Asianet Suvarna News Asianet Suvarna News

ಕಾಶಿ ಎಕ್ಸ್‌ಪ್ರೆಸ್‌ನಲ್ಲಿ ವಿತರಿಸಿದ ಆಹಾರದ ಪ್ಯಾಕೆಟ್‌ನಲ್ಲಿತ್ತು ಹುಳ, ವೀಡಿಯೋ ವೈರಲ್

ಇತ್ತೀಚೆಗೆ ಕಾಶಿ ಎಕ್ಸ್‌ಪ್ರೆಸ್‌ನಲ್ಲಿ ಒಬ್ಬ ಪ್ರಯಾಣಿಕನು ತನ್ನ ಆಹಾರದಲ್ಲಿ ಕೀಟವೊಂದು ಸಿಕ್ಕಿರುವ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Train Passenger Finds Insect in Food Ordered on Kashi Express, Indian Railways Responds Vin
Author
First Published May 16, 2024, 10:11 AM IST

ರೈಲು, ಫ್ಲೈಟ್‌ನಲ್ಲಿ ಪ್ರಯಾಣಿಸುವಾಗ ಆಹಾರದಲ್ಲಿ ಕೀಟ, ಹುಳ ಮೊದಲಾದ ಜೀವಿಗಳು ಸಿಗುವುದು ಹೊಸದೇನಲ್ಲ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನು ಸಹ ನೀಡುತ್ತಾರೆ. ಆ ಕುರಿತಾಗಿ ಅಧಿಕಾರಿಗಳು ತಕ್ಷಣಕ್ಕೆ ಕ್ರಮ ತೆಗೆದುಕೊಂಡರೂ ನಂತರದ ದಿನಗಳಲ್ಲಿ ಮತ್ತದೇ ತಪ್ಪು ಪುನರಾವರ್ತನೆಯಾಗುತ್ತದೆ. ಇತ್ತೀಚೆಗೆ ಕಾಶಿ ಎಕ್ಸ್‌ಪ್ರೆಸ್‌ನಲ್ಲಿ ಒಬ್ಬ ಪ್ರಯಾಣಿಕನು ತನ್ನ ಆಹಾರದಲ್ಲಿ ಕೀಟವೊಂದು ಸಿಕ್ಕಿರುವ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪರ್ವೇಜ್ ಹಶ್ಮಿ ಎಂಬ ಬಳಕೆದಾರರು ಎಕ್ಸ್‌ನಲ್ಲಿ ಮುಂಬೈನ ಗೋರಖ್‌ಪುರ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ಕಾರ್ಯನಿರ್ವಹಿಸುವ ರೈಲು ಸಂಖ್ಯೆ 15018ರಲ್ಲಿ ವಿತರಿಸಿದ ಊಟದಲ್ಲಿ ಕೀಟ ದೊರಕಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಆಹಾರದ ಪ್ಲೇಟ್‌ನಲ್ಲಿ ದಾಲ್‌ ಸಬ್ಜಿಯ ನಡುವೆ ಮತ್ತೇನೋ ಕೀಟವಿರುವುದನ್ನು ಗಮನಿಸಬಹುದು. ಘಟನೆಯ ವಿವರನ್ನು ತಿಳಿಸಿ ಪರ್ವೇಜ್‌ ಹಶ್ಮಿ ತಕ್ಷಣವೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಟ್ಯಾಗ್ ಮಾಡಿದ್ದಾರೆ.

ರೈಲಿನ ಕಿಚನ್‌ನಲ್ಲಿ ಇಲಿಗಳ ಬಿಂದಾಸ್ ಆಟ: ಆಹಾರದ ಮೇಲೆಲ್ಲಾ ಓಡಾಟ: ವೀಡಿಯೋ

ಸೋಷಿಯಲ್ ಮೀಡಿಯಾದಲ್ಲಿ ಸಹ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. 'ನೀವು ಸಸ್ಯಾಹಾರಿ ದರದಲ್ಲಿ ಪ್ರೀಮಿಯಂ ಚೈನೀಸ್ ಥಾಲಿಯನ್ನು ಪಡೆದುಕೊಂಡಿದ್ದೀರಿ.. ರೈಲ್ವೇ ನಿಮ್ಮನ್ನು ಹೆಚ್ಚು ಪಾವತಿಸಲು ಕೇಳಬಹುದು' ಎಂದು ಒಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು 'ನೀವು ಆಹಾರವನ್ನು ಆರ್ಡರ್ ಮಾಡುವಾಗ ಜೊತೆಗೆ ನಿಮಗೆ ಕೀಟಗಳು ಬೇಡವೆಂದು ಸ್ಪಷ್ಟವಾಗಿ ಹೇಳಬೇಕು' ಎಂದಿದ್ದಾರೆ.  ಮೂರನೇ ವ್ಯಕ್ತಿ, 'ರೈಲ್ವೆಯು ಈಗ ತನ್ನ ಆಹಾರಕ್ಕೆ ಹೆಚ್ಚುವರಿ ಪ್ರೋಟೀನ್‌ನ್ನು ಸೇರಿಸಲು ಪ್ರಾರಂಭಿಸಿದೆ' ಎಂದು ರೈಲ್ವೇಯಲ್ಲಿ ವಿತರಿಸುವ ಆಹಾರದ ಗುಣಮಟ್ಟದ ಬಗ್ಗೆ ಹೀಯಾಳಿಸಿದ್ದಾರೆ.

ರೈಲ್ವೆ ಸೇವಾ ಈ ಎಕ್ಸ್‌ ಪೋಸ್ಟ್‌ಗೆ ಕಾಮೆಂಟ್ ಮಾಡಿ ಹೆಚ್ಚಿನ ಸಹಾಯಕ್ಕಾಗಿ ತಮ್ಮ PNR ವಿವರಗಳು ಮತ್ತು ಸಂಪರ್ಕ ಸಂಖ್ಯೆಯನ್ನು (DM) ಮೂಲಕ ಹಂಚಿಕೊಳ್ಳಲು ದೂರುದಾರರಿಗೆ ಸೂಚಿಸಿದೆ.

ಪನೀರ್ ಆರ್ಡರ್ ಮಾಡಿದ್ದೆ, ಚಿಕನ್ನಲ್ಲ; 50 ಲಕ್ಷ ರೂ ಪರಿಹಾರ ಕೇಳಿದ ಮಹಿಳೆ!

ಈ ಹಿಂದೆ, ಅಲೋಕ್ ಎಂಬ ಇನ್ನೊಬ್ಬ ಪ್ರಯಾಣಿಕನು ಛಾಪ್ರಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಅವನಿಗೆ ಬಡಿಸಿದ ಸಸ್ಯಾಹಾರಿ ಥಾಲಿಯಲ್ಲಿ ಪತ್ತೆಯಾದ ಕೀಟದ ಚಿತ್ರಗಳನ್ನು ಹಂಚಿಕೊಂಡಿದ್ದನು. IRCTCಯ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರ ಎಷ್ಟು ಕಳಪೆ ಮಟ್ಟದ್ದಾಗಿತ್ತು ಎಂದು ವಿವರಿಸಿದ್ದನು. ಟ್ವೀಟ್‌ನಲ್ಲಿ ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ರೈಲ್ ಸೇವಾ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಒಪ್ಪಿಕೊಂಡಿದ್ದರೂ, ಘಟನೆಗೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಕ್ರಮಗಳು ಬಹಿರಂಗವಾಗಿಲ್ಲ.

Latest Videos
Follow Us:
Download App:
  • android
  • ios