ಭಾವಿ ಪತ್ಯೆ ಸಿಯಾ ಗೊಯೆಲ್ ಲೋಹಘಡದಲ್ಲಿ ಕೇತನ್ ಕಳ್ಳಿ ಹಾಕಿ ಹತ್ಯೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಈ ಘಟನೆ ಬಳಿಕ ಲೋಹಘಡಕ್ಕೆ ಪ್ರವಾಸಿಗರ ಸಂಖ್ಯೆ ಡಬಲ್ ಆಗಿದೆ. ಪ್ರವಾಸಿಗರು ಕೋಟೆ, ಪರ್ವತ ಸೌಂದರ್ಯಕ್ಕಿಂತ ಸಿಯಾ ಪಾಯಿಂಟ್ ವೀಕ್ಷಿಸುತ್ತಿದ್ದಾರೆ.
ಪುಣೆ (ಜೂ.30) ಪುಣೆ ಉದ್ಯಮಿ ಪುತ್ರ ಕೇತನ್ ಅಗರ್ವಾಲ್‌ನ ಲೋಹಘಡ ಪರ್ವತದಿಂದ ತಳ್ಳಿ ಹಾಕಿದ ಭಾವಿ ಪತ್ನಿ ಸಿಯಾ ಗೋಯೆಲ್ ಅರೆಸ್ಟ್ ಆಗಿದ್ದಾಳೆ. ಪ್ರಕರಣ ಸಂಬಂಧ ಸಿಯಾ ಗೊಯೆಲ್ ಹಾಗೂ ಆಕೆಯ ಬಾಯ್‌ಫ್ರೆಂಡ್ ಚೇತನ್ ಅರೆಸ್ಟ್ ಆಗಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಪ್ರಕರಣದಿಂದ ಎಲ್ಲರೂ ಲೋಹಘಡ ಸೇರಿದಂತೆ ಪರ್ವತಗಳ ಟ್ರಕ್ಕಿಂಗ್ ಸಂಖ್ಯೆ ಇಳಿಕೆಯಾಗಲಿದೆ ಎಂದು ಹಲವರು ಭಾವಿಸಿದ್ದರು. ಆದರೆ ಎಲ್ಲಾ ಉಲ್ಟಾ ಆಗಿದೆ. ಇದೀಗ ಲೋಹಘಡಕ್ಕೆ ತೆರಳು ಪ್ರವಾಸಿಗರ ಸಂಖ್ಯೆ ಭಾರಿ ಏರಿಕೆಯಾಗಿದೆ. ಈ ಪ್ರವಾಸಿಗರ ಪೈಕಿ ಬಹುತೇಕರು ಲೋಹಘಡದ ಕೋಟೆ, ಲೋಹಘಡ ಬೆಟ್ಟ, ಅಲ್ಲಿನ ಸೌಂದರ್ಯಕ್ಕಿಂತ, ಕೇತನ್ ತಳ್ಳಿ ಹಾಕಿದ ಸ್ಥಳ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಿದೆ.
ಸಿಯಾ ಪಾಯಿಂಟ್ ಈಗ ಭಾರಿ ಜನಪ್ರಿಯ
ಬೆಟ್ಟದ ಮೇಲೆ ನೂರಾರು ವರ್ಷಗಳ ಹಿಂದೆ ರಾಜ ಮಹಾರಾಜರ ಕಟ್ಟಿದ ಕೋಟೆ, ಅರಮನೆಗಳ ಜಾಗದಲ್ಲಿ ಬಂಧಿಸಲ್ಪಟ್ಟ ಅಪರಾಧಿಗಳನ್ನು, ತಪ್ಪಿಸ್ಥರನ್ನು, ವೈರಿ ಸೈನ್ಯದ ಸೈನಿಕರನ್ನು ತಳ್ಳಿ ಹಾಕುವ ಸ್ಥಳ ಇದ್ದೇ ಇರುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿರುವ ಕೆಲ ಬೆಟ್ಟಗಳಲ್ಲಿ ಟಿಪ್ಪು ಪಾಯಿಂಟ್ ಸೇರಿದಂತೆ ಹಲವು ಪಾಯಿಂಟ್ ಇದೆ. ಇದೇ ರೀತಿ ಇದೀಗ ಲೋಹಘಡದಲ್ಲಿ ಸಿಯಾ ಪಾಯಿಂಟ್ ಭಾರಿ ಜನಪ್ರಿಯವಾಗಿದೆ. ಕೇತನ್ ಅಗರ್ವಾಲ್ ತಳ್ಳಿ ಹಾಕಿದ ಜಾಗವನ್ನು ಇದೀಗ ಸಿಯಾ ಪಾಯಿಂಟ್ ಎಂದು ಪ್ರವಾಸಿಗರು ಕರೆಯುತ್ತಿದ್ದಾರೆ. ಈ ಸ್ಥಳ ವೀಕ್ಷಣೆಗೆ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ.
