ಟಿಕೆಟ್ ಬುಕ್ ಮಾಡಿದ್ರೂ ಜಾಗಾನೇ ಇಲ್ಲ, ಎಸಿ ಕೋಚ್‌ನಲ್ಲಿ ಪ್ರಯಾಣಿಕನ ಗೋಳು ಕೇಳೋರಿಲ್ಲ!
ಭಾರತದಲ್ಲಿ ಅತೀ ಹೆಚ್ಚು ಜನರು ಬಳಸೋ ಸಾರಿಗೆ ವ್ಯವಸ್ಥೆ ರೈಲು.ಆದರೂ ರೈಲು ಪ್ರಯಾಣದಲ್ಲಿ ಕೆಲವೊಮ್ಮೆ ಕಿರಿಕಿರಿ ತಪ್ಪುವುದಿಲ್ಲ. ಜನರಲ್ ಕೋಚ್‌ಗೆ ಹತ್ತುವ ಪ್ರಯಾಣಿಕರು ಈಗಾಗಲೇ ಟಿಕೆಟ್ ಬುಕ್ ಆಗಿರುವ ಕೋಚ್‌ಗೆ ಹತ್ತಿ ಉಳಿದ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುತ್ತಾರೆ. ಅಂಥದ್ದೇ ವೀಡಿಯೋವೊಂದು ಇತ್ತೀಚಿಗೆ ವೈರಲ್ ಆಗಿದೆ.
ಭಾರತದಲ್ಲಿ ಅತೀ ಹೆಚ್ಚು ಜನರು ಬಳಸೋ ಸಾರಿಗೆ ವ್ಯವಸ್ಥೆ ರೈಲು. ಕಡಿಮೆ ದರದಲ್ಲಿ ಆರಾಮವಾಗಿ ಪ್ರಯಾಣ ಮಾಡಬಹುದು ಅನ್ನೋ ಕಾರಣಕ್ಕೆ ಬಹುತೇಕರು ಟ್ರೈನ್ ಜರ್ನಿ ಆಯ್ಕೆ ಮಾಡುತ್ತಾರೆ. ಸೀಟಿಲ್ಲದೆ ನೂಕುನುಗ್ಗಲಿನಲ್ಲಿ ಕಷ್ಟಪಡುವುದು ಬೇಡವೆಂದು ಕೆಲವರು ಸ್ಲೀಪರ್, ಎಸಿ ಕೋಚ್‌ಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ. ಆದರೂ ರೈಲು ಪ್ರಯಾಣದಲ್ಲಿ ಕೆಲವೊಮ್ಮೆ ಕಿರಿಕಿರಿ ತಪ್ಪುವುದಿಲ್ಲ. ಜನರಲ್ ಕೋಚ್‌ಗೆ ಹತ್ತುವ ಪ್ರಯಾಣಿಕರು ಈಗಾಗಲೇ ಟಿಕೆಟ್ ಬುಕ್ ಆಗಿರುವ ಕೋಚ್‌ಗೆ ಹತ್ತಿ ಉಳಿದ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುತ್ತಾರೆ.
