- Home
- Entertainment
- TV Talk
- ಕರುನಾಡು ಮೆಚ್ಚಿದ Lakshmi Nivasa ಸೀರಿಯಲ್ ದಂಪತಿ ಬಾಳಲ್ಲಿ ಬಿರುಗಾಳಿ: ಮುರಿದು ಬೀಳತ್ತಾ ಏಳು ಜನ್ಮಗಳ ಬಂಧ
ಕರುನಾಡು ಮೆಚ್ಚಿದ Lakshmi Nivasa ಸೀರಿಯಲ್ ದಂಪತಿ ಬಾಳಲ್ಲಿ ಬಿರುಗಾಳಿ: ಮುರಿದು ಬೀಳತ್ತಾ ಏಳು ಜನ್ಮಗಳ ಬಂಧ
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಯಂತ್‌ನ ಸೈಕೋಪಾತ್ ಪ್ರೀತಿಯಿಂದ ಬೇಸತ್ತಿರುವ ಜಾಹ್ನವಿ, ನಿಜಬಣ್ಣವನ್ನು ಮನೆಯವರ ಮುಂದೆ ಬಯಲು ಮಾಡಿದ್ದಾಳೆ. ವೆಂಕಿ ಅಮ್ಮನಿಗೆ ನೀಡುತ್ತಿದ್ದ ಚಿತ್ರಹಿಂಸೆಯನ್ನು ಪತ್ತೆಹಚ್ಚಿ, ಅವನ ಕ್ರೌರ್ಯವನ್ನು ವಿರೋಧಿಸಿ ತನ್ನ ಮಂಗಳಸೂತ್ರವನ್ನೇ ತೆಗೆದು ಕೈಗೆ ಇಟ್ಟಿದ್ದಾಳೆ.

ಇದ್ದರೆ ಹೀಗಿರಬೇಕು
ಇದ್ದರೆ ಇಂಥ ಗಂಡ ಇರಬೇಕು, ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದು ಎಷ್ಟೋ ಹೆಣ್ಣುಮಕ್ಕಳು ಅಂದುಕೊಂಡಿದ್ದು ಲಕ್ಷ್ಮೀ ನಿವಾಸ (Lakshmi Nivasa) ಜಯಂತ್ನನ್ನು ನೋಡಿ. ಆತ ಪತ್ನಿ ಜಾಹ್ನವಿಗೆ ತೋರುತ್ತಿದ್ದ ಪ್ರೀತಿ ನೋಡಿ ಫಿದಾ ಆದವರೇ ಹೆಚ್ಚು.
ಸೈಕೋಪಾತ್ ಪ್ರೀತಿ
ಆದರೆ, ಯಾವತ್ತು ಇದು ಪ್ರೀತಿ ಅಲ್ಲ, ಬದಲಿಗೆ ಸೈಕೋಪಾತ್ ಪ್ರೀತಿ ಎಂದು ತಿಳಿಯುತ್ತಲೇ ದೇವರೇ ನನ್ನ ಗಂಡ ಪ್ರೀತಿ ಮಾಡದಿದ್ರೂ ಪರವಾಗಿಲ್ಲ, ಜಯಂತ್ನಂಥ ಗಂಡ ಬೇಡಪ್ಪಾ ಎಂದು ಅದೇ ಯುವತಿಯರು ಬೇಡಿಕೊಂಡರು. ಅಂಥ ಕ್ಯಾರೆಕ್ಟರ್ ಲಕ್ಷ್ಮೀ ನಿವಾಸ ಜಯಂತ್ದು.
ಜಯಂತ್-ಜಾಹ್ನವಿ ಬಾಳಲ್ಲಿ ಬಿರುಗಾಳಿ
ಇದೀಗ ಅದನದ್ದೇ ಭಾಷೆಯಲ್ಲಿ ಅವನಿಗೆ ತಿರುಗೇಟು ನೀಡುತ್ತಿದ್ದಾಳೆ ಜಾಹ್ನವಿ. ಅದೇನೇ ಇದ್ದರೂ ಈ ಜೋಡಿ ಎಂದರೆ ಸೀರಿಯಲ್ ಪ್ರೇಮಿಗಳಿಗೆ ಅದೇನೋ ಒಂಥರಾ ಖುಷಿ. ಆದರೆ ಈಗ ಜಾಹ್ನವಿ ಮತ್ತು ಜಯಂತ್ ಬಾಳಲ್ಲಿ ಬಿರುಗಾಳಿ ಬಂದಿದೆ. ಇಬ್ಬರೂ ಬೇರೆ ಬೇರೆ ಆಗುತ್ತಾರಾ ಎನ್ನುವ ಸಂದೇಹ ಕಾಡುತ್ತಿದೆ.