ಸಿಯಾ ಪಾಯಿಂಗ್ ಈಗ ಭಾರಿ ಜನಪ್ರಿಯ ಸೆಲ್ಫಿ ಪಾಯಿಂಟ್
ಕೇತನ್ ಅಗರ್ವಾಲ್ ತಳ್ಳಿ ಹಾಕಿದ ಸ್ಥಳವನ್ನು ಪ್ರವಾಸಿಗರು ಸಿಯಾ ಪಾಯಿಂಟ್ ಎಂದು ಕರೆಯುತ್ತಿದ್ದಾರೆ. ಲೋಹಘಡದ ಮೇಲೆ ಆಗಮಿಸುವ ಪ್ರವಾಸಿಗರು ನೇರವಾಗಿ ಸಿಯಾ ಪಾಯಿಂಟ್ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಬಳಿಕ ಸಿಯಾ ಪಾಯಿಂಟ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣ ಇದೀಗ ಸಿಯಾ ಪಾಯಿಂಟ್ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕುರಿತು ಲೋಹಘಡ ವಿಸಪುರ ಡೆಲವಪ್‌ಮೆಂಟ್ ಫೋರಮ್ ಅಧ್ಯಕ್ಷ ಸಚಿನ್ ಟಿಕಾವಾಡೆ ಪ್ರತಿಕ್ರಿಯಿಸಿದ್ದಾರೆ. ಕಳೆದ 5 ದಿನ ಭಾರಿ ಸಂಖ್ಯೆಯಲ್ಲಿ ಲೋಹಘಡಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಿಕ್ಕಿರಿದು ಪ್ರವಾಸಿಗರು ಆಗಮಿಸುತ್ತಿರುವ ಕಾರಣ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಇತ್ತೀಚಿನ ಪ್ರಕರಣದಿಂದ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಇತ್ತ ಮುಂಗಾರು ಮಳೆ ವಿಳಂಬವಾಗಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಸಚಿನ್ ಟೆಕಾವಾಡೆ ಹೇಳಿದ್ದಾರೆ.
ಈ ವರ್ಷದ ಇಲ್ಲೀವರಿಗೆ ವಾರಾಂತ್ಯದ ಸರಾಸರಿ ಪ್ರವಾಸಿಗರ ಸಂಖ್ಯೆ 800 ರಿಂದ 1000. ಆದರೆ ಕಳೆದ ಐದು ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ 10,000 ದಾಟಿದೆ. ಲೋಹಘಡ ಅತ್ಯಂತ ಶ್ರೇಷ್ಠ ಇತಿಹಾಸವಿರುವ ಸ್ಥಳವಾಗಿದೆ. ನಮ್ಮ ಇತಿಹಾಸದ ಪುಟದಲ್ಲಿ ಪ್ರಮುಖ ಅಧ್ಯಾಯದ ಸ್ಥಳ ಲೋಹಘಡ. ಆದರೆ ಇದೀಗ ಬರುವ ಪ್ರವಾಸಿಗರು ಈ ಇತಿಹಾಸಕ್ಕಿಂತ ಸಿಯಾ ಪಾಯಿಂಟ್ ಎಲ್ಲಿ ಎಂದು ಹುಡುಕಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಸಚಿನ್ ಟಿಕಾವಾಡೆ ಹೇಳಿದ್ದಾರೆ.


