2ನೇ ವಿಶ್ವಯುದ್ಧದಲ್ಲಿ ಭಾಗಿಯಾದ ನರ್ಸ್‌ಗೆ 100ರ ಸಂಭ್ರಮ: ಸ್ಕೈಡೈವ್ ಮಾಡಿ ಆಚರಣೆ
- ಸ್ಕೈ ಡೈವ್ ಮಾಡಿದ 100 ವರ್ಷದ ಅಜ್ಜಿ
- 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ ನರ್ಸ್ ಇವರು
- ರೇಮಂಡ್ ಸುಲ್ಲಿವಾನ್ ಸಾಧನೆಗೆ ಬೆರಗಾದ ಜನ
2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ ನರ್ಸ್‌ವೊಬ್ಬರು ತಮ್ಮ 100ನೇ ಹುಟ್ಟುಹಬ್ಬವನ್ನು ಎಲ್ಲರಿಗಿಂತ ವಿಭಿನ್ನವಾಗಿ ವಿಶಿಷ್ಟವಾಗಿ ಆಚರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನಮ್ಮಲ್ಲಿ ಅನೇಕರು ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ತಮ್ಮ ವಯಸ್ಸಿನ ಮಿತಿಯನ್ನು ಮೀರಿ ಅನೇಕ ಸಾಧನೆಗಳನ್ನು ಮಾಡಿದ ಹಲವು ವಯೋವೃದ್ಧರನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಅಂತಹ ಸಾಧಕರ ಪಾಲಿಗೆ ಈ 100 ವರ್ಷದ ಅಜ್ಜಿ ಸೇರ್ಪಡೆಯಾಗಿದ್ದಾರೆ. ಹೌದು ಈ ಅಜ್ಜಿ ಸ್ಕೈಡೈವ್ ಮಾಡುವ ಮೂಲಕ ತಮ್ಮ ನೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಸ್ಕೈಡೈವ್ ಎಂಬುದು ಸಾಹಸಿ ಕ್ರೀಡೆಯಾಗಿದ್ದು, ಯುವ ಸಮುದಾಯಕ್ಕೆ ಮೀಸಲಾದ ಸಾಹಸ ಕ್ರೀಡೆ ಎಂದೇ ಹೆಸರಾಗಿದೆ. ಅದಾಗ್ಯೂ ಈ ಅಜ್ಜಿ ಈ ಸಾಧನೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ರೇಮಂಡ್ ಸುಲ್ಲಿವಾನ್ (Raymonde Sullivan) ಎಂಬುವವರೇ ಇಂತಹ ಸಾಧನೆ ಮಾಡಿದ ವಯೋವೃದ್ಧೆ
ಸ್ಕೈಡೈವಿಂಗ್ ಸಾಮಾನ್ಯವಾಗಿ ಮಾನಸಿಕ ಮತ್ತು ದೈಹಿಕ ಪುನರ್ಯೌವನಗೊಳಿಸುವಿಕೆಗೆ ಸಂಬಂಧಿಸಿದೆ. ಇದು ಒಬ್ಬ ವ್ಯಕ್ತಿಗೆ ಅವನು ಅಥವಾ ಅವಳು ಎಂದಿಗೂ ಅನುಭವಿಸದ ಅಡ್ರಿನಾಲಿನ್ ರಶ್ (ಒಂದು ರೀತಿಯ ಉತ್ಸಾಹ) ಅನ್ನು ನೀಡುತ್ತದೆ. ಒಬ್ಬ ವ್ಯಕ್ತಿಯು ವಿಮಾನದಿಂದ ಜಿಗಿಯಲು ಗಟ್ಟಿಯಾದ ಹೃದಯ ಮತ್ತು ಪ್ರಚಂಡ ಮಾನಸಿಕ ಶಕ್ತಿಯನ್ನು ಹೊಂದಿರಬೇಕು. ತಮ್ಮ ವೃದ್ಧಾಪ್ಯದಲ್ಲಿ ಅನೇಕರಿಗೆ ತಮ್ಮ ಸ್ವಾಸ್ಥ್ಯ, ಹೃದಯ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಖಾತರಿ ಇರುವುದಿಲ್ಲ. ಈ ಕಾರಣದಿಂದಲೇ ತನ್ನ 100 ನೇ ಹುಟ್ಟುಹಬ್ಬದಂದು ತನ್ನ ಜೀವನದಲ್ಲೇ ಮೊಟ್ಟಮೊದಲ ಬಾರಿಗೆ ಸ್ಕೈಡೈವಿಂಗ್ ಮಾಡಲು ಯತ್ನಿಸಿ ಅದರಲ್ಲಿ ಯಶಸ್ವಿಯಾದ ರೇಮಂಡ್ ಸುಲ್ಲಿವನ್ ಬಗ್ಗೆ ಜಗತ್ತು ಬೆರಗುಗೊಂಡಿದೆ.
