ಇದನ್ನೆಲ್ಲಾ ಸುಮ್ನೆ ಯೋಚನೆ ಮಾಡುತ್ತಿದ್ದಾನೆ ಎನ್ನುತ್ತಿದ್ದಾರೆ.
ಸೀರಿಯಲ್ ಮುಗಿಯುತ್ತಾ?
ಇನ್ನು ಹೆಚ್ಚಿನ ಜನರು ಹೇಳುವಂತೆ, ಜಯಂತ್ ನಿಜ ಮುಖ ಬಯಲಾದರೆ, ಇನ್ನು ಹೆಚ್ಚು ದಿನ ಸೀರಿಯಲ್ ಇರೋದಿಲ್ಲ. ಶೀಘ್ರದಲ್ಲೇ ಸೀರಿಯಲ್ ಮುಗಿಸುವ ಸೂಚನೆ ಇದು. ಇಲ್ಲಾಂದ್ರು ಈ ಕತೆ ನೋಡಿ ಬೇಜಾರಾಗಿದೆ, ಆ ಸಂತೋಷ್ ನನ್ನು ಕೊಂದು ಸೀರಿಯಲ್ ಮುಗಿಸಿಬಿಡಿ ಎಂದು ಸಹ ಹೇಳುತ್ತಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