ಪಾಟ್ನಾ ಜಂಕ್ಷನ್‌ನಲ್ಲಿ ಬ್ರಹ್ಮಪುತ್ರ ಎಕ್ಸ್‌ಪ್ರೆಸ್‌ನೊಳಗೆ ಕಿಕ್ಕಿರಿದು ಜನರು ತುಂಬಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ. ಎಕ್ಸ್‌ನಲ್ಲಿ ವಿಜಯ್ ಕುಮಾರ್ ಎಂಬ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಯಾಣಿಕರ ಗಮನಕ್ಕೆ, ಮೇ-19 ರಿಂದ ಜೂ.2ರವರೆಗೆ ಕರ್ನಾಟಕ ತಲುಪುವ ಮತ್ತು ಹೊರಡುವ ರೈಲುಗಳ ಸಂಚಾರ ರದ್ದು
ವಿಜಯ್ ಕುಮಾರ್ ತಮ್ಮ ಕುಟುಂಬವು ರೈಲು ಹತ್ತುವಾಗ ಕಾಯ್ದಿರಿಸಿದ ಆಸನಗಳನ್ನು ಪಡೆಯುವಲ್ಲಿ ತೊಂದರೆಗಳಾಗುತ್ತಿರುವ ಬಗ್ಗೆ ಬರೆದಿದ್ದಾರೆ. 'ನನ್ನ ಕುಟುಂಬ ಮತ್ತು ನಾನು ರೈಲಿನಲ್ಲಿ ಹತ್ತಿದೆವು. ಆದರೆ ನಾವು ಈಗಾಗಲೇ ಬುಕ್ ಮಾಡಿದ ಸೀಟಿನಲ್ಲಿ ಈಗಾಗಲೇ ಯಾರೋ ಕುಳಿತಿದ್ದರು. ಇದು ಬುಕ್ ಆಗಿರುವ ಸೀಟು ಎಂದು ಹೇಳಿದರೂ ಕೇಳಲ್ಲಿಲ್ಲ. ರೈಲಿನಲ್ಲಿ ನಿಯಮದ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ' ಎಂದರು.
'ತಮ್ಮ ಕುಟುಂಬಕ್ಕೆ ಎಂಟು ಆಸನಗಳನ್ನು ಕಾಯ್ದಿರಿಸಿದ್ದರೂ, ಅನಧಿಕೃತ ಪ್ರಯಾಣಿಕರು ಕಾಯ್ದಿರಿಸಿದ ಸೀಟುಗಳನ್ನು ಆಕ್ರಮಿಸಿಕೊಂಡಿದ್ದರಿಂದ ಕೇವಲ ಆರು ಸೀಟುಗಳು ಮಾತ್ರ ಲಭ್ಯವಾಯಿತು' ಎಂದು ಕುಮಾರ್ ಹೇಳಿದ್ದಾರೆ. ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಅವರು, ಸಾಮಾನ್ಯ ಟಿಕೆಟ್ ಹೊಂದಿರುವವರು ಕಾಯ್ದಿರಿಸಿದ ಕೋಚ್‌ಗಳಿಗೆ ಬಂದರೆ ಈಗಾಗಲೇ ಟಿಕೆಟ್ ಬುಕ್ ಮಾಡಿದವರು ಪ್ರಯಾಣಿಸುವುದು ಹೇಗೆ ಎಂಬ ಬೇಸರ ವ್ಯಕ್ತಪಡಿಸಿದರು.
ಕಾಶಿ ಎಕ್ಸ್‌ಪ್ರೆಸ್‌ನಲ್ಲಿ ವಿತರಿಸಿದ ಆಹಾರದ ಪ್ಯಾಕೆಟ್‌ನಲ್ಲಿತ್ತು ಹುಳ, ವೀಡಿಯೋ ವೈರಲ್
ರೈಲ್ವೇ ಸೇವಾ, ವೈರಲ್ ಪೋಸ್ಟ್‌ಗೆ ಕಾಮೆಂಟ್ ಮಾಡಿದೆ. ಪ್ರಯಾಣಿಕರಯ ತಮ್ಮ PNR ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಲು ಕೇಳಿಕೊಂಡಿದೆ. ಸಮಸ್ಯೆಯನ್ನು ಪರಿಶೀಲಿಸಿ ಸಹಾಯವನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದೆ.
'ದಯವಿಟ್ಟು ನಿಮ್ಮ PNR ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ. ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು ನಮಗೆ ಅನುವು ಮಾಡಿಕೊಡಲು DM ಮಾಡಿ. ನೀವು ನೇರವಾಗಿ https://railmadad.indianrailways.gov.inನಲ್ಲಿ ದೂರನ್ನು ದಾಖಲಿಸಬಹುದು. ತ್ವರಿತ ಪರಿಹಾರಕ್ಕಾಗಿ 139 ಗೆಡಯಲ್ ಮಾಡಬಹುದು' ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.