ವೆಂಕಿ ಅಮ್ಮನಿಗೆ ಚಿತ್ರಹಿಂಸೆ
ಇದಕ್ಕೆ ಕಾರಣ ವೆಂಕಿಯ ಅಮ್ಮನನ್ನು ಜಯಂತ್ ಬಂಧಿಸಿ ಚಿತ್ರಹಿಂಸೆ ಕೊಡುತ್ತಿದ್ದಾನೆ. ಇದೂ ಒಂದು ರೀತಿಯ ಸೈಕೋಪಾಥ್ ಕೆಲಸವೇ. ತಾನು ಪ್ರೀತಿಸಿದವರನ್ನು ಬೇರೆ ಯಾರೂ ಪ್ರೀತಿಸಬಾರದು ಎನ್ನುವ ಮನೋ ಕಾಯಿಲೆ ಇದು. ಅದಕ್ಕಾಗಿಯೇ ವೆಂಕಿಯನ್ನು ತನಗಿಂತ ಅವನ ಅಮ್ಮ ಹೆಚ್ಚಾಗಿ ಪ್ರೀತಿಸ್ತಾಳೆ ಎನ್ನುವ ಕಾರಣಕ್ಕೆ, ಅವಳನ್ನು ಕಿಡ್ನ್ಯಾಪ್ ಮಾಡಿಸಿ ಹಿಂಸೆ ಕೊಡುತ್ತಿದ್ದಾನೆ.
ಮಾರುವೇಷದಲ್ಲಿ ಜಾಹ್ನವಿ
ಅದನ್ನು ಅರಿತಿರುವ ಜಾಹ್ನವಿ, ಮಾರುವೇಷದಲ್ಲಿ ಹೋಗಿ ವೆಂಕಿ ಅಮ್ಮನನ್ನು ಬಿಡಿಸಿದ್ದಾಳೆ. ಅಲ್ಲಿಗೆ ಬಂದಿರುವ ಜಯಂತ್ಗೆ ಸತ್ಯ ಹೇಳಿದ್ದಾಳೆ. ಮನೆಯಲ್ಲಿ ಇರುವ ಎಲ್ಲರಿಗೂ ಜಯಂತ್‌ನ ನಿಜ ಗುಣವನ್ನು ಬಯಲು ಮಾಡಿದ್ದಾಳೆ. ಮನುಷ್ಯ ರೂಪದಲ್ಲಿ ಇರುವ ರಾಕ್ಷಸ ಇವರು ಎಂದಿದ್ದಾಳೆ.
ಮಂಗಳಸೂತ್ರ ತೆಗೆದಳು!
ತಾನು ಇನ್ನು ಇವರ ಜೊತೆ ಬಾಳಲ್ಲ ಎಂದು ಮಂಗಳಸೂತ್ರವನ್ನು ಜಯಂತ್ ಕೈಗೆ ಇಟ್ಟಿದ್ದಾಳೆ. ತನ್ನಿಂದ ಇವರ ಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾಳೆ. ಸೀರಿಯಲ್ ಮುಗಿಯುವ ಟೈಮ್ ಬಂತಾ? ವಿಶ್ವನ ಅಮ್ಮನನ್ನು ಜಯಂತ್ ಕೊಲೆ ಮಾಡಿರುವ ವಿಷ್ಯ ಗೊತ್ತಾದ್ರೆ ಅವನಿಗೆ ಜೈಲು ಪಕ್ಕಾ. ಅಲ್ಲಿಗೆ ಸೀರಿಯಲ್ ಮುಗಿಯತ್ತಾ ಎನ್ನುವ ಸಂದೇಹ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