14 ಸಾವಿರ ಅಡಿ ಎತ್ತರ ಆಕಾಶದಲ್ಲಿ ಹಾರುತ್ತಲೇ ಪಿಜ್ಜಾ ತಿಂದ ಗೆಳೆಯರು!
ರೇಮಂಡ್ ಸುಲ್ಲಿವಾನ್ ಅವರನ್ನು ಸ್ಕೈಡೈವರ್ ಸೆಬಾಸ್ಟಿಯನ್ ಅವರು ಆಕಾಶಕ್ಕೆ ಕರೆದೊಯ್ದರು. ನಾನು ಇದನ್ನು ಎಂದಿಗೂ ಮಾಡಿಲ್ಲ, ಮತ್ತು ನಾನು ನನ್ನ 100ನೇ ವರ್ಷದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ಹೀಗಾಗಿ ಆದ್ದರಿಂದ ನಾನು ಇದನ್ನು(ಸ್ಕೈಡೈವಿಂಗ್) ಕೂಡ ಮಾಡಬಬೇಕೆಂದು ಬಯಸಿದೆ. ಇದು ಭಯಾನಕವಾಗಿದೆ ಎಂದು ನಾ ಹೇಳಬಲ್ಲೆ ರೇಮಂಡ್ ನಂತರ ಮಾಧ್ಯಮಗಳಿಗೆ ಹೇಳಿದ್ದಾರೆ.
17982 ಅಡಿ ಎತ್ತರದ ಖರ್ದುಂಗ್ಲಾದಲ್ಲಿ ಸ್ಕೈ ಡೈವ್: ದಾಖಲೆ ಬರೆದ ಭಾರತೀಯ ವಾಯುಸೇನೆ!
ಯಶಸ್ವಿ ಸ್ಕೈಡೈವ್ ನಂತರ, ರೇಮಂಡ್ ಸುಲ್ಲಿವಾನ್ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಫೋರ್ಟ್ ಪಿಯರ್ಸ್‌ನಲ್ಲಿರುವ (Fort Pierce) ಕ್ಯಾಸಲ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸುಲ್ಲಿವಾನ್ ಎರಡನೇ ವಿಶ್ವ ಸಮರದಲ್ಲಿ ದಾದಿಯಾಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದರು. 2020 ರಲ್ಲಿ, 103 ವರ್ಷದ ವ್ಯಕ್ತಿಯೊಬ್ಬರು ಹೀಗೆ ಸ್ಕೈ ಡೈವ್ ಮಾಡಿ ಸ್ಕೈ ಡೈವ್ ಮಾಡಿದ ವಿಶ್ವದ ಅತ್ಯಂತ ಹಿರಿಯ ಸ್ಕೈಡೈವರ್ ಎನಿಸಿಕೊಂಡರು.
ಜನವರಿ 4, 1917 ರಂದು ಜನಿಸಿದ ಶತಾಯುಷಿಯಾದ ಆಲ್ಫ್ರೆಡ್ "ಅಲ್" ಬ್ಲಾಷ್ಕೆ (Alfred "Al" Blaschke) ಅವರು 103 ವರ್ಷಗಳು ಮತ್ತು 181 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿ ಟಂಡೆಮ್ ಪ್ಯಾರಾಚೂಟ್ ಜಂಪ್ (ಪುರುಷ)ಮಾಡಿದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಟ ಸೇರಿದರು.