ಕೇರಳ ಅಂದ್ರೆ ಬರೀ ಮುನ್ನಾರ್, ಅತಿರಪಳ್ಳಿ ಫಾಲ್ಸ್ ಅಲ್ಲ; ಈ ಅಡ್ವೆಂಚರ್ ಪ್ಲೇಸ್‌ಗೂ ಹೋಗ್ಬನ್ನಿ

ಕೇರಳ ಅಂದ್ರೆ ಸಾಕು ಥಟ್ಟಂತ ನೆನಪಾಗೋದೆ ಟೂರಿಸಂ. ಬಿಝಿ ಲೈಫ್‌ನಿಂದ ಬ್ರೇಕ್ ಪಡೆದು ಸ್ಪಲ್ಪ ರಿಫ್ರೆಶ್ ಆಗ್ಬೇಕು ಅಂದ್ರೆ ನೀವು ಕೇರಳ ಟ್ರಿಪ್ ಪ್ಲಾನ್ ಮಾಡ್ಬೋದು. ಆದ್ರೆ ಪ್ರತಿ ಬಾರಿನೂ ನೀವು ಮುನ್ನಾರ್‌, ಅತಿರಪಳ್ಳಿ ಫಾಲ್ಸ್‌ಗೆ ಹೋಗಬೇಕು ಅಂತಿಲ್ಲ. ಕೇರಳದಲ್ಲಿ ಸುಂದರವಾದ ಇನ್ನೂ ಹಲವು ಜಾಗಗಳಿವೆ.

Travel tips: Munnar to Thekkady, Top 5 Adventurous paradise in Kerala Vin

ಭಾರತದ ನೈಋತ್ಯ ಪ್ರದೇಶದಲ್ಲಿ ನೆಲೆಸಿರುವ ಕೇರಳವನ್ನು 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ. ಇದು ಹಚ್ಚ ಹಸಿರಿನ ಭೂದೃಶ್ಯಗಳು, ಹಿನ್ನೀರು ಮತ್ತು ರೋಮಾಂಚಕ ಸಾಹಸಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಕೇರಳಕ್ಕೆ ಪ್ರವಾಸ ಎಂದ ತಕ್ಷಣ ಬರೀ ಮುನ್ನಾರ್‌, ಅತಿರಪಳ್ಳಿ ಫಾಲ್ಸ್ ಎಂದೇ ಅಂದುಕೊಳ್ಳಬೇಕಾಗಿಲ್ಲ. ಇದಲ್ಲದೆ, ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ ಐದು ಪ್ರವಾಸಿ ತಾಣಗಳು ಇಲ್ಲಿವೆ.

1. ಮುನ್ನಾರ್
ಪಶ್ಚಿಮ ಘಟ್ಟಗಳಲ್ಲಿರುವ ಮುನ್ನಾರ್, ಚಾರಣ ಪ್ರಿಯರಿಗೆ ಸ್ವರ್ಗವಾಗಿದೆ. ಮಂಜಿನಿಂದ ಆವೃತವಾಗಿರುವ ಇಲ್ಲಿನ ವಿಶಾಲವಾದ ಚಹಾ ತೋಟಗಳು, ಬೆಟ್ಟಗಳು, ಪರ್ವತಗಳು ಟ್ರಕ್ಕಿಂಗ್ ಅನುಭವವನ್ನು ಮೆಮೊರೆಬಲ್ ಆಗಿಸುತ್ತದೆ. ಮುನ್ನಾರ್‌ನಲ್ಲಿರುವ ಕೆಲವು ಜನಪ್ರಿಯ ಟ್ರೆಕ್ಕಿಂಗ್ ಟ್ರೇಲ್‌ಗಳೆಂದರೆ ಅನಮುಡಿ ಶಿಖರ, ಮೀಸಪುಲಿಮಲ ಮತ್ತು ಚೋಕ್ರಮುಡಿ. ಪಶ್ಚಿಮ ಘಟ್ಟಗಳ ಸುಂದರವಾದ (Beautiful) ಸೊಬಗು, ಹಚ್ಚ ಹಸಿರಾದ ಪರ್ವತ ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!

2. ವಯನಾಡ್
ವಯನಾಡ್ ತನ್ನ ದಟ್ಟವಾದ ಕಾಡುಗಳು (Forest) ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ, ಇದು ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ಪ್ರವಾಸಿಗರು  ಇಲ್ಲಿ ರೋಮಾಂಚಕ ಜಂಗಲ್ ಸಫಾರಿಗಳನ್ನು ಮಾಡಬಹುದು, ಗುಪ್ತ ಗುಹೆಗಳನ್ನು ಅನ್ವೇಷಿಸಬಹುದು ಮತ್ತು ದಟ್ಟವಾದ ಕಾಡುಗಳ ಮೂಲಕ ಚಾರಣ (Trekking) ಮಾಡಬಹುದು. ಚೆಂಬ್ರಾ ಶಿಖರವು ಅಡ್ವೆಂಚರ್ ಇಷ್ಟಪಡುವವರಿಗೆ ಉತ್ತಮ ತಾಣವಾಗಿದೆ.

3. ವಾಗಮೋನ್ 
ಕೇರಳದಲ್ಲಿ ಹೆಚ್ಚು ಪ್ರಸಿದ್ಧವಾಗಿಲ್ಲದ ಸ್ಥಳ ವಾಗಮೋನ್. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸ್ಥಳದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಹಸ ಉತ್ಸಾಹಿಗಳಲ್ಲಿ, ವಿಶೇಷವಾಗಿ ಪ್ಯಾರಾಗ್ಲೈಡಿಂಗ್ ಅಭಿಮಾನಿಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸುತ್ತಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ರೋಲಿಂಗ್ ಬೆಟ್ಟಗಳು ಮತ್ತು ಅನುಕೂಲಕರವಾದ ಗಾಳಿಯ ಪರಿಸ್ಥಿತಿಗಳು ವಾಗಮೋನ್‌ನ್ನು ಪ್ಯಾರಾಗ್ಲೈಡಿಂಗ್‌ಗೆ ಸೂಕ್ತವಾದ ತಾಣವನ್ನಾಗಿ ಮಾಡುತ್ತದೆ. 

4. ತೇಕ್ಕಡಿ
ತೇಕ್ಕಡಿ, ವನ್ಯಜೀವಿಗಳನ್ನು ಇಷ್ಟಪಡುವವರು ಭೇಟಿ ನೀಡಲೇಬೇಕಾದ ತಾಣವಾಗಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯವು ದಟ್ಟವಾದ ಕಾಡುಗಳು ಮತ್ತು ಸುಂದರವಾದ ಸರೋವರಗಳ ನಡುವೆ ನೆಲೆಸಿದೆ. ಜಂಗಲ್ ಸಫಾರಿಗಳು, ಬಿದಿರಿನ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್‌ನಂತಹ ಅತ್ಯಾಕರ್ಷಕ ಚಟುವಟಿಕೆಗಳಿಗೆ ಅವಕಾಶ ಒದಗಿಸುತ್ತದೆ. ಆನೆಗಳು, ಹುಲಿಗಳು ಮತ್ತು ಹಲವಾರು ಇತರ ಪ್ರಾಣಿಗಳನ್ನು ಇಲ್ಲಿ ನೋಡಬಹುದು.

ದೇವರ ನಾಡಿನಲ್ಲೊಂದು ಸುಂದರ ಬುಡಕಟ್ಟು ಗ್ರಾಮ, ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

5. ಅಲೆಪ್ಪಿ
ಕೇರಳದ ಹಿನ್ನೀರಿನ ಈ ಪ್ರದೇಶವು ಪ್ರಶಾಂತವಾದ ಹೌಸ್‌ಬೋಟ್ ವಿಹಾರಕ್ಕೆ ಪ್ರಸಿದ್ಧವಾಗಿದೆ, ಅಲೆಪ್ಪಿ ರೋಮಾಂಚಕ ಕಯಾಕಿಂಗ್ ಸಾಹಸಗಳನ್ನು ಮಾಡಲು ಸಹ ಅವಕಾಶ ಒದಗಿಸುತ್ತದೆ. ಶಾಂತವಾದ ಹಿನ್ನೀರು, ಅಂಕುಡೊಂಕಾದ ಕಾಲುವೆಗಳು ಮತ್ತು ಸೊಂಪಾದ ಗದ್ದೆಗಳ ಮೂಲಕ ಪ್ರಯಾಣಿಸಬಹುದು. 

ನೀವು ದಿನನಿತ್ಯದ ರೊಟೀನ್ ಜೀವನದಿಂದ ವಿಶ್ರಾಂತಿ ಬಯಸುತ್ತಿದ್ದಲ್ಲಿ ಕೇರಳದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಗಮ್ಯಸ್ಥಾನಗಳು ಸಾಹಸಕ್ರೀಡೆಗಳಿಗೆ ಅವಕಾಶ ನೀಡುವುದರ ಜೊತೆಗೆ ಆಹ್ಲಾದಕರ ಅನುಭವ ನೀಡುತ್ತದೆ. ಸುಂದರ ಪರಿಸದರಲ್ಲಿ ಮನಸ್ಸು ಸಹ ಉಲ್ಲಸಿತಗೊಳ್ಳುತ್ತದೆ. ಆದರೆ ಈ ಎಲ್ಲಾ ಸ್ಥಳಗಳಿಗೆ ಪ್ರಯಾಣಿಸುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. 

Latest Videos
Follow Us:
Download App:
  • android
  • ios